Viral News: ಫ್ಲಾಟ್​ನಲ್ಲಿ ಸೇರಿಕೊಳ್ಳಬೇಕಂದ್ರೆ ಈ ಪ್ರಶ್ನೆಗಳಿಗೆಲ್ಲಾ ಉತ್ತರಿಸಬೇಕಾ? ಇಲ್ಲಿದೆ ನೋಡಿ ವೈರಲ್ ಪ್ರಶ್ನಾವಳಿ

ಬೆಂಗಳೂರಿನ ಮಹಿಳೆಯೊಬ್ಬರು ಫ್ಲ್ಯಾಟ್‌ನಲ್ಲಿರುವ ನಿವಾಸಿಗಳಿಂದ, ಸ್ನೇಹಿತರೇ ಸೇರಿಕೊಂಡು ಮಾಡಿರುವ ಒಂದು ವಿಲಕ್ಷಣವಾದ ಪ್ರಶ್ನಾವಳಿಯನ್ನು ಎದುರಿಸಿದರು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಸಾಮಾನ್ಯವಾಗಿ ನಾವು ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ (Study) ಅಥವಾ ಕೆಲಸವನ್ನು(Job) ಹುಡುಕಿಕೊಂಡು ಬೆಂಗಳೂರಿಗೆ (Bengaluru) ಹೋಗುವುದುಂಟು. ಹೀಗೆ ಹೋಗುವ ಮುಂಚೆ ಇರಲು ಒಂದು ಮನೆ (House) ಬಾಡಿಗೆಗೆ ನೋಡಬೇಕಲ್ಲವೇ? ಹೌದು, ಬೆಂಗಳೂರಿನಂತಹ ಮಹಾ ನಗರಗಳಲ್ಲಿ ಮನೆಗಳಿಗೆ ಏನು ಕೊರತೆ ಇರುವುದಿಲ್ಲ, ಆದರೆ ಒಬ್ಬರೇ ಇದ್ದರೆ ಅದು ತುಂಬಾನೇ ದುಬಾರಿ ಆಗುತ್ತದೆ. ಹಾಗಂತ ಈಗಾಗಲೇ ನಮಗೆ ಗೊತ್ತಿರುವ ನಮ್ಮ ಸ್ನೇಹಿತರು (Friends) ಅಥವಾ ಗೊತ್ತಿರುವ ಜನರು ವಾಸ ಮಾಡುತ್ತಿರುವ ಬಾಡಿಗೆಯ ಫ್ಲ್ಯಾಟ್‌ನಲ್ಲಿ ನಾವು ಹೋಗಿ ಸೇರಿಕೊಂಡು ಬಿಟ್ಟರೆ, ಒಳ್ಳೆಯ ಮನೆ ಸಹ ಸಿಕ್ಕಂತಾಗುತ್ತದೆ ಮತ್ತು ಅಷ್ಟೊಂದು ದುಬಾರಿಯೂ ಆಗುವುದಿಲ್ಲ ಎಂದು ನಮ್ಮೆಲ್ಲರ ಯೋಚನೆ ಆಗಿರುತ್ತದೆ. ಒಟ್ಟಿನಲ್ಲಿ ಹೇಳುವುದಾದರೆ ಬೇರೆ ನಗರಕ್ಕೆ ಹೋಗಿ ನಮ್ಮ ಬಜೆಟ್‌ಗೆ ಸರಿ ಹೊಂದುವಂತೆ ಅಲ್ಲಿ ಇರಲು ಒಂದು ಮನೆಯನ್ನು ಅಥವಾ ರೂಂ ಹುಡುಕುವುದು ತುಂಬಾನೇ ಕಷ್ಟದ ಕೆಲಸ.

ಇನ್ನು, ನಾವು ಯಾವುದೇ ಮನೆಯನ್ನು ಹುಡುಕಿಕೊಂಡು ಹೋದರೂ ಅಲ್ಲಿ ಈಗಾಗಲೇ ವಾಸವಿರುವವರು ನಮಗೆ ಕೆಲವು ಪ್ರಶ್ನೆಗಳನ್ನು ಕೇಳಿ ಅದಕ್ಕೆ ಉತ್ತರವನ್ನು ಪಡೆದುಕೊಂಡ ನಂತರವೇ ಅಲ್ಲಿ ಇರಲು ಅನುಮತಿ ನೀಡುತ್ತಾರೆ. ಆದರೆ ಸಾಮಾಜಿಕ ಮಾಧ್ಯಮದಲ್ಲಿ ಇತ್ತೀಚೆಗೆ ಒಂದು ವಿಚಿತ್ರವಾದ ಪ್ರಶ್ನಾವಳಿಯೊಂದು ಸಿಕ್ಕಾಪಟ್ಟೆ ಹರಿದಾಡುತ್ತಿದೆಯಂತೆ. ಹೌದು, ಬೆಂಗಳೂರಿನ ಮಹಿಳೆಯೊಬ್ಬರು ಫ್ಲ್ಯಾಟ್‌ನಲ್ಲಿರುವ ನಿವಾಸಿಗಳಿಂದ, ಸ್ನೇಹಿತರೇ ಸೇರಿಕೊಂಡು ಮಾಡಿರುವ ಒಂದು ವಿಲಕ್ಷಣವಾದ ಪ್ರಶ್ನಾವಳಿಯನ್ನು ಎದುರಿಸಿದರು.

ಮಹಿಳೆಯ ಅನುಭವ ಸಖತ್ ವೈರಲ್:

ಟ್ವಿಟರ್ ಪೋಸ್ಟ್ ರೂಪದಲ್ಲಿ ಮಹಿಳೆ ಹಂಚಿಕೊಂಡ ಅನುಭವವು ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ. "ಬೆಂಗಳೂರಿನಲ್ಲಿ ಅಪಾರ್ಟ್‌ಮೆಂಟ್‌ ಅನ್ನು ಹುಡುಕುವುದಕ್ಕೆ ಇತ್ತೀಚಿನ ದಿನಗಳಲ್ಲಿ ಸಾಂಸ್ಕೃತಿಕ ಸಂದರ್ಶನದ ಸುತ್ತೊಂದನ್ನು ನಾವು ಎದುರಿಸಬೇಕಾಗುತ್ತದೆ ಎಂದು ತೋರುತ್ತದೆ" ಎಂದು ಆಸ್ತಾ ಎಂಬ ಮಹಿಳೆ ತನ್ನ ಟ್ವಿಟ್ಟರ್‌ನಲ್ಲಿ ಆ ವಿಚಿತ್ರವಾದ ಪ್ರಶ್ನಾವಳಿಯನ್ನು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: Twitter: ಟ್ವಿಟರ್​ನ ಹಕ್ಕಿಯ ಲೋಗೊದ ಹಿಂದಿನ ಸ್ವಾರಸ್ಯಕರವಾದ ಕಥೆ ಗೊತ್ತಾ? ಅದನ್ನು ಮಾಡಿದವರು ಯಾರು?

ಇಲ್ಲಿದೆ ನೋಡಿ ವೈರಲ್ ಪ್ರಶ್ನೆಗಳು:

ತನ್ನ ಆಹಾರ ಪದ್ಧತಿ, ಯಾವ ಊರಿನಿಂದ ಬಂದವರು, ಇದಕ್ಕೂ ಮುಂಚೆ ಮನೆಯಿಂದ ಹೊರಗಡೆ ಇದ್ದೀರಾ ಮತ್ತು ಕಚೇರಿ ಸಮಯದ ಬಗ್ಗೆ ನಿಯಮಿತವಾದ ಪ್ರಶ್ನೆಗಳ ಹೊರತಾಗಿ, ಸೂಪರ್ ಹೀರೋಗಳ ಬಗ್ಗೆಯೂ ಅದು ಪ್ರಶ್ನೆಯನ್ನು ಹೊಂದಿತ್ತು. "ಒಂದು ಸಂಜೆ ನೀವು ಮನೆಗೆ ಬಂದರೆ, ಸ್ಪೈಡರ್ ಮ್ಯಾನ್, ಬ್ಯಾಟ್ ಮ್ಯಾನ್, ಐರನ್ ಮ್ಯಾನ್, ಕ್ಯಾಪ್ಟನ್ ಅಮೆರಿಕಾ ಮತ್ತು ಬ್ಲ್ಯಾಕ್ ವಿಡೋಗಳು ನಿಮ್ಮ ಕೋಣೆಯಲ್ಲಿರುವುದನ್ನು ನೋಡುತ್ತೀರಿ, ನೀವು ಅದರಲ್ಲಿ ಯಾರನ್ನು ಮೊದಲು ಹೊಡೆಯುತ್ತೀರಿ" ಎಂಬುದು ಮನೆಯಲ್ಲಿ ವಾಸಿಸುವ ಇತರ ಸದಸ್ಯರ ಪ್ರಶ್ನೆಗಳಲ್ಲಿ ಒಂದಾಗಿತ್ತು. "ನೀವು ರಾಚೆಲ್, ಮೋನಿಕಾ ಅಥವಾ ಫೋಬೆಯೇ?" ಎಂದು ಮತ್ತೊಂದು ಪ್ರಶ್ನೆ ಸಹ ಆ ಪ್ರಶ್ನಾವಳಿಯಲ್ಲಿ ಕೇಳಲಾಗಿತ್ತು.

ಇಷ್ಟೇ ಅಲ್ಲದೆ ಆ ಪ್ರಶ್ನಾವಳಿಯಲ್ಲಿ ‘ನೀವು ಸಾಮಾನ್ಯವಾಗಿ ವಾರಾಂತ್ಯದ ದಿನಗಳನ್ನು ಹೇಗೆ ಕಳೆಯಲು ಬಯಸುವಿರಿ’ ಎಂಬ ಪ್ರಶ್ನೆ ಸಹ ಆ ಪ್ರಶ್ನಾವಳಿಯಲ್ಲಿ ಇರುವುದನ್ನು ನೋಡಬಹುದಾಗಿದೆ. ಹೆಚ್ಚಿನ ಸಂಖ್ಯೆಯ ಟ್ವಿಟ್ಟರ್‌ ಬಳಕೆದಾರರು ಆಸ್ತಾ ಅವರ ಪೋಸ್ಟ್‌ಗೆ ತಮ್ಮ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಅವರಲ್ಲಿ ಪಾಖಿ ಶರ್ಮಾ ಕೂಡ ಒಬ್ಬರು, ಅವರು ಈ ಪ್ರಶ್ನಾವಳಿಯ ಸೃಷ್ಟಿಕರ್ತರಲ್ಲಿ ಒಬ್ಬರು ಎಂದು ಹೇಳಿಕೊಂಡರು.

ಇದನ್ನೂ ಓದಿ: Fancy Number Plate: ಇದು ವಿಶ್ವದ ದುಬಾರಿ ನಂಬರ್ ಪ್ಲೇಟ್, ಈ ಹಣಕ್ಕೆ ಇನ್ನೊಂದು ಹೊಸ ಕಾರು ಖರೀದಿಸಬಹುದಿತ್ತು!

ಆಸ್ತಾ ಅವರ ಪೋಸ್ಟ್​ಗೆ ಉತ್ತಮ ಪ್ರತಿಕ್ರಿಯೆ:

"ನಮ್ಮ ಈ ಸಂದರ್ಶನವನ್ನು ವೈರಲ್ ಮಾಡಿದ್ದಕ್ಕಾಗಿ ಆಸ್ತಾ ಅವರಿಗೆ ಧನ್ಯವಾದಗಳು. ನೀವು 150 ಅಪ್ಲಿಕೇಶನ್‌ಗಳನ್ನು ಹೊಂದಿರುವಾಗ, ಫಿಲ್ಟರಿಂಗ್ ಅತ್ಯಗತ್ಯವಾಗುತ್ತದೆ. ಕೇವಲ ಬಾಡಿಗೆಯನ್ನು ಪಾವತಿಸಲು ಸಾಧ್ಯವಾಗುವುದು ಒಂದೇ ಮಾನದಂಡವಲ್ಲ, ದೇವಿನಾ ಕುಮಾರ್ ಮತ್ತು ಚಾಸಿಯಾ ನೇಹಾ ಅವರಿಗೆ ಹೇಳುತ್ತಾ ನಾವು ಉತ್ತಮವಾಗಿ ಕಾರ್ಯ ನಿರ್ವಹಿಸಿದ್ದೇವೆ" ಎಂದು ಆಸ್ತಾ ಅವರ ಪೋಸ್ಟ್‌ಗೆ ಪ್ರತಿಕ್ರಿಯೆ ನೀಡುತ್ತಾ ಬರೆದಿದ್ದಾರೆ.

ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು ಪ್ರಶ್ನಾವಳಿಯನ್ನು ಇಷ್ಟ ಪಟ್ಟರು, ಆದರೆ ಅನೇಕ ಪ್ರಶ್ನೆಗಳನ್ನು ಸಹ ಹೊಂದಿದ್ದರು. "ಅವರು ಇನ್ನೂ 2022 ರಲ್ಲಿ ಸ್ನೇಹಿತರ ವ್ಯಕ್ತಿತ್ವ ರಸಪ್ರಶ್ನೆಯನ್ನು ಏಕೆ ಮಾಡುತ್ತಿದ್ದಾರೆ" ಎಂದು ಬಳಕೆದಾರರೊಬ್ಬರು ಕೇಳಿದ್ದಾರೆ. ಅನೇಕ ಜನರು ತಮ್ಮ ಸ್ವಂತ ಅನುಭವವನ್ನು ಹಂಚಿಕೊಂಡರು ಮತ್ತು ಈ ಅಸಂಬದ್ಧತೆಗೆ ಎಂದಿಗೂ ಉತ್ತರಿಸುವುದಿಲ್ಲ ಎಂದು ಸಹ ಹೇಳಿದರು.
Published by:guruganesh bhat
First published: