Woman bites : ನಾಯಿಗೆ ಹೊಡೆಯಬೇಡಿ ಎಂದು ಹೇಳಿದ ಯುವತಿಯನ್ನೇ ಕಚ್ಚಿದ ಮಹಿಳೆ!

ಜರ್ಮನಿಯ ನಿಯಮಗಳ ಪ್ರಕಾರ ಜರ್ಮನ್ ಪ್ರಜೆಗಳು ತಮ್ಮ ನಾಯಿಗಳ ಜೊತೆ ದಿನಕ್ಕೆರಡು ಬಾರಿ ಕನಿಷ್ಠ ಪಕ್ಷ ಒಂದು ಗಂಟೆಯಾಗುವಷ್ಟು ಕಾಲ ಉದ್ಯಾನವನದಲ್ಲಿ ಸುತ್ತಾಡಬೇಕು ಇಲ್ಲವೇ ಓಡಬೇಕು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಭಾರತದ ಗ್ರಾಮೀಣ (Rural India)ಭಾಗಗಳಲ್ಲಿ ಕ್ಷುಲ್ಲಕ ಕಾರಣಕ್ಕೆ ನಡೆಯುವ ಜಗಳಗಳನ್ನು ಕೋಳಿ ಜಗಳ( Petty Quarrels) ಎಂದು ಅಪಹಾಸ್ಯ ಮಾಡುವುದು ವಾಡಿಕೆ. ಆದರೆ, ಇಲ್ಲಿಬ್ಬರು ಮಹಿಳೆಯರು ನಾಯಿ ಜಗಳ ಮಾಡಿಕೊಂಡಿದ್ದಾರೆ!! ಸಾರಿ.. ನಾಯಿ ವಿಚಾರದಲ್ಲಿ (Dog Fight) ಜಗಳ ಮಾಡಿಕೊಂಡಿದ್ದಾರೆ!!! ಈ ಘಟನೆ ವರದಿಯಾಗಿರುವುದು ದೂರದ ಪೂರ್ವ (East Germany ) ಜರ್ಮನಿಯಿಂದ...

ಶಿಸ್ತು ಕಲಿಸುವ ವಿಚಾರದಲ್ಲಿ ಜಗಳ
ಪೂರ್ವ ಜರ್ಮನಿಯ ತುರಿಂಗಿಯಾ ಪ್ರದೇಶದ ಇಬ್ಬರು ಮಹಿಳೆಯರು ನಾಯಿಗೆ ಹೇಗೆ ಸರಿಯಾಗಿ ಶಿಸ್ತು ಕಲಿಸಬೇಕು ಎಂಬ ವಿಚಾರದಲ್ಲಿ ಜಗಳ ಮಾಡಿಕೊಂಡಿದ್ದಾರೆ. ಈ ಜಗಳ ತಾರಕಕ್ಕೇರಿದಾಗ ಓರ್ವ ಮಹಿಳೆ ಮತ್ತೊಬ್ಬ ಮಹಿಳೆಗೆ ಕಚ್ಚಿದ್ದಾಳೆ ಎಂದು ಜರ್ಮನ್ ಪೊಲೀಸರು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ  ವಿಚಾರದಲ್ಲಿ ಜಟಾಪಟಿಗೆ ಬಿದ್ದಿದ್ದ ತಮ್ಮ ಒಡತಿಯರತ್ತಲೇ ನಾಯಿಗಳು ದಿಟ್ಟಿಸಿ ನೋಡತೊಡಗಿವೆ ಮತ್ತು ಕಚ್ಚಾಟವನ್ನು ನಿಲ್ಲಿಸಿವೆ ಎಂದೂ ಸೇರಿಸಿದ್ದಾರೆ.

ಇದನ್ನೂ ಓದಿ: ಸಾವಿರ ನಾಯಿಗಳು ಈ ಹಾಡುಗಳನ್ನು ಅದೆಷ್ಟು ತನ್ಮಯವಾಗಿ ಕೇಳುತ್ತಿವೆ ಅಂದ್ರೆ, ನಿಮ್ಮ ನಾಯಿಗೂ ಇದನ್ನು ಕೇಳಿಸಬಹುದು ನೋಡಿ!

ಯುವ ಮಹಿಳೆಯ ಮೀನಖಂಡ ಕಚ್ಚಿ ಗಾಯ
ಈ ಕುರಿತು ವರದಿ ಮಾಡಿರುವ ಡಾಯಿಚ್ ವೆಲ್, 51 ವರ್ಷದ ಮಹಿಳೆ ತನ್ನ ನಾಯಿಯನ್ನು ಹೊಡೆಯುತ್ತಿರುವುದನ್ನು 27 ವರ್ಷದ ಮಹಿಳೆ ನೋಡಿದಾಗ ಜಗಳ ಪ್ರಾರಂಭವಾಗಿದೆ. ಆ ನಾಯಿಯ ಯುವ ಒಡತಿಯು ತನ್ನ ಮುದ್ದು ಪ್ರಾಣಿಯನ್ನು ಕ್ರೂರವಾಗಿ ಥಳಿಸಿದ ಬಗ್ಗೆ ಆಕ್ಷೇಪವೆತ್ತಿದ್ದಾಳೆ. ಈ ಮಾತಿನ ಜಟಾಪಟಿಯು ಕೊನೆಗೆ ಇಬ್ಬರೂ ಪರಸ್ಪರ ಬಡಿದಾಡುವ ಸ್ಥಿತಿಗೆ ತಲುಪಿದೆ. ಈ ಸಂದರ್ಭದಲ್ಲಿ ನೆಲಕ್ಕುರುಳಿರುವ 51 ವರ್ಷದ ಮಹಿಳೆ, ಯುವ ಮಹಿಳೆಯ ಮೀನಖಂಡವನ್ನು ಕಚ್ಚಿದ್ದಾಳೆ. ಇದರ ಬೆನ್ನಿಗೇ ಆರೋಪಿ ಮಹಿಳೆಯನ್ನು ವಶಕ್ಕೆ ಪಡೆದಿರುವ ಜರ್ಮನ್ ಪೊಲೀಸರು ದೈಹಿಕ ಗಾಯ ಮಾಡಿದ ಆರೋಪ ಹೊರಿಸಿ ನ್ಯಾಯಾಲಯದೆದುರು ಹಾಜರು ಪಡಿಸಿದರು.

ಪೊಲೀಸರಿಂದ ಬಂಧನ
ಜರ್ಮನಿಯ ನಿಯಮಗಳ ಪ್ರಕಾರ ಜರ್ಮನ್ ಪ್ರಜೆಗಳು ತಮ್ಮ ನಾಯಿಗಳ ಜೊತೆ ದಿನಕ್ಕೆರಡು ಬಾರಿ ಕನಿಷ್ಠ ಪಕ್ಷ ಒಂದು ಗಂಟೆಯಾಗುವಷ್ಟು ಕಾಲ ಉದ್ಯಾನವನದಲ್ಲಿ ಸುತ್ತಾಡಬೇಕು ಇಲ್ಲವೇ ಓಡಬೇಕು. ಜರ್ಮನಿಯ ಅತ್ಯಂತ ಜನಪ್ರಿಯ ನಾಯಿ ತಳಿಗಳು ಜರ್ಮನ್ ಶೆಫರ್ಡ್ ಹಾಗೂ ಡಾಚುಶಂಡ್ ಆಗಿದೆ. ನಾಯಿಗಳು ಮನುಷ್ಯನ ಅತ್ಯಂತ ಆತ್ಮೀಯ ಸ್ನೇಹಿತರು ಎಂದು ನಂಬಲಾಗಿದೆ. ಆದರೆ, ಕೆಲವು ನಾಯಿ ಮಾಲೀಕರು ತಮ್ಮ ನಾಯಿಗಳನ್ನು ಸಂಪ್ರೀತಿಗೊಳಿಸಲು ಕೆಲವೊಮ್ಮೆ ಅತಿರೇಕವಾಗಿ ವರ್ತಿಸುತ್ತಾರೆ. ಇಂತಹ ಅತಿರೇಕದ ಕಾರಣದಿಂದಲೇ ಮಹಿಳೆಯೊಬ್ಬಳು ಮತ್ತೊಬ್ಬ ಮಹಿಳೆಯನ್ನು ಕಚ್ಚಿ ಪೊಲೀಸರಿಂದ ಬಂಧನಕ್ಕೊಳಗಾಗಿರುವುದು.

ಮೆಚ್ಚುಗೆಯ ಮಹಾಪೂರ
ನಾಯಿಗಳು ವರ್ಷ ಪೂರ್ತಿ ಸುದ್ದಿಯಲ್ಲಿದ್ದವು. ಇದಕ್ಕೂ ಮುನ್ನ ಅಮೆರಿಕಾದಲ್ಲಿ ಇಂಗಾಲದ ಮಾನಾಕ್ಸೈಡ್ ವಿಷಪ್ರಾಶನಕ್ಕೊಳಗಾಗಿದ್ದ ಕುಟುಂಬವೊಂದನ್ನು ರಕ್ಷಿಸಿದ್ದ ನಾಯಿ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆಯ ಮಹಾಪೂರವೇ ಹರಿದಿತ್ತು. ಬ್ರಾಡ್ ಹರ್ಬರ್ಟ್ ಇಯೋವಾದ ಆಂಕೆನಿಯಲ್ಲಿ ವಾಸವಾಗಿದ್ದಾರೆ. ಅಂದು ಸೋಮವಾರ ರಾತ್ರಿ ಅವರ ಮುದ್ದು ನಾಯಿ ರಾಕ್ಸಿ ಗೊಗ್ಗರು ಧ್ವನಿಯನ್ನು ಹೊರಡಿಸುತ್ತಾ ಅಸ್ವಸ್ಥವಾಗಿದೆ. "ಸಾಮಾನ್ಯವಾಗಿ ರಾಕ್ಸಿ ಸೌಮ್ಯ ಸ್ವಭಾವದ ನಾಯಿ. ಆದರೆ, ಆ ರಾತ್ರಿ ವಿಭಿನ್ನವಾಗಿ ವರ್ತಿಸಿತು" ಎಂದು ನೆನಪಿಸಿಕೊಳ್ಳುತ್ತಾರೆ ಬ್ರಾಡ್.

ಇದನ್ನೂ ಓದಿ: Viral News: ಹೆಂಡತಿ ಹೆಸರನ್ನು ನಾಯಿಗೆ ಇಟ್ಟಿದ್ದಕ್ಕೆ ಆಕ್ರೋಶ, ಮಹಿಳೆ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚೇ ಬಿಟ್ಟ..!

"ರಾಕ್ಸಿ ನನ್ನ ಹಾಸಿಗೆಯಿಂದ ಕೆಳಕ್ಕೆ ನೆಗೆಯುವುದು, ಮತ್ತೆ ಮೇಲಕ್ಕೆ ಹಾರುವುದನ್ನು ಮಾಡುತ್ತಿತ್ತು. ಆದರೆ, ಈ ಕುರಿತು ನಾನು ಮೊದಮೊದಲು ಯಾವುದೇ ಗಮನವನ್ನು ನೀಡಲಿಲ್ಲ. ಆದರೆ, ಕೆಲವೇ ಕ್ಷಣಗಳಲ್ಲಿ ನಾನು ಜಾಗೃತನಾದೆ. ನಾನು ಅಲಾರಂ ಗಂಟೆ ಬಾರಿಸುತ್ತಿರುವುದನ್ನು ಕೇಳಿಸಿಕೊಂಡೆ. ಕೂಡಲೇ ನನ್ನ ಹಾಸಿಗೆಯಿಂದ ಕೆಳಕ್ಕೆ ಜಿಗಿದು ಹೊಗೆಯ ಅಲಾರಂ ಏಕೆ ಬಡಿದುಕೊಲ್ಲುತ್ತಿದೆ ಎಂದು ತಿಳಿದುಕೊಳ್ಳಲು ಹಾಲ್ ದಾರಿಯನ್ನು ಹಿಡಿದೆ. ಈ ಸಂದರ್ಭದಲ್ಲಿ ವಾಸ್ತವವಾಗಿ ನನ್ನ ಇಂಗಾಲದ ಮಾನಾಕ್ಸೈಡ್ ಶೋಧಕ ಬಡಿದುಕೊಳ್ಳುತ್ತಿತ್ತು. ಯಾವಾಗ ಮನೆಯಲ್ಲಿ ಸಕ್ರಿಯ ಇಂಗಾಲದ ಮಾನಾಕ್ಸೈಡ್ ತುಂಬಿಕೊಂಡಿರುತ್ತದೊ ಆಗ ಮಾತ್ರ ಇದು ಘಟಿಸುತ್ತದೆ. ನಾನು ಕೂಡಲೇ ಶೋಧಕವನ್ನು ಕೈಗೆತ್ತಿಕೊಂಡೆ ಹಾಗೂ ಅದು ನಾಲ್ಕು ಬಾರಿ ಬಡಿದುಕೊಂಡಿದೆಯೇ ಎಂದು ಪರಿಶೀಲಿಸಿದೆ. ಮನೆಯಲ್ಲಿ ಸಕ್ರಿಯ ಇಂಗಾಲದ ಮಾನಾಕ್ಸೈಡ್ ತುಂಬಿಕೊಂಡಿರುವುದು ದೃಢಪಟ್ಟಿತು" ಎಂದು WOWK-TVಗೆ ನೀಡಿರುವ ಸಂದರ್ಶನದಲ್ಲಿ ಬ್ರಾಡ್ ಹೇಳಿಕೊಂಡಿದ್ದಾರೆ.
Published by:vanithasanjevani vanithasanjevani
First published: