• Home
  • »
  • News
  • »
  • trend
  • »
  • Viral Video: ಕೊನೆ ಕ್ಷಣದವರೆಗೂ ಭರವಸೆ ಕಳೆದುಕೊಳ್ಳದೇ ಹೋರಾಡಿ ಗೆದ್ದ ಕಪ್ಪೆಯ ರಣ ರೋಚಕ ವಿಡಿಯೋ ಮಿಸ್ ಮಾಡಿಕೊಳ್ಳಬೇಡಿ!

Viral Video: ಕೊನೆ ಕ್ಷಣದವರೆಗೂ ಭರವಸೆ ಕಳೆದುಕೊಳ್ಳದೇ ಹೋರಾಡಿ ಗೆದ್ದ ಕಪ್ಪೆಯ ರಣ ರೋಚಕ ವಿಡಿಯೋ ಮಿಸ್ ಮಾಡಿಕೊಳ್ಳಬೇಡಿ!

ಹಾವು ಮತ್ತು ಕಪ್ಪೆ

ಹಾವು ಮತ್ತು ಕಪ್ಪೆ

ತನ್ನ ಸ್ವಂತ ಬಲದಿಂದ ಆ ಪ್ರಾಣಿ ಇಂದು ಬದುಕಿದೆ. ಅದೇ ರೀತಿ ಮನುಷ್ಯ ಸಹ ಹೋರಾಟದ ಭಾವನೆಯನ್ನು ಮೈಗೂಡಿಸಿಕೊಂಡಿರಬೇಕು.

  • Share this:

ಪ್ರಯತ್ನಿಸುವ ವ್ಯಕ್ತಿಗೆ ಎಂದಿಗೂ ಸೋಲು (Lose) ಆಗಲ್ಲ. ಈ ಜಗತ್ತು ನಿಂತಿರೋದು ಭರವಸೆಯ (Hope) ಮೇಲೆ ಎಂಬ ಮಾತುಗಳನ್ನು ಆಗಾಗ್ಗೆ ಕೇಳಿರ್ತೀರಿ. ಈ ಮಾತುಗಳು ಸತ್ಯಕ್ಕೆ ಅನ್ನೋಕೆ ನಮ್ಮ ಬಳಿ ಹಲವು ಉದಾಹರಣೆಗಳಿವೆ. ಯಾರು ಪ್ರಯತ್ನಿಸುವದಿಲ್ಲವೋ, ಅವರು ಆರಂಭ(Start)ದಲ್ಲಿಯೇ ಎಲ್ಲವನ್ನು ಕಳೆದುಕೊಳ್ಳುತ್ತಾರೆ. ಯಶಸ್ಸು (Win or Success) ಬೇಕಾದ್ರೆ ಅದರ ಹಿಂದೆ ಸತತ ಪರಿಶ್ರಮ (Hard working) ಮತ್ತು ನಾನು ಗೆಲ್ಲುವೆ ಎಂಬ ಛಲ ಇರಬೇಕು. ಇದೀಗ ಸಣ್ಣ ಜೀವಿಯೊಂದು ತನ್ನ ಸತತ ಹೋರಾಟದ ಫಲವಾಗಿ ತನ್ನ ಪ್ರಾಣ (Life) ಉಳಿಸಿಕೊಂಡಿದೆ. ಆ ವಿಡಿಯೋ ಸೋಶಿಯಲ್ ಮೀಡಿಯಾ(Social Media)ದಲ್ಲಿ ವೈರಲ್ (Viral Video) ಆಗ್ತಿದೆ. ತನ್ನ ಸ್ವಂತ ಬಲದಿಂದ ಆ ಪ್ರಾಣಿ ಇಂದು ಬದುಕಿದೆ. ಅದೇ ರೀತಿ ಮನುಷ್ಯ ಸಹ ಹೋರಾಟದ ಭಾವನೆಯನ್ನು ಮೈಗೂಡಿಸಿಕೊಂಡಿರಬೇಕು.


ಬಿಟ್ಟುಕೊಡದವರ ಭವಿಷ್ಯದಲ್ಲಿ ಗೆಲುವು ಬರೆಯಲಾಗಿರುತ್ತದೆ ಎಂಬುದನ್ನು ಒಂದು ಕಪ್ಪೆ ಸಾಬೀತುಪಡಿಸಿದೆ. ತನಗಿಂತ 10 ಪಟ್ಟು ದೊಡ್ಡ ಮತ್ತು ಬಲಶಾಲಿಯಾದ ಜೀವಿಯಿಂದ ತನ್ನನ್ನು ತಾನು ಉಳಿಸಿಕೊಂಡಿದೆ, ಸಾವಿನ ಪಾಶದಲ್ಲಿ ಸಿಲುಕಿದ್ದ ಕಪ್ಪೆ ಹೊರ ಬಂದಿರುವ ವಿಡಿಯೋ ಹಲವರಿಗೆ ಸ್ಪೂರ್ತಿಯಾಗಿದೆ.


ವಿಷಕಾರಿ ಹಾವು ತನ್ನ ಬಾಯಿಂದ ಹಿಡಿದರೂ ಈ ಕಪ್ಪೆ ಮಾತ್ರ ತನ್ನ ಭರವಸೆ ಕಳೆದುಕೊಂಡಿರಲಿಲ್ಲ. ಹಾವು ಬಲವಾಗಿಯೇ ಕಪ್ಪೆ ಕಾಲನ್ನು ಹಿಡಿದುಕೊಂಡಿತ್ತು. ಆದರೂ ಕಪ್ಪೆ ತನ್ನ ಪ್ರಾಣ ಉಳಿಸಿಕೊಳ್ಳಲು ಹೋರಾಡುತ್ತಿತ್ತು. ಈ ಅದ್ಭುತ ವಿಡಿಯೋವನ್ನು ಐಎಫ್ ಎಸ್ ಅಧಿಕಾರಿ ಸುಶಾಂತ್ ನಂದಾ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.


ಇದನ್ನೂ ಓದಿ:  Viral Video: ಇದು ನೋಡೋಕೆ ಮಾತ್ರ ವಿಂಟೇಜ್ ರೇಡಿಯೋ: ಈ ಚಾಕೊಲೇಟ್ ಹೇಗೆ ಸಿದ್ಧವಾಯ್ತು ಅಂತ ವಿಡಿಯೋ ನೋಡಿ


ಹಾವಿನ ಬಾಯಿಯಲ್ಲಿ ಸಿಲುಕಿದ್ರೂ ಜೀವಂತವಾಗಿ ಬಂದ ಕಪ್ಪೆ


ಕಪ್ಪೆಯನ್ನು ತನ್ನ ಬೇಟೆಯನ್ನಾಗಿ ಮಾಡಿಕೊಳ್ಳುವಲ್ಲಿ ಹಾವು ಬಹುತೇಕ ಯಶಸ್ಸನ್ನು ಸಾಧಿಸಿತ್ತು. ಕಪ್ಪೆಯ ಒಂದು ಕಾಲನ್ನು ತನ್ನ ಬಾಯಿಯೊಳಗೆ ಹಿಡಿದುಕೊಂಡಿತ್ತು. ಒಂದು ವೇಳೆ ನನ್ನಿಂದ ಆಗಲ್ಲ ಅಂತ ಶರಣಾಗಿದ್ರೆ ಕಪ್ಪೆ ಜೀವ ಹೋಗಿರುತ್ತಿತ್ತು. ಆದ್ರೆ ಆ ಪುಟ್ಟ ಕಪ್ಪೆ ಹಾಗೆ ಮಾಡಲಿಲ್ಲ. ಬದಲಾಗಿ ತನ್ನ ಮುಂದಿನ ಎರಡು ಕಾಲುಗಳಿಂದ ಗೇಟ್ ಮೇಲೆ ಏರಲು ಪ್ರಯತ್ನಿಸಿದೆ.ಕಪ್ಪೆ ಗೇಟ್ ಹತ್ತಲೂ ಪ್ರಯತ್ನಿಸಿದರೆ ಹಾವು ಸಹ ಸರಳವಾಗಿ ತನ್ನ ಬೇಟೆ ಬಿಟ್ಟುಕೊಡಲು ಸಿದ್ಧವಿರಲಿಲ್ಲ. ಸಾಧ್ಯವಾದಷ್ಟು ಕಪ್ಪೆಯನ್ನು ತನ್ನ ಆಹಾರ ಮಾಡಿಕೊಳ್ಳಲು ಹಾವು ಪ್ರಯತ್ನಿಸುತ್ತಿತ್ತು. ಒಂದು ಕಡೆ ಹಾವು ಕೆಳಗೆ ಎಳೆಯುತ್ತಿದ್ರೆ, ಮತ್ತೊಂದು ಕಡೆ ತನ್ನ ಪುಟ್ಟ ಮುಂಗಾಲು ಮೇಲೆ ತನ್ನೆಲ್ಲ ಶಕ್ತಿಯನ್ನು ಹಾಕಿ ಕಪ್ಪೆ ಮೇಲೆ ಏರುತ್ತಿತ್ತು.


ಇಲ್ಲಿ ಎರಡೂ ಜೀವಿಗಳ ಜೀವನದ ಪ್ರಶ್ನೆ ಎದ್ದು ಕಾಣುತ್ತಿತ್ತು. ಹಾವಿಗೆ ತನ್ನ ಆಹಾರ ಪಡೆದುಕೊಳ್ಳುವ ಜಿದ್ದು, ಇತ್ತ ತನ್ನ ಜೀವ ಉಳಿಸಿಕೊಳ್ಳುವ ಛಲ. ಈ ಜಿದ್ದಾಜಿದ್ದಿನ ಹೋರಾಟ ನೋಡುಗರನ್ನು ಬೆಚ್ಚಿ ಬೀಳಿಸಿದೆ. ಈ ಹೋರಾಟದಲ್ಲಿ ಗೆಲ್ಲುವ ಮೂಲಕ ಕಪ್ಪೆ ತನ್ನ ಪ್ರಾಣ ಉಳಿಸಿಕೊಂಡಿದೆ.


ಹಾವಿನ ಬಾಯಿಂದ ಮುಕ್ತಿ ಸಿಗುತ್ತಿದ್ದಂತೆ ಕಪ್ಪೆ ಪಲಾಯನ


ಇನ್ನು ಹಾವಿನ ಬಾಯಿಂದ ಮುಕ್ತಿ ಸಿಗುತ್ತಿದ್ದಂತೆ ಕಪ್ಪೆ ಕ್ಷಣಾರ್ಧದಲ್ಲಿ ಕಪ್ಪೆ ಗೇಟ್ ಮೇಲೆ ಕುಳಿತಿದೆ, ಇತ್ತ ಕಪ್ಪೆ ತಪ್ಪಿಸಿಕೊಳ್ಳುತ್ತಿದ್ದಂತೆ ಹಾವು ಕೆಳಗೆ ಬಿದ್ದಿದೆ. ಹಾವು ಮೇಲೆರಲು ಎರಡು ಬಾರಿ ಪ್ರಯತ್ನಿಸಿದರೂ ಅದು ಯಶಸ್ವಿಯಾಗಿಲ್ಲ ತನ್ನ ಎಲ್ಲ ಶಕ್ತಿಯನ್ನು ಬಳಸಿ ಪ್ರಾಣಾಪಾಯದಿಂದ ಪಾರಾದ ಕಪ್ಪೆ ಮತ್ತೆ ಯಾವುದೇ ತಪ್ಪು  ಮಾಡಲು ಸಿದ್ಧವಿರಲಿಲ್ಲ. ಕಳೆಗೆ ಇಳಿಯದೇ ಗೇಟ್ ಮೇಲ್ಭಾಗದಿಂದಲೇ. ಜಾಣ ಕಪ್ಪೆ ಎರಡು ಮತ್ತು ಮೂರನೇ ನೆಗತಕ್ಕೆ ಎಲ್ಲಿಂದ ಜಾಗ ಖಾಲಿ ಮಾಡಿದೆ. ಹಾವು ಹಾಗೆ ಕೆಳಗೆ ಹೋಗುತ್ತದೆ.


ಇದನ್ನೂ ಓದಿ:  ಗೆಳತಿಗಾಗಿ ದೂರವಾದ ಪತಿ, ಮನೆಯಲ್ಲಿ ಅಳುತ್ತಾ ಕೂರದೇ FB Live ಬಂದ ಮಹಿಳೆ ಮಾಡಿದ ಕೆಲಸ ಕಂಡು ನೆಟ್ಟಿಗರು ಶಾಕ್


ಎಂತಹ ಕಷ್ಟದ ಸಮಯ ಬಂದ್ರೂ ಆರಂಭದಲ್ಲಿಯೇ ಸೋಲು ಒಪ್ಪಿಕೊಳ್ಳಬಾರದು, ನಮ್ಮ ಕೊನೆಯ ಶಕ್ತಿಯವರೆಗೂ ಹೋರಾಟ ನಡೆಸಬೇಕು. ಈ ವಿಡಿಯೋದಲ್ಲಿ ಎರಡೂ ಜೀವಿಗಳು ಕೊನೆಯವರೆಗೂ ಹೋರಾಟ ನಡೆಸಿವೆ, ಪ್ರತಿ ಸಮಸ್ಯೆಯನ್ನು ದೃಢವಾಗಿ ಎದುರಿಸಿದ್ರೆ  ಮಾತ್ರ ಗಲುವು ನಮ್ಮದಾಗಲಿದೆ ಅನ್ನೋದಕ್ಕೆ ಈ ವಿಡಿಯೋ ಸಾಕ್ಷಿಯಾಗಿದೆ.

Published by:Mahmadrafik K
First published: