Woman Astronaut: ಗುಂಟೂರಿನಿಂದ ಗಗನದವರೆಗೆ; ಭಾರತೀಯ ಮಹಿಳೆಯ ಕಥೆಯಿದು

ಇದು ಆಂಧ್ರಪ್ರದೇಶದ ಗುಂಟೂರಿನ ಹೆಣ್ಣೊಬ್ಬಳ ಕಥೆ. ಸಿರಿಶಾ ಬಾಂದ್ಲಾ ತಾನು ಚಿಕ್ಕವಳಿದ್ದಾಗಲೇ ಗೊತ್ತಾಗಿತ್ತು ತನ್ನ ಆಸಕ್ತಿ ಇರುವ ಕ್ಷೇತ್ರ ಯಾವುದೆಂದು. ಅವಳು ತದನಂತರ ತನ್ನ ಆಸಕ್ತಿಯನ್ನೇ ಕನಸು ಮಾಡಿಕೊಂಡು ಬೆಳೆದಳು ಹಾಗೂ ಅದರಂತೆ ಅವಳ ಕನಸನ್ನು ಕೊನೆಗೂ ನನಸು ಮಾಡಿಕೊಂಡಳು.

ಸಿರಿಶಾ ಬಾಂದ್ಲಾ

ಸಿರಿಶಾ ಬಾಂದ್ಲಾ

  • Share this:
ಇದು ಆಂಧ್ರಪ್ರದೇಶದ (Andhra Pradesh) ಗುಂಟೂರಿನ ಹೆಣ್ಣೊಬ್ಬಳ ಕಥೆ. ಸಿರಿಶಾ ಬಾಂದ್ಲಾ (Sirisha Bandla) ತಾನು ಚಿಕ್ಕವಳಿದ್ದಾಗಲೇ ಗೊತ್ತಾಗಿತ್ತು ತನ್ನ ಆಸಕ್ತಿ ಇರುವ ಕ್ಷೇತ್ರ ಯಾವುದೆಂದು. ಅವಳು ತದನಂತರ ತನ್ನ ಆಸಕ್ತಿಯನ್ನೇ ಕನಸು ಮಾಡಿಕೊಂಡು ಬೆಳೆದಳು ಹಾಗೂ ಅದರಂತೆ ಅವಳ ಕನಸನ್ನು ಕೊನೆಗೂ ನನಸು ಮಾಡಿಕೊಂಡಳು. ಸಿರಿಶಾ ಮಾಧ್ಯಮವೊಂದಕ್ಕೆ ಸಂದರ್ಶನ (Interview) ನೀಡುವಾಗ ಹೇಳುತ್ತಾರೆ, "ನಾನು ಚಿಕ್ಕವಳಿದ್ದಾಗ ಗುಂಟೂರಿನ ನನ್ನ ಅಜ್ಜ-ಅಜ್ಜಿಯರ ಮನೆಯ ಛಾವಣಿಯ ಮೇಲೆ ಮಲಗುತ್ತಿದ್ದೆ. ವಿದ್ಯುತ್ (Electricity) ಇಲ್ಲದಾಗ ಅಥವಾ ಕಗ್ಗತ್ತಲೆಯ ಒಂದೊಂದು ಸಂದರ್ಭದಲ್ಲಿ ನಾನು ರಾತ್ರಿಯ ಹೊತ್ತು ಆಗಸದಲ್ಲಿ ನೋಡಿದಾಗ ನನಗೆ ಬೆಳಗುತ್ತಿರುವ ದೊಡ್ಡ ದೊಡ್ಡ ನಕ್ಷತ್ರಗಳು ಸ್ಪಷ್ಟವಾಗಿ ಕಾಣಿಸುತ್ತಿದ್ದವು.  ವಾಯು ಮಾಲಿನ್ಯ, ಧೂಳು ಇಲ್ಲದ ಆ ಪ್ರದೇಶದಲ್ಲಿ ನಕ್ಷತ್ರಗಳು ನಮಗೆ ಬಲು ಹತ್ತಿರದಲ್ಲಿವೆಯಂತಲೇ ಭಾಸವಾಗುತ್ತಿತ್ತು. ನನಗೆ ಆಗಸದಲ್ಲಿ ಏನಿದೆ, ನಾನು ಅಲ್ಲಿಗೆ ಹೋಗಬೇಕೆಂಬ ಕುತೂಹಲವಿತ್ತು" ಎಂದು ಹೇಳಿದ್ದಾರೆ.

ಬಾಲ್ಯದ ಕನಸನ್ನು ನನಸು ಮಾಡಿಕೊಳ್ಳಬೇಕೆಂಬ ಹಂಬಲ

ತದನಂತರ ಅಮೆರಿಕದಲ್ಲಿ ಬೆಳೆದ ಅವರು ತಮ್ಮ ಆ ಬಾಲ್ಯದ ಕನಸನ್ನು ನನಸು ಮಾಡಿಕೊಳ್ಳಬೇಕೆಂಬ ಹಂಬಲವಿತ್ತು. ಆದರೆ, ಅವರ ಅರ್ಹತೆ ಪಡೆಯದ ಕಣ್ಣಿನ ದೃಷ್ಟಿಯಿಂದಾಗಿ ಅವರಿಗೆ ನಾಸಾದಲ್ಲಿ ಅಸ್ಟ್ರೋನಾಟ್ ಆಗಲು ಅವಕಾಶ ದೊರೆಯಲಿಲ್ಲ. ಆದರೂ ಎದೆಗುಂದದ 34ರ ಪ್ರಾಯದ ಸಿರಿಶಾ ಬಾಂದ್ಲಾ ಇಂಜಿನಿಯರಿಂಗ್ ಶಿಕ್ಷಣಕ್ಕೆ ಒಲವು ತೋರಿದರು.

ಹೀಗೆ ಏರೋಸ್ಪೇಸ್ ಇಂಜಿನಿಯರ್ ಆದ ಬಾಂದ್ಲಾ ಅವರು ಕಳೆದ ಜುಲೈನಲ್ಲಿ ಬಿಲಿಯನೇರ್ ಸರ್ ರಿಚರ್ಡ್ ಬ್ರಾನ್ಸನ್ ಅವರ ವರ್ಜಿನ್ ಗ್ಯಾಲಾಕ್ಟಿಕ್ ಸಂಸ್ಥೆಯ ಚೊಚ್ಚಲ ಗಗನನೌಕೆಯ ಮೂಲಕ ಆಗಸದಲ್ಲಿ ಹಾರಿದ ತಂಡದ ಭಾಗವಾಗಿದ್ದರು.

ಭೂಮಿಯಿಂದ  ಮೇಲಕ್ಕೆ ಹಾರಿದ ಅನುಭವ ವಿವರಿಸಿದ ಬಾಂದ್ಲಾ

ಈ ಸಂದರ್ಭದಲ್ಲಿ ಭೂಮಿಯಿಂದ 90ಕಿ.ಮೀ ಮೇಲಕ್ಕೆ ಹಾರಿದ ಅವರು ಅದರ ಅದ್ಭುತ ಅನುಭವವನ್ನು ಎಂದಿಗೂ ಮರೆಯಲಾಗದು ಎಂದು ವಿವರಿಸುತ್ತಾರೆ. ಆ ಬಗ್ಗೆ ಅವರು ತಮ್ಮದೆ ಆದ ಅನುಭವದ ನುಡಿಗಳನ್ನು ಹೀಗೆ ಹಂಚಿಕೊಳ್ಳುತ್ತಾರೆ.

"ಭೂಮಿಯನ್ನು ನೋಡುವುದು ಮತ್ತು ವಾತಾವರಣದ ಆ ತೆಳುವಾದ ನೀಲಿ ರೇಖೆಯನ್ನು ನೋಡುವುದು ಅತ್ಯದ್ಭುತ, ನಿಜವಾಗಿಯೂ ನಾವು ಎಷ್ಟು ಅದೃಷ್ಟವಂತರು ಮತ್ತು ನಮ್ಮ ಗ್ರಹವು ಎಷ್ಟು ಸೂಕ್ಷ್ಮವಾಗಿದೆ ಎಂಬ ದೃಷ್ಟಿಕೋನವನ್ನು ಮೂಡಿಸುತ್ತದೆ. ಆ ದೃಶ್ಯ ನಿಜಕ್ಕೂ ನಂಬಲಾಗದಂತಿತ್ತು ನಾನು ಅಮೆರಿಕದ ನೈಋತ್ಯ ಭಾಗವನ್ನು ನೋಡುತ್ತಿದ್ದೆ. ನಾವು ರಾಜ್ಯಗಳ ಬಗ್ಗೆ ಮಾತನಾಡುತ್ತೇವೆ, ಆದರೆ ನಾನು ಯಾವುದೇ ಗಡಿಗಳನ್ನು ನೋಡಲಿಲ್ಲ. ಇದರಿಂದ ನಾವು ಸ್ವಂತವಾಗೇ ಹೇಗೆ ವಿಭಜಿಸಿಕೊಂಡಿದ್ದೇವೆ ಎಂಬ ಸಂಗತಿ ಮನದಲ್ಲಿ ತಳುಕು ಹಾಕುವಂತೆ ಮಾಡುತ್ತದೆ.

ಇದನ್ನೂ ಓದಿ:  Van life: ವ್ಯಾನ್ ಅನ್ನು ಮನೆಯನ್ನಾಗಿಸಿ ಜೀವನ ಸಾಗಿಸುತ್ತಿದ್ದಾಳೆ 35 ವರ್ಷದ ಈ ಮಹಿಳೆ!

ಆ ಭಯಂಕರ ಹಾಗೂ ವಿಶಾಲವಾದ ಕಗ್ಗತ್ತಲೆಯ ಕಪ್ಪು ಹಿನ್ನೆಲೆಯಲ್ಲಿ ನಮ್ಮ ಅದ್ಭುತವಾದ ಭೂಮಿಯನ್ನು ನೋಡಿದಾಗ ಅದು ನನಗೆ ಎಷ್ಟು ಚಿಕ್ಕದಾಗಿದೆ ಎಂದೆನಿಸಿತಾದರೂ ಅತ್ಯಲ್ಪ ಬೆಲೆಯದ್ದಾಗಿದೆ ಎಂದು ಖಂಡಿತ ಅನಿಸಲಿಲ್ಲ. ಆದ್ದರಿಂದ, ನಾನು ಒಳ್ಳೆಯದಕ್ಕಾಗಿ ಧನಾತ್ಮಕ ಬದಲಾವಣೆಯನ್ನು ಮುಂದುವರಿಸಲು ಶಕ್ತಿಯುತವಾದ ಗ್ರಹಕ್ಕೆ ಮರಳಿದೆ ಮತ್ತು ನಮ್ಮಲ್ಲಿರುವದನ್ನು ನಿಜವಾಗಿಯೂ ಪ್ರಶಂಸಿಸುತ್ತೇನೆ".

ಚಿಕ್ಕಂದಿನಿಂದಲೂ ಗಗನಯಾತ್ರಿ ಆಗಬೇಕೆಂಬ ಆಸೆ

ಮುಂದುವರೆಯುತ್ತ ಅವರು, "ನನಗೆ ಚಿಕ್ಕಂದಿನಿಂದಲೂ ಗಗನಯಾತ್ರಿ ಆಗಬೇಕೆಂಬ ಆಸೆ ಇತ್ತು ಮತ್ತು ನಾನು ಅಪೊಲೊ ಗಗನಯಾತ್ರಿಗಳು ಮತ್ತು ಚಂದ್ರನ ಮೇಲೆ ಕಾಲಿಟ್ಟವರ ವೃತ್ತಿಜೀವನವನ್ನು ಅಧ್ಯಯನ ಮಾಡುತ್ತಿದ್ದೆ, ಅವರು ಮಾಡಿದ್ದನ್ನು ನಾನು ಗೌರವಿಸುತ್ತೇನೆ - ಅವರು ಖಂಡಿತವಾಗಿಯೂ ಪ್ರವರ್ತಕರು. ನಾನು ಅವರ ರೀತಿ ಪ್ರಯಾಣಿಸಿಲ್ಲದೆ ಇರಬಹುದು ಆದರೂ ಇದು ತುಂಬಾ ವಿಭಿನ್ನವಾಗಿತ್ತು.

ಇದು ನನ್ನ ಗುರುತಿನ ಮೇಲೆಯೂ ಪ್ರಭಾವ ಬೀರಿದೆ ಏಕೆಂದರೆ ನನಗೆ ಕಲ್ಪನಾ ಚಾವ್ಲಾ ಅವರ ಬಗ್ಗೆ ತಿಳಿದಿದೆ ಹಾಗೂ ಅವರ ಗುರುತು ಯಾರಿಗಿಲ್ಲ. ಅವರೊಬ್ಬ ಅದ್ಭುತ ಮಹಿಳೆ. ನಾನು ಕಲ್ಪನಾ ಚಾವ್ಲಾ ಅವರನ್ನು ಎಂದಿಗೂ ಭೇಟಿಯಾಗಲಿಲ್ಲ ಆದರೆ ಅವರು ನನ್ನ ಜೀವನ ಮತ್ತು ನನ್ನ ವೃತ್ತಿಜೀವನದ ಮೇಲೆ ಗಾಢವಾದಪರಿಣಾಮವನ್ನು ಬೀರಿದ್ದಾರೆ. ಆಶಾದಾಯಕವಾಗಿ, ನನ್ನ ಪ್ರಯಾಣವು ಇತರ ಅನೇಕ ಜನರಿಗೆ ಅದೇ ದೃಷ್ಟಿಕೋನವನ್ನು ನೀಡುತ್ತದೆ, ಅಲ್ಲಿ ಅವರು ತಮ್ಮ ಗುರುತನ್ನು ಮತ್ತು ಪ್ರಯಾಣವನ್ನು ಸಾಧಿಸಬಹುದು”ಎಂದು ಹೇಳುತ್ತಾರೆ.

ಗಗನ ಪ್ರವಾಸೋದ್ಯಮಕ್ಕೆ ಒತ್ತು ನೀಡುವ ವರ್ಜಿನ್ ಗ್ಯಾಲಾಕ್ಟಿಕ್ ಸಂಸ್ಥೆ
ಪ್ರಸ್ತುತ ಸಿರಿಶಾ ಅವರು ವರ್ಜಿನ್ ಗ್ಯಾಲಾಕ್ಟಿಕ್ ಸಂಸ್ಥೆಯಲ್ಲಿ ಸರ್ಕಾರಿ ವಿದ್ಯಮಾನಗಳು ಮತ್ತು ಸಂಶೋಧನಾ ಕಾರ್ಯಾಚರಣೆಗಳು ವಿಭಾಗದ ವೈಸ್ ಪ್ರಸಿಡೆಂಟ್ ಆಗಿದ್ದು ಇತ್ತೀಚಿಗಷ್ಟೆ ಭಾರತದಲ್ಲಿ ಗಗಗನ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸ್ಟಾರ್ಟಪ್ ಎಕೋಸಿಸ್ಟಮ್ ಒಂದರ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ನಡೆದಿದ್ದ ಕಾನ್ಫರೆನ್ಸ್ ಒಂದರಲ್ಲಿ ಭಾಗಿಯಾಗಲು ಭಾರತಕ್ಕೆ ಬಂದಿದ್ದರು. ಅವರ ವರ್ಜಿನ್ ಗ್ಯಾಲಾಕ್ಟಿಕ್ ಸಂಸ್ಥೆಯು ಗಗನ ಪ್ರವಾಸೋದ್ಯಮಕ್ಕೆ ಒತ್ತು ನೀಡುತ್ತದೆ ಹಾಗೂ ಅವರ ಈ ಸೇವೆಯನ್ನು ಪಡೆಯಲು ಈಗಾಗಲೇ 800 ಜನರು ನೋಂದಾಯಿಸಿಕೊಂಡಿರುವುದಾಗಿ ಸಿರಿಶಾ ಹೇಳುತ್ತಾರೆ.

ಗಗನ ಪ್ರವಾಸ ಶುಲ್ಕ ಎಷ್ಟು ಗೊತ್ತಾ
ಸಿರಿಶಾ ಅವರ ಪ್ರಕಾರ, ಹಲವು ಜನರಿಗೆ ಗಗಗನ ಯಾತ್ರೆ ಮಾಡಬೇಕೆಂಬ ಆಸೆ ಇರುತ್ತದೆ. ಅವರು ಈ ರೀತಿಯ ಪ್ರವಾಸ ಕೈಗೊಳ್ಳುವಾಗ ತಮ್ಮ ನಿಜವಾದ ಗಗನ ಪ್ರವಾಸ ಎಂಬುದು ಸ್ಪೇಸ್ ಕ್ರಾಫ್ಟ್ ಉಡಾವಣೆಯಾಗಲು ಪ್ರಾರಂಭಿಸಿದಾಗ ಶುರುವಾಗುವುದು ಎಂದು ನಂಬಿರುತ್ತಾರೆ. ಆದರೆ, ನನಗನಿಸುವಂತೆ ನೀವು ಯಾವಾಗ ಗಗನಯಾತ್ರಿ ಆಗಬೇಕೆಂಬ ಕನಸು ಕಾಣುವಿರೋ ಅಂದಿನಿಂದಲೇ ನಿಮ್ಮ ಈ ಗಗಗ ಜರ್ನಿ ಆರಂಭವಾಗಿರುತ್ತದೆ ಎನ್ನುತ್ತಾರೆ. ವರ್ಜಿನ್ ಗ್ಯಾಲಾಕ್ಟಿಕ್ ಮೂಲಕ ಗಗನ ಪ್ರವಾಸ ಶುಲ್ಕವು ಏನಿಲ್ಲವೆಂದರೂ 450,000 ಡಾಲರ್ ವರೆಗೂ ತಗಲುವುದಾಗಿ ತಿಳಿದುಬಂದಿದೆ.

ಇದನ್ನೂ ಓದಿ: Swimming: 70 ರ ವಯಸ್ಸಿನಲ್ಲೂ ಎರಡು ಕೈಗಳನ್ನು ಕಟ್ಟಿಕೊಂಡು ನದಿಯಲ್ಲಿ ಹೇಗೆ ಈಜಾಡಿದ್ದಾರೆ ನೋಡಿ ಈ ವೃದ್ಧೆ

ಸಿರಿಶಾ ಅವರ ಪ್ರಕಾರ, ಈಗ ಗಗನ ಪ್ರವಾಸೋದ್ಯಮ ಎಂಬುದು ನಿಧಾನವಾಗಿ ತನ್ನ ಗುರುತನ್ನು ಪ್ರಬುದ್ಧಗೊಳಿಸಿಕೊಳ್ಳುತ್ತಿದ್ದು ಸಾಂಪ್ರದಾಯಿಕ ಶೈಲಿಯಲ್ಲಿ ಪ್ರವಾಸ ಮಾಡಲಾಗದ ಸಾಕಷ್ಟು ಸಿರಿವಂತರು ಇದೀಗ ವಾಣಿಜ್ಯಾತ್ಮಕ ಸೇವೆಗಳ ಮೂಲಕ ಗಗನಾನುಭವ ಪಡೆಯಬಯಸುತ್ತಿದ್ದಾರೆ. ಸದ್ಯ, ಈ ಗಗನ ಪ್ರವಾಸದ ಶುಲ್ಕವು ಸಾಮಾನ್ಯವಾಗಿ ಕೈಗೆಟುಕದ ರೀತಿಯಲ್ಲಿರುವಂತಿದ್ದರೂ ಮುಂದೆ ಈ ಕ್ಷೇತ್ರದಲ್ಲಿ ಮೂಡುವ ಸ್ಪರ್ಧೆಯಿಂದ ಇದು ಕ್ರಮೇಣ ಕೈಗೆಟುಕುವ ಮಟ್ಟಕ್ಕೆ ಬರುವುದೆಂಬ ವಿಶ್ವಾಸ ವ್ಯಕ್ತಪಡಿಸುತ್ತಾರೆ ಸಿರಿಶಾ.

ಈ ಮಧ್ಯೆ ಸಿರಿಶಾ ಅವರು ತಾವು ಇಟ್ಟಿರುವ ಈ ಹೆಜ್ಜೆಯು ಮುಂದೆ ಗಗನ ಕ್ಷೇತ್ರದಲ್ಲಿ ಭವಿಷ್ಯ ರೂಪಿಸಿಕೊಳ್ಳಲು ಹಲವು ಜನರನ್ನು ಇನ್ನಷ್ಟು ಹುರುದುಂಬಿಸಲಿದೆ ಎಂಬ ವಿಶ್ವಾಸ ಹೊಂದಿದ್ದಾರೆ.
Published by:Ashwini Prabhu
First published: