• Home
  • »
  • News
  • »
  • trend
  • »
  • Viral News: ಗೂಗಲ್ ನಕ್ಷೆಯಲ್ಲಿ ಕಂಡ ಅತಿ ದೊಡ್ಡ ಹಾವಿನ ಅಸ್ಥಿಪಂಜರ, ಇದು ನಿಜವೇ...?

Viral News: ಗೂಗಲ್ ನಕ್ಷೆಯಲ್ಲಿ ಕಂಡ ಅತಿ ದೊಡ್ಡ ಹಾವಿನ ಅಸ್ಥಿಪಂಜರ, ಇದು ನಿಜವೇ...?

ವೈರಲ್ ವಿಡಿಯೋ

ವೈರಲ್ ವಿಡಿಯೋ

ಇತ್ತೀಚೆಗೆ ಗೂಗಲ್ ಮ್ಯಾಪ್ ನಲ್ಲಿ ದೈತ್ಯಕಾಯದ ಸರ್ಪವೊಂದರ ಅಸ್ಥಿಪಂಜರವು ಕಂಡುಬಂದಿದ್ದು ಅದೀಗ ಸಾಕಷ್ಟು ಸುದ್ದಿ ಮಾಡುತ್ತಿದೆ ಎನ್ನಲಾಗಿದೆ. ಹೌದು, ಫ್ರಾನ್ಸ್ ದೇಶದಲ್ಲಿ ಬೃಹತ್ತಾದ ಸರ್ಪವೊಂದರ ಅಸ್ಥಿಪಂಜರವು ಗೂಗಲ್ ನಕ್ಷೆಯಲ್ಲಿ ಕಂಡುಬಂದಿದ್ದು ಅದೀಗ ವೈರಲ್ ಸುದ್ದಿಯಾಗುತ್ತಿದೆ.

ಮುಂದೆ ಓದಿ ...
  • Share this:

ಹಿಂದೊಮ್ಮೆ ನಮಗೆಲ್ಲ ಜಗತ್ತಿನಲ್ಲಿ ಯಾವ ಯಾವ ದೇಶಗಳು ಎಲ್ಲೆಲ್ಲಿವೆ ಹಾಗೂ ವಿಶಿಷ್ಟವಾದ ಜಗತ್ತಿನ ಹಲವು ರಚನೆಗಳು ಪ್ರಪಂಚದ ಯಾವ ಯಾವ ಭಾಗಗಳಲ್ಲಿವೆ ಎಂಬುದನ್ನು ನಕ್ಷೆ (Blue Print) ನೋಡುತ್ತ ಕಲ್ಪಿಸಿಕೊಳ್ಳಬೇಕಾಗಿತ್ತಷ್ಟೆ. ಆದರೆ, ನಮಗಂದು ಮುಂದೊಂದು ದಿನ ತಂತ್ರಜ್ಞಾನ ಯಾವ ಮಟ್ಟಿಗೆ ಬೆಳೆಯಬಹುದೆಂದರೆ ಕುಳಿತಲ್ಲೇ ಅಥವಾ ಮನೆಯಿಂದಲೇ ಜಗತ್ತಿನ ಪ್ರದೇಶಗಳನ್ನು ವಾಸ್ತವದಲ್ಲಿ ಪರದೆಯ ಮೂಲಕ ನೋಡಬಹುದೆಂಬ ಪರಿಕಲ್ಪನೆಯೂ ಇರಲಿಲ್ಲವೇನೋ...ಆದರೆ ಈಗ ಅದು ಸತ್ಯವಾಗಿದೆ. ಜಗತ್ತಿನ ದೈತ್ಯ ಸರ್ಚ್ ಎಂಜಿನ್ ಸಂಸ್ಥೆಯಾದ ಗೂಗಲ್ ತನ್ನದೆ ಆದ ವಿಶಿಷ್ಟವಾದ ಉಪಗೃಹ ಆಧಾರಿತ ತಂತ್ರಜ್ಞಾನದ ಮ್ಯಾಪ್ಸ್ (Maps) ಎಂಬ ತಂತ್ರಾಂಶವನ್ನು ಹೊಂದಿದ್ದು ಆ ಮೂಲಕ ಅದನ್ನು ಬಳಸಿ ನಾವು ಇಂದು ಪ್ರಪಂಚದ ಎಲ್ಲ ಭಾಗಗಳನ್ನು ಕ್ಷಣಗಳಲ್ಲಿಯೇ ಸುತ್ತಾಡಬಹುದಾಗಿದೆ.


ಅಂತೆಯೇ ಅನೇಕ ಹವ್ಯಾಸಿ ಅನ್ವೇಶಕರು ಆಗಾಗ ಗೂಗಲ್ ಮ್ಯಾಪ್ (Google Map) ಬಳಸಿ ಸ್ಥಳಗಳನ್ನು ಅನ್ವೇಷಿಸುತ್ತಲೇ ಇರುತ್ತಾರೆ. ಇಂತಹ ಸಂದರ್ಭದಲ್ಲಿ ಕೆಲವೊಮ್ಮೆ ನಮಗೆ ಕೆಲವು ಚಿತ್ರ ವಿಚಿತ್ರ ಚಿತ್ರಗಳು, ರಚನೆಗಳು ಕಾಣಸಿಗಬಹುದು, ಹಿಂದೆಯೂ ಈ ರೀತಿಯ ಉದಾಹರಣೆಗಳು ಘಟಿಸಿಯಾಗಿವೆ.


ದೈತ್ಯಕಾಯದ ಸರ್ಪವೊಂದರ ಅಸ್ಥಿಪಂಜರ


ಆದರೆ, ಇತ್ತೀಚೆಗೆ ಗೂಗಲ್ ಮ್ಯಾಪ್ ನಲ್ಲಿ ದೈತ್ಯಕಾಯದ ಸರ್ಪವೊಂದರ ಅಸ್ಥಿಪಂಜರವು ಕಂಡುಬಂದಿದ್ದು ಅದೀಗ ಸಾಕಷ್ಟು ಸುದ್ದಿ ಮಾಡುತ್ತಿದೆ ಎನ್ನಲಾಗಿದೆ. ಹೌದು, ಫ್ರಾನ್ಸ್ ದೇಶದಲ್ಲಿ ಬೃಹತ್ತಾದ ಸರ್ಪವೊಂದರ ಅಸ್ಥಿಪಂಜರವು ಗೂಗಲ್ ನಕ್ಷೆಯಲ್ಲಿ ಕಂಡುಬಂದಿದ್ದು ಅದೀಗ ವೈರಲ್ ಸುದ್ದಿಯಾಗುತ್ತಿದೆ.


ಫ್ರಾನ್ಸ್ ಕರಾವಳಿ ತೀರದಲ್ಲಿ ಬೃಹತ್ತಾದ ಹಾವಿನ ಅಸ್ಥಿಪಂಜರ


ಇಂಡಿಪೆಂಡೆಂಟ್ ಸುದ್ದಿ ಮಾಧ್ಯಮವು ವರದಿ ಮಾಡಿರುವಂತೆ ಇತ್ತೀಚೆಗೆ @googlemapsfun ಎಂಬ ಟಿಕ್ ಟಾಕ್ ಖಾತೆಯೊಂದು ತನ್ನ ಖಾತೆಯಲ್ಲಿ ವಿಡಿಯೋ ಒಂದನ್ನು ಶೇರ್ ಮಾಡಿಕೊಂಡಿದ್ದು ಅದರಲ್ಲಿ ಫ್ರಾನ್ಸ್ ಕರಾವಳಿ ತೀರವೊಂದರಲ್ಲಿ ಬೃಹತ್ತಾದ ಹಾವಿನ ಅಸ್ಥಿಪಂಜರವೊಂದನ್ನು ಸೆರೆಹಿಡಿಯಲಾಗಿದೆ. @googlemapsfun ಈ ಟಿಕ್ ಟಾಕ್ ಖಾತೆಯು ಸಾಮಾನ್ಯವಾಗಿ ಪ್ರಾಕೃತಿಕ ಸೋಜಿಗಗಳನ್ನು ನಕ್ಷೆಯ ಮೂಲಕ ಅನ್ವೇಷಿಸುತ್ತ ಅದನ್ನು ಬಿತ್ತರಿಸುತ್ತಿರುತ್ತದೆ. ಸದ್ಯ ಅದಕ್ಕೆ ಈ ಸರ್ಪದ ಅಸ್ಥಿಪಂಜರ ಗೋಚರಿಸಿದೆ ಎನ್ನಲಾಗಿದೆ.ವಿಡಿಯೋ ನೋಡಿ ಬೆರಗಾದ ಜನ


ಇದಕ್ಕೆ ಸಂಬಂಧಿಸಿದಂತೆ, @googlemapsfun ಖಾತೆಯು "ಫ್ರಾನ್ಸ್ ದೇಶದ ಯಾವುದೋ ಒಂದು ಭಾಗದಲ್ಲಿ ನಾವು ದೊಡ್ಡ ಸರ್ಪದ ಅಸ್ಥಿಪಂಜರವನ್ನು ನೋಡಬಹುದಾಗಿದ್ದು ಇದನ್ನು ಗೂಗಲ್ ಅರ್ಥ್ ನಲ್ಲಿ ಹುದುಗಿಸಲಾಗಿರುವ ಉಪಗ್ರಹಗಳ ಮೂಲಕ ಮಾತ್ರವೇ ನೋಡಬಹುದಾಗಿದೆ" ಎಂದು ಬರೆದುಕೊಂಡಿದೆ. ಅನೇಕ ಜನರು ಈ ವಿಡಿಯೋ ನೋಡಿ ಬೆರಗಾಗಿದ್ದು ಇದೊಂದು ಇಂದಿನವರೆಗೂ ಹಿಡಿಯಲಾಗದ ಅತಿ ದೊಡ್ಡ ಸರ್ಪದ ಅಸ್ಥಿಪಂಜರವಾಗಿದ್ದು ಏನಿಲ್ಲವೆಂದರೂ ಈ ಸರ್ಪವು 30 ಮೀ ಗಳಷ್ಟು ಉದ್ದವಿರಬಹುದೆಂದು ಹೇಳುತ್ತಿದ್ದಾರೆ. ಮಾರ್ಚ್ 24ರ್ಂದು ಈ ವಿಡಿಯೋ ಅನು ಚಿತ್ರೀಕರಿಸಲಾಗಿರುವುದಾಗಿ ತಿಳಿದುಬಂದಿದೆ.


ವೈರಲ್ ಆಯ್ತು ವಿಡಿಯೋ


ವಿಡಿಯೋ ಅಪ್ಲೋಡ್ ಆಗುತ್ತಿದ್ದಂತೆಯೇ ವೈರಲ್ ಆಗಿದೆ ಹಾಗೂ ಅನೇಕ ಜನರಲ್ಲಿ ಇದು ಈ ಹಿಂದೆ ಜೀವಿತವಿದ್ದ ಇಂದು ಅಳಿದಿರುವ ಟೈಟಾನೋಬೋವಾ ಎಂಬ ಪ್ರಭೇದದ ಸರ್ಪದ ಬಗೆಗಿನ ಚರ್ಚೆಯನ್ನು ಹುಟ್ಟು ಹಾಕಿತೆನ್ನಲಾಗಿದೆ. ಇತಿಹಾಸ ಹಾಗೂ ಉತ್ಖನನ ತಜ್ಞರ ಪ್ರಕಾರ, ಟೈಟಾನೋಬೋವಾ ಸರ್ಪಗಳು ಸುಮಾರು 50 ಮಿಲಿಯನ್ ವರ್ಷಗಳ ಹಿಂದೆ ಅಸ್ತಿತ್ವದಲ್ಲಿದ್ದವು ಎನ್ನಲಾಗಿದೆ. ಇವು ಸುಮಾರು 15 ಮೀ ಗಳಷ್ಟು ಉದ್ದ ಹಾಗೂ ಸಾವಿರ ಕೆಜಿಗಿಂತಲೂ ಹೆಚ್ಚು ಭಾರ ಹೊಂದಿದ್ದವು ಎನ್ನಲಾಗಿದೆ.


ಏನಪ್ಪಾ ಸತ್ಯ?


ಇದೇ ಸಂದರ್ಭದಲ್ಲಿ ಇದರ ನೈಜತೆಯ ಬೆನ್ನು ಹತ್ತಲಾಗಿದ್ದು ಆ ಮೂಲಕ ಸತ್ಯ ಏನೆಂಬುದು ಹೊರ ಬಿದ್ದಿದೆ. ಅಂತರ್ಜಾಲದಲ್ಲಿ ನೈಜತೆ ಹಾಗೂ ನಕಲಿ ವಿಷಯಗಳ ಬಗ್ಗೆ ಸತ್ಯದ ಅನ್ವೇಷಣೆ ಮಾಡುವ ಸ್ನೋಪ್ಸ್ ಎಂಬ ಸಂಸ್ಥೆಯು ಇದರ ಹಿಂದಿರುವ ಸತ್ಯಾಸತ್ಯತೆಯನ್ನು ಬಯಲಿಗೆಳೆದಿದೆ.


ಇದನ್ನೂ ಓದಿ: Viral Video: ಇದು ನೋಡೋಕೆ ಮಾತ್ರ ವಿಂಟೇಜ್ ರೇಡಿಯೋ: ಈ ಚಾಕೊಲೇಟ್ ಹೇಗೆ ಸಿದ್ಧವಾಯ್ತು ಅಂತ ವಿಡಿಯೋ ನೋಡಿ


ವಾಸ್ತವದಲ್ಲಿ ಈ ದೈತ್ಯ ಸರ್ಪದ ಅಸ್ಥಿಪಂಜರವು ಒಂದು ಲೋಹದಿಂದ ಮಾಡಲಾದ ಕಲಾಕೃತಿಯಾಗಿದೆ. Le Serpent d'Ocean ಎಂಬ ಹೆಸರಿನ ಈ ಕಲಾಕೃತಿಯನ್ನು ಚೈನಾ ಮೂಲದ ಫ್ರೆಂಚ್ ಕಲಾವಿದನಾದ ಹೂವಾಂಗ್ ಯೊಂಗ್ ಪಿಂಗ್ ಎಂಬಾತನು ನಿರ್ಮಿಸಿದ್ದು ಇದನ್ನು 2012 ರಲ್ಲಿ ಎಸ್ಟುವೈರ್ ಕಲಾ ಪ್ರದರ್ಶನೋತ್ಸವದ ಭಾಗವಾಗಿ ಅನಾವರಣಗೊಳಿಸಲಾಗಿತ್ತೆಂದು ತಿಳಿದುಬಂದಿದೆ.


ಒಟ್ಟಿನಲ್ಲಿ ಇದೊಂದು ಸರ್ಪದ ಅಸ್ಥಿಪಂಜರವಲ್ಲ ಬದಲಾಗಿ ಒಂದು ಕಲಾಕೃತಿ ಎಂಬುದು ತಿಳಿದುಬಂದಿದ್ದು ಐತಿಹಾಸಿಕ ಜೀವಿಗಳ ಅಧ್ಯಯನಾಸಕ್ತರ ಕುತೂಹಲಕ್ಕೆ ತಣ್ಣೀರೆರಚಿದಂತಾಗಿದ್ದರೆ ಮಿಕ್ಕವರಿಗೆ ಸಮಾಧಾನದ ನಿಟ್ಟುಸಿರು ಬಿಡುವಂತಾಗಿದೆ.

Published by:Divya D
First published: