Viral News: ಮದುವೆಯಲ್ಲಿ ವೇದಿಕೆ ಮೇಲೆಯೇ ವರ-ವಧುವಿಗೆ ಮದ್ಯ ಕುಡಿಸಿದ ಗೆಳೆಯರು: ಹೇಗೆ ಗೊತ್ತಾ?

ಇಬ್ಬರು ಗೆಳೆಯರು ಗ್ಲಾಸ್ ನಲ್ಲಿರುವ ಮದ್ಯವನ್ನು ಸಿರಿಂಜ್ ನಲ್ಲಿ ತೆಗೆದುಕೊಂಡು ಮ್ಯಾಂಗೋ ಸ್ಲೈಸ್ ಪ್ಯಾಕೆಟ್ ಗೆ ತುಂಬಿದ್ದಾರೆ. ಈ ಎಲ್ಲ ದೃಶ್ಯಗಳನ್ನು ಓರ್ವ ತನ್ನ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾನೆ

ವರ ಮತ್ತು ವಧು

ವರ ಮತ್ತು ವಧು

  • Share this:
ಕೋವಿಡ್ -19 ನಿರ್ಬಂಧಗಳು (COVID 19 Rules) ಸಡಿಲಗೊಂಡ ಬಳಿಕ ಮದುವೆಗಳು (Marriages) ತಮ್ಮ ಹಳೆಯ ಖದರ್ ಪಡೆದುಕೊಂಡಿವೆ. ಎಲ್ಲರೂ ತಮ್ಮಿಷ್ಟದಂತೆ ಮದುವೆ ಮಾಡಿಕೊಳ್ಳುತ್ತಿದ್ದು, ಈ ಸುಂದರ ಕ್ಷಣಗಳ ವಿಡಿಯೋಗಳು (Wedding Videos) ಸೋಶಿಯಲ್ ಮೀಡಿಯಾ(Social Media)ದಲ್ಲಿ ವೈರಲ್ ಆಗ್ತಿವೆ. ಇನ್ನು ಸೋಶಿಯಲ್ ಮೀಡಿಯಾ ಓಪನ್ ಮಾಡಿದ್ರೆ ಸಾಕು, ಮದುವೆಯಲ್ಲಿ ವಧು-ವರರ ಡ್ಯಾನ್ಸ್ (Bride And Groom Dance), ಗೆಳೆಯರ ತಮಾಷೆ ಮತ್ತು ಸಂಪ್ರದಾಯದ ವಿಡಿಯೋಗಳು ನೋಡಲು ಸಿಗುತ್ತವೆ. ಮದುವೆಯಲ್ಲಿ ವರನಿಗೆ ಗೆಳೆಯರು (Groom Friends) ತಮಾಷೆ ಮಾಡೋದು ಸಾಮಾನ್ಯ. ಕೆಲವೊಮ್ಮೆ ವಿಚಿತ್ರ ಗಿಫ್ಟ್ ಗಳನ್ನು ನೀಡುವ ಮೂಲಕ ನವಜೋಡಿಯನ್ನು ಇಕ್ಕಟ್ಟಿಗೆ ಸಿಲುಕಿಸುತ್ತಾರೆ. ವೇದಿಕೆ ಮೇಲೆ ನಡೆಯುವ ಸಣ್ಣ ತರಲೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಈ ವಿಡಿಯೋದಲ್ಲಿ ವರನಿಗೆ ಆತನ ಗೆಳೆಯರು ಮದ್ಯ ಕುಡಿಸಿದ್ದಾರೆ. ತಾನು ಕುಡಿಯುತ್ತಿರುವ ಜ್ಯೂಸ್ ನಲ್ಲಿ ಮದ್ಯ ಬೆರೆಕೆ ಆಗಿರುವ ವಿಷಯ ತಿಳಿಯುತ್ತಿದ್ದಂತೆ ವರ ಒಂದು ಕ್ಷಣ ಶಾಕ್ ಆಗಿದ್ದಾನೆ. ಸದ್ಯ ಈ ವಿಡಿಯೋ ನೋಡಿದ ನೆಟ್ಟಿಗರು ಮಿಶ್ರ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಇಲ್ಲಿ ಮದ್ಯ ಮಿಶ್ರಿತ ಜ್ಯೂಸ್ ನ್ನು ವಧುವಿಗೂ ಸಹ ನೀಡಲಾಗಿದೆ.

ಸ್ಲೈಸ್ ನಲ್ಲಿ ಮದ್ಯ ತುಂಬಿಸಿದ ಗೆಳೆಯರು

ಇಬ್ಬರು ಗೆಳೆಯರು ಗ್ಲಾಸ್ ನಲ್ಲಿರುವ ಮದ್ಯವನ್ನು ಸಿರಿಂಜ್ ನಲ್ಲಿ ತೆಗೆದುಕೊಂಡು ಮ್ಯಾಂಗೋ ಸ್ಲೈಸ್ ಪ್ಯಾಕೆಟ್ ಗೆ ತುಂಬಿದ್ದಾರೆ. ಈ ಎಲ್ಲ ದೃಶ್ಯಗಳನ್ನು ಓರ್ವ ತನ್ನ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾನೆ. ಮದ್ಯವನ್ನು ತುಂಬಿದ ಸ್ಲೈಸ್ ಪ್ಯಾಕೆಟ್ ಸಹಿತ ವರನ ಬಳಿ ತೆರಳಿದ್ದಾರೆ. ಸ್ಟ್ರಾ ಹಾಕಿ ವರನಿಗೆ ಜ್ಯೂಸ್ ಅಂತ ಹೇಳಿ ಕುಡಿಸಿದ್ದಾರೆ.

ಇದನ್ನೂ ಓದಿ: Onlineನಲ್ಲಿ ಬಿಕಿನಿ ಖರೀದಿಸಿದ ಮಹಿಳೆಗೆ ವಿಚಿತ್ರ ಎಚ್ಚರಿಕೆಯ ಸಂದೇಶ 

ಜ್ಯೂಸ್ ಅಂತ ತಿಳಿದು ವರ ಕುಡಿದಿದ್ದಾನೆ. ಆದ್ರೆ ಕೆಲ ಸೆಕೆಂಡ್ ಗಳಲ್ಲಿ ಆತನಿಗೆ ಮದ್ಯ ಇರೋದು ಗೊತ್ತಾದ ಕೂಡಲೇ ಕಣ್ಮುಚ್ಚಿ ಹಿಂದೆ ಸರಿದಿದ್ದಾನೆ. ಇದೇ ಜ್ಯೂಸ್ ಸಹ ವಧುವಿಗೆ ನೀಡಿದ್ದಾರೆ. ಜ್ಯೂಸ್ ಕುಡಿದ ವಧು ಏನು ಹೇಳಿದಳು ಎಂಬುವುದು ತಿಳಿದು ಬಂದಿಲ್ಲ. ಈ ಮದುವೆ ಎಲ್ಲಿ ನಡೆದಿದೆ ಎಂಬುದರ ಮಾಹಿತಿ ಲಭ್ಯವಾಗಿಲ್ಲ. ವಧು ಮತ್ತು ವರನ ವೇಷಭೂಷಣ ನೋಡಿದ್ರೆ ಇದು ಬಂಗಾಳ ಕುಟುಂಬದ ಮದುವೆ ಎಂದು ತಿಳಿಯುತ್ತದೆ.
ವಿಡಿಯೋಗೆ ನೆಟ್ಟಿಗರ ಮಿಶ್ರ ಪ್ರತಿಕ್ರಿಯೆ

ಇನ್ನೂ ಈ ವಿಡಿಯೋ ನೋಡಿದ ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ವರನಿಗೆ ವೇದಿಕೆ ಮೇಲೆ  ಎಣ್ಣೆ ಕುಡಿಸುವ ಐಡಿಯಾ ಚೆನ್ನಾಗಿತ್ತು. ಆದ್ರೆ ವಧುವಿಗೆ ಮದ್ಯ ನೀಡಿರೋದು ಸರಿಯಲ್ಲ ಎಂದು ಕಮೆಂಟ್ ಮಾಡಲಾಗಿದೆ. brides_special ಇನ್ ಸ್ಟಾಗ್ರಾಂ ಖಾತೆಯಲ್ಲಿ ಈ ವಿಡಿಯೋ ಅಪ್ಲೋಡ್ ಮಾಡಲಾಗಿದೆ.

Viral News: ಹಿಂದೂ, ಮುಸ್ಲಿಂ, ಕ್ರೈಸ್ತ ಧರ್ಮದಂತೆ ಮದುವೆಯಾದ ಜೋಡಿ

ನಮ್ಮ ಭಾರತದಲ್ಲಿಯ ಮದುವೆಗಳನ್ನು ನೋಡೋದು ಅಂದ್ರೆ ಕಣ್ಣಿಗೆ ಹಬ್ಬ ಇದ್ದಂತೆ. ಮದುವೆಯಲ್ಲಿಯ ಶಾಸ್ತ್ರಗಳು ಸಹ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಭಿನ್ನವಾಗಿ ಇರುತ್ತವೆ. ಆದ್ರೆ ಕೆಲ ದಿನಗಳಿಂದ ಧರ್ಮ ಧರ್ಮಗಳ ನಡುವೆ ಗಲಾಟೆ ಉಂಟಾಗುತ್ತಿರುವ ಪ್ರಕರಣಗಳು ವರದಿ ಆಗುತ್ತಿವೆ.

ತಮಿಳುನಾಡಿನ ಮೈಲಾಡುತುರೈನಲ್ಲಿ ಈ ವಿಶೇಷ ಮದುವೆ ನಡೆದಿದೆ. ಪುರುಷೋತ್ತಮನ್ ಮತ್ತು ಭುವನೇಶ್ವರಿ ಮೂರು ಧರ್ಮದ ಪ್ರಕಾರ ಮದುವೆಯಾದ ಜೋಡಿ. ತಮಿಳುನಾಡಿನ ಮೈಲಾಡುತುರೈನಲ್ಲಿ ಈ ವಿಶೇಷ ಮದುವೆ ನಡೆದಿದೆ. ಪುರುಷೋತ್ತಮನ್ ಮತ್ತು ಭುವನೇಶ್ವರಿ ಮೂರು ಧರ್ಮದ ಪ್ರಕಾರ ಮದುವೆಯಾದ ಜೋಡಿ.

ಇದನ್ನೂ ಓದಿ:  Viral News: ಮದ್ವೆ ಆದ್ಮೇಲೆ ಗೊತ್ತಾಯ್ತು, ಅವಳು ಸಲಿಂಗಿ, ಅವನು ದ್ವಿಲಿಂಗಿ: ಈಗ ಮತ್ತೊಬ್ಬಾಕೆಯನ್ನು ಬರಮಾಡಿಕೊಂಡ ಜೋಡಿ

ಪುರುಷೋತ್ತಮನ್ ಮೈಲಾಡುತುರೈನಲ್ಲಿ ಗ್ರಾಮ ಆಡಳಿತ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕುಟುಂಬಸ್ಥರೇ ನಿಶ್ಚಯಿಸಿದ ಯುವತಿ ಭುವನೇಶ್ವರಿ ಜೊತೆ ಪುರುಷೋತ್ತಮನ್ ವಿಭಿನ್ನವಾಗಿ ಮದುವೆ ಆಗಿದ್ದಾರೆ. ಈ ವಿಶೇಷ ಮದುವೆ ಮಾರ್ಚ್ 26ರಂದು ಮುಸ್ಲಿಂ ಮತ್ತು ಕ್ರಿಶ್ಚಿಯನ್ ಸಂಪ್ರದಾಯದಂತೆ ನಡೆದಿದೆ. ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಮಾರ್ಚ್ 27ರಂದು ಹಿಂದೂ ಸಂಪ್ರದಾಯದಂತೆ ನಡೆದಿದೆ.
Published by:Mahmadrafik K
First published: