Gas Stoveಗಳಿಂದ ಹೆಚ್ಚಾಗ್ತಿದೆಯಂತೆ ಜಾಗತಿಕ ತಾಪಮಾನ -ಅಧ್ಯಯನದಲ್ಲಿ ಬಹಿರಂಗ

Global Warming: ಸ್ವಲ್ಪ ಮಟ್ಟಿನ ಮೀಥೇನ್ ವಾತಾವರಣದಲ್ಲಿ ನಿರಂತರವಾಗಿ ಸೋರಿಕೆಯಾಗುತ್ತಲೇ ಇರುತ್ತದೆ" ಎಂದು ಅಧ್ಯಯನದ ಸಹ-ಲೇಖಕ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದ ಹವಾಮಾನ ವಿಜ್ಞಾನಿ ರಾಬ್ ಜಾಕ್ಸನ್ ಹೇಳಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಈ ಹಿಂದೆ ಅಂದಾಜಿಸಲಾದ ಮಟ್ಟಕ್ಕಿಂತಲೂ ಹೆಚ್ಚಾಗಿ ಗ್ಯಾಸ್ ಸ್ಟೌವ್‌ಗಳು (Gas Stove) ಜಾಗತಿಕ ತಾಪಮಾನ ಏರಿಕೆಗೆ (Global warming) ಕೊಡುಗೆ ನೀಡುತ್ತಿವೆ. ಏಕೆಂದರೆ ಗ್ಯಾಸ್ ಸ್ಟೌವ್‌ಗಳು ಬಳಕೆಯಲ್ಲಿರದಿರುವಾಗಲೂ ಸಣ್ಣ ಪ್ರಮಾಣದ ಮೀಥೇನ್ (Methane) ಸೋರಿಕೆ ಅದರಲ್ಲಿ ಕಂಡು ಬರುತ್ತದೆ ಎಂಬುವುದನ್ನು ಅಧ್ಯಯನವೊಂದು ಇತ್ತೀಚಿಗೆ ಹೊರ ಹಾಕಿದೆ. ಈ ಅಧ್ಯಯನ ತಂಡವು ಮನೆಗಳಲ್ಲಿ ಸ್ಟೌವ್‌ಗಳು ಹೊರಸೂಸುವ ನೈಟ್ರೋಜನ್ ಆಕ್ಸೈಡ್ ಪ್ರಮಾಣವನ್ನು ಪರೀಕ್ಷಿಸಿದ ನಂತರ ಮನೆಯೊಳಗಿನ ಗಾಳಿಯ (Air) ಗುಣಮಟ್ಟ ಮತ್ತು ಆರೋಗ್ಯದ  (Health) ಬಗ್ಗೆ ಹೊಸದೊಂದು ಕಳವಳವನ್ನು ಹುಟ್ಟುಹಾಕಿದೆ.

ಯುಎಸ್‌ನಲ್ಲಿ ಹಲವು ಗ್ಯಾಸ್ ಸ್ಟೌವ್‌ಗಳನ್ನು ಪರಿಶೀಲಿಸಿದ ಬರ್ಕ್ಲಿಯ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಸಂಶೋಧಕರು, ಬಳಕೆಯಲ್ಲಿಲ್ಲದ ಸಮಯದಲ್ಲೂ ಈ ಸ್ಟೌವ್‌ಗಳು ವಾರ್ಷಿಕವಾಗಿ 2.6 ಮಿಲಿಯನ್ ಟನ್ (2.4 ಮಿಲಿಯನ್ ಮೆಟ್ರಿಕ್ ಟನ್) ಮೀಥೇನ್ ಅನ್ನು ಹೊರಸೂಸುತ್ತವೆ. ಮತ್ತಿದು 2.4 ಮಿಲಿಯನ್ ಟನ್ CO2ಗೆ ಸಮನಾಗಿದ್ದು ಒಟ್ಟು 500,000 ಕಾರುಗಳು ಹೊರಸೂಸುವ ಹಸಿರುಮನೆ ಅನಿಲಗಳ ಪ್ರಮಾಣಕ್ಕೆ ಸಮನಾಗಿರುತ್ತದೆ ಎಂದು ಗುರುವಾರದ ಜರ್ನಲ್ ಎನ್ವಿರಾನ್‌ಮೆಂಟಲ್‌ ಸೈನ್ಸ್ & ಟೆಕ್ನಾಲಜಿಯಲ್ಲಿ ಪ್ರಕಟವಾದ ಅಧ್ಯಯನದಲ್ಲಿ ವರದಿ ಮಾಡಿದ್ದಾರೆ.

“ಸ್ವಲ್ಪ ಮಟ್ಟಿನ ಮೀಥೇನ್ ವಾತಾವರಣದಲ್ಲಿ ನಿರಂತರವಾಗಿ ಸೋರಿಕೆಯಾಗುತ್ತಲೇ ಇರುತ್ತದೆ" ಎಂದು ಅಧ್ಯಯನದ ಸಹ-ಲೇಖಕ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದ ಹವಾಮಾನ ವಿಜ್ಞಾನಿ ರಾಬ್ ಜಾಕ್ಸನ್ ಹೇಳಿದ್ದಾರೆ.

ಇದನ್ನೂ ಓದಿ: ಸಂಗಾತಿಯ ಹುಡುಕಾಟದಲ್ಲಿ ಇದ್ದೀರಾ? ಈ ನಾಲ್ಕು ಗುಣಗಳಿದ್ರೆ ಅವರೇ ನಿಮಗೆ ಪರ್ಫೆಕ್ಟ್ ಮ್ಯಾಚ್ ಅಂತೆ!

ಕಾರ್ಯಾಚರಣೆಯಲ್ಲಿರುವ ಸಮಯದಲ್ಲಿ, ಗ್ಯಾಸ್ ಸ್ಟೌವ್‌ಗಳು ಮೀಥೇನ್ ಮಾತ್ರವಲ್ಲದೆ ಹೆಚ್ಚುವರಿಯಾಗಿ 6.8 ಮಿಲಿಯನ್ ಟನ್ (6.2 ಮಿಲಿಯನ್ ಮೆಟ್ರಿಕ್ ಟನ್) ಇಂಗಾಲದ ಡೈಆಕ್ಸೈಡ್ ಅನ್ನು ಕೂಡ ಗಾಳಿಯಲ್ಲಿ ಹೊರಸೂಸುತ್ತವೆ ಎಂದು ಅಧ್ಯಯನವು ಹೇಳಿದೆ. ಮೀಥೇನ್ ಪ್ರಬಲವಾದ ಹಸಿರುಮನೆ ಅನಿಲವಾಗಿದ್ದು ಇಂಗಾಲದ ಡೈಆಕ್ಸೈಡ್‌ನಂತೆ ವಾತಾವರಣದಲ್ಲಿ ಹೆಚ್ಚು ಕಾಲ ಅಥವಾ ಹೇರಳವಾಗಿ ಉಳಿಯುವುದಿಲ್ಲ.

ಬಾಡಿಗೆ ಹಾಸಿಗೆ ಮತ್ತು ಉಪಾಹಾರದ ವ್ಯವಸ್ಥೆಯಿರುವ ಜಾಗಗಳೂ ಸೇರಿದಂತೆ ಕ್ಯಾಲಿಫೋರ್ನಿಯಾದ ಒಟ್ಟು 53 ಅಡಿಗೆಮನೆಗಳನ್ನು ಪರಿಶೀಲಿಸಿದ ಸಂಶೋಧಕರು ಕೊಠಡಿಗಳನ್ನು ಪ್ಲಾಸ್ಟಿಕ್ ಟಾರ್ಪ್‌ಗಳಲ್ಲಿ ಮುಚ್ಚಿ ಸ್ಟೌವ್‌ಗಳು ಬಳಕೆಯಲ್ಲಿರುವ ಮತ್ತು ಬಳಕೆಯಲ್ಲಿಲ್ಲದ ಎರಡೂ ಸಂದರ್ಭಗಳಲ್ಲೂ ಅವುಗಳ ಹೊರಸೂಸುವಿಕೆಯನ್ನು ಅಳೆದಿದ್ದಾರೆ. ಮುಕ್ಕಾಲು ಪಾಲಿನಷ್ಟು ಮೀಥೇನ್ ಸ್ಟೌ ಆಫ್ ಆಗಿರುವಾಗಲೇ ಬಿಡುಗಡೆಯಾಗಿರುವುದು ಆಶ್ಚರ್ಯಕರ ಸಂಗತಿ. ಈ ಹೊರಸೂಸುವಿಕೆಗಳಿಗೆ ಸರ್ಕಾರದ ಬಳಿ ಯಾವುದೇ ಲೆಕ್ಕವಿಲ್ಲ ಎಂದು ಜಾಕ್ಸನ್ ಹೇಳಿದ್ದಾರೆ.

ಇದು ಒಂದು ಮುಖ್ಯ ಸಂಗತಿಯಾಗಿದ್ದು ನಾವು ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ಪ್ರಯತ್ನಿಸುವ ನಿಟ್ಟಿನಲ್ಲಿ ಗ್ಯಾಸ್ ಕಲ್ಲಿದ್ದಲಿಗಿಂತ ಉತ್ತಮ ಆಯ್ಕೆ ಎಂದು ನಂಬಿದ್ದೇವೆ” ಎಂದು ಓಕ್ಲ್ಯಾಂಡ್ ಮೂಲದ PSE ಹೆಲ್ದಿ ಎನರ್ಜಿಯ ವಿಜ್ಞಾನಿ ಎರಿಕ್ ಲೆಬೆಲ್ ಹೇಳಿದರು. ಸೋರಿಕೆಯನ್ನು ಗಣನೆಗೆ ತೆಗೆದುಕೊಂಡಾಗ ಖಂಡಿತಾ ಈ ಆಯ್ಕೆಯ ಬಗ್ಗೆ, ಗ್ಯಾಸ್‌ನ ಪ್ರಯೋಜನಗಳ ಬಗ್ಗೆ ಪ್ರಶ್ನೆಯೊಂದು ಎದುರಾಗುತ್ತದೆ ಎಂದು ಅವರು ಹೇಳಿದರು.

ನ್ಯೂಯಾರ್ಕ್ ನಗರ ಮತ್ತು ಬೇ ಏರಿಯಾ ನಗರಗಳಾದ ಸ್ಯಾನ್ ಫ್ರಾನ್ಸಿಸ್ಕೋ, ಓಕ್ಲ್ಯಾಂಡ್, ಸ್ಯಾನ್ ಜೋಸ್ ಮತ್ತು ಬರ್ಕ್ಲಿ ಸೇರಿದಂತೆ ಕೆಲವು ಸಮುದಾಯಗಳು ಭವಿಷ್ಯದ ಹೊಸ ನಿರ್ಮಾಣಗಳಲ್ಲಿ ಗ್ಯಾಸ್ ಸ್ಟೌವ್‌ಗಳ ಬಳಕೆಯನ್ನು ನಿಷೇಧಿಸಿವೆ.

ವಾಷಿಂಗ್ಟನ್ ನೀತಿ ತಜ್ಞ ಮತ್ತು ಅನಿಲ ಮತ್ತು ಉಪಕರಣ ಉದ್ಯಮಗಳನ್ನು ಪ್ರತಿನಿಧಿಸುವ ಸಾರ್ವಜನಿಕ ಸಂಪರ್ಕ ತಜ್ಞ ಫ್ರಾಂಕ್ ಮೈಸಾನೊ ಅವರು "ಜನರು ಬಯಸಿದಲ್ಲಿ ವಿದ್ಯುತ್ ಉಪಕರಣಗಳನ್ನು ಆಯ್ಕೆ ಮಾಡಬಹುದು. ಚಳಿಗಾಲದಲ್ಲಿಯೂ ಉತ್ತಮವಾಗಿ ಕಾರ್ಯನಿರ್ವಹಿಸುವ ಕ್ಷಮತೆಯ ಕಾರಣದಿಂದಾಗಿ ಜನರು ಅನಿಲ ಉಪಕರಣಗಳಿಗೆ ಆದ್ಯತೆ ನೀಡುತ್ತಾರೆ. ದಕ್ಷತೆ ಮತ್ತು ವೆಚ್ಚದ ದೃಷ್ಟಿಯಿಂದ ನೈಸರ್ಗಿಕ ಅನಿಲ ಉಪಕರಣಗಳು ಹೆಚ್ಚು ಪ್ರಯೋಜನಕಾರಿಯಾಗಿವೆ" ಎಂದು ಹೇಳಿದರು.

ಇದನ್ನೂ ಓದಿ: Corona ಭಯದಿಂದ ಮಕ್ಕಳಿಗೆ ಅಗತ್ಯವಿರುವ ವ್ಯಾಕ್ಸಿನ್​ ಹಾಕಿಸಿಲ್ಲ ಅಂತ ಚಿಂತೆ ಬಿಡಿ- ತಜ್ಞರು ಹೇಳೋದನ್ನ ಕೇಳಿ

ಮೈಸಾನೊ ಪ್ರಕಾರ, ಜನರು ಯಾವಾಗಲೂ ಉತ್ತಮ ಅಡಿಗೆ ಮನೆ ಹುಡ್ ಶ್ರೇಣಿಗಳನ್ನು ಬಳಸಬೇಕು ಮತ್ತು ಸರಿಯಾದ ಗಾಳಿಯ ವ್ಯವಸ್ಥೆ ಇರುವುದನ್ನು ಖಚಿತಪಡಿಸಿಕೊಳ್ಳಬೇಕು.
Published by:Sandhya M
First published: