• Home
  • »
  • News
  • »
  • trend
  • »
  • Viral Video: ಹೇ, ಅದು ನನ್ನ ಬೆಡ್ ಎದ್ದೇಳು- ಮಾವುತನ ಜೊತೆ ಆನೆಮರಿಯ ಕ್ಯೂಟ್ ಫೈಟ್! ವಿಡಿಯೋ ವೈರಲ್

Viral Video: ಹೇ, ಅದು ನನ್ನ ಬೆಡ್ ಎದ್ದೇಳು- ಮಾವುತನ ಜೊತೆ ಆನೆಮರಿಯ ಕ್ಯೂಟ್ ಫೈಟ್! ವಿಡಿಯೋ ವೈರಲ್

 ಆನೆ ಮತ್ತು ಮಾಹುತ

ಆನೆ ಮತ್ತು ಮಾಹುತ

ಆನೆ ಮರಿಗಳು ನೋಡಲು ಸಿಕ್ಕಾಪಟ್ಟೆ ಕ್ಯೂಟ್ ಅನಿಸುತ್ತವೆ. ಅದರಲ್ಲೂ ಅವುಗಳ ಮುಗ್ಧತೆ ಮತ್ತು ಅವು ಮಾಡುವ ತುಂಟಾಟ ಇತ್ಯಾದಿಗಳನ್ನು ನೋಡುವುದೇ ಒಂಥರಾ ಮಜಾ. ಪಳಗಿಸಿದ ಆನೆಗಳಂತೂ ಮನುಷ್ಯನೊಂದಿಗೆ ತುಂಬಾ ಆತ್ಮೀಯವಾಗಿರುತ್ತವೆ. ತಮ್ಮ ಅಕ್ಕರೆಯ ಮಾವುತನಿಗೆ ಅವು ಕೀಟಲೆಗಳನ್ನು ಮಾಡಿ ಮಜಾ ಪಡೆಯುವುದುಂಟು. ಅಂತದ್ದೇ ಒಂದು, ಆನೆ ಮರಿ ಮತ್ತು ಅದನ್ನು ಆರೈಕೆ ಮಾಡುವವನ ನಡುವಿನ ಚಿನ್ನಾಟದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಮುಂದೆ ಓದಿ ...
  • Share this:

ಆನೆ (Elephant) ಮರಿಗಳು ನೋಡಲು ಸಿಕ್ಕಾಪಟ್ಟೆ ಕ್ಯೂಟ್ ಅನಿಸುತ್ತವೆ. ಅದರಲ್ಲೂ ಅವುಗಳ ಮುಗ್ಧತೆ (Innocence) ಮತ್ತು ಅವು ಮಾಡುವ ತುಂಟಾಟ (Naughty) ಇತ್ಯಾದಿಗಳನ್ನು ನೋಡುವುದೇ ಒಂಥರಾ ಮಜಾ. ಪಳಗಿಸಿದ ಆನೆಗಳಂತೂ ಮನುಷ್ಯನೊಂದಿಗೆ ತುಂಬಾ ಆತ್ಮೀಯವಾಗಿರುತ್ತವೆ. ತಮ್ಮ ಅಕ್ಕರೆಯ ಮಾವುತನಿಗೆ (Elephant Keeper) ಅವು ಕೀಟಲೆಗಳನ್ನು ಮಾಡಿ ಮಜಾ ಪಡೆಯುವುದುಂಟು. ಅಂತದ್ದೇ ಒಂದು, ಆನೆ ಮರಿ ಮತ್ತು ಅದನ್ನು ಆರೈಕೆ ಮಾಡುವವನ ನಡುವಿನ ಚಿನ್ನಾಟದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗಿದೆ. ಭಾರತೀಯ ಅರಣ್ಯ ಅಧಿಕಾರಿ ಡಾ. ಸಾಮ್ರಾಟ್ ಗೌಡ ಎಂಬವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿರುವ ಈ ವಿಡಿಯೋ (Video) ಈಗಾಗಲೇ 1,50,000 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಕಂಡಿದೆ.


“ಹೇ, ಅದು ನನ್ನ ಹಾಸಿಗೆ. . . ಎದ್ದೇಳು . . “ ಎಂದು ಡಾ. ಗೌಡ ಅವರು ಆ ವಿಡಿಯೋಗೆ ಅಡಿ ಬರಹವನ್ನು ನೀಡಿದ್ದಾರೆ. ಅವರು ಆಗಾಗ ಪ್ರಾಣಿಗಳಿಗೆ ಸಂಬಂಧಿಸಿದ, ಮನಸ್ಸಿಗೆ ಖುಷಿ ನೀಡುವಂತಹ ವಿಡಿಯೋಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ.


ಆ ವಿಡಿಯೋದಲ್ಲಿನ ದೃಶ್ಯ ಹೀಗಿದೆ
ಮರಿ ಆನೆಯೊಂದು ತನ್ನನ್ನು ಕೂಡಿ ಹಾಕಿರುವ ಆವರಣದ ಬೇಲಿಯನ್ನು ಹಾಗೋ ಹೀಗೋ ಮಾಡಿ ಕಷ್ಟದಿಂದ ದಾಟುತ್ತದೆ. ಅಷ್ಟಕ್ಕೂ ಅದು, ಆ ಪರಿ ಅವಸರದಿಂದ ಬೇಲಿ ದಾಟಿಕೊಂಡು ಹೊರಟದ್ದಾದರೂ ಎಲ್ಲಿಗೆ ಗೊತ್ತೇ? ತನ್ನನ್ನು ನೋಡಿಕೊಳ್ಳುವಾತನಿಗೆ ತರಲೇ ಮಾಡಲು! ಬೇಲಿ ದಾಟಿಕೊಂಡು ಸರ ಸರನೇ ನಡೆದುಕೊಂಡು ಹೋಗುವ ಆ ಮರಿ, ಅಲ್ಲಿಯೇ ಸಮೀಪದಲ್ಲಿ ಹಾಸಿಗೆ ಹಾಕಿಕೊಂಡು ಮಲಗಿದ್ದ ಆತನನ್ನು ‘ಎದ್ದೇಳು. . .ಇದು ನನ್ನ ಹಾಸಿಗೆ’ ಎನ್ನುವಂತೆ ಸೊಂಡಿಲಿನಿಂದ ಎಬ್ಬಿಸಲು ಪ್ರಯತ್ನಿಸುತ್ತದೆ. ಅವನನ್ನು ಹಾಸಿಗೆಯಿಂದ ದಬ್ಬಿ, ತಾನು ಅದರಲ್ಲಿ ಮಲಗಲು ಪ್ರಯತ್ನಿಸುತ್ತದೆ.


ಆನೆ ಮರಿಯನ್ನು ತಬ್ಬಿಕೊಂಡು ಮಲಗಿದ ವ್ಯಕ್ತಿ
ಆದರೆ ಆತ ಕೂಡಲೇ ಸೋಲೊಪ್ಪಿಕೊಳ್ಳುವುದಿಲ್ಲ, ತಾನು ಕೂಡ ಅದರಲ್ಲೇ ಮಲಗಲು ಪ್ರಯತ್ನಿಸುತ್ತಾನೆ. ಮತ್ತೆ ಅವನೊಂದಿಗೆ ಹಾಸಿಗೆಗಾಗಿ ನಡೆಯುವ ಜಟಾಪಟಿಯಲ್ಲಿ, ಆನೆ ಮರಿ ಆಯತಪ್ಪಿ, ಅಲ್ಲೇ ಇದ್ದ ಎಲೆಗಳ ರಾಶಿಯ ಕಡೆಗೆ ವಾಲಿ ಬಿದ್ದು, ಆ ರಾಶಿಯಲ್ಲಿ ಮುಖ ತೂರಿಸುತ್ತದೆ. ಆದರೆ ಪ್ರಯತ್ನ ಬಿಡದೆ ಮತ್ತೆ ಹಿಂದಿರುಗುತ್ತದೆ.


ಇದನ್ನೂ ಓದಿ: Blennies Fish: ನೀರ ಬಿಟ್ಟು ನೆಲದ ಮೇಲೆ ಮೀನು ಬದುಕದು! ಆದ್ರೆ ಈ ಮೀನು ನೆಲವ ಬಿಟ್ಟು ನೀರಲ್ಲಿ ಬದುಕಲ್ವಂತೆ!


ಕೊನೆಗೂ ಆ ವ್ಯಕ್ತಿ ಆನೆ ಮರಿಯ ಜೊತೆ ತನ್ನ ಹಾಸಿಗೆಯನ್ನು ಹಂಚಿಕೊಳ್ಳಲು ಒಪ್ಪುತ್ತಾನೆ. ವಿಡಿಯೋದ ಕೊನೆಯಲ್ಲಿ ಆತ ಅದೇ ಹಾಸಿಗೆಯಲ್ಲಿ, ಆನೆ ಮರಿಯನ್ನು ತಬ್ಬಿಕೊಂಡು ಮಲಗಿರುವುದನ್ನು ಕಾಣಬಹುದು.


ಆನೆ ಮತ್ತು ಮಾವುತನ ನಡುವಿನ ಒಡನಾಟ
ಆನೆ ಮತ್ತು ಮನುಷ್ಯನ ನಡುವಿನ ಸ್ನೇಹ ಮತ್ತು ಆತ್ಮೀಯ ಒಡನಾಟದ ಈ ಸುಂದರ ವಿಡಿಯೋವನ್ನು ನೆಟ್ಟಿಗರು ಸಿಕ್ಕಾಪಟ್ಟೆ ಇಷ್ಟಪಟ್ಟಿದ್ದಾರೆ. “ಇದು ಎಂದೆಂದಿಗೂ ಅತ್ಯಂತ ಸಿಹಿಯಾದ ಸಂಗತಿ” ಎಂದು ಒಬ್ಬ ಟ್ವಿಟ್ಟರ್ ಬಳಕೆದಾರ ಪ್ರತಿಕ್ರಿಯೆ ನೀಡಿದ್ದರೆ, ಇನ್ನೊಬ್ಬ ಬಳಕೆದಾರ, “ಪುಣ್ಯಕ್ಕೆ ಅದು ಅವನ ಮೇಲೆ ಕೂತುಕೊಳ್ಳಲಿಲ್ಲ” ಎಂದು ತಮಾಷೆ ಮಾಡಿದ್ದಾರೆ. “ಈ ಮರಿ ಆನೆಗೆ ಎಂತಹ ವ್ಯಕ್ತಿತ್ವ ಇದೆಯೆಂದರೆ. . .ಅದರದ್ದೇ ಟಿವಿ ಶೋ ಇರಬೇಕು. . .ನಾನು ಬೆಳಗಿನ ಕಾರ್ಟೂನ್‍ಗಳ ಬಗ್ಗೆ ಯೋಚಿಸುತ್ತಿದ್ದೇನೆ” ಎಂದು ಮತ್ತೊಬ್ಬರು ಬರೆದುಕೊಂಡಿದ್ದಾರೆ.


ಇದನ್ನೂ ಓದಿ: Viral Video: ವ್ಯಕ್ತಿಯನ್ನು ಹಿಂಬಾಲಿಸಿಕೊಂಡು ಬಂದ ಅಳಿಲುಗಳು, ನಮಗೆ ತುಂಬಾ ಹೊಟ್ಟೆ ಕಿಚ್ಚಾಗುತ್ತಿದೆ ಎಂದ ನೆಟ್ಟಿಗರು!


ಅಷ್ಟೇ ಅಲ್ಲ, “ ಮೂಖ ಪ್ರಾಣಿಗಳನ್ನು ಸಾಯಿಸಬಾರದು, ಅವುಗಳ ಜೊತೆ ಸ್ನೇಹ ಮಾಡಿ, ನಿಮಗೆ ಜನರಿಗಿಂತ ಹೆಚ್ಚು ಬೆಂಬಲ ನೀಡುತ್ತವೆ” ಎಂದು ನೆಟ್ಟಿಗರೊಬ್ಬರು ಸಲಹೆ ನೀಡಿದ್ದರೆ, ಇನ್ನೊಬ್ಬರು “ಆನೆ ಈ ಭೂಮಿಯ ಮೇಲಿನ ಅತ್ಯಂತ ಸಂವೇದನಾಶೀಲ ಪ್ರಾಣಿ, ಅದನ್ನು ಉಳಿಸುವ ಜವಾಬ್ಧಾರಿ ನಮ್ಮ ಮೇಲಿದೆ” ಎಂದು ಅಭಿಪ್ರಾಯಪಟ್ಟಿದ್ದಾರೆ. “ಈ ಮರಿ ಆನೆಗಿಂದ ಸುಂದರವಾದದ್ದು ಜಗತ್ತಿನಲ್ಲಿ ಇನ್ನೇನಾದರೂ ಇದೆಯೇ?” ಎಂದು ಒಬ್ಬರು ಪ್ರಶ್ನಿಸಿದ್ದರೆ, “ ಎಲ್ಲಾ ರೀತಿಯ ಪ್ರಾಣಿಗಳಲ್ಲಿ, ಆನೆ ಮರಿಗಳು ಅತ್ಯಂತ ತುಂಟರಾಗಿರುತ್ತವೆ...” ಎಂದಿದ್ದಾರೆ ಮತ್ತೊಬ್ಬ ಸಾಮಾಜಿಕ ಬಳಕೆದಾರ.

Published by:Ashwini Prabhu
First published: