• Home
 • »
 • News
 • »
 • trend
 • »
 • Viral Video: ಕಿಟಕಿ ಸ್ವಚ್ಛಗೊಳಿಸಲು ಅಪಾಯವನ್ನು ಮೈಮೇಲೆ ಎಳೆದುಕೊಂಡ ಮಹಿಳೆ

Viral Video: ಕಿಟಕಿ ಸ್ವಚ್ಛಗೊಳಿಸಲು ಅಪಾಯವನ್ನು ಮೈಮೇಲೆ ಎಳೆದುಕೊಂಡ ಮಹಿಳೆ

ಗಾಜಿಯಾಬಾದ್ ಮಹಿಳೆ

ಗಾಜಿಯಾಬಾದ್ ಮಹಿಳೆ

Women clean window: ಗಾಜಿಯಾಬಾದ್‍ನ ಇಂದಿರಾಪುರಂ ಪ್ರದೇಶದಲ್ಲಿ ಮಹಿಳೆಯೊಬ್ಬರು ನಾಲ್ಕನೇ ಮಹಡಿಯಲ್ಲಿರುವ ಮನೆಯ ಕಿಟಕಿಯಿಂದ ಹೊರಬಂದು, ಸ್ವಚ್ಛಗೊಳಿಸುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ ಸ್ವಲ್ಪ ಆಯ ತಪ್ಪಿದರೂ ಮಹಿಳೆ ಕಾಲು ಜಾರಿ ಬೀಳುವ ಸಾಧ್ಯತೆ ಇತ್ತು

 • Share this:

  ಸೋಶಿಯಲ್ ಮೀಡಿಯಾದಲ್ಲಿ(Social Media) ಕಾಣಸಿಗುವ ವಿಡಿಯೋಗಳು(Video) ಪ್ರತಿನಿತ್ಯ ಜನರಿಗೆ ಮನರಂಜನೆಯನ್ನು(Entertainment) ನೀಡುತ್ತವೆ.. ಆದರೆ ಇನ್ನು ಕೆಲವು ವಿಡಿಯೋಗಳು ಎಂಥವರನ್ನು ಸಹ ಬೆಚ್ಚಿಬೀಳುವಂತೆ ಮಾಡುತ್ತವೆ. ನಮಗೆ ಅದರಿಂದ ಅಪಾಯವಿದೆ(Danger) ಎಂದು ಗೊತ್ತಿದ್ದರೂ ಜನರು ತೆಗೆದುಕೊಳ್ಳುವ ಹುಚ್ಚು ನಿರ್ಧಾರಗಳು ಸಾಹಸಗಳು ನೆಟ್ಟಿಗರ ಆಕ್ರೋಶಕ್ಕೂ ಕಾರಣವಾಗಿದೆ.  ಜನರು ಗೊತ್ತಿದ್ದು ಈ ಕೆಲಸಗಳನ್ನು ಮಾಡುತ್ತಾರೆ ಅಥವಾ ಅರಿವಿಲ್ಲದೆ ಈ ಕೆಲಸ ಮಾಡುತ್ತಾರೋ ಎಂಬುದು ತಿಳಿದಿಲ್ಲ. ಯಾಕಂದ್ರೆ ಅಪಾಯವನ್ನ ತಮಗೆ ತಾವೇ ಗೊತ್ತಿಲ್ಲದಂತೆ ಆಹ್ವಾನಿಸಿ ಕೊಳ್ಳುತ್ತಿರುವ ವಿಡಿಯೋಗಳನ್ನು ಪ್ರತಿನಿತ್ಯ ನೋಡುತ್ತಿದ್ದರು ಜನರು ಮಾತ್ರ ಇದುವರೆಗೂ ಬುದ್ದಿ ಕಲಿತಿಲ್ಲ. ಹೀಗಾಗಿ ಪ್ರತಿನಿತ್ಯ ಅಪಾಯಕಾರಿಯಾದ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಕಾಣಸಿಗುತ್ತವೆ. ಅದೇ ರೀತಿ ಈಗ ಮಹಿಳೆಯೊಬ್ಬಳು ಮಾಡಿರುವ ಹುಚ್ಚುತನದ ಕೆಲಸ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.


  4ನೇ ಮಹಡಿಯ ಕಿಟಕಿಯಲ್ಲಿ ನಿಂತು ಸ್ವಚ್ಛಗೊಳಿಸಿದ ಮಹಿಳೆ


  ಗಾಜಿಯಾಬಾದ್‍ನ ಇಂದಿರಾಪುರಂ ಪ್ರದೇಶದಲ್ಲಿ ಮಹಿಳೆಯೊಬ್ಬರು ನಾಲ್ಕನೇ ಮಹಡಿಯಲ್ಲಿರುವ ಮನೆಯ ಕಿಟಕಿಯಿಂದ ಹೊರಬಂದು, ಸ್ವಚ್ಛಗೊಳಿಸುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ ಸ್ವಲ್ಪ ಆಯ ತಪ್ಪಿದರೂ ಮಹಿಳೆ ಕಾಲು ಜಾರಿ ಬೀಳುವ ಸಾಧ್ಯತೆ ಇತ್ತು. ಅದೃಷ್ಟವಶಾತ್ ಅಪಘಾತ ಕೈತಪ್ಪಿದ್ದು, ಪಕ್ಕದ ಕಟ್ಟಡದಲ್ಲಿ ವಾಸಿಸುತ್ತಿದ್ದ ಮತ್ತೊಬ್ಬ ಮಹಿಳೆ ದೃಶ್ಯವನ್ನು ಮೊಬೈಲ್‍ನಲ್ಲಿ ಸೆರೆಹಿಡಿದಿದ್ದಾರೆ.


  ಇದನ್ನೂ ಓದಿ: ಈ ವರ್ಷ ಯಾವೆಲ್ಲಾ ವೆರೈಟಿ ಆಹಾರ ಫೇಮಸ್? ಏನಿದೆ 2022ರ ಟ್ರೆಂಡ್?


  ಇನ್ನು ವೈರಲ್ ವಿಡಿಯೋದಲ್ಲಿ ಕಾಣಿಸಿಕೊಂಡಿರುವ ಮಹಿಳೆ 45 ವರ್ಷದ,‌ ಶಿಪ್ರಾ‌ ರಿವೇರಾ ಸೊಸೈಟಿಯ ನಿವಾಸಿ. ಅದೇ ಸೊಸೈಟಿಯಲ್ಲಿದ್ದ ಶೃತಿ ಠಾಕೂರ್ ಎಂಬ ಮಹಿಳೆ ಈ ವಿಡಿಯೋವನ್ನು ಮೊಬೈಲ್ ನಲ್ಲಿ ಚಿತ್ರೀಕರಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ಶೃತಿ, ನಾನು ಆಕೆಯನ್ನು ಆ ಪರಿಸ್ಥಿತಿಯಲ್ಲಿ ನೋಡಿದಾಕ್ಷಣ ಬೆಚ್ಚಿಬಿದ್ದೆ. ಆಕೆಯ ಗಮನ ಸೆಳೆಯಲು ಕೂಗಾಡಿದೆ, ಕಡೆಗೆ ಸಾಕಷ್ಟು ಬಾರಿ ಆಕೆಯ ಫೋನ್ ಗೆ ಕರೆ ಮಾಡಿದೆ. ಕೆಲಸದಲ್ಲಿ‌ ಮಗ್ನರಾಗಿದ್ದ ಆಕೆ‌ ಫೋನ್ ರಿಂಗಣಿಸಿದರು ಗಮನ ಕೊಡಲಿಲ‌್ಲ‌.


  ಸಮಯ ವ್ಯರ್ಥ ಮಾಡುವುದು ಬೇಡವೆಂದು ನನ್ನ ಮಗಳನ್ನು ಅವರ ಮನೆಗೆ ಕಳುಹಿಸಿದೆ. ಅದೃಷ್ಟವಶಾತ್ ಅವರು ಅಷ್ಟೊತ್ತಿಗಾಗಲೆ ತಮ್ಮ ಮನೆಗೆ ಹೋಗಿದ್ದರು, ಅವರು ಸುರಕ್ಷಿತವಾಗಿದ್ದಾರೆ ಎಂಬುದೇ ನನಗೆ ಸಮಾಧಾನ ಎಂದು ಘಟನೆಯನ್ನು ವಿವರಿಸಿದ್ದಾರೆ‌.  12ನೇ ಮಹಡಿಯ ಬಾಲ್ಕನಿಯಲ್ಲಿ ನಿಂತು ವ್ಯಾಯಾಮ ಮಾಡಿದ್ದ ಯುವಕ


  ಇನ್ನು ಈ ಹಿಂದೆ ಹರಿಯಾಣದ ಫರೀದಾಬಾದ್​ನಲ್ಲಿ ವ್ಯಕ್ತಿಯೋರ್ವ ಒಂದು ಕಟ್ಟಡದ 12ನೇ ಮಹಡಿಯ ಬಾಲ್ಕನಿಯ ಹೊರಗೆ ರೇಲಿಂಗ್ ಹಿಡಿದು ವ್ಯಾಯಾಮ ಮಾಡಿದ್ದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು.


  ವಿಡಿಯೋವನ್ನು ಕಂಡ ಅನೇಕ ಜನರು ಯುವಕನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಈ ಡೇರ್​ ಡೆವಿಲ್ ವರ್ಕೌಟ್‌ ಕಂಡು ಹಲವರು ಅಚ್ಚರಿ ವ್ಯಕ್ತಪಡಿಸಿದರೆ, ಇನ್ನೂ ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದ್ರು. ಅಲ್ಲದೆ ಈ ರೀತಿ ಅಪಾಯ ತಂದುಕೊಳ್ಳುವಂತೆ ಯುವಕನಿಗೆ ಸಲಹೆಯನ್ನು ನೀಡಿದರು.  ಬಟ್ಟೆ ತರಲು ಮಗನನ್ನ ಸೀರೆ ಮೂಲಕ ಮಹಡಿಯಿಂದ ಕೆಳಗೆ ಇಳಿಸಿದ್ದ ಮಹಿಳೆ


  ಇನ್ನು ಕೆಲವೇ ದಿನಗಳ ಹಿಂದೆ ಮಹಿಳೆಯೋರ್ವಳು ಕೆಳಗೆ ಬಿದ್ದಿದ್ದ ಬಟ್ಟೆಗಳನ್ನು ತರಲು 10 ಮಹಡಿಯಿಂದ ತನ್ನ ಮಗನನ್ನು ಸೀರೆಯ ಮೂಲಕ ಕೆಳಗಿಳಿಸಿದ ಘಟನೆ ಫರೀದಾಬಾದ್​ನ ಸೆಕ್ಟರ್​ 80ರಲ್ಲಿ ನಡೆದಿದ್ದು, ಈ ದೃಶ್ಯವೂ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.


  ಕೇವಲ ಬಟ್ಟೆಯ ಆಸೆಗಾಗಿ ಮಗನ ಪ್ರಾಣವನ್ನೇ ಅಪಾಯಕ್ಕೆ ತಳ್ಳಿದ ಮಹಿಳೆಯ ವಿರುದ್ಧ ನೆಟ್ಟಿಗರು ಸಾಕಷ್ಟು ಆಕ್ರೋಶ ವ್ಯಕ್ತಪಡಿಸಿದ್ದರು.. ಅಲ್ಲದೆ ಈರೀತಿಯ ಸಾಹಸ ಕೈಗೊಳ್ಳುವಾಗ ಮುಂಜಾಗೃತಾ ಕ್ರಮಗಳನ್ನು ಅನುಸರಿಸುವಂತೆ ಮಹಿಳೆಗೆ ಸಲಹೆಯನ್ನು ನೀಡಿದರು.


  ಇದನ್ನೂ ಓದಿ: ಮೊದಲ ಮಗುವಿಗೆ 'ರಾಷ್ಟ್ರಪತಿ​' ಎರಡನೇ ಮಗುವಿಗೆ 'ಪಂತ್ ಪ್ರಧಾನ್' ಹೆಸರಿಟ್ಟರು; ಎಡವಟ್ಟು ಆಗಿದ್ದು ಅಲ್ಲೇ...


  ಒಟ್ಟಾರೆ ನಮಗೆ ಅಪಾಯ ಆಗುತ್ತದೆ ಎಂಬ ಅರಿವಿದ್ದರೂ ಯಾವುದೋ ಹುಮ್ಮಸ್ಸಿನಲ್ಲಿ ಸಾಹಸ ಮಾಡಲು ಹೋಗಿ ಅಪಾಯ ತಂದು ಕೊಳ್ಳುತ್ತಿರುವ ಸಂಖ್ಯೆ ಪ್ರತಿನಿತ್ಯ ಜಾಸ್ತಿಯಾಗುತ್ತಿದೆ

  Published by:ranjumbkgowda1 ranjumbkgowda1
  First published: