ಕ್ಲಿಕ್​ ಯಡವಟ್ಟು; ಬುಕ್​ ಆಯ್ತು 12 ಕೋಟಿಯ 28 ಕಾರು!

ಜರ್ಮನಿಯ ವ್ಯಕ್ತಿಯೊಬ್ಬ ಟೆಸ್ಲಾ ಕಾರನ್ನು ಖರೀದಿಸಲು ಮುಂದಾಗಿದ್ದಾನೆ. ಕಂಪೆನಿಯ ಅಧಿಕೃತ ವೆಬ್​ ಸೈಟ್​ಗೆ ಭೇಟಿ ನೀಡಿ ಅದರ ಫಾರಂ ತುಂಬಿದ್ದಾನೆ. ಈ ವೇಳೆ ಎಲ್ಲಾ ಮಾಹಿತಿಗಳನ್ನು ತುಂಬಿದ ನಂತರ ಕನ್ಫರ್ಮ್​​​ ಆಯ್ಕೆಯನ್ನು ಕ್ಲಿಕ್​ ಮಾಡುವ ಸಮಯದಲ್ಲಿ ಹ್ಯಾಂಗ್​ ಆಗಿದೆ. ಹೀಗಾಗಿ ಪದೇ ಪದೇ ಅದರ ಮೇಲೆ ಕ್ಲಿಕ್​ ಮಾಡಿದ್ದಾನೆ

news18-kannada
Updated:June 30, 2020, 8:25 PM IST
ಕ್ಲಿಕ್​ ಯಡವಟ್ಟು; ಬುಕ್​ ಆಯ್ತು 12 ಕೋಟಿಯ 28 ಕಾರು!
ಸಾಂದರ್ಭಿಕ ಚಿತ್ರ
  • Share this:
ಕೆಲವೊಮ್ಮೆ ಸ್ಮಾರ್ಟ್​​ಫೋನ್​ಗಳು, ಪಿಸಿ, ಲ್ಯಾಪ್​ಟಾಪ್​ಗಳು ಹ್ಯಾಂಗ್​ ಆಗುತ್ತವೆ. ಅನೇಕರು ಹ್ಯಾಂಗ್​ ಆದ ತಕ್ಷಣ ಮೂರು ನಾಲ್ಕು ಬಾರಿ ಅದರ ಮೇಲೆ ಕ್ಲಿಕ್​ ಮಾಡಿ ಆಗಿರುತ್ತದೆ. ಆದರಂತೆ ಇಲ್ಲೊಬ್ಬ ವ್ಯಕ್ತಿ ಪದೇ ಪದೇ ಕ್ಲಿಕ್​ ಮಾಡಿ 12 ಕೋಟಿಯ 28 ಕಾರುಗಳನ್ನು ಬುಕ್​ ಮಾಡಿದ್ದಾನೆ!.

ಜರ್ಮನಿಯ ವ್ಯಕ್ತಿಯೊಬ್ಬ ಟೆಸ್ಲಾ ಕಾರನ್ನು ಖರೀದಿಸಲು ಮುಂದಾಗಿದ್ದಾನೆ. ಕಂಪೆನಿಯ ಅಧಿಕೃತ ವೆಬ್​ ಸೈಟ್​ಗೆ ಭೇಟಿ ನೀಡಿ ಅದರ ಫಾರಂ ತುಂಬಿದ್ದಾನೆ. ಈ ವೇಳೆ ಎಲ್ಲಾ ಮಾಹಿತಿಗಳನ್ನು ತುಂಬಿದ ನಂತರ ಕನ್ಫರ್ಮ್​​​ ಆಯ್ಕೆಯನ್ನು ಕ್ಲಿಕ್​ ಮಾಡುವ ಸಮಯದಲ್ಲಿ ಹ್ಯಾಂಗ್​ ಆಗಿದೆ. ಹೀಗಾಗಿ ಪದೇ ಪದೇ ಅದರ ಮೇಲೆ ಕ್ಲಿಕ್​ ಮಾಡಿದ್ದಾನೆ.

ಆದರೆ ವ್ಯಕ್ತಿ ಪದೇ ಪದೇ ಕ್ಲಿಕ್​ ಮಾಡಿದ್ದರಿಂದ ಟೆಸ್ಲಾ ಕಂಪೆನಿಯ 28 ಕಾರುಗಳು ಒಂದೇ ಸಮನೆ ಬುಕ್​ ಆಗಿದೆ. ಅಚ್ಚರಿಯೆಂದರೆ ಒಂದು ಕಾರಿನ ಬೆಲೆ 12 ಕೋಟಿ. 28 ಕಾರುಗಳು ಏಕಾಏಕಿ ಬುಕ್​ ಆಗಿದ್ದನ್ನು ಕಂಡು ಕಂಪೆನಿಯವರೇ ಅಚ್ಚರಿಗೊಂಡಿದ್ದಾರೆ.

  
View this post on Instagram
 

Man 'accidentally' purchases 28 Tesla cars for €1.4 million BERLIN: A German man accidentally bought 28 Tesla Model 3 vehicles online amounting to €1.4 million after a glitch on company’s website. The person known as 'Ballon-Man' at online discussion forum Reddit wrote about how he and his father accidentally placed an order for 27 Model 3s instead of just one. The family placed an order for a new Model 3 equipped with Autopilot, but something did not go right with the Teslawebsite. After clicking 'submit,' the website responded the order could not be placed because of a payment issue even though they filled in payment details correctly. The user's father clicked "Confirm" once again only to have the same result. This went on for about two hours. Eventually the website responded and 'Confirmed' the order all 28 of them, taking the total billing amount to 1.4 million Euros and given that each vehicle has a non-refundable charge of 100 Euro, that amount summed up to 2,800 Euros. However, after a phone call, Tesla understood the situation and cancelled the entire order without charge and were instructed to simply place a new order.


A post shared by J&K REVOLUTION (@jkrevolutionnewspaper_) on


ಅಷ್ಟೇ ಅಲ್ಲದೆ, ವ್ಯಕ್ತಿಯ ಬ್ಯಾಂಕ್​ ಅಕೌಂಟ್​​​​​ನಿಂದ ಕೋಟಿಗಟ್ಟಲೇ ಹಣ ಖಡಿತವಾಗುತ್ತಾ ಹೋಗಿದೆ. ಈ ಬಗ್ಗೆ ಗ್ರಾಹಕನ ಮಗ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ವೊಂದನ್ನು ಹಾಕಿದ್ದು, ಪದೇ ಪದೇ ಕ್ಲಿಕ್​ ಮಾಡಿದ್ದರಿಂದ ಒಂದು ಕಾರು ಖರೀದಿಸಬೇಕಾದ ಜಾಗದಲ್ಲಿ 28 ಕಾರುಗಳು ಬುಕ್​ ಆಗಿದೆ. ಹಾಗಾಗಿ ಆನ್​ಲೈನ್​ ಮೂಲಕ ಕಾರು ಬುಕ್​ ಮಾಡುವ ಸಂದರ್ಭದಲ್ಲಿ ಎಚ್ಚರವಿರಿ ಎಂದು ಬರೆದುಕೊಂಡಿದ್ದಾನೆ.

ಇನ್ನು ಟೆಸ್ಲಾ ಕಂಪೆನಿ ಇದೊಂದು ವಿಶೇಷ ಪ್ರಕರಣವೆಂದು ಪರಿಗಣಿಸಿ 27 ಕಾರುಗಳ ಹಣವನ್ನು ಗ್ರಾಹಕನಿಗೆ ವಾಪಸ್​​ ನೀಡಿದೆ.

ಮಾಹಿ ಬರ್ತ್​ ಡೇಗೆ ಸ್ಪೆಷಲ್​ ಸಾಂಗ್​!; ​​​ವಿಂಡೀಸ್​​ ಆಟಗಾರನಿಂದ ಧೋನಿಗೆ ‘ನಂಬರ್​ 7‘ ಗಿಫ್ಟ್​​

2 ದಿನ ಮೊದಲೇ ಗಣಿ ಹುಟ್ಟುಹಬ್ಬ ಆಚರಿಸಿದ ಕಿಚ್ಚ!; ಗೋಲ್ಡನ್ ಸ್ಟಾರ್​​​​ಗೆ ಬಾದ್​​​​ಶಾ ಬಿಂದಾಸ್ ವಿಶ್!
First published: June 30, 2020, 8:13 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading