Viral Video: ನೋಡ ನೋಡುತ್ತಿದ್ದಂತೆ ವ್ಯಕ್ತಿಯ ಮೇಲೆ ಮಲಗಿದ ಮೊಸಳೆ: ವಿಡಿಯೋ ನೋಡಿ

ಮೊಸಳೆ ಅಂದ್ರೆ ಒಂದು ಕ್ಷಣ ಭಯ ಆಗುತ್ತದೆ. ಇದು ಅಪಾಯಕಾರಿ  ಪ್ರಾಣಿಗಳಲ್ಲಿ ಒಂದಾಗಿದೆ. ಮೊಸಳೆಗಳು ತಮಗಿಂತ ದೊಡ್ಡ ಪ್ರಾಣಿಗಳನ್ನು ಬೇಟೆಯಾಡುವ ಸಾಮಾರ್ಥ್ಯವನ್ನು ಹೊಂದಿವೆ

ಮೊಸಳೆ ದೃಶ್ಯ

ಮೊಸಳೆ ದೃಶ್ಯ

  • Share this:
ಕೆಲವು ಪ್ರಾಣಿ(Animals)ಗಳಿಂದ ಜನರು ದೂರ ಇರಿಯಲು ಬಯಸುತ್ತಾರೆ. ಆದ್ರೆ ಬೆಕ್ಕು, ನಾಯಿ, ಪಕ್ಷಿಗಳು, ಮೊಲಗಳನ್ನು ಮನೆಯಲ್ಲಿ ಸಾಕೋದು ಬಹುತೇಕರಿಗೆ ಹವ್ಯಾಸ. ಇನ್ನು ಗ್ರಾಮೀಣ ಭಾಗದ (Rural Area) ರೈತರು ಕೋಳಿ, ಮೇಕೆ, ಕುರಿ, ಹಸುಗಳನ್ನು ಸಾಕುತ್ತಾರೆ. ಅಪಾಯಕಾರಿ ಪ್ರಾಣಿಗಳಿಂದ  (Dangerous Animals) ಜನರು ದೂರ ಇರ್ತಾರೆ. ದಾರಿಯಲ್ಲಿ ಹಾವು ಕಂಡರೆ ದೂರ ಓಡಿ ಹೋಗುತ್ತಾರೆ. ಕೆಲವೊಮ್ಮೆ ಮೃಗಾಲಯಗಳಲ್ಲಿ ಹಾವು (Snake), ಹೆಬ್ಬಾವು (Python), ಸಿಂಹ(Lion), ಮೊಸಳೆ(Crocodile)ಗಳನ್ನು ನೋಡಿದ್ರೆ ಒಂದು ಕ್ಷಣ ಭಯ ಆಗುತ್ತದೆ. ಆದ್ರೆ ಇಲ್ಲೊಬ್ಬ ವ್ಯಕ್ತಿಯ ಮೇಲೆ ಮೊಸಳೆಯೊಂದು ಮಲಗಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದೆ.

ಮೊಸಳೆ ಅಂದ್ರೆ ಒಂದು ಕ್ಷಣ ಭಯ ಆಗುತ್ತದೆ. ಇದು ಅಪಾಯಕಾರಿ  ಪ್ರಾಣಿಗಳಲ್ಲಿ ಒಂದಾಗಿದೆ. ಮೊಸಳೆಗಳು ತಮಗಿಂತ ದೊಡ್ಡ ಪ್ರಾಣಿಗಳನ್ನು ಬೇಟೆಯಾಡುವ ಸಾಮಾರ್ಥ್ಯವನ್ನು ಹೊಂದಿವೆ. ಅಂತಹ ಅನೇಕ ವಿಡಿಯೋಗಳನ್ನು ನೋಡಿರಬಹುದು. ನೀರು ಕುಡಿಯಲು ಬರುವ ಪ್ರಾಣಿಗಳ ಮೇಲೆ ಮೊಸಳೆ ಆಕ್ರಮಣ ನಡೆಸುತ್ತವೆ. ಮೊಸಳೆಗಳು ಸಿಂಹಗಳ ಮೇಲೆಯೂ ದಾಳಿ ನಡೆಸುತ್ತವೆ ಅಂದ್ರೆ ನಂಬಲೇಬೇಕು.

ಇದೀಗ ಅಂತಹ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಇದರಲ್ಲಿ ಮೊಸಳೆಯು ಮಾನವನ ಎದೆಯ ಮೇಲೆ ಕುಳಿತಿರುವುದನ್ನು ಕಾಣಬಹುದು.

ಇದನ್ನೂ ಓದಿ:  Viral Video: ಹೋಳಿ ಹುಚ್ಚಾಟ, ಚಾಲಕನಿಗೆ ವಾಟರ್ ಬಲೂನ್ ಹೊಡೆದಿದ್ದಕ್ಕೆ ಪಲ್ಟಿಯಾದ ಆಟೋ

ವೈರಲ್ ವಿಡಿಯೋದಲ್ಲಿ ಏನಿದೆ?

ಈ ವೀಡಿಯೊವನ್ನು jayprehistoricpets ಹೆಸರಿನ ಇನ್ ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಇದರಲ್ಲಿ ಮೊಸಳೆಯು ನೆಲದ ಮೇಲೆ ಮಲಗಿದ್ದ ವ್ಯಕ್ತಿಯ ಮೇಲೆ ಹತ್ತಿ ಅವನ ಎದೆಯ ಮೇಲೆ ಉರುಳಲಾರಂಭಿಸುತ್ತದೆ. ಈ ವಿಡಿಯೋ ನೋಡುತ್ತಿದ್ದಂತೆ ಜನರು ಒಂದು ಕ್ಷಣ ಶಾಕ್ ಆಗಿದ್ದಾರೆ. ಆದ್ರೆ ಆ ವ್ಯಕ್ತಿಯ ಮೊಗದಲ್ಲಿ ಯಾವ ಭಯವೂ ಇರಲ್ಲ. ಆತ ತನ್ನ ಮೇಲೆ ಮೊಸಳೆ ಆಡಲು ಬಿಡುತ್ತಾನೆ.




ಇನ್ನೂ ಮೊಸಳೆ ಬಾಯಿಯನ್ನು ಬ್ಯಾಂಡ್ ನಿಂದ ಬಿಗಿದಿರೋದನ್ನು ನೋಡಬಹುದಾಗಿದೆ. ಹಾಗಾಗಿ ಮೊಸಳೆಗೆ ತನ್ನ ಬಾಯಿ ತೆಗೆಯಲು ಸಾಧ್ಯವಾಗಿಲ್ಲ. ಈ ವಿಡಿಯೋ ನೋಡಿದ ನೆಟ್ಟಿಗರು ಇದೊಂದು ಸಾಕು ಪ್ರಾಣಿಯಾಗಿದ್ದರಿಂದ ಆ ವ್ಯಕ್ತಿಯೊಂದಿಗೆ ಅನೋನ್ಯವಾಗಿದೆ ಎಂದು ಕಮೆಟಂಟ್ ಮಾಡಿದ್ದಾರೆ. ಇದೇ ರೀತಿ ಸೋಶಿಯಲ್ ಮೀಡಿಯಾದಲ್ಲಿ ಪ್ರಾಣಿಗಳ ವಿಡಿಯೋಗಳು ವೈರಲ್ ಆಗುತ್ತಿರುತ್ತವೆ.

ಗ್ರೀನ್ ಫ್ಯೂರಿ ಹಾವು ಪತ್ತೆ, ವಿಲಕ್ಷಣ ಹಾವು ನೋಡಿ ಸ್ಥಳಿಯರು ಶಾಕ್!

ಥೈಲ್ಯಾಂಡ್ (Thailand) ಜೌಗು ಪ್ರದೇಶದಲ್ಲಿ ಪತ್ತೆಯಾದ ನಿಗೂಢ 'ಫ್ಯೂರಿ ಗ್ರೀನ್ ಹಾವು', ಸ್ಥಳೀಯರನ್ನು ಬೆಚ್ಚಿಬೀಳಿಸಿದೆ. ಎರಡು ಅಡಿ ಉದ್ದದ ಈ 'ಫ್ಯೂರಿ ಗ್ರೀನ್ ಹಾವು' ಥಾಯ್ಲೆಂಡ್‌ನಲ್ಲಿ ಜೌಗು ನೀರಿನಲ್ಲಿ ತೇಲುತ್ತಿರುವುದು (Floating In Water) ಕಂಡುಬಂದಿದೆ.

ಈ ವಿಲಕ್ಷಣ 'ಫ್ಯೂರಿ ಗ್ರೀನ್’ ಹಾವು ಥಾಯ್ಲೆಂಡ್‌ನಲ್ಲಿ ಒಬ್ಬ ವ್ಯಕ್ತಿ ತನ್ನ ಮನೆಯ ಸಮೀಪದಲ್ಲಿ ಕಂಡುಕೊಂಡಿದ್ದಾರೆ ಮತ್ತು ಅದನ್ನು ತೆಗೆದುಕೊಂಡು ಹೋಗಿ ತಮ್ಮ ಮನೆಯನೀರಿನ ತೊಟ್ಟಿಯಲ್ಲಿ ಈ ಜೀವಿಯನ್ನು ಇರಿಸಿದ್ದಾರೆ.

ಹಾವಿನ ಮೈ ತುಂಬಾ ರೋಮ

ರೋಮದಿಂದ ಕೂಡಿದ ಈ ಹಸಿರು ಹಾವು ಎಂದು ವಿವರಿಸಬಹುದಾದ ಜೀವಿಯು ಸಖತ್ ವೈರಲ್ ಆಗುತ್ತಿದ್ದು, ಎಲ್ಲರ ಕೂತೂಹಲಕ್ಕೆ ಕಾರಣವಾಗಿದೆ. ರೋಮದಿಂದ ಕೂಡಿದ ಹಾವು ಈಶಾನ್ಯ ಥೈಲ್ಯಾಂಡ್‌ನ ಸಖೋನ್ ನಖೋನ್ ಪ್ರಾಂತ್ಯದಲ್ಲಿ ಕಂಡು ಬಂದಿದ್ದು, ತು ಎಂಬ ಸ್ಥಳೀಯ ವ್ಯಕ್ತಿಯು ಗುರುತಿಸಿದ್ದಾರೆ ಎಂದು ಸುದ್ದಿ ಮೂಲಗಳು ವರದಿ ಮಾಡಿವೆ.

ಇದನ್ನೂ ಓದಿ: Viral News: ಮಾಲೀಕನ ಮನೆಯಲ್ಲಿ ಸತ್ತ ಕೆಲಸದಾಕೆಯ ದೆವ್ವ ಸಿಸಿಟಿವಿಯಲ್ಲಿ ಬಂತು..!

ಹಾವನ್ನು ಸುರಕ್ಷಿತವಾಗಿ ಮನೆಗೆ ತಂದ

49 ವರ್ಷದ ವ್ಯಕ್ತಿ ಕಳೆದ ತಿಂಗಳ ಕೊನೆಯಲ್ಲಿ ಮನೆಗೆ ನಡೆದುಕೊಂಡು ಹೋಗುತ್ತಿರುವಾಗ ಈ ಜೀವಿಯನ್ನು ಗುರುತಿಸಿದನು ಮತ್ತು ಅದನ್ನು ಇತರರಿಗೆ ತೋರಿಸಲು ಈ ಹಾವನ್ನು ಭದ್ರವಾಗಿ ಸಂಗ್ರಹಿಸಿ ಮನೆಗೆ ತೆಗೆದಕೊಂಡು ಹೋಗಿದ್ದಾರೆ.
Published by:Mahmadrafik K
First published: