ಕೈಗೆ ಬಂದು, ಬಾಯಿಗೆ ಬರಲಿಲ್ಲ ; ಲಾಟರಿ ಜಾಕ್​ಪಾಟ್​ ಹೊಡೆದ ಮಹಿಳೆಯ ಕಥೆ ಇದು!

ಜರ್ಮನಿಯ ಮಹಿಳೆಯೊಬ್ಬರು ಲಾಟರಿ ಟಿಕೆಟ್​ ಕೊಂಡಿದ್ದರು. ಅದಕ್ಕೆ 39 ಮಿಲಿಯನ್​ ಡಾಲರ್ ಜಾಕ್​ಪಾಟ್​​ ಗಳಿಸಿದ್ದರೂ ಸಹ ಅದರ ಅರಿವು ಅವರಿಗೆ ಇರಲೇ ಇಲ್ಲ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:

ಕೆಲವೊಮ್ಮೆ ಹಾಗೇ, ಅದೃಷ್ಟ ಬಂದು ಬಾಗಿಲು ಬಡಿದರೂ ತಿಳಿಯದ ಸಂಗತಿಯನ್ನು ಬಹುತೇಕರು ಗಮನಿಸಿರುತ್ತಾರೆ. ಕೆಲವರು ಯಾವುದೋ ಹುಮ್ಮಸ್ಸಿನಲ್ಲಿ ಲಾಟರಿ ಟಿಕೆಟ್​ ಕೊಂಡು ಅದನ್ನು ಮರೆತೇಬಿಟ್ಟಿರುತ್ತಾರೆ. ಆ ಟಿಕೆಟ್​ಗೆ ಡಾಲರ್​ಗಟ್ಟಲೇ ಹಣ ಬಂದು ಕೊಳೆಯುತ್ತಿದ್ರೂ ಅದರ ಅರಿವು ಅವರಿಗೆ ಆಗುವುದೇ ಇಲ್ಲ. ಇಲ್ಲಿ ಅಂತಹದ್ದೇ ಕೆಲವು ಆಸಕ್ತಿಕರ ಘಟನೆಗಳಿವೆ. 
45 ರ ಹರೆಯದ ಲೋವರ್ ಫ್ರಾಂಕೋನಿಯಾ ಜೂನ್ 9 ರಂದು ಲೊಟ್ಟೊ 6 ಆಸ್ 49 ಡ್ರಾಯಿಂಗ್‌ನಿಂದ ಟಿಕೆಟ್ ಖರೀದಿ ಮಾಡಿದ್ದರು. ಆದರೆ ಆಕೆ ಈ ವಿಷಯವನ್ನೇ ಮರೆತುಬಿಟ್ಟಿದ್ದರು. ಒಂದು ತಿಂಗಳ ಬಳಿಕ ಇನ್ನೊಂದು ಲಾಟರಿಯನ್ನು ಆಡುವ ತನಕ ಆಕೆಗೆ ತನ್ನ ಹಿಂದಿನ ಲಾಟರಿ ಟಿಕೆಟ್​ಗೆ ಹಣ ಬಂದಿರುವ ವಿಚಾರ ತಿಳಿದೇ ಇರಲಿಲ್ಲವೆಂದು ವರದಿ ಹೇಳಿದೆ.


ಜರ್ಮನಿಯ ಮಹಿಳೆಯೊಬ್ಬರು ಲಾಟರಿ ಟಿಕೆಟ್​ ಕೊಂಡಿದ್ದರು. ಅದಕ್ಕೆ 39 ಮಿಲಿಯನ್​ ಡಾಲರ್ ಜಾಕ್​ಪಾಟ್​​ ಗಳಿಸಿದ್ದರೂ ಸಹ ಅದರ ಅರಿವು ಅವರಿಗೆ ಇರಲೇ ಇಲ್ಲ. ಸುಮಾರು 6 ವಾರಗಳ ಕಾಲ ಆಕೆ ಲಾಟರಿ ಟಿಕೆಟನ್ನು ತನ್ನ ಪರ್ಸ್​​ನಲ್ಲೇ ಇಟ್ಟುಕೊಂಡಿದ್ದರು. ಅಷ್ಟೇ ಅಲ್ಲದೇ ತನ್ನ ಬಳಿ ಇರುವ ಲಾಟರಿ ಟಿಕೆಟ್​ ಕೂಡ ಮರೆತಿದ್ದರು.

ಹೊಸ ಟಿಕೆಟ್​​ ಖರೀದಿಸುವ ಮುನ್ನವೇ ತಾನು ಈ ಹಿಂದೆ ಒಂದು ಟಿಕೆಟ್ ಕೊಂಡುಕೊಂಡಿದ್ದು, ಅದರ ಎಲ್ಲಾ 7 ಸಂಖ್ಯೆಗಳಿಗೆ ಹೊಂದಾಣಿಕೆ ಇತ್ತು. ಡ್ರಾಯಿಂಗ್‌ನ ಏಕೈಕ ಜಾಕ್‌ಪಾಟ್ ವಿಜೇತೆ ಎನ್ನುವ ಅಂಶ ತಿಳಿದು ಬಂದಿತು.
ಫ್ರಾಂಕೋನಿಯಾ ಒಂದು ವಾರದ ಹಿಂದೆಯೇ ಮಿಲಿಯನೇರ್​ ಆಗಿದ್ದರು. ಆದರೆ ಆಕೆಯ ಅಜ್ಞಾನ ಅದನ್ನು ಮರೆ ಮಾಚಿತ್ತು.'ಎಷ್ಟೋ ವಾರಗಳವರೆಗೆ ನಾನು ನನ್ನ ಪರ್ಸ್​​ನಲ್ಲಿ 39 ಮಿಲಿಯನ್​ ಡಾಲರ್​​ ಇಟ್ಟುಕೊಂಡು ಅಜಾಗರೂಕತೆಯಿಂದ ತಿರುಗಾಡುತ್ತಿದ್ದೆ. ಇದನ್ನು ನೆನೆಸಿಕೊಂಡರೆ ಈಗಲೂ ನನಗೆ ತಲೆ ಸುತ್ತುತ್ತದೆ' ಎಂದು ಲೊಟ್ಟೊ ಬೇಯರ್ನ್ ಅಧಿಕಾರಿಗಳಿಗೆ ಹೇಳುವಾಗ ಆಶ್ಚರ್ಯ ಮತ್ತು ಅಚ್ಚರಿ ಎರಡನ್ನು ವ್ಯಕ್ತಪಡಿಸುತ್ತಾರೆ.
ಲೊಟ್ಟೊ ಬೇಯರ್ನ್​​ನ 75 ವರ್ಷಗಳ ಇತಿಹಾಸದಲ್ಲಿ ಇದು ಎರಡನೇ ದೊಡ್ಡ ಲಾಟರಿಯ ಗೆಲುವಾಗಿದೆ. ಫ್ರಾಂಕೋನಿಯಾ ಇನ್ನೂ ಒಂದು ತಿಂಗಳವರೆಗೆ ಆ ಹಣವನ್ನು ಪಡೆಯುವ ಅದೃಷ್ಟವನ್ನು ಹೊಂದಿದ್ದರು. ಆದರೆ ಕ್ಯಾಲಿಫೋರ್ನಿಯಾದ ಮಹಿಳೆಯೊಬ್ಬರಯ 190 ಕೋಟಿ ರೂ ಗಳ ಲಾಟರಿ ಗೆದ್ದರೂ ಆ ಹಣವನ್ನು ಪಡೆಯಲು ಅವರಿಗೆ ಸಾಧ್ಯವಾಗಲಿಲ್ಲ.ಇದು ನಿಜಕ್ಕೂ ಬೇಸರದ ಕಥೆ!


ಕಳೆದ ವರ್ಷ ನವೆಂಬರ್​ನಲ್ಲಿ 26 ಮಿಲಿಯನ್​ ಡಾಲರ್​​ ಅಂದರೆ 190 ಕೋಟಿ ರೂ ಗೆದ್ದ ಕ್ಯಾಲಿಫೋರ್ನಿಯಾ ಮಹಿಳೆ ಆ ಟಿಕೆಟ್​ ಅನ್ನು ವಾಶಿಂಗ್​ ಮೆಷಿನ್​ನಲ್ಲಿ ಹಾಳು ಮಾಡಿಕೊಂಡಿದ್ದರು. ಆದರೆ ಆಗಿನ್ನೂ ಲಾಟರಿ ಡ್ರಾ ಆಗಿರಲಿಲ್ಲ. ಯಾವಾಗ ಲಾಟರಿಯಲ್ಲಿ 190 ಕೋಟಿ ಬಂದಿದೆ ಎಂದು ತಿಳಿಯಿತೋ ಆಗ ಕ್ಯಾಲಿಫೋರ್ನಿಯಾ ಮಹಿಳೆ ಕೈ ಕೈ ಹಿಚುಕಿಕೊಂಡರು. ಆದರೆ ಅಷ್ಟರಲ್ಲಾಗಲೇ ಲಾಟರಿ ವಾಶಿಂಗ್​ ಮೆಷಿನ್​ನಲ್ಲಿ ವಾಶ್​ಔಟ್​ ಆಗಿ ಹೋಗಿತ್ತು.


ಇದನ್ನು ಓದಿ: ರೈತರಿಗೆ ಸಹಾಯ ಮಾಡಲು ನಾಸಾ ಕೆಲಸ ತೊರೆದ ಮಹಾರಾಷ್ಟ್ರದ ಪರಾಗ್..!

ಸೂಪರ್​​ ಲೊಟ್ಟೊ ಪ್ಲಸ್ ಟಿಕೆಟ್ ನವೆಂಬರ್ 14 ರಂದು ಡ್ರಾ ಮಾಡಲಾಗಿತ್ತು. ಲಾಸ್ ಏಂಜಲೀಸ್ ಉಪನಗರ ನಾರ್ವಾಕ್‌ನಲ್ಲಿರುವ ಆರ್ಕೊ ಎಎಮ್ / ಪಿಎಂ ಕನ್ವೀನಿಯನ್ಸ್ ಅಂಗಡಿಯಲ್ಲಿ ಮಾರಾಟ ಮಾಡಲಾಗಿತ್ತು. ಆದರೆ ಮಹಿಳೆ ಆ ಲಾಟರಿ ಹಣವನ್ನು ಪಡೆದುಕೊಳ್ಳಲು ಸಾಧ್ಯವಾಗಲಿಲ್ಲಅಂಗಡಿಯಲ್ಲಿ ಕೆಲಸ ಮಾಡುವ ಎಸ್ಪೆರಾನ್ಜಾ ಹೆರ್ನಾಂಡೆಜ್ ವಿಟ್ಟಿಯರ್ ಪ್ರಕಾರ ಮಹಿಳೆಯೊಬ್ಬರು ಅಂಗಡಿಗೆ ಭೇಟಿ ನೀಡಿದ್ದರು. ಲಾಟರಿ ಟಿಕೆಟ್​ ಕೊಂಡು, ಅದನ್ನು ತಮ್ಮ ಪ್ಯಾಂಟ್​ ಜೇಬಿನಲ್ಲಿಟ್ಟುಕೊಂಡಿದ್ದರು. ಆದರೆ ಅದು ಲಾಂಡ್ರಿಯಲ್ಲಿ ನಾಶವಾಗಿದೆ ಎಂದು ಕಾರ್ಮಿಕರಿಗೆ ತಿಳಿಸಿದರು ಎಂದು ಹೇಳಿದರು.


ಮಹಿಳೆಯ ಹೇಳುತ್ತಿರುವ ವಿಷಯದ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಲಾಟರಿ ವಕ್ತಾರ ಕ್ಯಾಥಿ ಜಾನ್​ಸ್ಟನ್​ ಹೇಳಿದರು. ಯಾರಾದರೂ ಲಾಟರಿ ಟಿಕೆಟ್ ಕೊಂಡು ಕೊಂಡಿದ್ದರೇ ಅದಕ್ಕೆ ಸಾಕ್ಷಿಗಳನ್ನು ನೀಡಬೇಕು. ಉದಾ: ಲಾಟರಿ ಟಿಕೆಟ್​ನ ಹಿಂಭಾಗ ಇಲ್ಲವೇ ಮುಂಭಾಗದ ಫೋಟೋ ತೆಗೆದುಕೊಂಡಿರಬೇಕು ಎಂದಿದ್ದಾರೆ.


First published: