ಅಪ್ಪನ ಮಗಳು ಅಪ್ಪನೇ..! ಖತರ್ನಾಕ್ ಪ್ಲ್ಯಾನ್​ ರೂಪಿಸಿ ತಪ್ಪಿಸಿಕೊಳ್ಳಲು ಯತ್ನಿಸಿದ ಕಳ್ಳ..! ವಿಡಿಯೋ ವೈರಲ್

ಬ್ರೆಜಿಲ್​ನ ಗ್ಯಾಂಗ್​​ಸ್ಟರ್ ಕ್ಲಾವಿನೊ ಡ ಸಿಲ್ವ ಜೈಲು ಪಾಲಾಗಿದ್ದ. ಶನಿವಾರ  ತಂದೆಯನ್ನು ಭೇಟಿಯಾಗಲು  ಮಗಳು ರಿಯೋ ಡಿ ಜನೈರೋದ ಜೈಲಿಗೆ ಹೋಗಿದ್ದಾರೆ. ಇದನ್ನೇ ಬಳಸಿಕೊಂಡ ಕ್ಲಾವಿನೊ  ಮಗಳನ್ನು ಜೈಲಿನಲ್ಲಿ ಕುಳ್ಳಿರಿಸಿ, ಅವಳ ವೇಷ ಧರಿಸಿ ಜೈಲಿನಿಂದ ಪರಾರಿಯಾಗಲು ಯತ್ನಿಸಿದ್ದಾನೆ.

zahir | news18-kannada
Updated:August 6, 2019, 4:55 PM IST
ಅಪ್ಪನ ಮಗಳು ಅಪ್ಪನೇ..! ಖತರ್ನಾಕ್ ಪ್ಲ್ಯಾನ್​ ರೂಪಿಸಿ ತಪ್ಪಿಸಿಕೊಳ್ಳಲು ಯತ್ನಿಸಿದ ಕಳ್ಳ..! ವಿಡಿಯೋ ವೈರಲ್
ಕ್ಲಾವಿನೊ
  • Share this:
ಸಾಮಾನ್ಯವಾಗಿ ಕೋರ್ಟ್​ಗೆ ಹಾಜರುಪಡಿಸುವಾಗ ಕಳ್ಳರು ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ತಪ್ಪಿಸಿಕೊಳ್ಳುವುದನ್ನು ಕೇಳಿರುತ್ತೀರಿ. ಇಲ್ಲ, ಜೈಲಿನಿಂದ ಆಸ್ಪತ್ರೆಗೆ ಸೇರಿ ಅಲ್ಲಿಂದ ಎಸ್ಕೇಪ್ ಆಗಲು ಪಯತ್ನಿಸುತ್ತಾರೆ. ಇನ್ನೂ ಹೆಚ್ಚಂದರೆ ಕಾರಾಗೃಹ ತಡೆಗೋಡೆಯನ್ನು ಹಾರುತ್ತಾರೆ. ಆದರೆ ಇಲ್ಲೊಬ್ಬ ಇದೆಲ್ಲವನ್ನು ಮೀರಿ ಸುದ್ದಿಯಾಗಿದ್ದಾನೆ. ಈತನ ಪ್ಲ್ಯಾನ್ ಯಾವುದೇ ಹಾಲಿವುಡ್ ಚಿತ್ರದ ಕಥೆಗಂತು ಕಮ್ಮಿಯಿಲ್ಲ.

ಬ್ರೆಜಿಲ್​ನ ಗ್ಯಾಂಗ್​​ಸ್ಟರ್ ಕ್ಲಾವಿನೊ ಡ ಸಿಲ್ವ ಜೈಲು ಪಾಲಾಗಿದ್ದ. ಶನಿವಾರ  ತಂದೆಯನ್ನು ಭೇಟಿಯಾಗಲು  ಮಗಳು ರಿಯೋ ಡಿ ಜನೈರೋದ ಜೈಲಿಗೆ ಹೋಗಿದ್ದಾರೆ. ಇದನ್ನೇ ಬಳಸಿಕೊಂಡ ಕ್ಲಾವಿನೊ  ಮಗಳನ್ನು ಜೈಲಿನಲ್ಲಿ ಕುಳ್ಳಿರಿಸಿ, ಅವಳ ವೇಷ ಧರಿಸಿ ಜೈಲಿನಿಂದ ಪರಾರಿಯಾಗಲು ಯತ್ನಿಸಿದ್ದಾನೆ. ಆದರೆ ಕಳ್ಳ ಚಾಪೆ ಕೆಳಗೆ ನುಸುಳಿದರೆ ಬ್ರೆಜಿಲ್ ಪೊಲೀಸರು ರಂಗೋಲಿ ಕೆಳಗೆ ತೂರಿದ್ದರು.

ಕ್ಲಾವಿನೊ ಡ ಸಿಲ್ವ ತನ್ನನ್ನು ಭೇಟಿಯಾಗಲು ಬಂದ 19 ಹರೆಯದ ಮಗಳನ್ನು ಜೈಲಲ್ಲಿರಿಸಿದನು. ಬಳಿಕ ಮೊದಲೇ ರೆಡಿ ಮಾಡಿಟ್ಟುಕೊಂಡಿದ್ದ ವಿಗ್, ಮುಖವಾಡ ಮತ್ತು ಗುಲಾಬಿ ಬಣ್ಣದ ಟಿ-ಶರ್ಟ್ ಧರಿಸಿ ಜೈಲಿನ ಮುಖ್ಯ ದ್ವಾರದತ್ತ ನಡೆದುಕೊಂಡು ಬಂದ್ದಿದ್ದನು. ಆದರೆ, ಈ ಬಗ್ಗೆ ಸಂಶಯಗೊಂಡ ಜೈಲು ಅಧಿಕಾರಿಗಳು ಕ್ಲಾವಿನೊನನ್ನು ವಿಚಾರಿಸಿದ್ದಾರೆ. ಇದರಿಂದ ಗ್ಯಾಂಗ್​ಸ್ಟರ್ ಗಾಬರಿಗೊಳಗಾಗಿದ್ದಾನೆ. ಆಗಲೇ ಗೊತ್ತಾಗಿದ್ದು ಇದು ಮಗಳಲ್ಲ ಅಪ್ಪ ಎಂಬುದು.Loading...

ಬ್ರೆಜಿಲ್​ನ ರಿಯೋ ಡಿ ಜನೈರೋ ಜೈಲಿನಲ್ಲಿ ನಡೆದ ಖತರ್ನಾಕ್ ಎಸ್ಕೇಪ್ ಪ್ಲ್ಯಾನ್​ ವಿಡಿಯೋ ಇದೀಗ ವಿಶ್ವದಾದ್ಯಂತ ಭಾರೀ ವೈರಲ್ ಆಗಿದೆ. ಗ್ಯಾಂಗ್​ಸ್ಟರ್ ಕ್ಲಾವಿನೊ ಮಾಡಿಕೊಂಡ ಭರ್ಜರಿ ಎಸ್ಕೇಪ್ ಪ್ಲ್ಯಾನ್​ ಯಾವುದೇ ಸಿನಿಮಾ ಸ್ಕ್ರಿಪ್ಟ್​ಗಿಂತಲೂ ಕಡಿಮೇನಲ್ಲ ಎಂಬ ಅಭಿಪ್ರಾಯಗಳು ಸಾಮಾಜಿಕ ಜಾಲತಾಣಗಳಲ್ಲಿ ಕೇಳಿ ಬಂದಿದೆ.

First published:August 6, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...