• ಹೋಂ
  • »
  • ನ್ಯೂಸ್
  • »
  • ಟ್ರೆಂಡ್
  • »
  • Crocodile: ಸ್ವಿಮ್ಮಿಂಗ್​ ಪೂಲ್​ಗೆ ಹಾರೋ ಮುನ್ನ ಹುಷಾರ್, ತಂಪು ಕೊಳದಲ್ಲಿತ್ತು ಡೆಡ್ಲೀ ಮೊಸಳೆ

Crocodile: ಸ್ವಿಮ್ಮಿಂಗ್​ ಪೂಲ್​ಗೆ ಹಾರೋ ಮುನ್ನ ಹುಷಾರ್, ತಂಪು ಕೊಳದಲ್ಲಿತ್ತು ಡೆಡ್ಲೀ ಮೊಸಳೆ

ಈಜುಕೊಳದಲ್ಲಿ ಮೊಸಳೆ ಪ್ರತ್ಯಕ್ಷ

ಈಜುಕೊಳದಲ್ಲಿ ಮೊಸಳೆ ಪ್ರತ್ಯಕ್ಷ

ಮನೆಯ ಅಂಗಳದಲ್ಲಿರುವ ಈಜುಕೊಳದಲ್ಲಿ ಒಂದು ದೈತ್ಯವಾದ ಮೊಸಳೆಯನ್ನು ನೋಡಿ ಬೆಚ್ಚಿ ಬಿದ್ದಿದ್ದಾರೆ. ಇದು ನಡೆದದ್ದು ಭಾರತದಲ್ಲಿ ಅಲ್ಲ, ಇದು ನಡೆದಿದ್ದು ಫ್ಲೋರಿಡಾದಲ್ಲಿ ಎಂದು ಹೇಳಲಾಗುತ್ತಿದೆ. ಫ್ಲೋರಿಡಾ ಕುಟುಂಬವೊಂದು ತಮ್ಮ ಈಜುಕೊಳದ ನೀರಿನಲ್ಲಿ ಈಜುತ್ತಿರುವ ದೊಡ್ಡ ಮೊಸಳೆಯನ್ನು ನೋಡಿ ಒಂದು ಕ್ಷಣ ಆಘಾತಕ್ಕೊಳಗಾದರು.

ಮುಂದೆ ಓದಿ ...
  • Share this:

ಕೆಲವೊಂದು ಕಾಡು ಪ್ರಾಣಿಗಳು (Animals) ಮತ್ತು ಸರೀಸೃಪಗಳ (Reptile) ಫೋಟೋ (Photo) ಅಥವಾ ವೀಡಿಯೋಗಳನ್ನು (Video) ನೋಡಿದರೆ ಸಾಕು ಕೆಲವರಿಗೆ ಭಯವಾಗುತ್ತದೆ (Fear) ಎಂದು ಹೇಳುವುದನ್ನು ನಾವು ಕೇಳಿರುತ್ತೇವೆ. ಈ ಸರೀಸೃಪಗಳು ನೋಡಲು ತುಂಬಾನೇ ಭಯಾನಕವಾಗಿ (Horrible) ಕಾಣುತ್ತವೆ. ಅದರಲ್ಲೂ ಈ ಹಾವುಗಳನ್ನು (Snakes) ನೋಡಿದರೆ ಸಾಕು ನಮಗೆ ಮೈಯಿಂದ ಬೆವರು (Swetting) ಇಳಿಯಲು ಶುರುವಾಗುತ್ತದೆ. ಅಂತಹದರಲ್ಲಿ ಮೊನ್ನೆ ನಾವೆಲ್ಲಾ ಆಸ್ಟ್ರೇಲಿಯಾದ (Australia) ಮನೆಯೊಂದರಲ್ಲಿ (Home) ಒಂದಲ್ಲ, ಎರಡಲ್ಲ ಬರೋಬ್ಬರಿ ನಾಲ್ಕು (Four) ಹೆಬ್ಬಾವುಗಳು (Python) ಇರುವುದನ್ನು ವೈರಲ್ ವೀಡಿಯೋದಲ್ಲಿ (Viral Video) ನೋಡಿದ್ದೆವು.


ಮನೆಯ ಅಂಗಳದಲ್ಲಿರುವ ಈಜುಕೊಳದಲ್ಲಿ ದೈತ್ಯವಾದ ಮೊಸಳೆ ಪ್ರತ್ಯಕ್ಷ
ಈ ಸರೀಸೃಪಗಳು ನಿಮ್ಮ ಮನೆಯ ಅಂಗಳದಲ್ಲಿ ಬಂದರೆ ನಿಮಗೆ ಎಷ್ಟು ಆಘಾತವಾಗಬಹುದು ಎಂದು ನೀವು ಒಂದು ಕ್ಷಣ ಊಹಿಸುವುದಕ್ಕೂ ಆಗುವುದಿಲ್ಲ. ಇಲ್ಲೊಬ್ಬರ ಮನೆಯ ಅಂಗಳದಲ್ಲಿರುವ ಈಜುಕೊಳದಲ್ಲಿ ಒಂದು ದೈತ್ಯವಾದ ಮೊಸಳೆಯನ್ನು ನೋಡಿ ಬೆಚ್ಚಿ ಬಿದ್ದಿದ್ದಾರೆ. ಇದು ನಡೆದದ್ದು ಭಾರತದಲ್ಲಿ ಅಲ್ಲ, ಇದು ನಡೆದಿದ್ದು ಫ್ಲೋರಿಡಾದಲ್ಲಿ ಎಂದು ಹೇಳಲಾಗುತ್ತಿದೆ. ಫ್ಲೋರಿಡಾ ಕುಟುಂಬವೊಂದು ತಮ್ಮ ಈಜುಕೊಳದ ನೀರಿನಲ್ಲಿ ಈಜುತ್ತಿರುವ ದೊಡ್ಡ ಮೊಸಳೆಯನ್ನು ನೋಡಿ ಒಂದು ಕ್ಷಣ ಆಘಾತಕ್ಕೊಳಗಾದರು.


ಷಾರ್ಲೆಟ್ ಕೌಂಟಿ ಶೆರಿಫ್ ಕಚೇರಿ ಮಂಗಳವಾರ ಈಜುಕೊಳದಲ್ಲಿ ಈಜುತ್ತಿರುವ ಸರೀಸೃಪದ ಛಾಯಾಚಿತ್ರಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿ ಕೊಂಡಿದೆ ಮತ್ತು ಜನರು ಈಜುಕೊಳಕ್ಕೆ ಧುಮುಕುವ ಮೊದಲು ಯಾವಾಗಲೂ ಈಜುಕೊಳವನ್ನು ಪರಿಶೀಲಿಸುವಂತೆ ಕೇಳಿದೆ. ಮೂವರು ಅಧಿಕಾರಿಗಳು ಆ ಮೊಸಳೆಯನ್ನು ಸೆರೆ ಹಿಡಿಯಲು ಶ್ರಮಿಸುತ್ತಿರುವುದನ್ನು ಈ ಛಾಯಾಚಿತ್ರಗಳಲ್ಲಿ ನಾವು ನೋಡಬಹುದಾಗಿದೆ.


550 ಪೌಂಡ್ ತೂಕದ ಮೊಸಳೆ
ಈ ಮೊಸಳೆ 550 ಪೌಂಡ್ ಗಳಿಗಿಂತ ಹೆಚ್ಚು ತೂಕವನ್ನು ಹೊಂದಿತ್ತು ಮತ್ತು ಈಜುಕೊಳಕ್ಕೆ ಅದು ಧುಮುಕುವಾಗ ಅಲ್ಲೇ ಇರುವ ಕುಟುಂಬವನ್ನು ಎಚ್ಚರಗೊಳಿಸಿತು ಎಂದು ಹೇಳಲಾಗುತ್ತಿದೆ. "ವಾಟರ್ ಸೇಫ್ಟಿ ಮಂತ್, ಟಿಪ್ ನಂಬರ್ 37: ನೀರಿಗೆ ಧುಮುಕುವ ಮೊದಲು ಯಾವಾಗಲೂ ನಿಮ್ಮ ಈಜುಕೊಳವನ್ನು ಪರಿಶೀಲಿಸಿ. ಕುಟುಂಬದ ಸದಸ್ಯರು ತಮ್ಮ ಈಜುಕೊಳದಲ್ಲಿ ತುಂಬಾನೇ ಜೋರಾದ ಶಬ್ದ ಕೇಳಿ ಎಚ್ಚರಗೊಂಡರು ಮತ್ತು ಯಾರು ಆ ವ್ಯಕ್ತಿ ತಮ್ಮ ಈಜುಕೊಳದಲ್ಲಿ ಸ್ನಾನ ಮಾಡುತ್ತಿರುವುದನ್ನು ನೋಡಲು ಹೊರಗೆ ಬಂದರು.


10 ರಿಂದ 11 ಅಡಿಯ 550 ಪೌಂಡ್ ತೂಕವಿರುವ ಮೊಸಳೆಯೊಂದು ಆ ಈಜುಕೊಳದ ನೀರಿನಲ್ಲಿ ಇರುವುದನ್ನು ನೋಡಿದರು" ಎಂದು ಫೇಸ್‌ಬುಕ್ ಪೋಸ್ಟ್ ನಲ್ಲಿ ಬರೆಯಲಾಗಿದೆ.


ಇದನ್ನೂ ಓದಿ:  Viral News: 11 KGಯ ಬೃಹತ್ ಗೋಲ್ಡ್​ ರಿಂಗ್, ಚಿನ್ನದ ವೈನ್! ವಾವ್ ಇಲ್ಲಿವೆ ಅದ್ಭುತ ಸಂಗತಿಗಳು


ಈಜುಕೊಳದಲ್ಲಿ ಮೊಸಳೆಯನ್ನು ನೋಡಿ ನೆಟ್ಟಿಗರು ಆಘಾತಕ್ಕೊಳಗಾದರು ಮತ್ತು ಅನೇಕರು ಅದನ್ನು ಕೂಡಲೇ ಅಲ್ಲಿಂದ ಬೇರೆಡೆಗೆ ಸ್ಥಳಾಂತರಿಸಬೇಕೆಂದು ಬಯಸಿದರು. "ಓ ದೇವರೇ ಮೊಸಳೆ ತುಂಬಾನೇ ದೊಡ್ಡದಾಗಿದೆ. ವಾವ್... ಡೀಪ್ ಕ್ರೀಕ್ ನ ಕೆಲವು ಭಾಗಗಳಲ್ಲಿ ಈ ರೀತಿಯ ಮೊಸಳೆಗಳನ್ನು ನಾವು ನೋಡಬಹುದು. ನೀವು ಕೆಲವೊಮ್ಮೆ ಈ ಮೊಸಳೆಗಳು ರಾತ್ರಿ ಹೊತ್ತಿನಲ್ಲಿ ಓಡಾಡುವುದನ್ನು ನಾವು ನೋಡಬಹುದು ಮತ್ತು ಸ್ಯಾನ್ ಕ್ರಿಸ್ಟೋಬಲ್ ಅವೆಯ ಗಾಲ್ಫ್ ಕೋರ್ಸ್ ನಲ್ಲಿ ಸಹ ಆಗಾಗ್ಗೆ ಈ ಮೊಸಳೆಗಳು ಕಾಣಿಸಿ ಕೊಳ್ಳುತ್ತವೆ" ಎಂದು ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ.


ಮೊಸಳೆಯ ಬೇರೆ ಬೇರೆ ಘಟನೆಗಳು
ಇತ್ತೀಚೆಗೆ, ಯುಎಸ್ ನ ದಕ್ಷಿಣ ಕೆರೊಲಿನಾದ ಪ್ರಾಥಮಿಕ ಶಾಲೆಯಲ್ಲಿ ಆರು ಅಡಿ ಉದ್ದದ ಮೊಸಳೆಯೊಂದು ಕಂಡು ಬಂದಿದೆ. ಇಬ್ಬರು ಮಹಿಳಾ ಪೊಲೀಸ್ ಅಧಿಕಾರಿಗಳು ಮೊಸಳೆಯ ಬೆನ್ನಿನ ಮೇಲೆ ಕುಳಿತು ಆ ಸರೀಸೃಪದ ಬಾಯಿಯನ್ನು ಕಟ್ಟಿ ಹಾಕುತ್ತಿರುವ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಜೋರಾಗಿಯೇ ಹರಿದಾಡುತ್ತಿತ್ತು ಎಂದು ಹೇಳಬಹುದಾಗಿದೆ.


ಇದನ್ನೂ ಓದಿ:  Carpet Python: ಮನೆಯೊಳಗಿತ್ತು 4 ಬೃಹತ್ ಹೆಬ್ಬಾವು! ಶಾಕಿಂಗ್ ವಿಡಿಯೋ ವೈರಲ್


ಇದಕ್ಕೂ ಮೊದಲು ಇಂತಹದೇ ಒಂದು ಘಟನೆ ನಡೆದಿತ್ತು, ಫ್ಲೋರಿಡಾದ ಮಾಂಟ್ವರ್ಡೆ ಅಕಾಡೆಮಿಯ ಈಜುಕೊಳದ ಕೆಳಭಾಗದಲ್ಲಿ ಒಂದು ಮೊಸಳೆ ಇರುವುದನ್ನು ಗುರುತಿಸಲಾಯಿತು. ಮೊಸಳೆಯ ಉಪಸ್ಥಿತಿಯು ವಿದ್ಯಾರ್ಥಿಗಳ ಈಜು ಅಭ್ಯಾಸವನ್ನು ಅಲ್ಲಿಗೆ ನಿಲ್ಲಿಸಿತು ಮತ್ತು ಪೊಲೀಸ್ ಅಧಿಕಾರಿಗಳು ಈ ವರ್ಷದ ಮಾರ್ಚ್ ತಿಂಗಳಲ್ಲಿ ಈ ಸರೀಸೃಪವನ್ನು ರಕ್ಷಿಸಿದರು.

Published by:Ashwini Prabhu
First published: