Government Schemes: ಸರ್ಕಾರದ ಈ ಯೋಜನೆಗಳಲ್ಲಿ ಕೇವಲ 28 ರೂ. ಕಟ್ಟಿ 4 ಲಕ್ಷ ರೂ. ಲಾಭ ಪಡೆಯಿರಿ

PMJJBY & PMSBY: ಸಮಾಜದ ಪ್ರತಿಯೊಂದು ವಿಭಾಗವನ್ನು ತಲುಪಲು ಸರ್ಕಾರವು ಕಡಿಮೆ ಹಣದಲ್ಲಿ ವಿಮಾ ಸೌಲಭ್ಯಗಳನ್ನು ಒದಗಿಸುತ್ತಿದೆ. 4 ಲಕ್ಷ ರೂ. ಲಾಭ ಪಡೆಯಲು, ನೀವು ಸರ್ಕಾರದ ಎರಡು ಯೋಜನೆಗಳಲ್ಲಿ ಹೂಡಿಕೆ ಮಾಡಬೇಕು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಕಳೆದೆರೆಡು ವರ್ಷಗಳಲ್ಲಿ ಕೊರೊನಾ ಸಾವು-ನೋವು ನೋಡಿದ ಮೇಲೆ ಜೀವ ವಿಮೆ(life insurance) ಹೊಂದಿರುವುದು ಎಷ್ಟು ಮುಖ್ಯ ಎಂಬ ಅರಿವು ಹೆಚ್ಚಾಗಿದೆ. ನಾವು ಹಾಗೂ ನಮ್ಮ ಕುಟುಂಬ ಆರ್ಥಿಕವಾಗಿ ಸುಸ್ಥಿತಿಯಲ್ಲಿರುವುದು ಮುಖ್ಯ. ಜೀವನದಲ್ಲಿ ಎದುರಾಗುವ ಅನಿರೀಕ್ಷಿತ ದುರಂತಗಳ ಸಂದರ್ಭದಲ್ಲಿ ಹಣಕಾಸಿನ ಸಮಸ್ಯೆಗೆ ತಕ್ಷಣದ ಪರಿಹಾರ ಸಿಗಬೇಕು. ನಮ್ಮ ಕಷ್ಟದ ದಿನಗಳಲ್ಲಿ, ಇಲ್ಲವೇ ನಾವಿಲ್ಲದಾಗ ನಮ್ಮ ಕುಟುಂಬದ ನೆರವಿಗೆ ಬರುವ ಹಣಕಾಸು ಯೋಜನೆಗಳನ್ನು ಪಡೆದುಕೊಳ್ಳುವುದು ಒಳ್ಳೆಯ ನಿರ್ಧಾರ. ಈ ನಿಟ್ಟಿನಲ್ಲಿ ಸಮಾಜದ ಪ್ರತಿಯೊಂದು ವಿಭಾಗವನ್ನು ತಲುಪಲು ಸರ್ಕಾರವು ಕಡಿಮೆ ಹಣದಲ್ಲಿ ವಿಮಾ ಸೌಲಭ್ಯಗಳನ್ನು ಒದಗಿಸುತ್ತಿದೆ. ಅವುಗಳಲ್ಲಿ ಪ್ರಮುಖವಾದ ಸರ್ಕಾರಿ ಯೋಜನೆಗಳೆಂದರೆ ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ (PMSBY) ಮತ್ತು ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ (PMJJBY). ಈ ಯೋಜನೆಗಳು ನಿಮಗೆ 4 ಲಕ್ಷ ರೂ.ಗಳವರೆಗೆ ರಕ್ಷಣೆ ನೀಡುತ್ತದೆ.

4 ಲಕ್ಷ ರೂ. ಲಾಭ ಪಡೆಯಲು, ನೀವು ಸರ್ಕಾರದ ಎರಡು ಯೋಜನೆಗಳಲ್ಲಿ ಹೂಡಿಕೆ ಮಾಡಬೇಕು. ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ (PMJJBY) ಮತ್ತು ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ (PMSBY) ನಲ್ಲಿ ಸ್ವಲ್ಪ ಹಣವನ್ನು ಹೂಡಿಕೆ ಮಾಡುವ ಮೂಲಕ ನೀವು ಅದರ ಲಾಭಗಳನ್ನು ಪಡೆಯಬಹುದು. ಈ ಎರಡು ಯೋಜನೆಗಳಲ್ಲಿ  ಕೇವಲ 342 ರೂಪಾಯಿಗಳನ್ನು ವಾರ್ಷಿಕವಾಗಿ ಜಮಾ ಮಾಡಬೇಕು.





ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ (PMSBY- Pradhan Mantri Suraksha Bima Yojana)

ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆಯಡಿ, ಅಪಘಾತದಲ್ಲಿ ಅಥವಾ ಸಂಪೂರ್ಣ ಅಂಗವೈಕಲ್ಯದಲ್ಲಿ ವಿಮಾದಾರ ಸಾವನ್ನಪ್ಪಿದರೆ 2 ಲಕ್ಷ ರೂ.ಗಳ ಪರಿಹಾರ ಲಭ್ಯವಿದೆ. ಈ ಯೋಜನೆಯಡಿಯಲ್ಲಿ ವಿಮಾದಾರರು ಭಾಗಶಃ ಅಥವಾ ಶಾಶ್ವತವಾಗಿ ಅಂಗವಿಕಲರಾದರೆ, ಅವರು 1 ಲಕ್ಷ ರೂ. ಪಡೆಯಲಿದ್ದಾರೆ. 18 ರಿಂದ 70 ವರ್ಷ ವಯಸ್ಸಿನ ಯಾವುದೇ ವ್ಯಕ್ತಿ ಈ ವಿಮಾ ಯೋಜನೆ ಪ್ರಯೋಜನವನ್ನು ಪಡೆಯಬಹುದು. ಈ ಯೋಜನೆಯ ವಾರ್ಷಿಕ ಪ್ರೀಮಿಯಂ ಕೇವಲ 12 ರೂ.

ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ (PMJJBY- Pradhan Mantri Jeevan Jyoti Bima Yojana)

ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆಯಡಿ, ವಿಮಾದಾರನ ಸಾವಿನ ನಂತರ ನಾಮಿನಿಗೆ 2 ಲಕ್ಷ ರೂ. ನೀಡಲಾಗುತ್ತದೆ. 18 ರಿಂದ 50 ವರ್ಷ ವಯಸ್ಸಿನ ಯಾವುದೇ ವ್ಯಕ್ತಿ ಈ ಯೋಜನೆಯ ಲಾಭ ಪಡೆಯಬಹುದು. ಈ ಯೋಜನೆಗಾಗಿ, ನೀವು ಕೇವಲ 330 ರೂ .ವಾರ್ಷಿಕ ಪ್ರೀಮಿಯಂ ಪಾವತಿಸಬೇಕು. ಇವೆರಡೂ ಅವಧಿ ವಿಮಾ ಪಾಲಿಸಿಗಳು ಮತ್ತು ಈ ವಿಮೆ ಒಂದು ವರ್ಷದವರೆಗೆ ಇರುತ್ತದೆ.  ಈ ವಿಮಾ ರಕ್ಷಣೆಯು ಜೂನ್ 1 ರಿಂದ ಮೇ 31 ರವರೆಗೆ ಇರುತ್ತದೆ ಎಂದು ತಿಳಿದುಕೊಳ್ಳುವುದು ಸಹ ಮುಖ್ಯವಾಗಿದೆ. ಇದಕ್ಕಾಗಿ, ನೀವು ಬ್ಯಾಂಕ್ ಖಾತೆಯನ್ನು ಹೊಂದಿರಬೇಕು. ಬ್ಯಾಂಕ್ ಖಾತೆಯನ್ನು ಮುಚ್ಚುವುದರಿಂದ ಅಥವಾ ಪ್ರೀಮಿಯಂ ಕಡಿತದ ಸಮಯದಲ್ಲಿ ಖಾತೆಯಲ್ಲಿ ಸಾಕಷ್ಟು ಬ್ಯಾಲೆನ್ಸ್ ಇಲ್ಲದಿರುವುದರಿಂದ ಸಹ ವಿಮೆಯನ್ನು ರದ್ದುಗೊಳಿಸಬಹುದು.
Published by:Kavya V
First published: