Sidharth Shukla: ಹಿಂದಿಯ ಫೇಮಸ್ ಬಾಲಿಕಾ ವಧು ಧಾರವಾಹಿ ನಟರ ಸಾಲು ಸಾಲು ಸಾವು: ಏನಿದು ನಿಗೂಢತೆ?

Balika Vadhu actors who are no more: ಸಿದ್ಧಾರ್ಥ್​​ ಬಾಲಿಕಾ ವಧು ಧಾರವಾಹಿಯಲ್ಲಿ ನಟಿ ಪ್ರತ್ಯುಷಾ ಬ್ಯಾನರ್ಜಿ ಜೊತೆ ನಟಿಸಿದ್ದರು. 2016ರಲ್ಲಿ ಪ್ರತ್ಯುಷಾ ಬ್ಯಾನರ್ಜಿ ಮೃತದೇಹ ಫ್ಯಾನ್​​​​​​​​​ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಇನ್ನು ಕೆಲ ತಿಂಗಳುಗಳ ಹಿಂದೆಯಷ್ಟೇ ಧಾರವಾಹಿಯಲ್ಲಿ ಗಟಾಣಿ ಅಜ್ಜಿ ಪಾತ್ರದಲ್ಲಿ ನಟಿಸಿದ್ದ ಸುರೇಖಾ ಸಿಕ್ರಿ ಮರಣ ಹೊಂದಿದ್ದಾರೆ.

ಬಾಲಿಕಾ ವಧು ಧಾರವಾಹಿಯಲ್ಲಿ ನಟಿದ ಕಲಾವಿದರು

ಬಾಲಿಕಾ ವಧು ಧಾರವಾಹಿಯಲ್ಲಿ ನಟಿದ ಕಲಾವಿದರು

  • Share this:
Sidharth Shukla no more: ಹಿಂದಿ ಕಿರುತೆರೆಗೆ ಇಂದು ಬೆಳ್ಳಂಬೆಳಗ್ಗೆಯೇ ಶಾಕಿಂಗ್​ ನ್ಯೂಸ್​ ಸಿಕ್ಕಿದೆ. ಸುರದ್ರೂಪಿ ನಟ ಸಿದ್ಧಾರ್ಥ ಶುಕ್ಲಾ ಸಣ್ಣ ಸುಳಿವನ್ನೂ ನೀಡದೆ ತಣ್ಣಗೆ ಮಲಗಿ ಬಿಟ್ಟಿದ್ದಾರೆ. ಇನ್ನೂ 40ರ ವಯಸ್ಸು, ಮೊನ್ನೆ ಮೊನ್ನೆಯಷ್ಟೇ ಹಿಂದಿಯ ಬಿಗ್​ಬಾಸ್​ ಸೀಸನ್​ 13ರಲ್ಲಿ ವಿಜೇತರಾಗಿದ್ದರು. ಹಿಂದಿಯ ಕೆಲ ಸಿನಿಮಾಗಳಲ್ಲಿ ಗ್ಯಾಂಡಸಮ್​ ನಟ ಎಲ್ಲರ ಹೃದಯ ಕದಿದ್ದರು. ಅದಕ್ಕೂ ಮುನ್ನ ಹಿಂದಿಯ ಫೇಮಸ್​ ಧಾರವಾಹಿ ಬಾಲಿಕಾ ವಧು ಅಲ್ಲಿ ನಟಿಸಿದ್ದರು. ಬಾಲಿಕಾ ವಧು ಖ್ಯಾತಿಯೇ ಅವರನ್ನು ಯಶಸ್ವಿಯಾಗಿಸಿತ್ತು. ಅವರ ಸಾವಿನ ಬೆನ್ನಲ್ಲೇ ಹಲವು ನಿಗೂಢತೆಗಳು ಬಿಚ್ಚಿಕೊಳ್ಳುತ್ತಿವೆ. ಬಾಲಿಕಾ ವಧು ಧಾರವಾಹಿ ಅದರಲ್ಲಿ ಅಭಿನಯಿಸಿದ ನಟ-ನಟಿಯರಿಗೆ ಸಾಕಷ್ಟು ಖ್ಯಾತಿ ಕೊಟ್ಟಿದೆ. ಆದರೆ ಇತ್ತೀಚೆಗೆ ಆ ಧಾರವಾಹಿಯಲ್ಲಿ ನಟಿಸಿದ ಕಲಾವಿದರು ಒಬ್ಬೊಬ್ಬರಾಗಿ ಸಾವಿನ ಮನೆ ಸೇರುತ್ತಿದ್ದಾರೆ.

ನಿಗೂಢತೆಯೋ? ಕಾಕತಾಳಿಯವೋ? ಯಾರಿಗೂ ಗೊತ್ತಿಲ್ಲ. ಆದರೆ ಇಂದು ಬಾಲಿಕಾ ವಧು ಸಿರಿಯಲ್​​​​​​​​​​ನಲ್ಲಿ ನಟಿಸಿದ ಬಹುತೇಕ ನಟರು ಕಣ್ಮೆರೆಯಾಗಿದ್ದಾರೆ. ಚಿಕ್ಕ ವಯಸ್ಸಿನ ಕಲಾವಿದರು ಮಣ್ಣಲ್ಲಿ ಮಣ್ಣಾಗಿದ್ದಾರೆ. ಯಾವುದೇ ಕಾಯಿಲೆ ಇಲ್ಲ, ಸಣ್ಣ ಜ್ವರವೂ ಇಲ್ಲ. ರಾತ್ರಿ ಎಂದಿನಂತೆ ಮಲಗಿದ ನಟ ಸಿದ್ಧಾರ್ಥ್​ ಶುಕ್ಲಾ ಬೆಳಗ್ಗೆ ಎಂದಿನಂತೆ ಏಳಲೇ ಇಲ್ಲ. ಗಟ್ಟಿಮುಟ್ಟಾಗಿದ್ದ ಅಜಾನುಬಾಹು ಏಕಾಏಕಿ ಹೃದಯಾಘಾದಿಂದ ಅಸುನೀಗಿದ್ದಾರೆ. ನಿನ್ನೆ ಚನ್ನಾಗಿಯೇ ಇದ್ದ ನಟ ಇಂದು ಹೆಣವಾಗಿದ್ದಾರೆ ಎಂದರೆ ಯಾರಿಗೂ ನಂಬಲು ಆಗುತ್ತಿಲ್ಲ. ಸಿದ್ಧಾರ್ಥ್​​ ಬಾಲಿಕಾ ವಧು ಧಾರವಾಹಿಯಲ್ಲಿ ನಟಿ ಪ್ರತ್ಯುಷಾ ಬ್ಯಾನರ್ಜಿ ಜೊತೆ ನಟಿಸಿದ್ದರು.

2016ರಲ್ಲಿ ಪ್ರತ್ಯುಷಾ ಬ್ಯಾನರ್ಜಿ ಮೃತದೇಹ ಫ್ಯಾನ್​​​​​​​​​ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಸಿದ್ಧಾರ್ಥ್​​-ಪ್ರತ್ಯುಷಾ ಜೋಡಿ ಮುದ್ದುಮುದ್ದಾಗಿ ಅಭಿಮಾನಿಗಳ ಹೃದಯ ಕದ್ದಿತ್ತು. ಇಂದು ಧಾರವಾಹಿಯ ಹಿಟ್​ ಪೇರ್​​ ಇಲ್ಲ ಎಂಬುವುದು ಅವರ ಅಭಿಮಾನಿಗಳಿಗೆ ಜೀರ್ಣಿಸಿಕೊಳ್ಳಲು ಆಗುತ್ತಿಲ್ಲ. ಧಾರವಾಹಿಯ ಪ್ರಮುಖ ಪಾತ್ರದಲ್ಲಿ ನಟಿಸಿದ ಇಬ್ಬರು ಇಂದು ಸಾವಿನ ಮನೆ ಸೇರಿದ್ದಾರೆ.

ಇನ್ನು ಕೆಲ ತಿಂಗಳುಗಳ ಹಿಂದೆಯಷ್ಟೇ ಧಾರವಾಹಿಯಲ್ಲಿ ಗಟಾಣಿ ಅಜ್ಜಿ ಪಾತ್ರದಲ್ಲಿ ನಟಿಸಿದ್ದ ಸುರೇಖಾ ಸಿಕ್ರಿ ಮರಣ ಹೊಂದಿದ್ದಾರೆ. ಬಾಲಿಕಾ ವಧು ಧಾರವಾಹಿಯಲ್ಲಿ ರಾಷ್ಟ್ರಪಶಸ್ತಿ ವಿಜೇತ ನಟಿ ಸುರೇಖಾ ಸಿಕ್ರಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದರು. ಕೆಲ ತಿಂಗಳುಗಳ ಹಿಂದೆ ಸಿಕ್ರಿ ಸಾವಿಗೆ ಸಿದ್ಧಾರ್ಥ್​​ ಕಂಬನಿ ಮಿಡಿದಿದ್ದರು. ಪ್ರತ್ಯುಷಾ ನಿಧನವಾದಾಗಲೂ ಸಿದ್ಧಾರ್ಥ್​​ ಸಹ ನಟಿಯನ್ನು ನೆನೆದು ಮರುಗಿದ್ದರು. ಇಂದು ಸಿದ್ಧಾರ್ಥ್​ ಕೂಡ ಅವರನ್ನು ಸೇರಿಕೊಂಡಿದ್ದಾರೆ.

ಇದನ್ನೂ ಓದಿ: Sidharth Shukla ಸಾವಿನ ಬಳಿಕ ಮಗಳ ಆರೋಗ್ಯ ಚೆನ್ನಾಗಿಲ್ಲ!; ಶೆಹನಾಜ್​ ತಂದೆ ಸಂತೋಷ್​ ಸಿಂಗ್​ ಸುಖ್​

ಕಳೆದ ವರ್ಷ ಧಾರವಾಹಿಯಿಂದಲೇ ಫೇಮಸ್​ ಆಗಿ ಬಾಲಿವುಡ್​ ನಟನಾಗಿದ್ದ ಸುಶಾಂತ್​ ಸಿಂಗ್​ ರಜಪೂತ್​​ ನಿಗೂಢವಾಗಿ ಸಾವನ್ನಪ್ಪಿದ್ದರು. ಸುಶಾಂತ್​ ಸಾವಿನ ಬಳಿಕ ಸಿದ್ಧಾರ್ಥ್​ ಸಾವು ಹಿಂದಿ ಕಿರುತೆರೆಗೆ ತುಂಬಲಾರದ ನಷ್ಟವನ್ನು ಅನುಭವಿಸುವಂತೆ ಮಾಡಿದೆ. ಮನೆಯ ಟಿವಿ ಪರದೆಯ ಮೇಲೆ ಕಾಣಿಸಿಕೊಂಡು ಆಪ್ತರಾಗಿ ಬಿಡುವ ಸೀರಿಯಲ್​ ನಟನಟಿಯರ ಏಕಾಏಕಿ ಸಾವು ನೋಡಗರನ್ನು ಅಘಾತಗೊಳಿಸುವುದಂತೂ ಸುಳ್ಳಲ್ಲ. ಬಾಲಿಕಾ ವಧು ಧಾರವಾಹಿ ಕನ್ನಡದಲ್ಲಿ ಪುಟ್ಟ ಗೌರಿ ಮದುವೆಯಾಗಿ ಡಬ್​ ಆಗಿತ್ತು. ಭಾರತದ ಬಹುತೇಕ ಭಾಷೆಗಳಿಗೆ ಈ ಧಾರವಾಹಿ ಡಬ್​​​ ಆಗಿದೆ.

ಸಿದ್ಧಾರ್ಥ್​ ಶುಕ್ಲಾ ತಾಯಿ ಹಾಗೂ ಇಬ್ಬರು ಸೋದರಿಯರನ್ನು ಅಗಲಿದ್ದಾರೆ. ಇನ್ನು ಬಿಗ್​ಬಾಸ್​ನಲ್ಲಿ ಸಿದ್ಧಾರ್ಥ್​ ಜೊತೆ ಹೆಚ್ಚು ಆತ್ಮೀಯವಾಗಿ ಕಾಣಿಸಿಕೊಂಡಿದ್ದ ಶೆಹನಾಜ್​ ಗಿಲ್​​​ ಅಘಾತಕ್ಕೆ ಒಳಗಾಗಿದ್ದಾರೆ. ಸಿದ್ಧಾರ್ಥ್​ ಸಾವಿನ ಸುದ್ದಿ ಕೇಳುತ್ತಿದ್ದಂತೆ ಆರೋಗ್ಯದಲ್ಲಿ ಏರುಪೇರು ಉಂಟಾಗಿದೆ ಎಂದು ಗಿಲ್​ ತಂದೆ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಅಗಲಿದ ನಟನಿಗೆ ಬಾಲಿವುಡ್​ನ ಖ್ಯಾತ ನಾಮರು ಅಂತಿಮ ನಮನ ಸಲ್ಲಿಸಿದ್ದಾರೆ.
Published by:Kavya V
First published: