Unique Vegetables: ಬ್ಲ್ಯಾಕ್ ರಾಡಿಶ್, ರೊಮಾನೆಸ್ಕೊ! ಇವೆಲ್ಲ ವಿಶಿಷ್ಟ ಹಣ್ಣು, ತರಕಾರಿಗಳಂತೆ ಕಣ್ರೀ!

ಒಮ್ಮೊಮ್ಮೆ ನಮಗೆ ವೈವಿಧ್ಯಮಯ ತಿಂಡಿ-ತಿನಿಸುಗಳು ಕಂಡುಬರುತ್ತವೆ ಹಾಗೂ ಕೆಲ ವಿಶಿಷ್ಟ ತರಕಾರಿ ಹಣ್ಣುಗಳ ಸ್ವಾದ ಅಚ್ಚರಿಪಡುವಂತೆ ಮಾಡುತ್ತವೆ. ಇಲ್ಲಿಯೂ ಕೂಡ ನಾವು ನಿಮಗೆ ನೀವು ನಿಮ್ಮ ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬಹುದಾದ ಕೆಲ ಅನನ್ಯ ತರಕಾರಿ ಹಾಗೂ ಹಣ್ಣುಗಳ ಬಗ್ಗೆ ಹೇಳುತ್ತಿದ್ದೇವೆ. ಅವು ಯಾವುವು ಎಂಬ ಕುತೂಹಲ ನಿಮಗಾದಲ್ಲಿ ಓದುವುದನ್ನು ಮುಂದುವರೆಸಿ.

ರೊಮಾನೆಸ್ಕೊ

ರೊಮಾನೆಸ್ಕೊ

  • Share this:
ಇಂದು ಏನಿದ್ದರೂ ಎಲ್ಲ ರೀತಿಯಿಂದಲೂ ಅಪ್ ಟು ಡೇಟ್ ಆಗಿರುವ ಕಾಲ. ಟ್ರೆಂಡ್ (Trend) ನಲ್ಲಿರುವ ಸುದ್ದಿ, ವಸ್ತುಗಳು, ವಿಡಿಯೋಗಳು (Video) ಏನೇ ಇರಲಿ ಜನರು ಅವುಗಳನ್ನು ಗಮನಿಸುತ್ತಲೇ ಇರುತ್ತಾರೆ. ಒಮ್ಮೊಮ್ಮೆ ಇದು ಸವಾಲು ಎನಿಸಬಹುದಾದರೂ ಹಲವರಿಗೆ ಇದು ಪರಿಪೂರ್ಣತೆಯ ಅನುಭೂತಿ ನೀಡುತ್ತದೆ. ಅದರಂತೆ, ಒಮ್ಮೊಮ್ಮೆ ನಮಗೆ ವೈವಿಧ್ಯಮಯ ತಿಂಡಿ-ತಿನಿಸುಗಳು ಕಂಡುಬರುತ್ತವೆ ಹಾಗೂ ಕೆಲ ವಿಶಿಷ್ಟ ತರಕಾರಿ (Vegetables) ಹಣ್ಣುಗಳ (Fruits) ಸ್ವಾದ ಅಚ್ಚರಿಪಡುವಂತೆ ಮಾಡುತ್ತವೆ. ಇಲ್ಲಿಯೂ ಕೂಡ ನಾವು ನಿಮಗೆ ನೀವು ನಿಮ್ಮ ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬಹುದಾದ ಕೆಲ ಅನನ್ಯ ತರಕಾರಿ ಹಾಗೂ ಹಣ್ಣುಗಳ ಬಗ್ಗೆ ಹೇಳುತ್ತಿದ್ದೇವೆ. ಅವು ಯಾವುವು ಎಂಬ ಕುತೂಹಲ ನಿಮಗಾದಲ್ಲಿ ಓದುವುದನ್ನು ಮುಂದುವರೆಸಿ.

1. ಬ್ಲ್ಯಾಕ್ ರಾಡಿಶ್
ನಾವು ಸಾಮಾನ್ಯವಾಗಿ ರಾಡಿಶ್ ಅಥವಾ ಮೂಲಂಗಿಯ ಬಗ್ಗೆ ಕೇಳಿಯೇ ಇರುತ್ತೇವೆ ಹಾಗೂ ಅದು ಸಹಜವಾಗಿ ಬಿಳಿ ಬಣ್ಣದ್ದಾಗಿರುತ್ತದೆ. ಆದರೆ, ನೀವು ಕಪ್ಪು ರಾಡಿಶ್ ಬಗ್ಗೆ ಕೇಳಿದ್ದೀರಾ? ಹೌದು, ಇದನ್ನು ಸ್ಪ್ಯಾನಿಶ್ ಬ್ಲ್ಯಾಕ್ ರಾಡಿಶ್ ಎಂದು ಕರೆಯಲಾಗುತ್ತದೆ ಹಾಗೂ ಇದು ಇಂಗ್ಲೆಂಡ್ ಮತ್ತು ಫ್ರಾನ್ಸ್ ದೇಶಗಳಲ್ಲಿ ಸಾಮಾನ್ಯವಾಗಿ ಬೆಳೆಯುವ ತರಕಾರಿಯಾಗಿದೆ. ಇದರ ಘಾಟು ತೀಕ್ಷ್ಣವಾಗಿರುತ್ತದೆ ಹಾಗೂ ಇದನ್ನು ಹಸಿಯಾಗಿ, ಅಥವಾ ಬೇಯಿಸಿ ಇಲ್ಲವೆ ಉಪ್ಪನ್ನು ಉದುರಿಸಿಕೊಂಡು ತಿನ್ನಬಹುದಾಗಿದೆ. ಇದನ್ನು ಹಲವು ತಿನಿಸುಗಳಲ್ಲಿ ಟಾಪಿಂಗ್ ನಂತೆಯೂ ಮತ್ತು ಸಲಾಡ್ ಗಳಲ್ಲಿಯೂ ಬಳಸುತ್ತಾರೆ.2. ಬುದ್ಧಾ ಹ್ಯಾಂಡ್
ಈ ಹಣ್ಣು ಬುದ್ಧ ಆಶೀರ್ವದಿಸಲು ಮಾಡಿರುವ ಕೈ ಹಾಗೆ ಕಾಣಿಸುವುದರಿಂದ ಇದಕ್ಕೆ ಬುದ್ಧಾ'ಸ್ ಹ್ಯಾಂಡ್ ಅಥವಾ ಬುದ್ಧನ ಕೈ ಎಂದು ಕರೆಯಲಾಗುತ್ತದೆ. ಮೂಲತಃ ಇದೊಂದು ಸಿಟ್ರಸ್ ಹಣ್ಣಾಗಿದ್ದು ನಿಂಬೆಯ ಗಾತ್ರದ್ದಾಗಿರುವುದಲ್ಲದೆ ಬೆರಳುಗಳ ರೀತಿಯ ರಚನೆ ಹೊಂದಿರುತ್ತದೆ. ಇದು ಯಾವುದೇ ರೀತಿಯ ಜ್ಯೂಸ್ ಅಥವಾ ಪಲ್ಪ್ ಹೊಂದಿರುವುದಿಲ್ಲ ಆದರೆ ಇದರ ತೊಗಟೆಯನ್ನು ಟಾಪಿಂಗ್ ರೀತಿಯಲ್ಲಿ ಹಾಗೂ ಸಲಾಡುಗಳಲ್ಲಿ ಬಳಸಲಾಗುತ್ತದೆ. ಇದನ್ನು ಚೈನಾದಲ್ಲಿ ಅದೃಷ್ಟಸೂಚಕವಾಗಿ ನೇತು ಹಾಕಿದರೆ, ಜಪಾನ್ ದೇಶದಲ್ಲಿ ಇದನ್ನು ಉತ್ತಮ ಅದೃಷ್ಟದ ಕುರುಹಾಗಿ ಹೊಸ ವರ್ಷದಂದು ಉಡುಗೊರೆಯಾಗಿ ನೀಡಲಾಗುತ್ತದೆ.3. ಡುರಿಯನ್
ಇದನ್ನು ಒಂದು ರಹಸ್ಯಮಯ ಹಣ್ಣೆಂದೇ ಕರೆಯಲಾಗಿದೆ. ಇದು ಮುಳ್ಳುಗಳ ತೊಗಟೆ ಹೊಂದಿದ್ದು ಅತ್ಯಂತ ಅಹಿತಕರ ಎನ್ನುವಂತಹ ವಾಸನೆ ಹೊಂದಿರುತ್ತದೆ. ಆದರೆ ಇದನ್ನು ಸವಿದವರು ಮೊದಲ ಎರಡು ಹಂತಗಳನ್ನು ಎದುರಿಸಿ ಮುನ್ನುಗ್ಗಿದರೆ ಮುಂದೆ ಅತ್ಯಂತ ಸುಖಕರ ಸ್ವಾದ ನೀಡುವಂತಹ ಭಾಗ ನಿಮಗೆ ಲಭಿಸುತ್ತದೆ ಎಂದು ಹೇಳುತ್ತಾರೆ. ಹಲವರು ಇದನ್ನು ಬಾಳೆ ಹಣ್ಣು ಇಲ್ಲವೇ ವೆನಿಲ್ಲಾ ಕ್ರೀಂಗೆ ಇದರ ರುಚಿಯನ್ನು ಹೋಲಿಸಿದ್ದಾರೆ. ಒಟ್ಟಿನಲ್ಲಿ ಇದೊಂದು ಅನನ್ಯ ರುಚಿಯುಳ್ಳ ಹಣ್ಣಾಗಿದೆ.

ಇದನ್ನೂ ಓದಿ: Viral Post: 16 ಮಕ್ಕಳಿಗೆ ಜನ್ಮ ನೀಡಿ 17ನೇ ಮಗುವಿನ ನಿರೀಕ್ಷೆಯಲ್ಲಿರುವ ಮಹಾ ತಾಯಿ!4. ಚೆರಿಮೊಯಾ
ಈ ಹಣ್ಣನ್ನು ಜನಪ್ರೀಯವಾಗಿ ಸೀತಾಫಲ ಎಂತಲೂ ಕರೆಯಲಾಗುತ್ತದೆ ಹಾಗೂ ಇದು ಮೂಲತಃ ದಕ್ಷಿಣ ಅಮೆರಿಕದ್ದಾಗಿದೆ. ಅದಾಗ್ಯೂ ಇದು ಏಷಿಯಾದಲ್ಲೂ ದೊರೆಯುತ್ತದೆ. ಈ ಹಣ್ಣಿನ ತೊಗಟೆಯು ಉಬ್ಬುಗಳಂತಿದ್ದು ಇದರಲ್ಲಿರುವ ಪಲ್ಪ್ ಮಾತ್ರ ಅದ್ಭುತವಾದ ರುಚಿಯನ್ನು ಹೊಂದಿರುತ್ತದೆ. ಇದನ್ನು ಜ್ಯೂಸ್ ರೂಪದಲ್ಲಿ, ಐಸ್ ಕ್ರೀಮ್ ನಲ್ಲಿ ಅಥವಾ ಫ್ರುಟ್ ಸಲಾಡ್ ನಲ್ಲಿ ಬಳಸುತ್ತಾರೆ.5. ರೊಮಾನೆಸ್ಕೊ
ನಿಮಗೆ ಹೂ ಕೋಸು ಹಾಗೂ ಬ್ರೊಕೋಲಿ, ಲೆಟ್ಯೂಸ್ ಗೊತ್ತಿರಬೇಕಲ್ಲವೆ..? ಈ ಮೂರರ ಸಂಯೋಜಿತ ರೂಪವೆಂದೇ ಇದನ್ನು ಹೇಳಬಹುದಾಗಿದ್ದು ಇದೊಂದು ಅನನ್ಯ ತರಕಾರಿಯಾಗಿದೆ. ಪ್ರಕಾಶಮಾನವಾದಂತಹ ಹಸಿರು ಬಣ್ಣ ಹೊಂದಿರುವ ಈ ತರಕಾರಿ ಸ್ಪೈರಲ್ ರೀತಿಯಲ್ಲಿ ಸುರುಳಿಕೊಂಡಿದ್ದು ನೋಡಲು ವಿಶಿಷ್ಟವಾಗಿ ಕಂಡುಬರುತ್ತದೆ. ಕೆಲವರು ಇದರ ಸ್ವಾದವು ಹೂ ಕೋಸು ಹಾಗೂ ಬ್ರೊಕೋಲಿಯ ಮಿಶ್ರಣದಂತಿದ್ದು ಸೌಮ್ಯವಾದ ಚಟ್ಪಟಾ ಸ್ವಾದ ನೀಡುತ್ತದೆ ಎನ್ನುತ್ತಾರೆ. ಇದನ್ನು ಬೇಯಿಸಿ ತಿನ್ನಬಹುದು. ಇಲ್ಲವೇ ಇದನ್ನು ಸ್ಯಾಂಡ್ವಿಚ್ ನಲ್ಲಿಯೂ ಬಳಸಬಹುದು.ಇದನ್ನೂ ಓದಿ:  Musical Road: ಈ ರಸ್ತೆಯ ಮೇಲೆ ಡ್ರೈವ್ ಮಾಡುತ್ತಾ ಹೋದವರಿಗೆ ಇಂಪಾದ ಸಂಗೀತ ಕೇಳಿಸುತ್ತದೆಯಂತೆ!

ಈ ಮೇಲಿನ ಐದು ಹಣ್ಣು ಹಾಗೂ ತರಕಾರಿಗಳು ಸಮಾನ್ಯವಾಗಿ ಎಲ್ಲೆಡೆ ನಿತ್ಯ ಬಳಕೆಯಲ್ಲಿರುವಂಥದ್ದಲ್ಲ. ಹಾಗಾಗಿ, ನೀವು ಇಂದಿನ ಟ್ರೆಂಡ್ ನೊಂದಿಗೆ ಇದ್ದೀರಿ ಅಥವಾ ಸದಾ ಯಾವಾಗಲೂ ಹೊಸತನ್ನು ಪ್ರಯತ್ನಿಸಲು ಬಯಸುತ್ತೀರಿ ಎಂದಾದಲ್ಲಿ ಒಂದೊಮ್ಮೆ ಇವುಗಳನ್ನು ಪ್ರಯತ್ನಿಸಿ ನೋಡಿ.
Published by:Ashwini Prabhu
First published: