13 ನೇ ಶುಕ್ರವಾರ ಎಂಬುದು ಮೂಢನಂಬಿಕೆಯ ಸಂಕೇತವಾಗಿದ್ದು ವಾರದ ಐದನೇ ದಿನದಂದು ಬಂದಾಗ ಇದನ್ನು ದುರದೃಷ್ಟದ ಸಂಕೇತ ಎಂಬುದಾಗಿ ಪರಿಗಣಿಸಲಾಗುತ್ತದೆ. ಪಾಶ್ಚಿಮಾತ್ಯ ಸಂಸ್ಕೃತಿಯಲ್ಲಿ ಈ ಮೂಢನಂಬಿಕೆಯನ್ನು ಬಲವಾಗಿ ನಂಬುತ್ತಾರೆ. 13 ನೇ ಶುಕ್ರವಾರ ಒಂದು ಪದವನ್ನು ಹೊಂದಿದ್ದು ಈ ದಿನ ಏಕೆ ದುರದೃಷ್ಟಕರ ಎಂಬುದನ್ನು ವಿವರಿಸುತ್ತದೆ. ಪರಾಸ್ಕೆವಿದೇಕತ್ರಿಫೋಬಿಯಾ, ಇದು ಟ್ರೈಸ್ಕೈಡೆಕಾಫೋಬಿಯಾದ ವಿಶೇಷ ರೂಪವಾಗಿದೆ, ಸಂಖ್ಯೆ 13 ರ ಭಯ ಇದನ್ನು ಸೂಚಿಸುತ್ತದೆ. 13 ನೇ ಸಂಖ್ಯೆಯು ದುರಾದೃಷ್ಟದ ಸಂಖ್ಯೆ ಎಂದೇ ಭಾವಿಸಿ ಹೆಚ್ಚಿನ ಹೋಟೆಲ್ ಕೊಠಡಿಗಳು 13 ನೇ ಸಂಖ್ಯೆಯನ್ನು ಹೊಂದಿಲ್ಲ. ಇನ್ನು ಎತ್ತರದ ಕಟ್ಟಡಗಳು 13 ನೇ ಫ್ಲೋರ್ ಎಂಬುದಾಗಿ ಹೆಸರಿಸಿಲ್ಲ. 12 ರಿಂದ ನೇರವಾಗಿ 14 ನೇ ಫ್ಲೋರ್ ಎಂಬುದಾಗಿ ಹೆಸರಿಸುತ್ತಾರೆ.
13 ನೇ ಸಂಖ್ಯೆಯನ್ನು ದುರಾದೃಷ್ಟವೆಂದು ಏಕೆ ಕರೆಯುತ್ತಾರೆ? ಇದು ಆರಂಭವಾದದ್ದು ಎಲ್ಲಿಂದ
ಹೆಚ್ಚಿನ ಸಂಸ್ಕೃತಿಗಳಲ್ಲಿ 13 ನೇ ಸಂಖ್ಯೆ ಮತ್ತು ಶುಕ್ರವಾರವನ್ನು ದುರಾದೃಷ್ಟಕರ ಎಂದು ನಂಬಲಾಗುತ್ತದೆ. ಮಾಜಿ ಕಾಲೇಜು ಪ್ರೊಫೆಸರ್ ಚಾರ್ಲ್ಸ್ ಪಣತಿ ಹೇಳುವಂತೆ ನಾರ್ಸ್ ಮಿಥಾಲಜಿಯಲ್ಲಿ 13 ನೇ ಸಂಖ್ಯೆ ಕೆಲವೊಂದು ಉಲ್ಲೇಖವನ್ನು ಹೊಂದಿದೆ. ಕೇಡಿನ ದೇವರು ಲೋಕಿ ವಲ್ಹಲ್ಲಾದಲ್ಲಿ ಏರ್ಪಸಿದ ಔತಣಕೂಟವೊಂದನ್ನು ಪ್ರವೇಶಿಸಿದಾಗ ಉಪಸ್ಥಿತರಿದ್ದ ದೇವರ ಹಾಜರಾತಿಯನ್ನು 13 ಕ್ಕೆ ತಂದ ಸಮಯದಲ್ಲಿ, ಕುರುಡ ದೇವರಾದ ಹೋಡರ್ ತನ್ನ ಸಹೋದರ ಬಾಲ್ಡರ್ ಅನ್ನು ಮೋಸದಿಂದ ವಿಷದ ಸಸ್ಯವಿರುವ ಬಾಣದಿಂದ ಕೊಂದನು. ಬಾಲ್ಡರ್ ಬೆಳಕಿನ ಆನಂದ ಹಾಗೂ ಒಳ್ಳೆಯತನದ ದೇವತೆಯಾಗಿದ್ದನು.
ಕ್ರಿಶ್ಚಿಯನ್ ಧರ್ಮದ ಪವಿತ್ರ ಪುಸ್ತಕವು ಸಹ ಕೆಲವು ಸುಳಿವುಗಳನ್ನು ಹೊಂದಿದ್ದು 13 ಅನ್ನು ಏಕೆ ದುರದೃಷ್ಟಕರವೆಂದು ಪರಿಗಣಿಸಲಾಗಿದೆ ಎಂಬುದರ ಒಂದು ವಿವರಣೆಯನ್ನು ನೀಡುತ್ತದೆ. ಜೀಸಸ್ಗೆ ದ್ರೋಹ ಮಾಡಿದ ಜುದಾಸ್ ಕೊನೆಯ ಭೋಜನಕ್ಕೆ ಕುಳಿತ 13 ನೇ ಅತಿಥಿ ಎಂಬುದಾಗಿ ಪರಿಗಣಿಸಲಾಗಿದೆ. ಇಂದಿಗೂ 13 ಜನರು ಭೋಜನಕ್ಕೆ ಕುಳಿತುಕೊಳ್ಳುವುದನ್ನು ದುರಾದೃಷ್ಟ ಎಂದು ಪರಿಗಣಿಸಲಾಗಿದೆ ಹಾಗೂ ಇದನ್ನು ನಿಷೇಧಿಸಲಾಗಿದೆ.
ಇನ್ನು ಶುಕ್ರವಾರವನ್ನು ಕೆಟ್ಟ ದಿನವಾಗಿ ಏಕೆ ಪರಿಗಣಿಸಲಾಗುತ್ತದೆ ಎಂಬುದನ್ನು ನೋಡಿದಾಗ ಈ ದಿನ ಹೆಚ್ಚು ಶುಭವಲ್ಲವೆಂದು ಸಂಪ್ರದಾಯವಾದಿಗಳು ನಂಬುತ್ತಾರೆ. ಇಂಗ್ಲೆಂಡ್ನಲ್ಲಿ ಶುಕ್ರವಾರವನ್ನು ಹ್ಯಾಂಗ್ಮ್ಯಾನ್ಸ್ ಡೇ ಎಂದು ಕರೆಯಲಾಗಿದೆ ಏಕೆಂದರೆ ಈ ದಿನವೇ ಮರಣದಂಡನೆಗೆ ಗುರಿಯಾದವರನ್ನು ಗಲ್ಲಿಗೇರಿಸಲಾಯಿತು. ಇನ್ನು ಗುಡ್ಫ್ರೈಡೇಯ ಆಚರಣೆಯ ದಿನವು ಕ್ರಿಸ್ತನನ್ನು ಶಿಲುಬುಗೇರಿಸಿದ ದಿನವಾಗಿ ಪರಿಗಣಿಸಲಾಗಿದ್ದು ಈ ದಿನವನ್ನು ಅಪವಾದವೆಂದು ಗುರುತಿಸಲಾಗಿದೆ. ಇನ್ನು ಅನೇಕ ನಾವಿಕರು ಗುಡ್ ಫ್ರೈಡೇಯಂದೇ ತಮ್ಮ ಪ್ರಯಾಣವನ್ನು ಆರಂಭಿಸುತ್ತಾರೆ ಏಕೆಂದರೆ ಅದು ಅವರಿಗೆ ಅದೃಷ್ಟವನ್ನು ತರುತ್ತದೆ ಎಂದು ನಂಬಲಾಗಿದೆ.
ಪಾಪ್ ಸಂಸ್ಕೃತಿಯಲ್ಲಿ ಫ್ರೈಡೇ ದ 13 ಎಂಬ ಚಲನಚಿತ್ರವನ್ನು ನಿರ್ಮಿಸಲಾಗಿದೆ. 1907 ರಲ್ಲಿ ಅಮೆರಿಕಾದ ಉದ್ಯಮಿ ಹಾಗೂ ಲೇಖಕ ಥಾಮಸ್ ವಿಲಿಯಂ ಲಾಸನ್ ತಮ್ಮ ಕಾದಂಬರಿ ಶುಕ್ರವಾರ 13 ಎಂಬ ಪುಸ್ತಕವನ್ನು ಬಿಡುಗಡೆ ಮಾಡಿದರು.ಆ ಪುಸ್ತಕ ಸ್ಟಾಕ್ ಬ್ರೋಕರ್ ಆಗಿರುವ ಲಾಸನ್, ವಾಲ್ ಸ್ಟ್ರೀಟ್ನಲ್ಲಿ ಗೊಂದಲವನ್ನು ಸೃಷ್ಟಿಸುವ ದಿನಾಂಕದ ಬಗ್ಗೆ ಮೂಢನಂಬಿಕೆಯನ್ನು ಹೊಂದಿದ್ದ ನ್ಯೂರ್ಯಾಕ್ ನಗರದ ಸ್ಟಾಕ್ ಬ್ರೋಕರ್ನ ಕಥೆಯನ್ನು ಒಳಗೊಂಡಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ