Vedic Education: ತೆಲಂಗಾಣದಲ್ಲಿ ಸಿದ್ಧವಾಗಿದೆ ವೇದ ಕಾಲದ ಗುರುಕುಲ, ಇಲ್ಲಿ ಯಾವ್ಯಾವ ವಿದ್ಯೆ ಹೇಳಿಕೊಡ್ತಾರೆ ನೋಡಿ

ಆಂಧ್ರಪ್ರದೇಶದ ತಿರುಮಲದಲ್ಲಿ ಕೇವಲ ನಾಲ್ಕು ವೇದಗಳನ್ನು ಮಾತ್ರ ಬೋಧಿಸಲಾಗುತ್ತಿದ್ದು, ಅದು ಇಲ್ಲಿಯವರೆಗೆ ಬ್ರಾಹ್ಮಣರಿಗೆ ಮಾತ್ರ ಮೀಸಲಾಗಿದೆ. ಉಳಿದ ಶಾಲೆಗಳಲ್ಲೂ ಇದೇ ಪರಿಸ್ಥಿತಿ ಇದೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
ಡ್ವೇನ್ ಡಿಜೆ ಬ್ರಾವೊ(Dwayne DJ Bravo) ಅವರೊಂದಿಗೆ ಜನಪ್ರಿಯ ‘ಚಾಂಪಿಯನ್’ ಪಾಪ್ ಆಲ್ಬಂ ನಿರ್ಮಿಸಿದ್ದ ವ್ಯಕ್ತಿಯೊಬ್ಬ ಇದೀಗ ಮಕ್ಕಳಿಗೆ ವೇದ ಮತ್ತು ಉಪನಿಷತ್ತುಗಳನ್ನು ಬೋಧಿಸಲು ಮುಂದಾಗಿದ್ದಾರೆ. ವಿಕ್ರಂ ರಾಜು (Vikram Raju) ಎಂಬ ವ್ಯಕ್ತಿ ಇದಕ್ಕಾಗಿ ವಿಶೇಷ ವೇದಗಳ ಮಂಡಳಿಯನ್ನು ಸ್ಥಾಪಿಸುವ ಪ್ರಯತ್ನದಲ್ಲಿದ್ದಾರೆ. ಅವರು ಸರಿಸುಮಾರು 8 ವರ್ಷಗಳ ಕಾಲ ಹದಿಹರೆಯದ ಮಕ್ಕಳಿಗೆ ಬೋಧಿಸಲು ವಿಶಿಷ್ಟ ಪಠ್ಯಕ್ರಮವೊಂದನ್ನು ರಚಿಸುವಲ್ಲಿ ತೊಡಗಿಸಿಕೊಂಡಿದ್ದರು. ಈ ಪೈಕಿ ಯಜುರ್ವೇದ(Yajurveda) ಮತ್ತು ಅಥರ್ವ ವೇದಗಳಲ್ಲಿದ್ದ ವಿಜ್ಞಾನ ಮತ್ತು ತಂತ್ರಜ್ಞಾನವನ್ನು(Technology) ಮಕ್ಕಳಿಗೆ ಬೋಧಿಸುವುದು ಅವರ ಉದ್ದೇಶವಾಗಿದೆ.

ಸಮರಕಲೆ ಅಧ್ಯಾಯ
ಅವರು ಪುರಾಣಗಳಲ್ಲಿದ್ದ ವೇದ ಸಾರಗಳು, ಆ ಕಾಲಘಟ್ಟದ ವಿವಿಧ ಬಗೆಯ ಕಲೆಗಳು ಹಾಗೂ ಪ್ರಾಚೀನ ಕಾಲದಲ್ಲಿನ ಕ್ರೀಡೆಗಳು ಹಾಗೂ ಸಮರಕಲೆ ಅಧ್ಯಾಯಗಳನ್ನು ತಮ್ಮ ಪಠ್ಯಕ್ರಮದಲ್ಲಿ ಅಳವಡಿಸಿದ್ದಾರೆ. ಅವರು ಭಾರತೀಯ ವೇದಗಳ ಶಾಲೆ ಎಂಬ ಶೈಕ್ಷಣಿಕ ಸಂಸ್ಥೆಯನ್ನು ಸ್ಥಾಪಿಸಿದ್ದು, ಈ ತಲೆಮಾರಿನ ಮಕ್ಕಳ ಬಳಿಗೆ ವೇದಗಳು ಹಾಗೂ ಉಪನಿಷದ್‍ಗಳನ್ನು ತೆಗೆದುಕೊಂಡು ಹೋಗುವ ಇರಾದೆ ಹೊಂದಿದ್ದಾರೆ. ಈ ಶಾಲೆಯನ್ನು ದೇಶದ ವಿವಿಧ ಭಾಗಗಳಲ್ಲಿ ಹಾಗೂ ಇತರ ದೇಶಗಳಲ್ಲಿ ವೇದದ ಕುರಿತು ಸಮಗ್ರ ಸಂಶೋಧನೆ ನಡೆಸಿದ ನಂತರ ಸ್ಥಾಪಿಸಿದ್ದಾರೆ.

ಬ್ರಾಹ್ಮಣ ವಿದ್ವಾಂಸರ ಭೇಟಿ
ನನಗೆ ಇನ್ನಾವುದೇ ಆಸಕ್ತಿಗಳಿಲ್ಲ. ಹೀಗಾಗಿ ನಾನು ಪ್ರಾಚೀನ ಗ್ರಂಥಗಳು, ಪುರಾಣಗಳು ಹಾಗೂ ವೇದಗಳ ಕುರಿತು ಬಾಲ್ಯಾವಸ್ಥೆಯಿಂದಲೂ ಮೋಹಿತನಾಗಿದ್ದೇನೆ. ವೇದಗಳನ್ನು ಅರ್ಥ ಮಾಡಿಕೊಳ್ಳುವ ಮೂಲಕ ಪ್ರಾಚೀನ ಜ್ಞಾನ ಪಡೆಯುವ ನಿಟ್ಟಿನಲ್ಲಿ ತಮಿಳುನಾಡು ದೇವಾಲಯಗಳಿಂದ ಮೊದಲ್ಗೊಂಡು ಕಾಶ್ಮೀರದವರೆಗೆ ದೇಶದ ಎಲ್ಲ ಭಾಗಗಳಲ್ಲಿರುವ ಬ್ರಾಹ್ಮಣ ವಿದ್ವಾಂಸರನ್ನು ಭೇಟಿಯಾದೆ.

ನಾನು ವೇದಗಳ ಕುರಿತು ಅಪಾರವಾಗಿ ಅಧ್ಯಯನ ನಡೆಸಿದೆ. ಈ ಪ್ರಕ್ರಿಯೆಯಲ್ಲಿ ವೇದಗಳು ಹಾಗೂ ಸಂಸ್ಕೃತವನ್ನು ಬೋಧಿಸುತ್ತಿರುವ ಹಲವಾರು ವಿಶ್ವವಿದ್ಯಾಲಯಗಳಿರುವ ಯೂರೋಪ್‍ನಿಂದ ಏಷ್ಯಾ ದೇಶಗಳವರೆಗೆ ಪ್ರಯಾಣ ಕೈಗೊಂಡೆ” ಎಂದು ಅವರು ನ್ಯೂಸ್ 18ಗೆ ತಿಳಿಸಿದ್ದಾರೆ.

ಇದನ್ನೂ ಓದಿ: Silver Ring: ಬೆಳ್ಳಿ ಉಂಗುರ ಧರಿಸುವುದರಿಂದ ಎಷ್ಟೆಲ್ಲಾ ಪ್ರಯೋಜನ ಗೊತ್ತಾ?

ತಿರುಮಲದಲ್ಲಿ ಕೇವಲ ನಾಲ್ಕು ವೇದ
ಆಂಧ್ರಪ್ರದೇಶದ ತಿರುಮಲದಲ್ಲಿ ಕೇವಲ ನಾಲ್ಕು ವೇದಗಳನ್ನು ಮಾತ್ರ ಬೋಧಿಸಲಾಗುತ್ತಿದ್ದು, ಅದು ಇಲ್ಲಿಯವರೆಗೆ ಬ್ರಾಹ್ಮಣರಿಗೆ ಮಾತ್ರ ಮೀಸಲಾಗಿದೆ. ಉಳಿದ ಶಾಲೆಗಳಲ್ಲೂ ಇದೇ ಪರಿಸ್ಥಿತಿ ಇದೆ. ಆದರೆ, ಭಾರತೀಯ ವೇದಗಳ ಶಾಲೆಯಲ್ಲಿ ವೇದಗಳ ಕುರಿತು ಆಸಕ್ತಿಯಿರುವ ಯಾರೇ ಆದರೂ ಜಾತಿಯನ್ನು ಹೊರತುಪಡಿಸಿ ಕಲಿಕೆಗೆ ಸೇರಿಕೊಳ್ಳಬಹುದು. ನಾವು ಸದ್ಯ ವೇದಗಳ ಮಂಡಳಿಯೊಂದನ್ನು ಸ್ಥಾಪಿಸುವ ಪ್ರಯತ್ನದಲ್ಲಿದ್ದೇವೆ” ಎಂದು ಅವರು ಹೇಳಿಕೊಂಡಿದ್ದಾರೆ.

ಸಂಗೀತ ಚಿಕಿತ್ಸೆ
ವಿಕ್ರಂ ರಾಜು ಸ್ಥಾಪಿಸುತ್ತಿರುವ ವೇದಗಳ ಶಾಲೆಯಲ್ಲಿ ಪ್ರಾಚೀನ ಭಾರತೀಯ ಕ್ರೀಡೆಗಳು ಹಾಗೂ ಗಟ್ಕಾ, ಕಲರಿಪಯಟ್ಟು ಮತ್ತು ಸಿಲಂಭಂ ಒಳಗೊಂಡ ಸಮರ ಕಲೆಗಳನ್ನೂ ಬೋಧಿಸಲಾಗುತ್ತದೆ. ಇದರೊಂದಿಗೆ ವೇದಗಳು, ಉಪನಿಷದ್‍ಗಳು, ಮಂತ್ರಗಳು, ತಂತ್ರಗಳು, ಯಂತ್ರಗಳು, ಪುರಾಣಗಳು, ಶ್ಲೋಕಗಳು ಹಾಗೂ ಪುರಾಣ ಕತೆಗಳಾದ ರಾಮಾಯಣ, ಮಹಾಭಾರತ, ಭಗವದ್ಗೀತೆ, ವೇದ ಕಾಲದ ಗಣಿತ, ಯೋಗ, ಮುದ್ರೆಗಳು, ಚಕ್ರಗಳು, ಧ್ಯಾನ, ನೀತಿ ಕತೆಗಳು, ಗಿಡಮೂಲಿಕೆ ಶಾಸ್ತ್ರ, ಭಾರತೀಯ ಚರಿತ್ರೆ, ಭಾರತೀಯ ಆವಿಷ್ಕಾರಗಳು, ಶಾಸ್ತ್ರೀಯ ನೃತ್ಯಗಳು, ಭಾರತೀಯ ಸಂಗೀತ ಸಾಧನಗಳು ಹಾಗೂ ಸಾಂಪ್ರದಾಯಿಕ ಸಂಗೀತವನ್ನೊಳಗೊಂಡ ಸಂಗೀತ ಚಿಕಿತ್ಸೆ ಕುರಿತು ಬೋಧಿಸಲಾಗುತ್ತದೆ.

ಇದನ್ನೂ ಓದಿ: Kuja Dosha: ಕುಜ ದೋಷದಿಂದಲೇ ವೈವಾಹಿಕ ಸಮಸ್ಯೆ; ಪರಿಹಾರಕ್ಕೆ ಈ ದೇಗುಲಕ್ಕೆ ಭೇಟಿ ನೀಡಿ

ವೇದಗಳ ವಿಶ್ವವಿದ್ಯಾಲಯ ಸ್ಥಾಪನೆ
ಪ್ರಮುಖ ಯೋಜನೆಯ ಪ್ರಕಾರ, ಶಾಲಾ ಆವರಣದಲ್ಲಿ ಸಂಸ್ಕೃತ ಕಲಿಕಾ ಕೇಂದ್ರಗಳೂ ಇರಲಿವೆ. ಇದರೊಂದಿಗೆ ಖುದ್ದು ವಿಕ್ರಂ ರಚಿಸಿರುವ ನಿಯಮಿತ ಪಠ್ಯಕ್ರಮದ ಬೋಧನೆಯೂ ನಡೆಯಲಿದೆ. ಅವರೀಗ ತೆಲಂಗಾಣ ಸರ್ಕಾರ, ಕರ್ನಾಟಕ ಸರ್ಕಾರ ಹಾಗೂ ಆಂಧ್ರಪ್ರದೇಶ ಸರ್ಕಾರಗಳೊಂದಿಗೆ ವೇದಗಳ ವಿಶ್ವವಿದ್ಯಾಲಯ ಸ್ಥಾಪನೆ ಕುರಿತು ಮಾತುಕತೆ ನಡೆಸುತ್ತಿದ್ದಾರೆ.

ಇತ್ತೀಚೆಗೆ ಕರ್ನಾಟಕ ಸರ್ಕಾರ ಕೂಡಾ ಬೆಂಗಳೂರಿನ ಮಾಗಡಿ ರಸ್ತೆಯಲ್ಲಿ 350 ಕೋಟಿ ರೂ. ವೆಚ್ಚದ ಸರ್ಕಾರಿ ಸಂಸ್ಕೃತ ವಿಶ್ವವಿದ್ಯಾಲಯ ಸ್ಥಾಪಿಸುವುದಾಗಿ ಘೋಷಿಸಿತ್ತು. ಇದರ ಬೆನ್ನಿಗೇ ವೇದ ಶಾಲೆ ಸ್ಥಾಪನೆಗೆ ತೆಲಂಗಾಣ ಮೂಲದ ವಿಕ್ರಂ ರಾಜು ಮುಂದಾಗಿರುವುದು ಹಲವರ ಅಚ್ಚರಿಗೆ ಮತ್ತು ಮೆಚ್ಚುಗೆಗೆ ಕಾರಣವಾಗಿದೆ.
Published by:vanithasanjevani vanithasanjevani
First published: