Plastic Surgery ಎಡವಟ್ಟು: ಯುವಕನ ಮುಖ ಈಗ ಯುವತಿಯಂತೆ ಕಾಣ್ತಿದೆ!

ಜರ್ಮನಿ ಮೂಲದ ವ್ಯಕ್ತಿಯೊಬ್ಬ ತನ್ನ ಸಂಪೂರ್ಣ ರೂಪವನ್ನೇ ಬದಲಿಸಿಕೊಂಡಿದ್ದಾನೆ. ಆತನಿಗೆ ತಾನು ಗೊಂಬೆಯಂತೆ ಕಾಣಬೇಕೆಂದ ಮಹದಾಸೆಯಿತ್ತು, ಅದಕ್ಕಾಗಿ ಅವನು 58 ಸಾವಿರ ಯೂರೋಗಳನ್ನು ಅಂದರೆ ಸುಮಾರು 58 ಲಕ್ಷ ರೂಪಾಯಿಗಳನ್ನು ಖರ್ಚು ಮಾಡಿದನು.

ಪ್ಯಾಟ್ರಿಕ್ ಮಾಸ್ಟ್

ಪ್ಯಾಟ್ರಿಕ್ ಮಾಸ್ಟ್

  • Share this:
    ಸುಂದರವಾಗಿ ಕಾಣಬೇಕೆಂಬ ಆಸೆಯಿಂದ ಯುವಕ –ಯುವತಿ ಸರ್ಜರಿಯೆಲ್ಲಾ ಮಾಡಿಸಿಕೊಳ್ಳುತ್ತಾರೆ. ಇನ್ನು ಕೆಲವರು ಸಿಕ್ಕ ಸಿಕ್ಕ ಕ್ರೀಮ್​​ ಹಚ್ಚೋದು (Cream), ಬೆಳ್ಳಗೆ ಕಾಣಿಸಲು ಫೇಸ್​ವಾಶ್ (Facewash)​ ಮಾಡಿಸುವುದು. ಹೀಗೆ ಖರ್ಚು ಮಾಡುವ ಮೂಲಕ ಮುಖದ ಸೌಂದರ್ಯವನ್ನು ಹೆಚ್ಚಿಸಲು ಸರ್ಕಸ್​ ಮಾಡುತ್ತಿರುತ್ತಾರೆ. ಆದರೆ ಅಂದ-ಚೆಂದಕ್ಕಾಗಿ ಹಣ ವ್ಯಯಿಸಲು ಹೋಗಿ ನಾಚಿಕೆ ಕೆಟ್ಟವರು ಇದ್ದಾರೆ. ಮಾತ್ರವಲ್ಲದೆ ಮುಖ ಸೌಂದರ್ಯವನ್ನು ಹಾಳು ಮಾಡಿಕೊಂಡವರು ಇದ್ದಾರೆ. ಅದರಂತೆ ಜರ್ಮನಿಯಲ್ಲೊಂದು (Germany) ಪ್ರಕರಣ ಬೆಳಕಿಗೆ ಬಂದಿದ್ದು, ವ್ಯಕ್ತಿ ಗೊಂಬೆಯಂತೆ ಮುಖವನ್ನು ಚೆಂದಗಾಣಿಸಲು ಹೋಗಿ ಹುಡುಗಿಯಂತೆ ಆಗಿದ್ದಾನೆ!.

    ಜರ್ಮನಿ ಮೂಲದ ವ್ಯಕ್ತಿಯೊಬ್ಬ ತನ್ನ ಸಂಪೂರ್ಣ ರೂಪವನ್ನೇ ಬದಲಿಸಿಕೊಂಡಿದ್ದಾನೆ. ಆತನಿಗೆ ತಾನು ಗೊಂಬೆಯಂತೆ ಕಾಣಬೇಕೆಂದ ಮಹದಾಸೆಯಿತ್ತು, ಅದಕ್ಕಾಗಿ ಅವನು 58 ಸಾವಿರ ಯೂರೋಗಳನ್ನು ಅಂದರೆ ಸುಮಾರು 58 ಲಕ್ಷ ರೂಪಾಯಿಗಳನ್ನು ಖರ್ಚು ಮಾಡಿದನು. ಆದರೆ ಖರ್ಚು ಮಾಡಿದಂತೆ ಆತನ ರೂಪವೇ ಬದಲಾಗಿದೆ.

    ಕಾಸ್ಮೆಟಿಕ್ ಸರ್ಜರಿ ಮೂಲಕ ನೋಟ ಬದಲಾಯಿತು

    ಜರ್ಮನಿಯ ಫ್ರಾಂಕ್‌ಫರ್ಟ್‌ನಲ್ಲಿ ವಾಸಿಸುವ 27 ವರ್ಷದ ಪ್ಯಾಟ್ರಿಕ್ ಮಾಸ್ಟ್ ಗೊಂಬೆಯಂತೆ ಮತ್ತು ಹುಡುಗಿಯಂತೆ ಕಾಣಲು  ಬಯಸುತ್ತಾನೆ. ಆದರೆ ಆತ ಲಿಂಗವನ್ನು ಬದಲಾಯಿದೆ ಸರ್ಜರಿಗೆ ಮುಂದಾಗುತ್ತಾನೆ. ಅದಕ್ಕಾಗಿ ಬೊಟೊಕ್ಸ್, ಫಿಲ್ಲರ್ಸ್ ಮತ್ತು ಕಾಸ್ಮೆಟಿಕ್ ಶಸ್ತ್ರಚಿಕಿತ್ಸೆಯನ್ನು ಮಾಡಿದನು. ಕೊನೆಗೆ ಆತನ ಮುಖದ ಸೌಂದರ್ಯವೇ ಬದಲಾಯಿತು. ಹುಗನಾಗಿದ್ದವನು ಹುಡುಗಿಯಂತೆ ಕಾಣುತ್ತಿದ್ದಾನೆ.. ಸದ್ಯ ಆತನನ್ನು ನೋಡಿದ ಜನರು ಅಚ್ಚರಿ ಪಡುತ್ತಿದ್ದಾರೆ.

    Read Also: Video Viral: ಅಭಿಮಾನಿಯನ್ನು ವೇದಿಕೆ ಮೇಲೆ ಕರೆದು ಮುಖದ ಮೇಲೆ ಮೂತ್ರ ಮಾಡಿದ ಖ್ಯಾತ ಗಾಯಕಿ!

    ನಾನು ಅವಳಲ್ಲ... ಅವನು!

    ಪ್ಯಾಟ್ರಿಕ್ ಮಾಸ್ಟ್ ಬ್ಲೀಚ್ ಹೊಂಬಣ್ಣದ ಕೂದಲು, ಉದ್ದನೆಯ ರೆಪ್ಪೆ ಮತ್ತು ಅಗಲವದ ತುಟಿಗಳನ್ನು ನೋಡಿ, ಎಲ್ಲರೂ ಆತನನ್ನು ಮಹಿಳೆ ಎಂದು ತಪ್ಪಾಗಿ ಗ್ರಹಿಸುತ್ತಾರೆ. ಅಂದಹಾಗೆಯೇ ಪ್ಯಾಟ್ರಿಕ್ ಮಾಸ್ಟ್ 18 ನೇ ವಯಸ್ಸಿನಲ್ಲಿ ಇಂತಹ ಸೌಂದರ್ಯವರ್ಧಕ ವಿಧಾನಗಳನ್ನು ಪ್ರಾರಂಭಿಸಿದರು. ಗೊಂಬೆಯ ನೋಟವನ್ನು ಪ್ರೀತಿಸುತ್ತಿದ್ದ ಆತ ಅದರಂತೆ ಆಗಬೇಕು ಎಂಉ ಕನಸುಕಂಡಿದ್ದ. ಅದರೆ ಮುಖದ ಅಂದವನ್ನು ಗೊಂಬೆಯಂತೆ ಮಾಡುವುದರ ಜೊತೆಗೆ ಮಹಿಳೆಯರ ಅಭ್ಯಾಸಗಳು ಅದಕ್ಕೆ ಹೋಲಿಕೆಯಾದರೆ ಇನ್ನು ಚೆಂದವಾಗಿ ಕಾಣಬಹುದೆಂಭ ಕಲ್ಪನೆಯಿಂದ ಕೊನೆಗೆ ಮಹಿಳೆಯಾಗಿ ರೂಪಬರಿಸಲು ಮುಂದಾಗುತ್ತಾನೆ.



    ಶಸ್ತ್ರ ಚಿಕಿತ್ಸೆಗೆ ಲಕ್ಷಾಂತರ ರೂ

    ಪ್ಯಾಟ್ರಿಕ್ ಮಾತಿನಂತೆ, 'ನಾನು ಈ ನೋಟವನ್ನು ಇಷ್ಟಪಡುತ್ತೇನೆ, ಏಕೆಂದರೆ ನಾನು ನನ್ನ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತೇನೆ ಎಂದು ಇತರ ಜನರಿಗೆ ತೋರಿಸುತ್ತದೆ. ನಾನು ಶಸ್ತ್ರಚಿಕಿತ್ಸೆಗಾಗಿ ಸಾಕಷ್ಟು ಹಣವನ್ನು ಖರ್ಚು ಮಾಡಿದ್ದೇನೆ ಮತ್ತು ಇನ್ನು ಮುಂದೆ ನನ್ನ ನೋಟವನ್ನು ಬದಲಾಯಿಸಲು ನಾನು ಬಯಸುವುದಿಲ್ಲ. ನನ್ನ ಬಗ್ಗೆ ಯಾರು ಏನು ಯೋಚಿಸುತ್ತಾರೆ ಎಂಬುದು ನನಗೆ ಅನಿವಾರ್ಯವಲ್ಲ ಎಂದು ಹೇಳಿದರು. ನನ್ನ ಸಂತೋಷವೇ ಮುಖ್ಯ ಮತ್ತು ನಾನು ಈ ರೀತಿ ಕಾಣಲು ಇಷ್ಟಪಡುತ್ತೇನೆ.

    Read Also: Viral Story: ಮರು ಮದುವೆಗಾಗಿ ಒಂದು ವರ್ಷದ ಮಗುವಿನೊಂದಿಗೆ ಮಂಟಪಕ್ಕೆ ಹಾಜರಾದ ನಟಿ!

    ಕಳೆದ ವರ್ಷ ಸಂದರ್ಶನವೊಂದರಲ್ಲಿ, ತಾನು ಒಮ್ಮೆ ವಿಚ್ಛೇದನ ಪಡೆದಿದ್ದೇನೆ ಎಂದು ಹೇಳಿದ್ದರು. ಈಗ ಆತ ತನ್ನ ಫ್ಯಾಶನ್​ ಒಪ್ಪಿಕೊಳ್ಳುವ ಸಂಗಾತಿಯನ್ನು ಹುಡುಕುತ್ತಿದ್ದೇನೆ ಎಂದು ಹೇಳಿದದ್ದಾನೆ.
    Published by:Harshith AS
    First published: