Asteroid: ಭೂಮಿಯ ಸಮೀಪ ಹಾದುಹೋಗಲಿರುವ ಬೃಹತ್ ಕ್ಷುದ್ರಗ್ರಹ 1994 PC1

ಕ್ಷುದ್ರಗ್ರಹವನ್ನು ಸಣ್ಣ ದೂರದರ್ಶಕಗಳೊಂದಿಗೆ ಕಂಡುಹಿಡಿಯುವುದು ಸುಲಭವಾಗಿದೆ. ಕ್ಷುದ್ರಗ್ರಹವು ಸರಿಯಾದ ಸ್ಥಾನ ಹಾಗೂ ಸಮಯದಲ್ಲಿ ಟೆಲಿಸ್ಕೋಪ್‌ನಲ್ಲಿ ಕಂಡುಬಂದರೆ 1994 PC1 ಅನ್ನು ಸುಲಭವಾಗಿ ಪತ್ತೆಹಚ್ಚಬಹುದು ಎಂಬುದಾಗಿ ಬಾಹ್ಯಾಕಾಶ ವೀಕ್ಷಕರು ತಿಳಿಸಿದ್ದಾರೆ.

 ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
ದೊಡ್ಡ ಕಲ್ಲಿನ ಆಕಾರದ 1994 PC1 ಹೆಸರಿನ ಕ್ಷುದ್ರಗ್ರಹವು (Asteroid Passes) ಜನವರಿ 18, 2022 ರಂದು ಅಂದರೆ ಇಂದು ಭೂಮಿಯನ್ನು ಸುರಕ್ಷಿತವಾಗಿ ಹಾದುಹೋಗುತ್ತದೆ. ಇದರ ಅಂದಾಜು ಗಾತ್ರ 3,280 ಫೀಟ್ (1 ಕಿಮೀ ಅಥವಾ 0.6 ಮೈಲಿ) ಎಂಪೈರ್ ಸ್ಟೇಟ್ ಕಟ್ಟಡದ (Empire State Building) ಎತ್ತರಕ್ಕಿಂತ 2 ½ ಪಟ್ಟು ಹೆಚ್ಚು ಎಂಬುದಾಗಿ ಊಹಿಸಲಾಗಿದೆ. ಈ ಕ್ಷುದ್ರಗ್ರಹದ ಕುರಿತು 1994ರಿಂದಲೇ ಮಾಹಿತಿ ಇದ್ದು ಅದರ ಗಾತ್ರ ಹಾಗೂ ನಮ್ಮ ಗ್ರಹಕ್ಕಿರುವ ನಿಕಟ ಹಾರಾಟದಿಂದ ಇದನ್ನು ಸಂಭಾವ್ಯ ಅಪಾಯಕಾರಿ ಕ್ಷುದ್ರಗ್ರಹ ಎಂದು ವರ್ಗೀಕರಿಸಲಾಗಿದೆ. ಈ ಗಾತ್ರದ ಕ್ಷುದ್ರಗ್ರಹವು ಸರಿಸುಮಾರು ಪ್ರತಿ 600,000 ವರ್ಷಗಳಿಗೊಮ್ಮೆ ಭೂಮಿಗೆ(Earth approximately) ಅಪ್ಪಳಿಸುತ್ತದೆ. ಆದರೆ 2022ರಲ್ಲಿ 1994 PC1ನ ನಿಕಟ ಸಮೀಪಿಸುವಿಕೆಯಿಂದ ಭಯಪಡಬೇಕಾಗಿಲ್ಲ. ಅಲ್ಲದೆ ಹವ್ಯಾಸಿ ಖಗೋಳ ಶಾಸ್ತ್ರಜ್ಞರು ಬ್ಯಾಕ್‌ಯಾರ್ಡ್ ಟೆಲಿಸ್ಕೋಪ್‌ಗಳ(Telescopes) ಮೂಲಕ ಅದರ ನೋಟವನ್ನು ಸೆರೆಹಿಡಿಯಬಹುದಾಗಿದೆ.

ಸುಲಭವಾಗಿ ವೀಕ್ಷಿಸಬಹುದು:
ಜನವರಿ 18, 2022ರಂದು ಸಂಜೆ 4:51 (ಜನವರಿ 19 ರಂದು 3.21 ಬೆಳಗ್ಗೆ) ಕ್ಕೆ ಭೂಮಿಗೆ ನಿಕಟ ಸಾಮಿಪ್ಯವನ್ನು ಈ ಕ್ಷುದ್ರಗ್ರಹ ಮಾಡಲಿದೆ. ಖಗೋಳಶಾಸ್ತ್ರಜ್ಞರು ಅದರ ಕಕ್ಷೆಯನ್ನು ಲೆಕ್ಕ ಹಾಕಿದ ಕನಿಷ್ಠ ಮುಂದಿನ 200 ವರ್ಷಗಳವರೆಗೆ ಈ ಸಾಮಿಪ್ಯವು ಈ ಕ್ಷುದ್ರಗ್ರಹಕ್ಕೆ ಹತ್ತಿರವಾಗಿರುತ್ತದೆ ಎಂದಾಗಿದೆ. ವೇಗದ ಕ್ಷುದ್ರಗ್ರಹವು ಭೂಮಿಯಿಂದ 1.2 ಮಿಲಿಯನ್ ಮೈಲುಗಳು (1.93 ಮಿಲಿಯನ್ ಕಿಮೀ) ಅಥವಾ ಭೂಮಿ-ಚಂದ್ರನ ದೂರದ 5.15 ಪಟ್ಟು ಹೆಚ್ಚು ಹಾದುಹೋಗುತ್ತದೆ. ಅದು ತುಂಬಾ ಸುರಕ್ಷಿತ ದೂರವಾಗಿದ್ದು, ಆದರೆ ಬ್ಯಾಕ್‌ಯಾರ್ಡ್ ಟೆಲಿಸ್ಕೋಪ್‌ನಿಂದ ಸುಲಭವಾಗಿ ವೀಕ್ಷಿಸಲು ಸಾಕಷ್ಟು ಹತ್ತಿರದಲ್ಲಿದೆ.

ಸಂಭಾವ್ಯ ಅಪಾಯಕಾರಿ ಕ್ಷುದ್ರಗ್ರಹ 7482:
ರಾಬರ್ಟ್ ಮೆಕ್‌ನಾಟ್ ಕ್ಷುದ್ರಗ್ರಹ (7482) 1994 PC1 ಅನ್ನು ಆಸ್ಟ್ರೇಲಿಯಾದ ಸೈಡಿಂಗ್ ಸ್ಪ್ರಿಂಗ್ ಅಬ್ಸರ್ವೇಟರಿಯಲ್ಲಿ ಆಗಸ್ಟ್ 9, 1994 ರಂದು ಕಂಡುಹಿಡಿದರು. ಖಗೋಳಶಾಸ್ತ್ರಜ್ಞರು ಸೆಪ್ಟೆಂಬರ್ 1974ರ ಹಿಂದಿನ ಇತರ ಅವಲೋಕನಗಳಿಂದ ಬಾಹ್ಯಾಕಾಶ ಶಿಲೆಯನ್ನು ಕಂಡುಕೊಂಡರು. 47 ವರ್ಷಗಳ ವೀಕ್ಷಣೆಗಳ ಮೂಲಕ ಅದರ ಕಕ್ಷೆಯು ಉತ್ತಮವಾಗಿ ಸ್ಥಾಪಿತವಾಗಿದೆ ಎಂಬುದನ್ನು ಅರಿತುಕೊಳ್ಳಲಾಗಿದೆ.

ಇದನ್ನೂ ಓದಿ: Asteroid: ಕ್ಷುದ್ರಗ್ರಹವನ್ನೇ ದಾರಿ ತಪ್ಪಿಸಲು ಹೊರಟಿದೆ NASA, ವಿಜ್ಞಾನದ ಶಕ್ತಿ ಅಗಾಧ!

ಬೃಹತ್ ಬಾಹ್ಯಾಕಾಶ ಬಂಡೆಯು ಭೂಮಿಗೆ ಹೋಲಿಸಿದರೆ ಗಂಟೆಗೆ 43,754 ಮೈಲುಗಳಷ್ಟು (ಸೆಕೆಂಡಿಗೆ 19.56 ಕಿಲೋಮೀಟರ್) ಪ್ರಯಾಣಿಸುತ್ತಿದೆ. ಗಣನೀಯ ವೇಗವು ಹವ್ಯಾಸಿ ಖಗೋಳಶಾಸ್ತ್ರಜ್ಞರಿಗೆ ವೇಗದ ಕ್ಷುದ್ರಗ್ರಹವನ್ನು ಗುರುತಿಸಲು ಅನುವು ಮಾಡಿಕೊಡುತ್ತದೆ. ಇದು ನಕ್ಷತ್ರದಂತೆಯೇ ಬೆಳಕಿನ ಬಿಂದುವಾಗಿ ಗೋಚರಿಸುತ್ತದೆ ಕ್ಷುದ್ರಗ್ರಹ (7482) 1994 PC1 ಸುಮಾರು 10 ರ ಪರಿಮಾಣದಲ್ಲಿ ಹೊಳೆಯುತ್ತದೆ.

ಟೆಲಿಸ್ಕೋಪ್‌ನಿಂದ ಕ್ಷುದ್ರಗ್ರಹವನ್ನು ಹೇಗೆ ವೀಕ್ಷಿಸಬಹುದು?
ಸಣ್ಣ ಟೆಲಿಸ್ಕೋಪ್ ಅನ್ನು ಸರಿಯಾದ ಸಮಯ ಮತ್ತು ಸ್ಥಳದಲ್ಲಿ ಗುರಿಯಾಗಿಸಿಕೊಂಡು ಕ್ಷುದ್ರಗ್ರಹ (7482) 1994 PC1 ಅನ್ನು ಗುರುತಿಸಲು ಸಾಧ್ಯವಾಗುತ್ತದೆ. ಉತ್ತರ ಅಮೆರಿಕದಲ್ಲಿನ ವೀಕ್ಷಕರಿಗೆ, ಬ್ಯಾಕ್‌ಯಾರ್ಡ್ ಟೆಲಿಸ್ಕೋಪ್‌ಗಳನ್ನು ಬಳಸಿಕೊಂಡು ಜನವರಿ 18ರ ಕ್ಷುದ್ರಗ್ರಹದ ನಿಕಟ ಸಾಮೀಪ್ಯವನ್ನು ವೀಕ್ಷಿಸಬಹುದಾಗಿದೆ. ಕ್ಷುದ್ರಗ್ರಹದ ಗಾತ್ರ ಮತ್ತು ಸಾಮೀಪ್ಯದಿಂದಾಗಿ ಬಾಹ್ಯಾಕಾಶ ಶಿಲೆಯ ಚಲನೆ ಪತ್ತೆಹಚ್ಚಲು ಸಾಧ್ಯವಾಗುತ್ತದೆ. ಕ್ಷುದ್ರಗ್ರಹವು ಸ್ಥಿರ ಸುತ್ತಮುತ್ತಲಿನ ನಕ್ಷತ್ರಗಳ ಹತ್ತಿರ ಹಾದುಹೋದಾಗ, ಚಲನೆಯು ಹೆಚ್ಚು ಗಮನಾರ್ಹವಾಗಿರುತ್ತದೆ.

ಬಾಹ್ಯಾಕಾಶ ವೀಕ್ಷಕರು
ಕ್ಷುದ್ರಗ್ರಹವನ್ನು ಗುರುತಿಸಲು ಮತ್ತೊಂದು ಉತ್ತಮ ವಿಧಾನವೆಂದರೆ ಟೆಲಿಸ್ಕೋಪ್‌ಗೆ ಕ್ಯಾಮೆರಾವನ್ನು ಜೋಡಿಸುವುದು ಮತ್ತು 30 ರಿಂದ 45 ಸೆಕೆಂಡ್‌ಗಳವರೆಗೆ ಎಕ್ಸ್‌ಪೋಶರ್‌ಗಳನ್ನು ತೆಗೆದುಕೊಳ್ಳುವುದು. ಕ್ಷುದ್ರಗ್ರಹದ ಪಥದಲ್ಲಿರುವ ನಕ್ಷತ್ರ ಅಥವಾ ವಸ್ತುವಿನ ಕಡೆಗೆ ಕ್ಯಾಮರಾ ಮತ್ತು ದೂರದರ್ಶಕವನ್ನು ಪಾಯಿಂಟ್ ಮಾಡಬೇಕು. ಜನವರಿ 18 ರಂದು ಹುಣ್ಣಿಮೆಯ ಹೊರತಾಗಿಯೂ, ಕ್ಷುದ್ರಗ್ರಹವನ್ನು ಸಣ್ಣ ದೂರದರ್ಶಕಗಳೊಂದಿಗೆ ಕಂಡುಹಿಡಿಯುವುದು ಸುಲಭವಾಗಿದೆ. ಕ್ಷುದ್ರಗ್ರಹವು ಸರಿಯಾದ ಸ್ಥಾನ ಹಾಗೂ ಸಮಯದಲ್ಲಿ ಟೆಲಿಸ್ಕೋಪ್‌ನಲ್ಲಿ ಕಂಡುಬಂದರೆ 1994 PC1 ಅನ್ನು ಸುಲಭವಾಗಿ ಪತ್ತೆಹಚ್ಚಬಹುದು ಎಂಬುದಾಗಿ ಬಾಹ್ಯಾಕಾಶ ವೀಕ್ಷಕರು ತಿಳಿಸಿದ್ದಾರೆ.

ಇದನ್ನೂ ಓದಿ: 7 ಕ್ಷುದ್ರಗ್ರಹಗಳನ್ನು ಪತ್ತೆಹಚ್ಚಲು NASAಗೆ ಸಹಾಯ ಮಾಡಿದ 8 ವರ್ಷದ ಬಾಲಕಿ..

ಕ್ಷುದ್ರಗ್ರಹ (7482) 1994 PC1 ಕ್ಯಾಲಿಫೋರ್ನಿಯಾದಲ್ಲಿ ಗೋಲ್ಡ್‌ಸ್ಟೋನ್ ರಾಡಾರ್ ಬಳಸುವ ಖಗೋಳಶಾಸ್ತ್ರಜ್ಞರಿಗೆ ಅತ್ಯುತ್ತಮ ಟಾರ್ಗೆಟ್ ಎಂದೆನಿಸಿದರೂ, ದುರದೃಷ್ಟವಶಾತ್ DSS-14 ರಾಡಾರ್ ಆ್ಯಂಟೆನಾ ನಿರ್ವಹಣೆಯ ಕಾರಣದಿಂದಾಗಿ ಬಾಹ್ಯಾಕಾಶ ಶಿಲೆಯನ್ನು ಅಧ್ಯಯನ ಮಾಡಲು ಸಾಧ್ಯವಾಗುವುದಿಲ್ಲ.
Published by:vanithasanjevani vanithasanjevani
First published: