• ಹೋಂ
  • »
  • ನ್ಯೂಸ್
  • »
  • ಟ್ರೆಂಡ್
  • »
  • ಬಾರ್ಬೆಕ್ಯೂ ಪಾರ್ಟಿಯಲ್ಲಿ ಕಬಾಬ್ ಸ್ಟಿಕ್ ನುಂಗಿದ ಜರ್ಮನ್ ಶೆಫರ್ಡ್: ಸ್ಟಿಕ್‌ನೊಂದಿಗೆ 8 ವಾರಗಳ ಕಾಲ ಕಳೆದ ಶ್ವಾನ..!

ಬಾರ್ಬೆಕ್ಯೂ ಪಾರ್ಟಿಯಲ್ಲಿ ಕಬಾಬ್ ಸ್ಟಿಕ್ ನುಂಗಿದ ಜರ್ಮನ್ ಶೆಫರ್ಡ್: ಸ್ಟಿಕ್‌ನೊಂದಿಗೆ 8 ವಾರಗಳ ಕಾಲ ಕಳೆದ ಶ್ವಾನ..!

ಪ್ರಾತಿನಿಧಿಕ ಚಿತ್ರ (Photo: google)

ಪ್ರಾತಿನಿಧಿಕ ಚಿತ್ರ (Photo: google)

ಬೇರ್‌ ಎಂಬ ಹೆಸರಿನ ಆ ಜರ್ಮನ್‌ ಶೆಫರ್ಡ್‌ ಅನ್ನು ಮಾಲೀಕ ರಿಚರ್ಡ್ ಡೇವಿಡ್ಸನ್ ಪಶು ವೈದ್ಯರ ಬಳಿಕ ರೆದುಕೊಂಡು ಹೋದಾಗ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್‌ ಮಾಡಿದ ನಂತರ ದೇಹದೊಳಗೆ ಸ್ಟಿಕ್‌ ಇರುವುದನ್ನು ಪತ್ತೆಹಚ್ಚಲಾಗಿದೆ.

  • Share this:

    10 ತಿಂಗಳ ಜರ್ಮನ್ ಶೆಫರ್ಡ್ ನಾಯಿ ನಾಲ್ಕು ಇಂಚಿನ ಮರದ ಕಬಾಬ್‌ ಸ್ಟಿಕ್‌ ಅನ್ನು ನುಂಗಿದ್ದು, ಆ ಸ್ಟಿಕ್‌ ಹೆಣ್ಣು ಶ್ವಾನದ ದೇಹದೊಳಗೆ 8 ವಾರಗಳ ಕಾಲ ಇತ್ತು ಎಂದು ತಿಳಿದುಬಂದಿದೆ. ಬೇರ್‌ ಎಂಬ ಹೆಸರಿನ ಆ ಜರ್ಮನ್‌ ಶೆಫರ್ಡ್‌ ಅನ್ನು ಮಾಲೀಕ ರಿಚರ್ಡ್ ಡೇವಿಡ್ಸನ್ ಪಶು ವೈದ್ಯರ ಬಳಿಕ ರೆದುಕೊಂಡು ಹೋದಾಗ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್‌ ಮಾಡಿದ ನಂತರ ದೇಹದೊಳಗೆ ಸ್ಟಿಕ್‌ ಇರುವುದನ್ನು ಪತ್ತೆಹಚ್ಚಲಾಗಿದೆ. ಅದೃಷ್ಟವಶಾತ್, ಪ್ರಮುಖ ಅಂಗಾಂಗಗಳಿಗೆ ತೊಂದರೆಯಾಗಿಲ್ಲ ಎಂದು ತಿಳಿದುಬಂದಿದ್ದು, ಶಸ್ತ್ರಚಿಕಿತ್ಸೆಯಿಂದ ಆ ಸ್ಟಿಕ್‌ ಅನ್ನು ತೆಗೆದುಹಾಕಲಾಗಿದೆ.


    ಬೇರ್‌ನ ಕಾಲು ಸಿಕ್ಕಾಪಟ್ಟೆ ಊದಿಕೊಂಡಿತ್ತು. ನಂತರ ಅಲ್ಟ್ರಾಸೌಂಡ್ ಸ್ಕ್ಯಾನ್ ನಂತರ “ಕಬಾಬ್ ಸ್ಟಿಕ್‌ನಷ್ಟು ದೊಡ್ಡದಾದ” ವಸ್ತುವನ್ನು ನೋಡಿ ಆಘಾತಕ್ಕೊಳಗಾಗಿದೆ ಎಂದು ನಾರ್ಥಾಂಪ್ಟನ್‌ನ ಅಬಿಂಗ್ಟನ್ ಪಾರ್ಕ್ ಪಶುವೈದ್ಯಕೀಯ ಶಸ್ತ್ರಚಿಕಿತ್ಸೆಯ ಡಾ. ರಿಕಾರ್ಡೊ ಮಿನೆಲ್ಲಿ ಮಿರರ್‌ ಜತೆ ಮಾತನಾಡುತ್ತಾ ಹೇಳಿದ್ದಾರೆ.


    ಕಬಾಬ್‌ ಸ್ಟಿಕ್ ದೊಡ್ಡ ಕಿಬ್ಬೊಟ್ಟೆಯ ನಾಳಗಳು ಮತ್ತು ತೊಡೆ ಎಲುಬಿನ ಆರ್ಟರಿಗೆ ಹತ್ತಿರವಿದ್ದ ಕಾರಣ ಶಸ್ತ್ರಚಿಕಿತ್ಸೆಯ ಅಗತ್ಯವಿರುತ್ತದೆ. ಆದರೆ ರಕ್ತಸ್ರಾವದ ಅಪಾಯದಿಂದಾಗಿ, ಅದನ್ನು ಆಕ್ರಮಣಕಾರಿಯಾಗಿ ತೆಗೆದುಹಾಕಬೇಕಾಗಿ ಬಂತು ಎಂದು ಪಶು ವೈದ್ಯರು ಹೇಳಿದರು. ಆದರೆ, ಯಾವುದೇ ಗಾಯ ಅಥವಾ ಪ್ರವೇಶ ಬಿಂದು ಇಲ್ಲದ ಕಾರಣ ಆ ಸ್ಟಿಕ್‌ ನಾಯಿಯ ದೇಹದೊಳಗೆ ಹೇಗೆ ಹೊಕ್ಕಿತು ಎಂಬುದು ಇನ್ನೂ ತಿಳಿದಿಲ್ಲ.


    ತೋಟದ ಹಿಂಭಾಗ ಬಾರ್ಬೆಕ್ಯೂ ಸೆಷನ್‌ನಲ್ಲಿ ಕಬಾಬ್‌ ತಿನ್ನುವಾಗ ತಮ್ಮ ಜರ್ಮನ್‌ ಶೆಫರ್ಡ್ ಸ್ಟಿಕ್‌ ಅನ್ನು ನುಂಗಿರಬಹುದು ಎಂದು ಬೇರ್‌ನ ಮಾಲೀಕರು ಶಂಕೆ ವ್ಯಕ್ತಪಡಿಸಿದ್ದಾರೆ. ನಾಯಿಗಳು ಆಹಾರದ ವಿಷಯಕ್ಕೆ ಬಂದಾಗ ತ್ವರಿತವಾಗಿರುತ್ತವೆ. ಹಾಗೂ, ನಾವು ಏನನ್ನಾದರೂ ತಿನ್ನುವ ನಾಯಿಯನ್ನು ಹೊಂದಿರುವುದರಿಂದ, ಸಾಧ್ಯವಾದಷ್ಟು ಜಾಗರೂಕರಾಗಿರಲು ಪ್ರಯತ್ನಿಸುತ್ತೇವೆ. ಆದರೆ, ಈ ಪ್ರಕರಣದಲ್ಲಿ ಅದು ಕಬಾಬ್‌ ತೆಗೆದುಕೊಳ್ಳುವುದನ್ನು ಸಹ ನೋಡಲಿಲ್ಲ. ಹೀಗಾಗಿ ಯಾರಾದರೂ ಒಬ್ಬರ ತಟ್ಟೆಯಿಂದ ಬಾಯಿಗೆ ಹಾಕಿಕೊಂಡಿರಬೇಕು'' ಎಂದು ಬೇರ್‌ನ ಮಾಲೀಕರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.


    ಇನ್ನು, ಆ ಘಟನೆ ನಡೆದು ತಿಂಗಳೂಗಳೇ ಕಳೆದ ಬಳಿಕ ಜರ್ಮನ್‌ ಶೆಫರ್ಡ್ ನಾಯಿ ಕುಂಟಲು ಪ್ರಾರಂಭಿಸಿದಾಗ ಮತ್ತು ತನ್ನ ಹಿಂಭಾಗದ ಕಾಲಿನ ಸಹಾಯದಿಂದ ನಡೆಯಲು ಸಾಧ್ಯವಾಗದಿದ್ದಾಗ ಶ್ವಾನದ ಮಾಲೀಕರು ಪಶು ವೈದ್ಯರ ಬಳಿಗೆ ಕರೆದೊಯ್ದಿದ್ದಾರೆ ಎಂದೂ ತಿಳಿದುಬಂದಿದೆ.


    ಎಕ್ಸರೇಯಲ್ಲಿ ಕಬಾಬ್‌ ಸ್ಟಿಕ್‌ ಇರುವುದು ಹೈಲೈಟ್‌ ಆಗಿದ್ದು, ಮತ್ತು ಶಸ್ತ್ರಚಿಕಿತ್ಸೆಯ ನಂತರ ಅದನ್ನು ಯಶಸ್ವಿಯಾಗಿ ತೆಗೆದುಹಾಕಲಾಯಿತು.


    ತಮ್ಮ ಬೇರ್‌ ಆಹಾರವನ್ನು ಸರಿಯಾಗೇ ತಿನ್ನುತ್ತಿತ್ತು. ಅಲ್ಲದೆ, ಆ ರೀತಿ ಘಟನೆ ಸಂಭವಿಸಿರಬಹುದೆಂಬ ಯಾವುದೇ ಕುರುಹು ಸಹ ಇರಲಿಲ್ಲ. ಈ ಕಾರಣದಿಂದ ಕಬಾಬ್‌ ಸ್ಟಿಕ್‌ ದೇಹದೊಳಗೆ ಇದೆ ಎಂಬ ಊಹೆ ಸಹ ಇರಲಿಲ್ಲ ಎಂದು ಮಾಲೀಕ ರಿಚರ್ಡ್‌ ಮಿರರ್‌ಗೆ ತಿಳಿಸಿದ್ದಾರೆ. ಆದರೆ, ಸ್ಟಿಕ್‌ನಿಂದ ಪ್ರಮುಖ ಅಂಗಾಂಗಳಿಗೆ ಹಾನಿಯಾಗಿಲ್ಲ. ಕರುಳಿನ ಮೂಲಕ ಹಾದುಹೋದರೂ, ಗಂಭೀರವಾದ ಹಾನಿಯಾಗಿಲ್ಲ ಎಂದಿದ್ದಾರೆ. ಅಲ್ಲದೆ, ಈ ಘಟನೆ ಮತ್ತೆ ಸಂಭವಿಸದಂತೆ ಅಡುಗೆ ಮನೆ ಬಾಗಿಲಲ್ಲಿ ನಾಯಿಮರಿ ಗಾರ್ಡ್‌ಗಳನ್ನು ಸ್ಥಾಪಿಸಿರುವುದಾಗಿಯೂ ಮಾಲೀಕರು ಹೇಳಿಕೊಂಡಿದ್ದಾರೆ.


    ನುಂಗಿದ ಕಬಾಬ್ ಸ್ಟಿಕ್‌ಗಳು ಬಾಯಿ ಅಥವಾ ಅನ್ನನಾಳ ಅಥವಾ ಹೊಟ್ಟೆಯಲ್ಲಿ ಸಿಲುಕಿಕೊಳ್ಳುತ್ತದೆ. ಆದರೆ, ಈ ಸಂದರ್ಭದಲ್ಲಿ, ಅದು ಕರುಳಿನ ಮೂಲಕ ಹಾದುಹೋಗಿರುವುದು ಅಸಾಮಾನ್ಯ ಮತ್ತು ವಿಚಿತ್ರ ಎಂದು ಪಶು ವೈದ್ಯ ರಿಕಾರ್ಡೋ ಬಹಿರಂಗಪಡಿಸಿದ್ದಾರೆ.


    ಬಾರ್ಬೆಕ್ಯೂ ಅನ್ನು ಎಂಜಾಯ್‌ ಮಾಡುವಾಗ ಮಾಲೀಕರು ತಮ್ಮ ನಾಯಿಗಳ ಬಗ್ಗೆ ಹೆಚ್ಚು ಜಾಗರೂಕರಾಗಿರಬೇಕು ಮತ್ತು ಅವರ ಸಾಕು ಪ್ರಾಣಿಗಳು ಸ್ಇಕ್‌ ಅನ್ನು ನುಂಗಿದ ಕೂಡಲೇ ಪಶು ವೈದ್ಯರ ಬಳಿಗೆ ತೆರಳಿ ಎಂದು ರಿಕಾರ್ಡೋ ಎಚ್ಚರಿಕೆ ನೀಡಿದ್ದಾರೆ.

    First published: