HOME » NEWS » Trend » FRIEND ASKS TO SPLIT BILL AFTER FRIEND ATE TWO FRENCH FRIES FROM HIS PLATE KVD

ನನ್ನ ಪ್ಲೇಟ್​​ನಲ್ಲಿ 2 ಚಿಪ್ಸ್ ತಿಂದಿದ್ದೀಯ ಅರ್ಧ ಬಿಲ್ ಕೊಡು ಎಂದ ಫ್ರೆಂಡ್ : ನೆಟ್ಟಿಗರು ಫುಲ್ ಗರಂ

ಇವನ್ಯಾರು ಗುರು 2 ಚಿಪ್ಸ್​ಗೆಲ್ಲಾ ದುಡ್ಡು ಕೇಳ್ತಾನೆ, ನಾನು ಫ್ರೆಂಡ್​ಗೆ ಕೊಟ್ಟಿರುವ ಸಾಲವನ್ನೇ ವಾಪಸ್​​ ಕೇಳಲು ಆಗದೆ ಸುಮ್ಮನಿದ್ದೇನೆ

Kavya V | news18-kannada
Updated:June 12, 2021, 2:22 PM IST
ನನ್ನ ಪ್ಲೇಟ್​​ನಲ್ಲಿ 2 ಚಿಪ್ಸ್ ತಿಂದಿದ್ದೀಯ ಅರ್ಧ ಬಿಲ್ ಕೊಡು ಎಂದ ಫ್ರೆಂಡ್ : ನೆಟ್ಟಿಗರು ಫುಲ್ ಗರಂ
ಸ್ನೇಹಿತನ ಮೆಸೇಜ್​
  • Share this:
ಪಾನೀಪುರಿ, ಗೋಬಿ, ಚಾಟ್ಸ್​​ ಸೆಂಟರ್​, ಬೀದಿ ಬದಿ ತಿಂಡಿ ಅಂತೆಲ್ಲಾ ಸ್ನೇಹಿತರ ಜೊತೆ ಹೋಗಿ ತಿನ್ನೋದು ಕಾಮನ್​​. ಹುಡುಗರು ಫೇವರೆಟ್​ ಅಡ್ಡಗಳಲ್ಲಿ ಟೀ-ಸಿಗರೇಟ್​ ಅಂತ ಗಂಟೆಗಟ್ಟಲೇ ಕಾಲಕಳಿತ್ತಾರೆ. ಇದಕ್ಕೆಲ್ಲಾ ಬಿಲ್​​ ಕೊಡೋದು ದೊಡ್ಡ ಮ್ಯಾಟರೇ ಅಲ್ಲ. ಫ್ರೆಂಡ್ಸ್​​ ಅಂದ ಮೇಲೆ ಒಂದು ದಿನ ನೀವು ಕೊಡ್ತಿರ, ಇನ್ನೊಂದು ದಿನ ಅವರು ಕೊಡ್ತಾರೆ. ಫ್ರೆಂಡ್​ಶಿಪ್​​ನಲ್ಲಿ ಬಿಲ್​​ ಒಂದು ವಿಷಯನೇ ಅಲ್ಲ. ಇನ್ನು ಹುಡುಗಿಯರ ಫ್ರೆಂಡ್​ಶೀಪ್​ ಬೇರೆನೇ ತರ ಇರುತ್ತೆ. ಎಲ್ಲಿ ಏನೇ ತಿಂದರೂ ಎಲ್ಲರೂ ಸಮನಾಗಿ ಬಿಗ್​ ಹಣವನ್ನು ಹಂಚಿಕೊಳ್ಳುತ್ತಾರೆ. ಆದರೆ ಇಲ್ಲೊಬ್ಬ ಕಂನ್ಜುಸ್​ ಫ್ರೆಂಡ್​​​ ಕೇವಲ 2 ಚಿಪ್ಸ್​​ ತಿಂದಿದ್ದಕ್ಕೆ ಅರ್ಧ ಬಿಲ್​ ಕೊಡು ಅಂದಿದ್ದಾನೆ.

ಟಿಕ್​ಟಾಕ್​ ಮಾಡುವ ಪೀಟರ್​ ಎಂಬಾತ ಸ್ನೇಹಿತರೊಬ್ಬರನ್ನು ರೆಸ್ಟೋರೆಂಟ್​​ನಲ್ಲಿ ಭೇಟಿಯಾಗಿದ್ದಾರೆ. ಈ ವೇಳೆ ಫ್ರೆಂಚ್​ ಫ್ರೈಸ್​ನ ಆರ್ಡರ್​​ ಮಾಡಿದ್ದಾರೆ. ಸ್ನೇಹಿತನ ಪ್ಲೇಟ್​ನಿಂದ ಕೇವಲ 2 ಚಿಪ್ಸ್​​ನ ಪೀಟರ್​ ತಗೊಂಡಿದ್ದರಂತೆ. ಫ್ರೆಂಡ್​​​ನ ಮೀಟ್​ ಮಾಡಿ ಮನೆಗೆ ಹಿಂತಿರುಗುತ್ತಿದ್ದಾಗ ಮೆಸೇಜ್​ ಬಂದಿದೆ. ನೀನು ನನ್ನ ಪ್ಲೇಟ್​ನಿಂದ 2 ಚಿಪ್ಸ್​ ತಗೊಂಡೆ ಅಲ್ವಾ ಎಂದು ಕೇಳಿದ್ದಾನೆ. ಪೀಟರ್​ ಹೌದು ತಿಂದೆ ಎಂದು ಉತ್ತರಿಸಿದ್ದಾರೆ. ಹಾಗಾದರೆ ಬಿಲ್​​​ನ ಅರ್ಧ ಹಣ ಕಳುಹಿಸು ಎಂದು ಮೆಸೇಜ್​​ ಮಾಡಿದ್ದಾನೆ. ಕೇವಲ 2 ಚಿಪ್ಸ್​ ತಿಂದಿದ್ದಕ್ಕೆ ಅರ್ಧ ಬಿಲ್​​ ಕೇಳಿ ಅಚ್ಚರಿ ಮೂಡಿಸಿದ್ದಾನೆ.

ಯಪ್ಪಾ ದೇವರೇ ಇಂಥ ಸ್ನೇಹಿತರು ಇರುತ್ತಾರಾ ಎಂದು ಪೀಟರ್​​ ತಮ್ಮ ಮೆಸೇಜ್​​ನ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ. ಜುಗ್ಗಾ ಸ್ನೇಹಿತನನ್ನು ಕಂಡು ನೆಟ್ಟಿಗರು ಫುಲ್​ ಕಮೆಂಟ್​ ಮಾಡಿದ್ದಾರೆ. ಈ ರೀತಿ ಇರಿಟೇಟ್​ ಮಾಡುವವರ ಜೊತೆ ಮತ್ತೆಂದೂ ಹೊರ ಹೋಗಬಾರದು. ಅರ್ಧ ಬಿಲ್​ನಿಂದ ಸ್ನೇಹಿತನ ಬಂಡವಾಳ ಗೊತ್ತಾಗಿದೆ ಎಂದು ಕಮೆಂಟಿಸಿದ್ದಾರೆ. ಇನ್ನು ಕೆಲವರು ಇವನ್ಯಾರು ಗುರು 2 ಚಿಪ್ಸ್​ಗೆಲ್ಲಾ ದುಡ್ಡು ಕೇಳ್ತಾನೆ, ನಾನು ಫ್ರೆಂಡ್​ಗೆ ಕೊಟ್ಟಿರುವ ಸಾಲದ ಹಣವನ್ನೇ ವಾಪಸ್​​ ಕೇಳಲು ಆಗದೆ ಸುಮ್ಮನಿದ್ದೇನೆ ಎಂದು ಪ್ರತಿಕ್ರಿಯಿಸಿದ್ದಾರೆ.

ಸದ್ಯ ಸ್ನೇಹಿತರ ಈ ಮೆಸೇಜ್​ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ನೆಟ್ಟಿಗರು ಬಿಲ್​ ಕೇಳಿದವನಿಗೆ ಛೀಮಾರಿ ಹಾಕುತ್ತಿದ್ದಾರೆ. ಅವನು ನಿಜವಾದ ಸ್ನೇಹಿತನೇ ಅಲ್ಲ, ಅಂತವರ ಸ್ನೇಹ ಒಳ್ಳೆದಲ್ಲ ಎಂದಿದ್ದಾರೆ.
Youtube Video

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
Published by: Kavya V
First published: June 12, 2021, 2:22 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories