Viral Video: ಈತನ ಪುಂಗಿ ನಾದಕ್ಕೆ ಹೊರ ಬಂದ ಹಾವು ಕಂಡು ನೆಟ್ಟಿಗರು ಶಾಕ್: ವಿಡಿಯೋ ನೋಡಿ

ಜಗತ್ತಿನ ಮೂಲೆಯಲ್ಲಿ ಯಾವುದೇ ಘಟನೆ ನಡೆದ್ರೂ ಕ್ಷಣಾರ್ಧದಲ್ಲಿ ವೈರಲ್ ಆಗುತ್ತದೆ. ಪುಂಗಿ ಓದುತ್ತಿರುವ ವ್ಯಕ್ತಿಯ ವಿಡಿಯೋ ಸದ್ಯ ವೈರಲ್ ಆಗಿದೆ. ಈತನ ಪುಂಗಿ ನಾದಕ್ಕೆ ಅಂಗಡಿಯಿಂದ ಹೊರ ಬಂದ ಹಾವು ಕಂಡು ಜನರು ಶಾಕ್ ಆಗಿ ನಕ್ಕಿದ್ದಾರೆ.

ವೈರಲ್ ವಿಡಿಯೋ

ವೈರಲ್ ವಿಡಿಯೋ

  • Share this:
ಸಿನಿಮಾಗಳಲ್ಲಿ (Cinema) ಹಾವು (Snake) ಬಂದ್ರೆ ಅಲ್ಲಿ ಪುಂಗಿ (Pungi/ Snake Charmer) ಓದುವ ಬಂದು ಹಾವು ಹಿಡಿಯುತ್ತಾನೆ. ಈ ದೃಶ್ಯಗಳನ್ನು ಎಲ್ಲರೂ ಸಿನಿಮಾಗಳಲ್ಲಿ ನೋಡಿರುತ್ತೀರಿ. ಇನ್ನು ಹಾವಿನ ಚಿತ್ರಕಥೆ(Snake Cinema Story)ಯನ್ನು ಹೊಂದಿರುವ ಸಿನಿಮಾಗಳಲ್ಲಿ ಪುಂಗಿಗೆ ಪ್ರಾಮುಖ್ಯತೆ ಹೆಚ್ಚು. ಈಗ ಕಿರುತೆರೆಯ (Small Screen) ಎಲ್ಲ ಭಾಷೆಗಳಲ್ಲಿ ನಾಗಿಣಿ (Nagini) ಕಥೆಯುಳ್ಳ ಧಾರಾವಾಹಿಗಳು ಪ್ರಸಾರವಾಗುತ್ತಿದೆ. ಕನ್ನಡದಲ್ಲಿಯೂ ಈ ಕುರಿತ ಧಾರಾವಾಹಿ ಪ್ರಸಾರವಾಗುತ್ತಿದೆ. ಹಾವು ಹಿಡಿಯಲು ಪುಂಗಿ ಪ್ರಮುಖ ಸಾಧನ ಅಂತ ಹೇಳ್ತಾರೆ. ಇದು ಸೋಶಿಯಲ್ ಮೀಡಿಯಾ ಕಾಲ. ಜಗತ್ತಿನ ಮೂಲೆಯಲ್ಲಿ ಯಾವುದೇ ಘಟನೆ ನಡೆದ್ರೂ ಕ್ಷಣಾರ್ಧದಲ್ಲಿ ವೈರಲ್ ಆಗುತ್ತದೆ. ಪುಂಗಿ ಓದುತ್ತಿರುವ ವ್ಯಕ್ತಿಯ ವಿಡಿಯೋ ಸದ್ಯ ವೈರಲ್ ಆಗಿದೆ. ಈತನ ಪುಂಗಿ ನಾದಕ್ಕೆ ಅಂಗಡಿಯಿಂದ ಹೊರ ಬಂದ ಹಾವು ಕಂಡು ಜನರು ಶಾಕ್ ಆಗಿ ನಕ್ಕಿದ್ದಾರೆ.

ಹಾವುಗಳಂದ್ರೆ (Snakes) ಯಾರಿಗೆ ಭಯ ಇಲ್ಲ ಹೇಳಿ. ಅವುಗಳ ಬಗ್ಗೆ ಎಷ್ಟೇ ಮಾತನಾಡಿದ್ರೂ ಎದುರಿಗೆ ಬಂದ್ರೆ ಕಿಲೋ ಮೀಟರ್ ಗಟ್ಟಲೇ ದೂರ ಓಡುತ್ತೇವೆ. ಸೋಶಿಯಲ್ ಮೀಡಿಯಾ(Social Media)ದಲ್ಲಿ ಹಾವುಗಳ ವಿಡಿಯೋ(Snake Videos)ಗಳು ಸಿಕ್ಕಾಪಟ್ಟೆ ವೈರಲ್ ಆಗುತ್ತಿರುತ್ತವೆ. ಜನರು ಭಯಪಡುತ್ತಲೇ ವಿಡಿಯೋ(Viral Video)ಗಳನ್ನು ನೋಡುತ್ತಾರೆ.

bhutni_ke_memes ಹೆಸರಿನ ಇನ್ ಸ್ಟಾಗ್ರಾಂನಲ್ಲಿ ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. ವಿಡಿಯೋದಲ್ಲಿ ಓರ್ವ ಪುಂಗಿ ಹಿಡಿದು ಅಂಗಡಿ ಮುಂಭಾಗ ಊದುತ್ತಿರೋದನ್ನು ನೋಡಬಹುದು. ಪುಂಗಿ ಊದುತ್ತಿರುವಾಗ ಸ್ವಲ್ಪ ವೇಟ್ ಮಾಡಿ ಎಂದು ಹೇಳುತ್ತಾರೆ. ಆದಾದ ಮೇಲೆ ಅಂಗಡಿಯ ಬಾಗಿಲು ತೆಗೆದುಕೊಳ್ಳುತ್ತದೆ.

ಇದನ್ನೂ ಓದಿ:  Viral News: ಒಂದು ಹಾವು ಭಾರತದಿಂದ ಇಂಗ್ಲೆಂಡ್​ಗೆ ಹಡಗಿನಲ್ಲಿ ಹೋಗಿಬಿಟ್ಟಿದೆ, ಅದ್ರ ಪ್ರಯಾಣದ ಕತೆಯೇ ರೋಚಕ!

ಪುಂಗಿ ಊದಿದವನ ಮುಂದೆ ಯುವಕನ ಡ್ಯಾನ್ಸ್

ಅಂಗಡಿಯ ಬಾಗಿಲು ತೆರೆದುಕೊಳ್ಳುತ್ತಿದ್ದಂತೆ ನೆಟ್ಟಿಗರು ಯಾವುದೋ ದೊಡ್ಡ ಹಾವು ಇರಬೇಕು ಅಂತ ತಿಳಿದುಕೊಂಡಿದ್ರು. ಆದ್ರೆ ಬಾಗಿಲು ತೆಗೆಯುತ್ತಿದ್ದಂತೆ ಹೊರ ಬರುವ ಯುವಕ ನಾಗಿಣಿ ಡ್ಯಾನ್ಸ್ ಮಾಡುತ್ತಾ ಪುಂಗಿ ಊದುವವನ ಮುಂದೆ ಬಂದು ನಿಲ್ಲುತ್ತಾನೆ. ಯುವಕ ಬರುತ್ತಿದ್ದಂತೆ ನೆಟ್ಟಿಗರು ಜೋರಾಗಿ ನಕ್ಕಿದ್ದಾರೆ.
View this post on Instagram


A post shared by Bhutni_ke (@bhutni_ke_memes)


ಇಷ್ಟು ದೊಡ್ಡ ಹಾವು ನೋಡಿಲ್ಲ ಎಂದ ನೆಟ್ಟಿಗರು

ಇನ್ನೂ ವಿಡಿಯೋ ನೋಡಿದ ನೆಟ್ಟಿಗರು ಕಮೆಂಟ್ ಮಾಡುವ ಮೂಲಕ ಅರೇ, ಇಷ್ಟು ದೊಡ್ಡದಾದ ಹಾವನ್ನು ನಾವು ನೋಡಿರಲಿಲ್ಲ ಎಂದು ವ್ಯಂಗ್ಯ ಮಾಡಿದ್ದಾರೆ. ಆದರೆ ಈ ಘಟನೆ ಎಲ್ಲಿ ನಡೆದಿದೆ ಎಂಬುದರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ನಾಲ್ಕು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ವಿಡಿಯೋ ಪಡೆದುಕೊಂಡಿದೆ.

ಹೆಬ್ಬಾವಿನ ಜೊತೆ ಬಾಲಕಿಯ ಆಟ

ಸುಮಾರು ಏಳರಿಂದ ಎಂಟು ವರ್ಷದ ಅರಿಯಾನಾ ಎಂಬ ಬಾಲಕಿ ಹೆಬ್ಬಾವಿನ (Carpet Python) ಜೊತೆ ಆಟವಾಡುತ್ತಿರುವ ವಿಡಿಯೋ ನೋಡುಗರ ಹೃದಯ ಬಡಿತವನ್ನು ಹೆಚ್ಚು ಮಾಡುತ್ತಿದೆ. ಹೆಬ್ಬಾವು ಮುಂದಕ್ಕೆ ಹೋಗ್ತಿದ್ದರೂ ಬಾಲಕಿ ಅದನ್ನು ಹಿಡಿದು ಎಳೆಯುತ್ತಿರೋದನ್ನು ವಿಡಿಯೋದಲ್ಲಿ ನೋಡಬಹುದು.
View this post on Instagram


A post shared by Ariana (@snakemasterexotics)


ಈ ವಿಡಿಯೋವನ್ನು snakemasterexotics ಎಂಬ ಇನ್ ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಳ್ಳಲಾಗಿದೆ. ಇದುವರೆಗೂ ವಿಡಿಯೋ 5 ಲಕ್ಷಕ್ಕೂ ಅಧಿಕ ವ್ಯೂವ್ ಗಳನ್ನು ಪಡೆದುಕೊಂಡಿದ್ದು, 44 ಸಾವಿರಕ್ಕೂ ಹೆಚ್ಚು ಲೈಕ್ಸ್ ಪಡೆದುಕೊಂಡಿದೆ.

ಇದನ್ನೂ ಓದಿ:  Viral News: ಹೀಗೂ ಉಂಟೇ..? ಹಾವು ಓಡಿಸೋಕೆ ಹೋಗಿ 13 ಕೋಟಿ ಮೌಲ್ಯದ ಮನೆಗೆ ಬೆಂಕಿ ಹಚ್ಚಿದ ಭೂಪ

ಇನ್ನು ವಿಡಿಯೋ ನೋಡಿದ ನೆಟ್ಟಿಗರ ಆಶ್ಚರ್ಯ ವ್ಯಕ್ತಪಡಿಸಿ ಕಮೆಂಟ್ ಮಾಡುತ್ತಿದ್ದಾರೆ. ಬಾಲಕಿಯ ಧೈರ್ಯಕ್ಕೆ ನಮ್ಮದೊಂದು ಸಲಾಮ್. ಬಾಲಕಿಗೆ ಮನೆಯಲ್ಲಿ ಸರೀಸೃಪಗಳ ಬಗ್ಗೆ ಮಾಹಿತಿ ನೀಡಿರಬಹುದು ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.
Published by:Mahmadrafik K
First published: