ಭಾರತದಲ್ಲಿ, ನೀವು ಏನು ತಿನ್ನುತ್ತೀರಿ ಎಂಬುದರ ಬಗ್ಗೆ ಮಾತ್ರವಲ್ಲ, ನೀವು ಹೇಗೆ ತಿನ್ನುತ್ತೀರಿ, ಯಾವುದರಲ್ಲಿ ತಿನ್ನುತ್ತೀರಿ ಎಂಬುದು ಕೂಡ ಮುಖ್ಯವಾಗುತ್ತದೆ. ಭಾರತದಲ್ಲಿ ಬಾಳೆ ಎಲೆ, ಮುತ್ತುಗದ ಎಲೆ, ಹಿತ್ತಾಳೆ ತಟ್ಟೆ, ಸ್ಟೀಲ್ ಪ್ಲೇಟ್ ಹೀಗೆ ಸಾಂಪ್ರದಾಯಿಕ ತಟ್ಟೆಗಳಿಂದ (Indian Traditional Plates) ಹಿಡಿದ ಆಧುನಿಕತೆಯಲ್ಲಿ ಕಾಣುತ್ತಿರುವ ನವೀನ ಮಾದರಿಯ ಗಾಜಿನ, ಪಿಂಗಾಣಿ ತಟ್ಟೆಗಳವರೆಗೂ ಬಳಸಿ ಅದರಲ್ಲಿ ಆಹಾರ ಸೇವಿಸುತ್ತೇವೆ. ಆದರೆ ವಿಶ್ವ ವಿಖ್ಯಾತ ಫ್ಲೇವರ್ ಬಾಂಬ್ ಫುಚ್ಕಾ, ಅಕಾ ಪಾನಿ-ಪುರಿ ತಿನ್ನುವುದು ಪ್ಲಾಸ್ಟಿಕ್ ಅಥವಾ ಸ್ಟೀಲ್ ಬೌಲ್ನಲ್ಲಿ ಎಂದಿಗೂ ತೃಪ್ತಿ ನೀಡುವುದಿಲ್ಲ. ಏಕೆಂದರೆ ಅದನ್ನು ಸಾಂಪ್ರದಾಯಿಕ 'ಸಲ್ ಪಟ' ಬೌಲ್ನಲ್ಲಿ (Indian Leaf Plates) ತಿಂದಷ್ಟು ಸಂತೋಷ ಕೊಡುವುದಿಲ್ಲ.
ಇದನ್ನು ಪತ್ರಾವಳಿ, ಪಟ್ಟಾಲ್ ಅಥವಾ ವಿಸ್ತಾರ್ ಇತ್ಯಾದಿ ಹೆಸರುಗಳಿಂದ ಕರೆಯಲ್ಪಡುವ ಪ್ಲೇಟ್ ಅಥವಾ ಬಟ್ಟಲಿನಲ್ಲಿ ತಿನ್ನುವ ಅಭ್ಯಾಸವನ್ನು ಮುತ್ತುಗದ ಎಲೆಗಳಿಂದ ತಯಾರಿಸಲಾಗುತ್ತದೆ. ಇದು ಶತಮಾನಗಳಷ್ಟು ಹಳೆಯ ಸಂಪ್ರದಾಯ. ಇದರ ಮೂಲ ಚರಕ ಸಂಹಿತೆಯ ಮೊದಲ ಅಧ್ಯಾಯದಲ್ಲಿ ಕಂಡು ಬರುತ್ತದೆ, ಚರಕ ಸಂಹಿತೆ ಆಚಾರ್ಯ ಚರಕನ ಆಯುರ್ವೇದದ ಅತ್ಯಂತ ಹಳೆಯ ಗ್ರಂಥ. ಆಯುರ್ವೇದದಲ್ಲಿ ಪ್ರಮುಖ ಕೊಡುಗೆಯಾಗಿದ್ದ ಆಚಾರ್ಯ ಚರಕರ ಪ್ರಕಾರ, ಎಲೆಗಳ ತಟ್ಟೆಯಲ್ಲಿ ಕೈಗಳಿಂದ ತಿನ್ನುವ ಅಭ್ಯಾಸವು ಸ್ಪರ್ಶವನ್ನು ಪ್ರೋತ್ಸಾಹಿಸುತ್ತದೆ. ಇದು ಮನಸ್ಸಿನ ಎಲ್ಲಾ ಸಂವೇದನಾಶೀಲತೆಯನ್ನು ಜಾಗೃತಗೊಳಿಸಲು ಕಾರಣವಾಗಿದೆ ಹಾಗೂ ಆಹಾರ ಸೇವನೆಯ ಅನುಭವ ನೀಡುವುದರ ಜೊತೆಗೆ ಆ ವ್ಯಕ್ತಿಯನ್ನು ಹೆಚ್ಚು ಆರೋಗ್ಯಕರವಾಗಿಸುತ್ತದೆ ಎಂದು ಹೇಳುತ್ತಾರೆ.
ಹಬ್ಬಗಳು, ಮದುವೆಗಳು, ಅಂತ್ಯಕ್ರಿಯೆಗಳಿಂದ ಹಿಡಿದು ರಸ್ತೆ ಬದಿಯ ತಿಂಡಿ ಅಂಗಡಿಗಳವರೆಗೆ, ಈ ಸುಕ್ಕುಗಟ್ಟಿದ ಒಣಗಿದ ಎಲೆಗಳ ತಟ್ಟೆಗಳು ಮತ್ತು ಬಟ್ಟಲುಗಳು ಎಲ್ಲೆಡೆ ಕಂಡು ಬರುತ್ತಿದೆ. ಇನ್ನು ಮುಖ್ಯವಾಗಿ ಇದು ಪರಿಸರ ಸ್ನೇಹಿಯೂ ಆಗಿದೆ. ಆದ ಕಾರಣ ಭಾರತೀಯ ಸಂಸ್ಕೃತಿಯ ಒಂದು ಭಾಗವಾಗಿ ಮುಂದುವರೆದಿದೆ.
ಜರ್ಮನ್ ಕಂಪೆನಿ ಲೀಫ್ ರಿಪ್ಲಬಿಕ್ ಈ ಎಲೆಗಳಿಂದ ಡೈನಿಂಗ್ ಟೇಬಲ್ ಪರಿಕರಗಳನ್ನು ತಯಾರಿಸುವ ಮೂಲಕ ವಿನೂತನ ಯೋಜನೆ ಜಾರಿಗೆ ತಂದು ಎಲ್ಲರಿಗೂ ಶಾಕ್ ನೀಡಿತು. ಇದು ಅದ್ಭುತವಾದುದು ಎಂದು ಬಿಂಬಿಸಿತು. ಲೀಫ್ ರಿಪಬ್ಲಿಕ್ ಬೌಲ್, ಪ್ಲೇಟ್, ಟ್ರೇಗಳನ್ನು ಒಳಗೊಂಡಂತೆ ಇನ್ನು ಹಲವು ಪರಿಕರಗಳನ್ನು ಅತ್ಯಾಧುನಿಕತೆಯೊಂದಿಗೆ ಪ್ರಸ್ತುತ ಪಡಿಸಿತು.
ಅತ್ಯಾಧುನಿಕತೆಯ ಸ್ಪರ್ಶ ಪಡೆದಿರುವ ಇವುಗಳು ನಾಲ್ಕು ಪದರಗಳಿಂದ ಮಾಡಲ್ಪಟ್ಟಿವೆ. ಎರಡು ಪದರಗಳನ್ನು ತಾಳೆ ನಾರುಗಳಿಂದ ಜೋಡಿಸಲಾಗಿದೆ, ಮಧ್ಯದಲ್ಲಿ ಜಲನಿರೋಧಕ ಎಲೆ ಆಧಾರಿತ ಕಾಗದದ ಪದರ ಮತ್ತು ಮೇಲೆ ಬಯೋಪ್ಲಾಸ್ಟಿಕ್ ಅಳವಡಿಸಲಾಗಿದೆ. ಪ್ಲಾಸ್ಟಿಕ್, ಎಣ್ಣೆ, ಅಂಟು ಅಥವಾ ರಾಸಾಯನಿಕಗಳ ಯಾವುದೇ ಅಂಶಗಳಿಲ್ಲದೇ ಸಂಪೂರ್ಣವಾಗಿ ಸಾವಯವ ಪರಿಕರಗಳು ಎಂದು ಹೇಳಿಕೊಂಡರು.
ಇದು ಹಳೆವೈನ್ಗೆ ಹೊಸ ಬಾಟಲಿ ಎಂಬ ಪರಿಕಲ್ಪನೆಗೆ ಉತ್ತಮ ನಿದರ್ಶನ. ಮಾಷಬಲ್ 2019ರಲ್ಲಿ ಒಂದು ವಿಡಿಯೋ ಹಂಚಿಕೊಂಡಾಗ, ಇದು ಜರ್ಮನರ 'ಹೊಸ ಕಲ್ಪನೆ’ ಎಂದು ಹೇಳಿಕೊಂಡಿತು. ಆದರೆ ಟ್ವಿಟ್ಟರ್ನಲ್ಲಿ ಸ್ವದೇಶಿ ವಸ್ತುಗಳಿಗೆ ಅತ್ಯಾಧುನಿಕತೆಯ ಸ್ಪರ್ಶ ನೀಡಿರುವುದು ಚರ್ಚೆಗೆ ಗ್ರಾಸವಾಯಿತು. ಈ ವಿಡಿಯೋಗೆ ಪ್ರತಿಕ್ರಿಯಿಸಿದ ಕೃತಿಕಾ ಶಿವಸ್ವಾಮಿ ನೀವು ನಮ್ಮ ಭಾರತದ ದೇವಾಸ್ಥಾನಗಳಿಗೆ ಬಂದರೆ ನೀವು ಈ ದೊನ್ನೆಯನ್ನು ಕಾಣಬಹುದು. ನೀವು ಏನು ಸಂಶೋಧನೆ ಮಾಡಿದ್ದೀರ? ನಾವು ಇಲ್ಲಿ ಇದನ್ನು ಶತಮಾನಗಳಿಂದ ಬಳಸುತ್ತಿದ್ದೇವೆ ಎಂದು ಹೇಳಿದರು.
ಭಾರತೀಯ ಶೈಲಿಯ ಶೌಚಾಲಯವು 'ಸ್ಕ್ವಾಟಿ ಪಾಟಿ' ಮತ್ತು ಹಲ್ದಿ ದೂಧ್ ಅನ್ನು ಚಾಯ್-ಟೀ-ಲ್ಯಾಟೆ ಆಗಿ ಮಾರ್ಪಟ್ಟ ನಂತರ, ಇದು ಸ್ಥಳೀಯ ಉತ್ಪನ್ನಗಳ ವಸಾಹತೀಕರಣವಾಗಿ ಕಾಣುತ್ತದೆ. "ಏಕೆಂದರೆ ನಾವು ಈ ಜಗತ್ತಿನಲ್ಲಿ ಕೇವಲ ಒಂದು ಕ್ಷಣವನ್ನು ಕಳೆಯುತ್ತೇವೆ" ಇದು ಲೀಫ್ ರಿಪಬ್ಲಿಕ್ನ ಧ್ಯೇಯವಾಕ್ಯ. ಇದು ಒಂದು ಪ್ಲೇಟ್ಗೆ 873 ರೂ. ತೆಗೆದುಕೊಳ್ಳುತ್ತಿದೆ.
ನಮ್ಮಲ್ಲಿನ ಅಜ್ಞಾನ ಅವರುಗಳಿಗೆ ಪರಿಶೋಧನೆಯಾಗಿ ಮಾರ್ಪಡುತ್ತಿದೆ. ಎಲೆ ಪಾತ್ರೆಗಳು ದಶಕಗಳಿಂದ ಆಧುನಿಕ ಭಾರತ ಮತ್ತು ಹಲವಾರು ಏಷ್ಯಾದ ದೇಶಗಳಲ್ಲಿ ಗುಡಿ ಕೈಗಾರಿಕೆಗಳಿಗೆ ಉತ್ತೇಜನ ನೀಡಿವೆ. ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ವಸಾಹತುಗಾರರನ್ನು ಆರ್ಥಿಕವಾಗಿ ಸೋಲಿಸುವ ಪ್ರಯತ್ನದಲ್ಲಿ ಈ ಗುಡಿ ಕೈಗಾರಿಕೆಗಳು ಪುನಶ್ಚೇತನಗೊಂಡವು. ಈಗ ಅವರ ಉತ್ಪನ್ನಗಳು, ಪಾಶ್ಚಿಮಾತ್ಯರಿಂದ ಹೊಸ ಕಲ್ಪನೆಯಾಗಿ ಮರುನಾಮಕರಣಗೊಂಡಿವೆ. ನಮ್ಮ ಭಾರತೀಯ ಕಲ್ಪನೆಯನ್ನೇ ತಲೆಕೆಳಗು ಮಾಡಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ