Viral News: 27ರ ಯುವಕನನ್ನೇ ದತ್ತು ಪಡೆದ ರಾಜಕುಮಾರ! ಇದು ಯಾವೂರ ಕಥೆ ಗೊತ್ತಾ?

ಪುಟ್ಟ ಮಕ್ಕಳನ್ನು ದತ್ತು ಪಡೆಯುವುದು ಕಾಮನ್. ಆದ್ರೆ ಇಲ್ಲೊಬ್ಬ ರಾಜಮನೆತನದ ವ್ಯಕ್ತಿ 27ರ ಯುವಕನನ್ನೇ ದತ್ತು ಪಡೆದಿದ್ದಾನೆ. ಅಸಲಿಗೆ ಆ ರಾಜಕುಮಾರ ಸಹ ದತ್ತು ಪ್ರಕ್ರಿಯೆಯಿಂದಲೇ ಅರಮನೆ ಸೇರಿದವ. ಹಾಗಿದ್ರೆ ಆತ ಯಾರು? ಆ ಯುವಕ ಯಾರು? ಈ ಕುತೂಹಲ ತಣಿಯಲು ಈ ಸ್ಟೋರಿ ಓದಿ...

ದತ್ತು ಪುತ್ರನೊಂದಿಗೆ ಜರ್ಮನಿಯ ರಾಜಕುಮಾರ

ದತ್ತು ಪುತ್ರನೊಂದಿಗೆ ಜರ್ಮನಿಯ ರಾಜಕುಮಾರ

  • Share this:
ಜರ್ಮನ್ (German) ರಾಜಕುಮಾರರೊಬ್ಬರು (Prince) ತಾನು ಕಾನೂನುಬದ್ಧವಾಗಿ 27 ವರ್ಷದ ಯುವಕನನ್ನು ದತ್ತು (Adapt) ತೆಗೆದುಕೊಂಡಿದ್ದಾರೆ. ತಾನು ವೃದ್ಧನಾದಾಗ ಆತ ತನಗೆ ನೆರವು ನೀಡಲಿದ್ದಾನೆ ಎಂದು ಹೇಳಿಕೊಂಡಿದ್ದಾರೆ. ಹಾಲಿವುಡ್ (Hollywood) ನಟಿ ಝಾ ಝಾ ಗ್ಯಾಬರ್ (Zsa Zsa Gabor) ಅವರನ್ನು ಈ ಹಿಂದೆ ವಿವಾಹವಾಗಿದ್ದ ರಾಜಕುಮಾರ ಫ್ರೆಡರಿಕ್ ಪ್ರಿನ್ಸ್ ವಾನ್ ಅನ್ಹಾಲ್ಟ್ (Prince Frederic von Anhalt)  ತನಗೆ ಯುವಕ ಕೆವಿನ್ ಫ್ಯೂಚ್ (Kevin Feucht) ಕಳೆದ ಏಳು ವರ್ಷಗಳಿಂದ ಪರಿಚಯ ಎಂದು ಹೇಳಿಕೊಂಡಿದ್ದಾರೆ. ಸ್ವತಃ ತನ್ನ 37ನೇ ವರ್ಷದಲ್ಲಿ ರಾಜ ಮನೆತನದಿಂದ ದತ್ತು ಪುತ್ರನಾಗಿದ್ದ ಫ್ರೆಡರಿಕ್ ಪ್ರಿನ್ಸ್ ವಾನ್ ಅನ್ಹಾಲ್ಟ್, ತನ್ನ ಮನೆತನವನ್ನು ಸಂರಕ್ಷಿಸಿಕೊಳ್ಳಲು ಈ ನಿರ್ಣಯವನ್ನು ಕೈಗೊಂಡಿದ್ದಾರೆ. ಟಿಎಂಜೆಡ್ ಸುದ್ದಿ ಸಂಸ್ಥೆಯ ಪ್ರಕಾರ, ಕೆವಿನ್ ಅಧಿಕೃತವಾಗಿ ತನ್ನ ಜನ್ಮ ಪ್ರಮಾಣ ಪತ್ರದಲ್ಲಿ ಕೊನೆಯ ಹೆಸರನ್ನು ಬದಲಿಸಿಕೊಂಡಿದ್ದು, ಇದೀಗ ತನ್ನ ಹೊಸ ತಂದೆಯ ಜೊತೆ ವಾಸಿಸಲಿದ್ದಾನೆ. ಇದರೊಂದಿಗೆ, ರಾಜಕುಮಾರನ ವೈದ್ಯಕೀಯ ಆರೈಕೆ ವೆಚ್ಚಕ್ಕೆ ನೆರವು ನೀಡಲಿದ್ದಾನೆ. ಸದ್ಯ ಈ ಜೋಡಿಯು ದತ್ತು ಪಯಣದ ಕುರಿತ ಸಾಕ್ಷ್ಯ ಸರಣಿಯಲ್ಲಿ ಕಾಣಿಸಿಕೊಳ್ಳಲಿದೆ.

“ನಾನು ಒಬ್ಬಂಟಿಯಾಗಿಲ್ಲ ಎನ್ನುವುದು ತೋರಿಸಬೇಕಿತ್ತು”

ದತ್ತು ಸ್ವೀಕಾರದ ಕುರಿತು ನ್ಯೂಯಾರ್ಕ್‌ ಪೋಸ್ಟ್‌ಗೆ ಪ್ರತಿಕ್ರಿಯಿಸಿರುವ ಫ್ರೆಡರಿಕ್, ''ಒಬ್ಬಂಟಿಯಾಗಿರುವ ಜನರಿಗೆ ಅವರು ಒಬ್ಬಂಟಿಯಾಗಿ ಇರುವ ಅವಶ್ಯಕತೆ ಇಲ್ಲ ಎಂಬುದನ್ನು ತೋರಿಸಬೇಕಿತ್ತು” ಎಂದು ಹೇಳಿದ್ದಾರೆ. “ನೀವು ನಿಮಗೆ ಸಹಾಯ ಮಾಡಲು ಸಾಧ್ಯವಿರುವ ಬೆಳೆದ ವಯಸ್ಕರನ್ನೇ ಮೊದಲ ದಿನದಿಂದ ದತ್ತು ಸ್ವೀಕಾರ ಮಾಡಬಹುದು. ನೀವು ಸಣ್ಣ ಮಗುವನ್ನೇ ದತ್ತು ಸ್ವೀಕರಿಸಬೇಕೆಂದಿಲ್ಲ” ಎಂದು ಪ್ರೆಡರಿಕ್ ಹೇಳಿದ್ದಾರೆ. ರಾಜಯೋಗ್ಯ ಪದವಿಯನ್ನು ಸಂಪಾದಿಸಿದ ನಂತರ ರಾಜಕುಮಾರಿ ಮೇರಿ ಆಗಸ್ಟ್, ವಯಸ್ಕ ಫ್ರೆಡರಿಕ್ ಅನ್ನು 1980ರಲ್ಲಿ ದತ್ತು ಸ್ವೀಕಾರ ಮಾಡಿದ್ದರು.

ಪದವಿ ಇದೆ, ಆದರೆ ಅಧಿಕಾರ ಇಲ್ಲ”

1918ರಲ್ಲಿ ಜರ್ಮನಿಯ ರಾಜಪ್ರಭುತ್ವವನ್ನು ತೆಗೆದು ಹಾಕಲಾಗಿತ್ತು. ಈ ಕುರಿತು ‘ನ್ಯೂಯಾರ್ಕ್ ಪೋಸ್ಟ್‌’ಗೆ ಪ್ರತಿಕ್ರಿಯಿಸಿರುವ ರಾಜಕುಮಾರ ಫ್ರೆಡರಿಕ್, “ಪದವಿಯು ಈಗಲೂ ಉಳಿದಿದ್ದರೂ, ಈ ಉನ್ನತ ಅಂತಸ್ತಿಗೆ ಯಾವುದೇ ಅಧಿಕಾರ ಉಳಿದಿಲ್ಲ” ಎಂದು ತಿಳಿಸಿದ್ದಾರೆ.

ಈಗ ನಾನು ನನ್ನ ಪದವಿಯನ್ನು ಮತ್ತೊಬ್ಬರಿಗೆ ಹಸ್ತಾಂತರಿಸಲು ನಿಶ್ಚಯಿಸಿದ್ದೇನೆ ಎಂದು ‘ನ್ಯೂಯಾರ್ಕ್ ಪೋಸ್ಟ್‌’ಗೆ ತಿಳಿಸಿರುವ ಫ್ರೆಡರಿಕ್, ನಾನು ಯಾರನ್ನಾದರೂ ದತ್ತು ಸ್ವೀಕರಿಸಿ, ನನ್ನ ಬಳಿ ಇರುವ ಸಾಧನವನ್ನು ಒದಗಿಸಲು ಬಯಸುತ್ತೇನೆ. ಅಮೆರಿಕಾದಲ್ಲಿ ಇಂತಹ ಪ್ರಕ್ರಿಯೆಗೆ ಮಾನ್ಯತೆ ಇದೆ. ಜನರು ನೀವು ಯಾರೆಂದು ತಿಳಿಯಲು ಬಯಸುತ್ತಾರೆ ಮತ್ತು ನಿಮ್ಮನ್ನು ಆ ಮೂಲಕವೇ ಅಳೆಯುತ್ತಾರೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಗಂಡನನ್ನೇ ಹರಾಜಿಗಿಟ್ಟ ಮಹಿಳೆ - No Return, No Exchange

“ನಾನು ಯುವಕನ ಮನೆಯಲ್ಲೇ ಇರುತ್ತೇನೆ”

ನಾನು ಕೆವಿನ್ ಮೂಲಕ ಆತನ ಪೋಷಕರನ್ನು ಭೇಟಿಯಾಗಿದ್ದೇನೆ ಎಂದು ತಿಳಿಸಿರುವ ಫ್ರೆಡರಿಕ್, ಇಂತಹ ಅಸಹಜ ಪರಿಸ್ಥಿತಿಯಲ್ಲೂ ಅವರಿಬ್ಬರೂ ನನ್ನ ಉತ್ತಮ ಗೆಳೆಯರಾಗಿಯೇ ಉಳಿದಿದ್ದಾರೆ ಎಂದಿದ್ದಾರೆ. ನಾನೂ ಕೂಡಾ ಬದಲಾದ ಪರಿಸ್ಥಿತಿಯಲ್ಲಿ ಸಂತೋಷವಾಗಿದ್ದು, ನಾನು ಫ್ರೆಡರಿಕ್ ಮನೆಯಲ್ಲೇ ತಂಗಲು ನಿರ್ಧರಿಸಿದ್ದೇನೆ. ಅಲ್ಲಿ ಆತನಿಗಾಗಿ ಅಡುಗೆ ತಯಾರಿಕೆ ಮಾಡುತ್ತಾ, ಆತನ ಶಿಲ್ಕುಗಳು ಪಾವತಿಯಾಗುವುದನ್ನು ಖಾತ್ರಿಪಡಿಸುತ್ತೇನೆ ಮತ್ತು ಮನೆಯಲ್ಲಿ ಅವರಿಗೆ ನೆರವು ನೀಡುತ್ತಾ ಇರಲಿದ್ದೇನೆ ಎಂದು ಕೆವಿನ್ ತಿಳಿಸಿದ್ದಾನೆ.

“ನನ್ನ ತಂದೆಗೆ ಇದರಿಂದ ಖುಷಿಯಾಗಿದೆ. ನಾನು ನನ್ನ ಪೋಷಕರನ್ನು ಪ್ರೀತಿಸುತ್ತೇನೆ ಮತ್ತು ಎಂದಿಗೂ ಅವರನ್ನು ಪ್ರೀತಿಸುತ್ತೇನೆ” ಎಂದೂ ಹೇಳಿಕೊಂಡಿದ್ದಾನೆ.

ಇದನ್ನೂ ಓದಿ: Creative: ಏನ್​ ಗುರು ಇವ್ನು! ಕೆಲಸ ಗಿಟ್ಟಿಸಲು ಎಂಥಾ ಐನಾತಿ ಐಡಿಯಾ..!!

ಈ ಹಿಂದೆ ಐವರನ್ನು ದತ್ತು ಪಡೆದಿದ್ದ ಪ್ರಿನ್ಸ್

ನಾನು ಈ ಮುನ್ನ ಐವರನ್ನು ದತ್ತು ತೆಗೆದುಕೊಂಡಿದ್ದೆ- ಅವರೆಲ್ಲರೂ ಗ್ಯಾಬರ್ ಅವರನ್ನು ವಿವಾಹವಾಗಿದ್ದಾಗ ದತ್ತು ತೆಗೆದುಕೊಂಡವರಾಗಿದ್ದರು. ಅವರೆಲ್ಲರಿಗೂ ಪದವಿಯನ್ನು ನೀಡಲಾಗಿತ್ತು ಎಂದು ರಾಜಕುಮಾರ ಫ್ರೆಡರಿಕ್ ತಿಳಿಸಿದ್ದಾರೆ.

ಯಾರು ಈ ಝಾ ಝಾ?

ಹಾಲಿವುಡ್‍ನ ಸುವರ್ಣ ಯುಗದಲ್ಲಿ ಝಾ ಝಾ ಗ್ಯಾಬರ್ ಅವರು ನೈಜ ತಾರಾ ರಾಣಿಯಾಗಿದ್ದರು. ಆಕೆ ತನ್ನ ನಟನೆಗಿಂತ ತಾನು ಮಾಡಿಕೊಂಡಿದ್ದ 9 ಮದುವೆ ಹಾಗೂ ವೈಭವೋಪೇತ ಜೀವನಕ್ಕಾಗಿಯೇ ಹೆಚ್ಚು ಖ್ಯಾತಳಾಗಿದ್ದಾಳೆ.
Published by:Annappa Achari
First published: