ಗೋಸ್ಟ್ ಹಂಟ್ ವೇಳೆ ಗೊಂಬೆ ಕಣ್ಣಲ್ಲಿ ನೀರು; ಸಿಸಿ ಟಿವಿಯಲ್ಲಿ ಸೆರೆ ಆಯ್ತು ಭೂತದ ಚೇಷ್ಟೆ

ತ್ರಿ ವೇಳೆ ಈ ಬಾರ್​ನಲ್ಲಿ ಮಗು ಅಳುವ ಶಬ್ದ, ಯಾರೋ ಓಡಾಡಿದಂತೆಲ್ಲ ಭಾಸವಾಗುತ್ತದೆ ಎಂದು ಗ್ರಾಹಕರು ದೂರಿದ್ದರು. ಇದಾದ ನಂತರದಲ್ಲಿ ಇಲ್ಲಿಗೆ ಜನರು ಆಗಮಿಸುವುದೇ ಕಡಿಮೆ ಆಗಿ ಬಿಟ್ಟಿತ್ತು.

Ghost Doll

Ghost Doll

 • Share this:
  ಭೂತ ಇದೆ-ಇಲ್ಲ ಎನ್ನುವ ಬಗ್ಗೆ ಆಗಾಗ ಚರ್ಚೆಗಳು ನಡೆಯುತ್ತಲೇ ಇರುತ್ತವೆ. ಕೆಲವರು ದೆವ್ವ-ಭೂತ ಇದೆ ಎಂದು ನಂಬಿದರೆ ಇನ್ನೂ ಕೆಲವರು ಅದೆಲ್ಲವೂ ನಮ್ಮ ಕಲ್ಪನೆ ಅಷ್ಟೇ ಎನ್ನುತ್ತಾರೆ. ಆದರೆ, ಕೆಲವೊಮ್ಮೆ ನಡೆಯುವ ವಿಚಿತ್ರ ಘಟನೆಗಳು ದೆವ್ವ ಇದೆ ಎನ್ನುವುದನ್ನು ಮತ್ತೆ ಮತ್ತೆ ಸಾಬೀತು ಮಾಡುತ್ತವೆ. ಈಗ ಉತ್ತರ ವೇಲ್ಸ್​ನಲ್ಲಿ ನಡೆದ ಘಟನೆಯೊಂದು ದೆವ್ವ ಇದೆ ಎಂಬುದಕ್ಕೆ ಸಾಕ್ಷ್ಯ ನೀಡಿದೆ.

  ಈ ಘಟನೆ ನಡೆದಿದ್ದು ಉತ್ತರ ವೇಲ್ಸ್​ನ ವ್ರೆಕ್ಸ್​ಹ್ಯಾಮ್​ನಲ್ಲಿರುವ ಹೈಡ್​ಔಟ್​ ಬಾರ್​ನಲ್ಲಿ. ಈ ಬಾರ್​ನಲ್ಲಿ ದೆವ್ವಗಳಿವೆ ಎಂಬುದನ್ನು ಅನೇಕರು ಹೇಳಿದ್ದರು. ಅಲ್ಲದೆ, ರಾತ್ರಿ ವೇಳೆ ಈ ಬಾರ್​ನಲ್ಲಿ ಮಗು ಅಳುವ ಶಬ್ದ, ಯಾರೋ ಓಡಾಡಿದಂತೆಲ್ಲ ಭಾಸವಾಗುತ್ತದೆ ಎಂದು ಗ್ರಾಹಕರು ದೂರಿದ್ದರು. ಇದಾದ ನಂತರದಲ್ಲಿ ಇಲ್ಲಿಗೆ ಜನರು ಆಗಮಿಸುವುದೇ ಕಡಿಮೆ ಆಗಿ ಬಿಟ್ಟಿತ್ತು.

  ಮ್ಯಾಟ್​ ಟಿಲ್ಲೆಟ್​ ನೇತೃತ್ವದ ಗೋಸ್ಟ್ ಹಂಟ್​ ಮಾಡುವ ತಂಡ ಇತ್ತೀಚೆಗೆ ಬಾರ್​ಗೆ ಎಂಟ್ರಿ ಕೊಟ್ಟಿತ್ತು. ಬಾರ್​ನ ಎಲ್ಲ ಭಾಗದಲ್ಲೂ ವಿಶೇಷ ಕ್ಯಾಮೆರಾಗಳನ್ನು ಫಿಕ್ಸ್​ ಮಾಡಲಾಗಿತ್ತು. ಎಲ್ಲರೂ ಕೂತು ಸುದ್ದಿ ಹೇಳುತ್ತಿರುವ ಸಂದರ್ಭದಲ್ಲಿ ಮಗುವೊಂದು ಅಳುವ ಶಬ್ದ ಕೇಳಿದೆ. ಈ ವೇಳೆ ತಿರುಗಿ ನೋಡಿದಾಗ ಅಲ್ಲಿದ್ದ ಗೊಂಬೆಯ ಕಣ್ಣಿನಿಂದ ಕಣ್ಣೀರು ಹರಿದು ಬರುತ್ತಿತ್ತು.  ಈ ಗೊಂಬೆಯ ಹೆಸರು ಆ್ಯನಿ. ಆ್ಯನಿ ಅನೇಕ ವರ್ಷಗಳಿಂದ ಇದೇ ಬಾರ್​ನಲ್ಲಿ ಇದೆಯಂತೆ. ನಮ್ಮ ಸಂಭಾಷಣೆ ವೇಳೆ ಆ ಗೊಂಬೆ ಯಾಕೆ ಅತ್ತಿತ್ತು ಎಂಬುದು ನಮಗೆ ಇನ್ನೂ ಗೊತ್ತಾಗಿಲ್ಲ. ಆದರೆ,  ಆ ಬಾರ್​ನಲ್ಲಿ ದೆವ್ವ ಇರುವುದಂತೂ ನಿಜ ಎಂದಿದ್ದಾರೆ ಗೋಸ್ಟ್​ ಹಂಟರ್​ಗಳು.
  Published by:Rajesh Duggumane
  First published: