ಯಾರಾದರೂ ವಿದೇಶೀಯರು ನಮ್ಮ ಭಾರತಕ್ಕೆ (India) ಬಂದಾಗ ಅವರು ಹಿಂದಿ (Hindi) ಭಾಷೆಯಲ್ಲಿ ಒಂದೆರಡು ಮಾತುಗಳನ್ನು ಆಡಿದರೆ ಮತ್ತು ಕರ್ನಾಟಕಕ್ಕೆ (Karnataka) ಬಂದಾಗ ಕನ್ನಡದಲ್ಲಿ (Kannada) ಮಾತಾಡಿದಾಗ ಅದನ್ನು ಕೇಳೊದೇ ಒಂದು ಚೆಂದ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಅದರಲ್ಲೂ ಯಾವುದಾದರೂ ಹಿಂದಿ ಗೀತೆಯನ್ನು ಕನ್ನಡ ಗೀತೆಯನ್ನು ಹಾಡಿದರೆ ಮತ್ತು ಇಲ್ಲಿನ ಸೀರೆಯನ್ನು (Saree) ಧರಿಸಲು ಇಷ್ಟಪಟ್ಟರೆ ನಮಗೆ ತುಂಬಾನೇ ಸಂತೋಷವಾಗುತ್ತದೆ. ಒಟ್ಟಿನಲ್ಲಿ ಹೇಳುವುದಾದರೆ ಭಾರತೀಯ ಸಂಸ್ಕೃತಿಯನ್ನು ವಿದೇಶಿಯರು ಅನುಸರಿಸುವುದು ಮತ್ತು ಇಷ್ಟಪಡುವುದನ್ನು ನೋಡಿದರೆ ನಮಗೆ ತುಂಬಾನೇ ಖುಷಿಯಾಗುತ್ತದೆ. ಇಂಟರ್ನೆಟ್ ನಲ್ಲಿ (Internet) ಅಂತಹ ಅನೇಕ ವಿಡಿಯೋಗಳಿವೆ (Video) ಅಂತ ಹೇಳಿದರೆ ತಪ್ಪಾಗುವುದಿಲ್ಲ.
ಈ ವಿಡಿಯೋಗಳಲ್ಲಿ ಭಾರತದ ಪೂರ್ವಜರು ಮಾಡಿದ ಸಾಂಪ್ರದಾಯಿಕ ಭಾರತೀಯ ಆಹಾರವನ್ನು ಹೇಗೆ ತಯಾರಿಸುವುದು ಅಥವಾ ಭಾರತೀಯ ಉಡುಗೆಯೊಂದಿಗೆ ಪ್ರಯೋಗ ಮಾಡುವುದು ಹೇಗೆ ಅಂತ ವಿದೇಶಿಯರು ಕಲಿಯಲು ತುಂಬಾನೇ ಉತ್ಸುಕರಾಗಿರುತ್ತಾರೆ ಅಂತ ಹೇಳಬಹುದು. ನಮ್ಮ ದೇಶದ ಸಂಸ್ಕೃತಿಯನ್ನು ವಿದೇಶಿಗರು ತುಂಬಾನೇ ಇಷ್ಟಪಡುತ್ತಾರೆ ಮತ್ತು ಇಲ್ಲಿಗೆ ಬಂದಾಗಲೆಲ್ಲಾ ನಮ್ಮ ಉಡುಗೆ ತೊಡುಗೆಗಳನ್ನು ಅವರು ಪ್ರಯತ್ನಿಸುತ್ತಾರೆ.
ಈಗ ಅಂತರ್ಜಾಲದಲ್ಲಿ ಮತ್ತೊಂದು ಇಂತಹದೇ ವಿಡಿಯೋವೊಂದು ಹರಿದಾಡುತ್ತಿದೆ ನೋಡಿ. ಈ ವಿಡಿಯೋದಲ್ಲಿ, ಗುಲಾಬಿ ಬಣ್ಣದ ಬಟ್ಟೆಯನ್ನು ಧರಿಸಿದ ಜರ್ಮನ್ ಮಹಿಳೆಯೊಬ್ಬಳು ಹೊಲದಲ್ಲಿ ಈರುಳ್ಳಿಯನ್ನು ನೆಡಲು ತನ್ನ ಅತ್ತೆಗೆ ಸಹಾಯ ಮಾಡುವುದನ್ನು ನೀವು ನೋಡಬಹುದು. ಇದರಲ್ಲೇನು ವಿಶೇಷತೆ ಅಂತೀರಾ? ಇಲ್ಲಿರುವುದು ಜರ್ಮನ್ ಸೊಸೆ ಮತ್ತು ಭಾರತೀಯ ಅತ್ತೆ ಅಂತ ಹೇಳಬಹುದು.
ಇದನ್ನು ಓದಿ: ಮಾರುತಿ ವ್ಯಾಗನಾರ್‌ಗೆ ಹೆಲಿಕಾಪ್ಟರ್ ಲುಕ್! ಈ ಕಾರು ನಿಜವಾಗಿಯೂ ಹಾರುತ್ತಾ?
ಅತ್ತೆ-ಸೊಸೆ ಇಬ್ಬರು ಒಟ್ಟಿಗೆ ಹೊಲದಲ್ಲಿ ಕೆಲಸ
ಇನ್ಸ್ಟಾಗ್ರಾಮ್ ಬಳಕೆದಾರ ಜೂಲಿ ಶರ್ಮಾ ಹಂಚಿಕೊಂಡಿರುವ ಪೋಸ್ಟ್ ನಲ್ಲಿ ನೀವು ಆ ಜರ್ಮನಿ ಮಹಿಳೆಯನ್ನು ತನ್ನ ಅತ್ತೆಯೊಂದಿಗೆ ಹೊಲದಲ್ಲಿ ನೋಡಬಹುದು. ಮಹಿಳೆ ಭೂಮಿಯ ಒಳಗೆ ಈರುಳ್ಳಿಯನ್ನು ಬಿತ್ತುತ್ತಿದ್ದಾಳೆ. ಈ ವಿಡಿಯೋದಲ್ಲಿ, ಒಬ್ಬ ವ್ಯಕ್ತಿಯು ಅವಳು ಎಲ್ಲಿಂದ ಬಂದಿದ್ದಾಳೆ ಮತ್ತು ಅವಳು ಏನು ಮಾಡುತ್ತಿದ್ದಾಳೆ ಎಂದು ಕೇಳುವುದನ್ನು ಸಹ ನಾವು ಕೇಳಬಹುದು. ಇದಕ್ಕೆ, ಮಹಿಳೆ ತಾನು ಜರ್ಮನಿಯವಳು ಮತ್ತು ಜಮೀನಿನಲ್ಲಿ ಈರುಳ್ಳಿಯನ್ನು ಬಿತ್ತಲು ತನ್ನ ಅತ್ತೆಗೆ ಸಹಾಯ ಮಾಡುತ್ತಿದ್ದೇನೆ ಎಂದು ಹೇಳುತ್ತಾಳೆ.
View this post on Instagram
ವಿಡಿಯೋದ ಶೀರ್ಷಿಕೆಗಾಗಿ, ಮಹಿಳೆ "ಮಮ್ಮಿ ಯ ಪ್ರತಿಕ್ರಿಯೆ ಎಲ್ಲದಕ್ಕಿಂತಲೂ ಚೆನ್ನಾಗಿತ್ತು. ಆದರೆ ನಿಜವಾಗಿಯೂ ನಾನು ಕುಟುಂಬದೊಂದಿಗೆ ಸರಳ ಜೀವನವನ್ನು ತುಂಬಾ ಆನಂದಿಸುತ್ತೇನೆ. ನಾನು ಈಗಾಗಲೇ ನನ್ನ ಗಂಡನೊಂದಿಗೆ ಹಳ್ಳಿಯಲ್ಲಿ ಒಂದು ತಿಂಗಳಿನಿಂದ ವಾಸಿಸುತ್ತಿದ್ದೇನೆ ಮತ್ತು ನಾನು ಕುಟುಂಬದೊಂದಿಗೆ ಮತ್ತು ಪ್ರಕೃತಿಗೆ ತುಂಬಾ ಹತ್ತಿರವಾಗಿ ವಾಸಿಸುತ್ತಿರುವುದು ತುಂಬಾನೇ ಖುಷಿ ನೀಡುತ್ತಿದೆ" ಎಂದು ಬರೆದಿದ್ದಾರೆ.
ವಿಡಿಯೋಗೆ ಫುಲ್ ಕಾಮೆಂಟ್ಸ್
ಈ ವಿಡಿಯೋವನ್ನು ಹಂಚಿಕೊಂಡಾಗಿನಿಂದ, ಇದು 18.8 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ ಮತ್ತು 17 ಲಕ್ಷಕ್ಕೂ ಹೆಚ್ಚು ಲೈಕ್ ಗಳು ಇದಕ್ಕೆ ಲಭಿಸಿವೆ. ಅಷ್ಟೇ ಅಲ್ಲದೆ ವಿಡಿಯೋ ನೋಡಿದ ನೆಟ್ಟಿಗರು ಕಾಮೆಂಟ್ ಗಳನ್ನು ಹಾಕದೆ ಸುಮ್ಮನಿರಲು ಆಗಲಿಲ್ಲ.
ಇದನ್ನೂ ಓದಿ: ಅಬ್ಬಬ್ಬಾ ಏನ್ ಐಡಿಯಾ ಗುರೂ ಇದು; ತಲೆ ಕೂದಲನ್ನು ಹೀಗೂ ತೊಳೆಯಬಹುದು!
ಒಬ್ಬ ಸಾಮಾಜಿಕ ಮಾಧ್ಯಮ ಬಳಕೆದಾರರು "ನಾನು ನಿಮ್ಮ ಸಮರ್ಪಣೆ ಮತ್ತು ಸರಳತೆಯನ್ನು ನಿಜವಾಗಿಯೂ ಮೆಚ್ಚುತ್ತೇನೆ. ಭಾರತೀಯ ಸಂಸ್ಕೃತಿಯ ಬಗ್ಗೆ ನಿಮಗಿರುವ ಒಲವು ನನಗೆ ತುಂಬಾನೇ ಇಷ್ಟವಾಯಿತು. ದೇವರು ಅರ್ಜುನ್ ಮತ್ತು ಜೂಲಿಯನ್ನು ಆಶೀರ್ವದಿಸಲಿ” ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೂ ಎರಡನೆಯ ಸಾಮಾಜಿಕ ಮಾಧ್ಯಮ ಬಳಕೆದಾರರು "ಬೇರುಗಳೊಂದಿಗೆ ಸಂಪರ್ಕದಲ್ಲಿರುವುದು ತುಂಬಾನೇ ಅದ್ಭುತವಾಗಿದೆ" ಎಂದು ಕಾಮೆಂಟ್ ಮಾಡಿದ್ದಾರೆ. ಮೂರನೆಯ ಬಳಕೆದಾರರು "ತೋಟಗಾರಿಕೆ ಮತ್ತು ವ್ಯವಸಾಯವು ಚಿಕಿತ್ಸೆಗಿಂತ ಅಗ್ಗವಾಗಿದೆ ಮತ್ತು ನೀವು ಟೊಮ್ಯಾಟೋಗಳನ್ನು ಸಹ ಪಡೆಯುತ್ತೀರಿ" ಎಂದು ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ