Fake News: ಕಳೆದ ವರ್ಷ ಭಾರೀ ಸುದ್ದಿ ಮಾಡಿದ್ದ ಈ ವಿಚಾರಗಳೆಲ್ಲಾ ಸುಳ್ಳು! ನೀವೂ ನಂಬಿದ್ರಾ?

ಕೆಲವೊಮ್ಮೆ ಮನರಂಜನೆಗಾಗಿ ಸೃಷ್ಟಿಸಿದ ಕೆಲ ವಿಷಯಗಳು ಸಾಕಷ್ಟು ಗಂಭೀರ ಪರಿಸ್ಥಿತಿಯನ್ನು ತಂದೊಡ್ಡುತ್ತವೆ. ಕೋವಿಡ್ ಲಸಿಕೆ ಪಡೆದ ವ್ಯಕ್ತಿಗಳು ಚುಂಬಕಗಳಾಗಿ ಪರಿವರ್ತಿತರಾಗುತ್ತಿದ್ದಾರೆಂಬ ತಮಾಷೆಯ ವಿಷಯ ಅತಿ ಬೇಗನೆ ಹರಡಿತ್ತು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಇಂದು ತಂತ್ರಜ್ಞಾನ (Technology)ಬಹಳ ಮುಂದುವರೆದಿದೆ. ಅದರಲ್ಲೂ ವಿಶೇಷವಾಗಿ ಕಂಪ್ಯೂಟರ್ ಗ್ರಾಫಿಕ್ಸ್‌ಗೆ (Computer graphics) ಸಂಬಂಧಿಸಿದಂತೆ ಅತ್ಯಾಧುನಿಕ ತಂತ್ರಾಂಶಗಳು ಲಭ್ಯವಿದೆ. ಹಿಂದೊಮ್ಮೆ 90ರ ದಶಕಗಳಲ್ಲಿ ಯಾವುದಾದರೂ ಚಿತ್ರ ಅಥವಾ ಟಿವಿ ಕಾರ್ಯಕ್ರಮದಲ್ಲಿ ದೊಡ್ಡದಾದ ವಿಚಿತ್ರ ಜೀವಿಯನ್ನು (Strange creature) ಅಥವಾ ರಕ್ಕಸರನ್ನು ಪರದೆಯ ಮೇಲೆ ( Monster On Screen) ಮೂಡಿಸಲು (Struggled) ಹೆಣಗಾಡಬೇಕಾಗುತ್ತಿತ್ತು. ಹಾಗೆ ಮಾಡಿದರೂ ಸಹ ಅಂತಿಮ ಫಲಿತಾಂಶ ತೃಪ್ತಿಕರವಾಗಿರುತ್ತಿರಲಿಲ್ಲ.

ನಕಲಿ ಸುದ್ದಿ ವೈರಲ್
ಆದರೆ, ಇಂದು ಕಾಲ ಬದಲಾಗಿದೆ. ಏನನ್ನಾದರೂ ಸಹ ಅದು ನೈಜವಾಗಿಯೂ ಇದೆಯೇ ಎಂದು ಭಾಸವಾಗುವಂತೆ ಕರಾರುವಕ್ಕಾಗಿ ಕಂಪ್ಯೂಟರ್ ಮೂಲಕ ಮೂಡಿಸಬಹುದು. ಈ ರೀತಿಯ ತಂತ್ರಜ್ಞಾನ ಬಳಸಿಕೊಂಡೇ ಕೆಲ ಕಿಡಿಗೇಡಿಗಳು ಜನರು ಅಚ್ಚರಿಪಡುವಂತೆ ಕೆಲವೊಮ್ಮೆ ಊಹಿಸಲಾಗದ ರೀತಿಯಲ್ಲಿ ರಚನೆಗಳನ್ನು ಸೃಷ್ಟಿಸಿ ನಕಲಿ ಸುದ್ದಿ ಹರಿಬಿಡುತ್ತಾರೆ. ಕಳೆದ ಕೆಲ ವರ್ಷಗಳಲ್ಲಿ ನಾವು ಈ ಕುರಿತು ಸಾಕಷ್ಟು ಕೇಳಿದ್ದೇವೆ. 2021ರ ವರ್ಷವೂ ಸಹ ಹಲವು ನಕಲಿ ಸೃಷ್ಟಿ ಹಾಗೂ ಸುದ್ದಿಗಳು ನೈಜವಾದ ಘಟನೆಗಳಂತೆ ವೈರಲ್ ಆಗಿದ್ದು ಹಲವರ ನಿದ್ದೆಗೆಡಿಸಿದ್ದವು ಎಂದರೂ ತಪ್ಪಾಗಲಾರದು.

ನೀವು ಎಂದಾದರೂ ವಧು ಒಬ್ಬಳು ಪ್ಯಾರಾಗ್ಲೈಡಿಂಗ್ ಮಾಡುತ್ತ ತನ್ನದಲ್ಲದ ಬೇರೆಯವರು ಮದುವೆಯಾಗುತ್ತಿದ್ದ ಜಾಗಕ್ಕೆ ತಪ್ಪಾಗಿ ಬಂದಿಳಿದು ಅಲ್ಲಿದ್ದ ವರನನ್ನು ವರಿಸಿದ್ದನ್ನು ಕೇಳಿದ್ದೀರಾ? ಅಥವಾ ಪ್ರೇಮಿಯೊಬ್ಬ ತನ್ನ ಪ್ರಿಯತಮೆಗೆ ತನ್ನ ಹಲ್ಲಿನಿಂದಲೇ ಮಾಡಲ್ಪಟ್ಟ ಆಭರಣವನ್ನು ಉಡುಗೊರೆಯಾಗಿ ನೀಡುತ್ತಿರುವುದನ್ನು ಕಂಡಿದ್ದೀರಾ?

ಇದನ್ನೂ ಓದಿ: Most Searched Fake News 2021: ನಿಜವಾಗ್ಲೂ ಈ ವರ್ಷದ ಸುಳ್ಳು ಸುದ್ದಿ ಅಂದ್ರೆ ಇದೆ! ಜನರು ಹುಡಕಾಡಿದ್ದು ಇದನ್ನೇ!

2021ರಲ್ಲಿ ನಡೆದ ಚಿತ್ರ-ವಿಚಿತ್ರ ಘಟನೆ
ಇಲ್ಲವೆ, ಬಿಹಾರ ರಾಜ್ಯದ ದರ್ಭಂಗಾದಲ್ಲಿ ವಿಚಿತ್ರ ಜೀವಿಯೊಂದು ಕಂಡುಬಂದಿದ್ದರಿಂದ ಹಿಡಿದು ಮಂಗಳೂರಿನಲ್ಲಿ ಕಾಣಿಸಲ್ಪಟ್ಟ ರೋಧಿಸುತ್ತಿರುವ ಮತ್ಸ್ಯಕನ್ಯೆಯರ ಬಗ್ಗೆ ಕೇಳಿದ್ದೀರಾ..? ಇವೆಲ್ಲವೂ 2021ರಲ್ಲಿ ನಡೆದ ಚಿತ್ರ-ವಿಚಿತ್ರ ಘಟನೆಗಳಾಗಿದ್ದು ಇಂದಿಗೂ ಜನರು ಆ ಕುರಿತು ಮರೆತಿಲ್ಲ.
ಕೋವಿಡ್‌ನ ಹಲವು ರೂಪಾಂತರಿಗಳ ರೀತಿಯಲ್ಲೇ ತಪ್ಪಾದ ಈ ವರ್ಷದಲ್ಲಿ ತಪ್ಪಾದ/ನಕಲಿ ಮಾಹಿತಿಯೂ ಸಹ ಅಲ್ಫಾ, ಬೀಟಾ, ಡೆಲ್ಟಾ ರೂಪಗಳಲ್ಲಿ ನಮ್ಮನ್ನು ತಲುಪಿ ನಮ್ಮ ನಿದ್ದೆಗೆಡಿಸಿದ್ದು ಸುಳ್ಳಲ್ಲ. ಹಾಗಾದರೆ ಬನ್ನಿ ಕೆಲ ಪ್ರಮುಖ ನಕಲಿ ಸುದ್ದಿಗಳ ಬಗ್ಗೆ ತಿಳಿಯೋಣ. ಇದರಲ್ಲಿ ಗೂಗಲ್ ನ ಸತ್ಯ ಪರಿಶೀಲಕ ವ್ಯವಸ್ಥೆಯ ನೆರವನ್ನು ಪಡೆಯಲಾಗಿದೆ ಹಾಗೂ ಇದಕ್ಕೆ ಸಂಬಂಧಿಸಿದಂತೆ ಹಲವು ಘಟಾನುಘಟಿ ರಾಜಕೀಯ ಹಾಗೂ ಮಾಧ್ಯಮದ ಕೆಲ ಪ್ರಭಾವಿಗಳ ಹೆಸರು ಹಲವು ಬಾರಿ ಇದರಲ್ಲಿ ಉಲ್ಲೇಖಿಸಲ್ಪಟ್ಟಿದೆ.

ದರ್ಭಂಗಾದಲ್ಲಿ ವಿಚಿತ್ರ ಜೀವಿ
ಯಾಸ್ ಚಂಡಮಾರುತದ ಸಂದರ್ಭದಲ್ಲಿ ಬಿಹಾರ ರಾಜ್ಯದ ದರ್ಭಂಗಾದಲ್ಲಿ ಆಗಸದಿಂದ ವಿಚಿತ್ರವಾದ ಜೀವಿಯೊಂದು ಭೂಮಿಗೆ ಬಂದಪ್ಪಳಿಸಿದ ವಿಷಯಯವು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಆದರೆ ನಂತರ ಗೊತ್ತಾಯಿತು ಇದೊಂದು ಸಿಲಿಕಾನ್‌ನಿಂದ ಮಾಡಲ್ಪಟ್ಟ ಆಟಿಕೆಯಾಗಿತ್ತೆಂದು.
ಈ ಮಧ್ಯೆ ಹಾರುತ್ತಿದ್ದ ವಿಮಾನಿನ ರೆಕ್ಕೆಯೊಂದರ ಮೇಲೆ ಅದರ ಟರ್ಬೈನ್ ಬಳಿ ವ್ಯಕ್ತಿಯೊಬ್ಬ ಕುಳಿತು ಪ್ರಾರ್ಥನೆ ಮಾಡುತ್ತಿದ್ದ ವಿಡಿಯೋ ವೈರಲ್ ಆಗಿತ್ತು. ಈ ದೃಶ್ಯ ಎಂಥವರೂ ಸಹ ಒಂದು ಕ್ಷಣ ತಬ್ಬಿಬ್ಬಾಗುವಂತೆ ಮಾಡಿತ್ತು. ಆದರೆ ನಂತರ ಗೊತ್ತಾದ ಸತ್ಯವೆಂದರೆ ವಿಯೆಟ್ನಾಮ್‌ನ ಗ್ರಾಫಿಕ್ ಡಿಸೈನರ್ ಒಬ್ಬನ ಅದ್ಭುತ ಕೈಚಳಕ ಇದಾಗಿತ್ತೆಂದು.

ಮಂಗಳೂರಿನಲ್ಲಿ ಕಡಲ ತಡಿಯ ಮೇಲೆ ರೋಧಿಸುತ್ತಿದ್ದ ಮತ್ಸ್ಯಕನ್ಯೆಯರ ದೃಶ್ಯ ನಿಜವಾಗಿಯೂ ಶ್ರೀಲಂಕಾದಲ್ಲಿ ಸಮುದ್ರ ಸಂರಕ್ಷಣೆಯ ಕುರಿತು ಚಿತ್ರೀಕರಿಸಲಾದ ದೃಶ್ಯವಾಗಿತ್ತು.

ಕಾಲ್ಪನಿಕ ಕಥೆ
ನೀವು ತನು ವೆಡ್ಸ್ ಮನು ಚಿತ್ರದ ಹೆಸರನ್ನು ಕೇಳಿರಬಹುದಲ್ಲವೆ? ಆದರೆ ತನು ವೆಡ್ಸ್ ನಾಟ್ ಮನು ಆದ ಘಟನೆ ಗೊತ್ತೆ? ಗ್ವಾಲಿಯರ್‌ನಲ್ಲಿ ನಡೆದಿತ್ತೆನ್ನಲಾದ ಈ ಘಟನೆಯು ಕೆಲವು ವೆಬ್ ಸೈಟುಗಳಲ್ಲಿ ರಾರಾಜಿಸಿ ಜನರಲ್ಲಿ ಗೊಂದಲ ಮೂಡಿಸಿದ್ದವು. ಈ ಪ್ರಕರಣದಲ್ಲಿ ವಧು ಒಬ್ಬಳು ಪ್ಯಾರಾ ಗ್ಲೈಡಿಂಗ್ ಮಾಡುತ್ತ ತನ್ನ ಮದುವೆ ಸ್ಥಳವಲ್ಲದ ಆದರೆ ಇನ್ನೊಂದು ಜೋಡಿ ಮದುವೆ ನಡೆಯಬೇಕಾಗಿದ್ದ ಸ್ಥಳಕ್ಕೆ ತಪ್ಪಾಗಿ ಬಂದು ಸೇರಿ ಅಲ್ಲಿದ್ದ ವರನನ್ನು ಮದುವೆಯಾಗುತ್ತಾಳೆ. ಇದು ನಿಜಕ್ಕೂ ಘಟಿಸಿತೆ ಎಂಬುವಷ್ಟರ ಮಟ್ಟಿಗೆ ಸುದ್ದಿಯಾಯಿತು. ಆದರೆ ಇದೊಂದು ಕಾಲ್ಪನಿಕ ಕಥೆಯಾಗಿತ್ತಷ್ಟೆ.

ಒಲಿಂಪಿಕ್ ಕ್ರೀಡಾ ಆಯೋಜಕರು ಕೋವಿಡ್ ಸೋಂಕನ್ನು ಗಮನದಲ್ಲಿರಿಸಿ ಆ್ಯಂಟಿ-ಸೆಕ್ಸ್ ಹಾಸಿಗೆಗಳನ್ನು ಸಿದ್ಧಪಡಿಸಿದರೇ..? ಹೀಗೊಂದು ಪ್ರಶ್ನೆ ಒಲಿಂಪಿಕ್ ಕ್ರೀಡೆಯ ಸಮಯದಲ್ಲಿ ಇಂಟರ್ನೆಟ್‌ನಲ್ಲಿ ಸಾಕಷ್ಟು ಹರಿದಾಡಿತ್ತು. ಆದರೆ, ಇದು ಸುಳ್ಳಾಗಿತ್ತು. ಏಕೆಂದರೆ 400 ಪೌಂಡುಗಳಷ್ಟು ಭಾರ ಹೊರುವ ಸಾಮರ್ಥ್ಯದ ಈ ಹಾಸಿಗೆಗಳನ್ನು ಕೋವಿಡ್ ಮುಂಚೆಯೇ ವಿನ್ಯಾಸ ಮಾಡಲಾಗಿತ್ತು.

ಡೈನಮೈಟ್ ಹಾಡು
ಮುಸ್ಲಿಮ್ ವ್ಯಕ್ತಿಯೊಬ್ಬ ಉತ್ತರ ಪ್ರದೇಶದಲ್ಲಿ ನಸುಕಿನ ನಾಲ್ಕು ಗಂಟೆಗೆ ಅಜಾನ್ ಹೇಳುವ ಸಮಯದಲ್ಲಿ ತಪ್ಪಾಗಿ ಡೈನಮೈಟ್ ಹಾಡು ಜೋರಾಗಿ ಕೇಳುವಂತೆ ಮಾಡಿದ ಹಾಗೂ ತದನಂತರ ಬಂಧಿಸಲ್ಪಟ್ಟ ಎಂಬ ಸುದ್ದಿ ಹರಿದಾಡಿತ್ತು. ಇದೂ ಸಹ ಕಾಲ್ಪನಿಕ ಸುದ್ದಿಯಷ್ಟೇ ಆಗಿತ್ತು.

ನಮಗೆಲ್ಲರಿಗೂ ಗೊತ್ತಿರುವ ಹಾಗೆ ಸಂಸ್ಕೃತ ಭಾಷೆಯು ಜಗತ್ತಿನ ಅತಿ ಪುರಾತನ ಭಾಷೆಗಳಲ್ಲೊಂದಾಗಿದ್ದು ಆ ಭಾಷೆಯ ಬಗ್ಗೆ ನಮಗೆ ಹೆಮ್ಮ ಇದೆ. ಇದನ್ನು ತನ್ನ ವಿಕೃತ ಆಸೆ ತೀರಿಸಿಕೊಳ್ಳಲು ಬಯಸಿದ ವ್ಯಕ್ತಿಯೊಬ್ಬ ಐಐಟಿ ಚಿನ್ನದ ಪದಕ ವಿಜೇತ ಪದವಿಧರನೊಬ್ಬ ಸಂದೇಶ ಕಳುಹಿಸುವ ಆ್ಯಪ್‌ ಒಂದನ್ನು ಸಂಸ್ಕೃತದಲ್ಲೇ ಕೋಡ್ ಮಾಡಿ ಸೃಷ್ಟಿಸಿದ್ದಾನೆಂದು ನಕಲಿ ಸುದ್ದಿ ಹರಿಬಿಟ್ಟಿದ್ದು ಬಹು ಜನರಿಗೆ ಬಹುಶಃ ಗೊತ್ತಿರಲಿಕ್ಕಿಲ್ಲ.

ಇದನ್ನೂ ಓದಿ: Covid-19: ಕೋವಿಡ್ ಕುರಿತಾದ ಫೇಕ್​ ನ್ಯೂಸ್​ ಹಂಚಿಕೆಯಲ್ಲಿ ಭಾರತದ್ದೇ ಮೇಲುಗೈ; ಅಧ್ಯಯನ

ಊಟದಲ್ಲಿ ಮೂತ್ರ ಮಿಶ್ರಣ
ಗುವಾಹಟಿಯಲ್ಲಿ ಬೀದಿ ಬದಿಯ ಊಟದ ವ್ಯಾಪಾರಿಯೊಬ್ಬ ಊಟದಲ್ಲಿ ತನ್ನ ಮೂತ್ರ ಮಿಶ್ರಣ ಮಾಡಿ ಮಾರುತ್ತಿದ್ದನೆಂಬ ನಕಲಿ ಸುದ್ದಿ ಸಮುದಾಯಗಳಲ್ಲಿ ವೈಷಮ್ಯ ಉಂಟಾಗುವಂತಹ ಪರಿಸ್ಥಿತಿ ನಿರ್ಮಿಸಿತ್ತು. ನೀವು "ಗಿಫ್ಟ್ ಆಫ್ ಮಾಗಿ" ಕಥೆಯ ಬಗ್ಗೆ ಕೇಳಿರಲೇ ಬೇಕಲ್ಲವೆ? ಪ್ರೇಮಿಯೊಬ್ಬ ತನ್ನ ಪ್ರಿಯತಮೆಗೆ ಉಡುಗೊರೆಯಾಗಿ ತನ್ನ ಹಲ್ಲಿನಿಂದ ಮಾಡಲ್ಪಟ್ಟ ಆಭರಣ ನೀಡಿದ್ದು!

ಕೆಲವೊಮ್ಮೆ ಮನರಂಜನೆಗಾಗಿ ಸೃಷ್ಟಿಸಿದ ಕೆಲ ವಿಷಯಗಳು ಸಾಕಷ್ಟು ಗಂಭೀರ ಪರಿಸ್ಥಿತಿಯನ್ನು ತಂದೊಡ್ಡುತ್ತವೆ. ಕೋವಿಡ್ ಲಸಿಕೆ ಪಡೆದ ವ್ಯಕ್ತಿಗಳು ಚುಂಬಕಗಳಾಗಿ ಪರಿವರ್ತಿತರಾಗುತ್ತಿದ್ದಾರೆಂಬ ತಮಾಷೆಯ ವಿಷಯ ಅತಿ ಬೇಗನೆ ಇಂಟರ್ನೆಟ್ ಹಾಗೂ ವಾಟ್ಸಾಪ್ ಗಳಲ್ಲಿ ಕಾಡ್ಗಿಚ್ಚಿನಂತೆ ಹರಡಿತ್ತು. ಅಲ್ಲದೆ ಕೆಲವೆಡೆ ವ್ಯಾಕ್ಸಿನ್ ಪಡೆದವರು ಜಾಂಬಿಗಳಾಗಿ ಪರಿವರ್ತಿತರಾಗುತ್ತಿದ್ದು ನರಭಕ್ಷಕರಾಗುತ್ತಿದ್ದಾರೆಂಬ ಸುದ್ದಿ ಸಾಕಷ್ಟು ಜನರಲ್ಲಿ ಭಯದ ವಾತಾವರಣ ಮೂಡಿಸಿದ್ದು ಸುಳ್ಳಲ್ಲ.
Published by:vanithasanjevani vanithasanjevani
First published: