ದೀರ್ಘ ಕಾಲದ ಹೂಡಿಕೆಗಳಲ್ಲಿ ಜನರು ಆಸಕ್ತರಾಗಿದ್ದರೆ ನಿರ್ದಿಷ್ಟ ಸಮಯದಲ್ಲಿ ಅತ್ಯುತ್ತಮ ರಿಟರ್ನ್ ಬರುವಂತಹ ಯೋಜನೆಗಳಲ್ಲಿ ತೊಡಗಲು ಬಯಸುತ್ತಾರೆ. ದೀರ್ಘ ಕಾಲದ ಹೂಡಿಕೆಗಳೆಂದರೆ ಮ್ಯೂಚುವಲ್ ಫಂಡ್ಗಳು(Mutual Funds), ಬ್ಯಾಂಕ್ ಎಫ್ಡಿ(Bank FD)ಗಳು ಹಾಗೂ ಷೇರುಗಳಾಗಿವೆ. ಆದರೆ ಆರ್ಥಿಕ ವಿಶ್ಲೇಷಕರು ಹೇಳುವ ಪ್ರಕಾರ ಹೂಡಿಕೆ ಮಾಡುವ ಮುನ್ನ ಹೂಡಿಕೆ(Investment) ವಿಧಾನಗಳನ್ನು ಅರಿತುಕೊಳ್ಳುವುದು ಹಾಗೂ ಯಾವ ಹೂಡಿಕೆಗಳಲ್ಲಿ ಎಷ್ಟು ಹಣ ವಿನಿಯೋಗಿಸಬೇಕು? ಎಷ್ಟು ಕಾಲ ಹೂಡಿಕೆಗಳನ್ನು ನಡೆಸಬೇಕು ಎಂಬುದರ ಬಗ್ಗೆ ಜ್ಞಾನ ಹೊಂದಿರಬೇಕು ಎಂದಾಗಿದೆ. ಉದಾಹರಣೆಗೆ ನೀವು ಬ್ಯಾಂಕ್ ಎಫ್ಡಿ(Fixed Deposit)ಗಳಲ್ಲಿ ಹಣ ಹೂಡಿಕೆ ಮಾಡುವುದಕ್ಕಿಂತಲೂ ಷೇರು ಮಾರುಕಟ್ಟೆಗಳಲ್ಲಿ ಹೂಡಿಕೆ ಮಾಡುವುದು ಅಪಾಯಕಾರಿಯಾಗಿರುತ್ತದೆ. ಏಕೆಂದರೆ ಷೇರು ಮಾರುಕಟ್ಟೆಯ ಕುರಿತು ಸಾಕಷ್ಟು ಮಾಹಿತಿ ಅರಿತುಕೊಂಡ ನಂತರವೇ ನೀವಿಲ್ಲಿ ಹೂಡಿಕೆ ಮಾಡುವುದು ಸುರಕ್ಷಿತವಾಗಿದೆ ಎಂಬುದು ಆರ್ಥಿಕ ವಿಶ್ಲೇಷಕರ ಅಭಿಪ್ರಾಯವಾಗಿದೆ.
ಹಾಗಾದರೆ ದೀರ್ಘಕಾಲದ ಉಳಿತಾಯಗಳಲ್ಲಿ ಹೂಡಿಕೆ ಮಾಡಲು ನೀವು ಒಲವು ತೋರಿದ್ದರೆ, ಕೆಲವೊಂದು ಸುರಕ್ಷಿತ ಹೂಡಿಕೆ ಯೋಜನೆಗಳ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ.
ಫಿಕ್ಸೆಡ್ ಡೆಪಾಸಿಟ್ (ಎಫ್ಡಿ):
ಹಲವು ಬ್ಯಾಂಕ್ಗಳು ಫಿಸ್ಥಿರ ಠೇವಣಿಯ ಆಫರ್ಗಳನ್ನು ಒದಗಿಸುತ್ತಿದ್ದು ನಿಮ್ಮ ಹೂಡಿಕೆಗಳ ಮೇಲೆ ಇವುಗಳು ನಿಖರವಾದ ರಿಟರ್ನ್ಗಳನ್ನು ನೀಡುತ್ತವೆ. ನೀವು ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಹೂಡಿಕೆಗಳ ಮೇಲಿನ ರಿಟರ್ನ್ಗಳು ಕಡಿಮೆಯಾಗಿರುತ್ತದೆಯಾದರೂ, ಇದು ಆರ್ಥಿಕ ಸುಭದ್ರತೆಯನ್ನು ಒದಗಿಸುತ್ತದೆ.
ಪಬ್ಲಿಕ್ ಪ್ರಾವಿಡೆಂಟ್ ಫಂಡ್ (ಪಿಪಿಎಫ್):
ದೀರ್ಘ ಕಾಲದ ಹೂಡಿಕೆದಾರರಿಗೆ ಇದು ಅತ್ಯುತ್ತಮವಾಗಿರುವ ಯೋಜನೆಯಾಗಿದೆ. ಈ ಯೋಜನೆಯು ಹೂಡಿಕೆಗಳ ಮೇಲೆ ಅತ್ಯುತ್ತಮ ರಿಟರ್ನ್ಗಳನ್ನು ಒದಗಿಸುತ್ತವೆ. ಪಿಪಿಎಫ್ಗಳು 15 ವರ್ಷಗಳ ನಿರ್ದಿಷ್ಟ ಕಾಲಾವಧಿ ಹೊಂದಿದ್ದು 5 ರ್ಷಗಳ ಕಾಲ ವಿಸ್ತರಿಸಬಹುದಾಗಿದೆ. ಪಿಪಿಎಫ್ ಸುಭದ್ರ ಹಾಗೂ ಸುರಕ್ಷಿತವಾಗಿದ್ದು ತ್ರಿವಳಿ ತೆರಿಗೆ ವಿನಾಯಿತಿಯನ್ನು ಈ ಯೋಜನೆ ನೀಡುತ್ತಿದ್ದು ಹೂಡಿಕೆದಾರರನ್ನು ಆಕರ್ಷಿಸುತ್ತದೆ.
ರಾಷ್ಟ್ರೀಯ ಪೆನ್ಶನ್ ಯೋಜನೆ (ಎನ್ಪಿಎಸ್):
ದೀರ್ಘ ಕಾಲದ ಹೂಡಿಕೆಗಳಲ್ಲಿ ಆದ್ಯತೆ ಇರಿಸಿರುವ ಹೂಡಿಕೆದಾರರಿಗೆ ಪೆನ್ಶನ್ ಯೋಜನೆ ಅತ್ಯುತ್ತಮವಾದುದು ಎಂಬುದಾಗಿ ವಿಶ್ಲೇಷಕರು ತಿಳಿಸಿದ್ದಾರೆ. ಸ್ವಯಂ ಹಾಗೂ ಸಕ್ರಿಯ ಯೋಜನೆಗಳ ನಡುವೆ ಹೂಡಿಕೆದಾರರು ಆಯ್ಕೆ ಮಾಡುವ ವಿಧಾನವನ್ನು ಈ ಪೆನ್ಶನ್ ಯೋಜನೆ ಒಳಗೊಂಡಿದೆ. ಹೂಡಿಕೆದಾರರ ವಯಸ್ಸನ್ನು ಆಧರಿಸಿ ಹೂಡಿಕೆ ಆಯ್ಕೆ ವೈವಿಧ್ಯಮಯವಾಗಿರುತ್ತದೆ.
ಮ್ಯೂಚುವಲ್ ಫಂಡ್ಗಳು:
ದೀರ್ಘ ಹೂಡಿಕೆಗಳ ಮೇಲೆ ಹೆಚ್ಚುರಿ ರಿಟರ್ನ್ಗಳನ್ನು ಒದಗಿಸುವ ಯೋಜನೆ ಅತ್ಯುತ್ತಮ ಎಂದೆನಿಸಿದೆ. ಮಾರುಕಟ್ಟೆ ಸಂಯೋಜಿತ ಹೂಡಿಕೆ ಆಯ್ಕೆಯು ಹೂಡಿಕೆದಾರರಿಗೆ ಈಕ್ವಿಟಿ, ಹಣ ಮಾರುಕಟ್ಟೆ ನಿಧಿಗಳು, ಸಾಲ ನಿಧಿಗಳ ಸಹಾಯದ ಮೂಲಕ ನಡೆಸಬಹುದಾಗಿದೆ. ಹೂಡಿಕೆಗಳ ನಿರ್ಧಾರಗಳನ್ನು ತೆಗೆದುಕೊಳ್ಳಲು ನಿಮಗೆ ಮಾರ್ಗದರ್ಶಕರು ಮಾರ್ಗದರ್ಶನ ಮಾಡುತ್ತಾರೆ.
ಈಕ್ವಿಟಿಗಳು:
ಈಕ್ವಿಟಿಗಳಲ್ಲಿ ಹೂಡಿಕೆ ಮಾಡುವುದು ಅಪಾಯಕಾರಿಯಾಗಿದ್ದರೂ ಹೆಚ್ಚಿನ ಲಾಭ ತರುತ್ತದೆ ಎಂಬುದು ವಿಶ್ಲೇಷಕರ ಅಭಿಪ್ರಾಯವಾಗಿದೆ. ಈ ಹೂಡಿಕೆ ಆಯ್ಕೆಯೊಂದಿಗೆ ಹೂಡಿಕೆಗಾಗಿ ಯಾವುದೇ ಕನಿಷ್ಠ ಕಾಲಾವಧಿ ಇರುವುದಿಲ್ಲ. ಇದು ಅಪಾಯಕಾರಿ ಹೂಡಿಕೆಯಾಗಿದ್ದರೂ, ನೇರ ಷೇರು ಹೆಚ್ಚು ದೀರ್ಘ ಕಾಲದ ಹೂಡಿಕೆ ಆಯ್ಕೆಯಾಗಿದೆ. ಏಕೆಂದರೆ ಹೆಚ್ಚಿನ ಲಾಭಗಳನ್ನು ಈ ಹೂಡಿಕೆ ಯೋಜನೆ ಒದಗಿಸುತ್ತದೆ. ಮಾರುಕಟ್ಟೆ ಏರಿಳಿತ ಹಾಗೂ ಹೆಚ್ಚಿನ ಅಪಾಯಗಳಿರುವುದರಿಂದ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವ ಮುನ್ನ ಅವುಗಳನ್ನು ವಿಶ್ಲೇಷಿಸುವುದು ಅಗತ್ಯವಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ