• Home
  • »
  • News
  • »
  • trend
  • »
  • ಕೋವಿಡ್ ಎಫೆಕ್ಟ್‌: ಮನೆ ಮನೆಗೂ ಹೋಗಿ ಸಂಗೀತ ಕಾರ್ಯಕ್ರಮ ನೀಡುತ್ತಾರೆ ಫ್ರೆಂಚ್​ ಗಾಯಕಿ ಫಿಯಾನೋ ಮ್ಯಾಕ್‍ಗೌನ್

ಕೋವಿಡ್ ಎಫೆಕ್ಟ್‌: ಮನೆ ಮನೆಗೂ ಹೋಗಿ ಸಂಗೀತ ಕಾರ್ಯಕ್ರಮ ನೀಡುತ್ತಾರೆ ಫ್ರೆಂಚ್​ ಗಾಯಕಿ ಫಿಯಾನೋ ಮ್ಯಾಕ್‍ಗೌನ್

ಫ್ರಾನ್ಸ್​ನ ಒಪೆರಾ ಗಾಯಕಿ ಲಾಕ್​ಡೌನ್​ ಆಯ್ತು ಅಂತ ಕೈ ಕಟ್ಟಿ ಕೂರಲಿಲ್ಲ. ಬದಲಿಗೆ ತನ್ನ ತಂಡದೊಂದಿಗೆ ಮನೆ ಮನೆಗೆ ಹೋಗಿ ಎಲ್ಲ ಸುರಕ್ಷತಾ ಕ್ರಮಗಳೊಂದಿಗೆ ಸಂಗೀತ ಕಾರ್ಯಕ್ರಮ ನೀಡುತ್ತಿದ್ದಾರೆ.

ಫ್ರಾನ್ಸ್​ನ ಒಪೆರಾ ಗಾಯಕಿ ಲಾಕ್​ಡೌನ್​ ಆಯ್ತು ಅಂತ ಕೈ ಕಟ್ಟಿ ಕೂರಲಿಲ್ಲ. ಬದಲಿಗೆ ತನ್ನ ತಂಡದೊಂದಿಗೆ ಮನೆ ಮನೆಗೆ ಹೋಗಿ ಎಲ್ಲ ಸುರಕ್ಷತಾ ಕ್ರಮಗಳೊಂದಿಗೆ ಸಂಗೀತ ಕಾರ್ಯಕ್ರಮ ನೀಡುತ್ತಿದ್ದಾರೆ.

ಫ್ರಾನ್ಸ್​ನ ಒಪೆರಾ ಗಾಯಕಿ ಲಾಕ್​ಡೌನ್​ ಆಯ್ತು ಅಂತ ಕೈ ಕಟ್ಟಿ ಕೂರಲಿಲ್ಲ. ಬದಲಿಗೆ ತನ್ನ ತಂಡದೊಂದಿಗೆ ಮನೆ ಮನೆಗೆ ಹೋಗಿ ಎಲ್ಲ ಸುರಕ್ಷತಾ ಕ್ರಮಗಳೊಂದಿಗೆ ಸಂಗೀತ ಕಾರ್ಯಕ್ರಮ ನೀಡುತ್ತಿದ್ದಾರೆ.

  • Share this:

ಕೋವಿಡ್-19 ರಣಕೇಕೆ ಹೆಚ್ಚುತ್ತಿರುವ ಹಿನ್ನೆಲೆ ಸುರಕ್ಷತೆ ದೃಷ್ಟಿಯಿಂದ ಎಲ್ಲ ಸಭೆ ಸಮಾರಂಭಗಳಿಗೆ ಬ್ರೇಕ್ ಹಾಕಲಾಗಿದೆ. ಸಭೆ ಸಮಾರಂಭಗಳಲ್ಲಿ ಹೆಚ್ಚಿನ ಜನರು ಸೇರುವ ಸಾಧ್ಯತೆ ಇರುವುದರಿಂದ ಕೊರೋನಾ ಹರಡುವಿಕೆಯೂ ಸಹ ಹೆಚ್ಚಾಗುತ್ತದೆ. ಆದರೆ ಇದಕ್ಕೆ ತಲೆಕೆಡಿಸಿಕೊಳ್ಳದ ಫ್ರಾನ್ಸ್‌ನಲ್ಲಿ ಸಂಗೀತದ ತಂಡವೊಂದು ಒಂದು ನಿರ್ಧಾರ ತೆಗೆದುಕೊಂಡಿದೆ. ಲಾಕ್​ಡೌನ್​ನಿಂದಾಗಿ ಸಾಕಷ್ಟು ಕಡೆ ಒಪೆರಾ ಹೌಸ್​ಗಳನ್ನು ಮುಚ್ಚಲಾಗಿದೆ. ಕೊರೋನಾ ಕಾರಣ ಫ್ರೆಂಚ್ ಒಪೆರಾಕ್ಕಾಗಿ ವ್ಯವಸ್ಥೆ ಮಾಡಿದ್ದ ಹಾಲ್‍ಗಳು ಮುಚ್ಚಲ್ಪಟ್ಟಿದೆ. ಇದರಿಂದ ಧೃತಿಗೆಡದ ಫ್ರೆಂಚ್ ಮೆಜೋ-ಸೊಪ್ರಾನೋ ಒಬ್ಬಾಕೆಯ ದನಿಯನ್ನು ಮನೆಮನೆಗಳಿಗೆ ತಲುಪಿಸಲು ನಿರ್ಧರಿಸಿದೆ. ಆಕೆ ಕುಟುಂಬಗಳ ಮುಂದೆ, ಅಲ್ಫೈನ್ ಶೆಫರ್ಡ್ಸ್ ಮತ್ತು ಎರಡು ಬೆಕ್ಕುಗಳ ಮುಂದೆಯೂ ಹೇಗೆ ಪ್ರದರ್ಶನ ನೀಡಬೇಕೆಂದು ಕಲಿತುಕೊಂಡಿರುವ ಪ್ರತಿಭಾನ್ವಿತೆ. ಮನೆಯಲ್ಲಿ ಮುಂದೆ ಸಾಲಿನಲ್ಲಿ ಆರಾಮವಾಗಿ ಕುಳಿತ 90 ಹರೆಯದ ಜೆನೆವಿ ಮತ್ತು ಜಾಫರ್ಡ್ಸ್ ಅವರ ಮುಂದೆ ನೀಡಿರುವ ಪ್ರದರ್ಶನ ತುಂಬಾ ಸುಂದರವಾಗಿತ್ತು.


ಹೌದು ಆಕೆಯೇ 32ರ ಹರೆಯದ ಫಿಯೋನಾ ಮ್ಯಾಕ್‍ಗೌನ್. ಇವರು ರಾವೆಲ್ ಮತ್ತು ರಮಿಯೋ ಅವರ ಜೊತೆಗೂಡಿ ಬೆಂಜಮಿನ್ ಬ್ರಿಟನೋ ಎಂಬ ಕಾರ್ಯಕ್ರಮವನ್ನು ಅವರು ಕಾಯ್ದಿರಿಸಿದ್ದ ಮುಂಭಾಗದ ಕೋಣೆಯಲ್ಲಿ ನಡೆಸಲಾಯಿತು.


French Opera, Opera, Fiona McGown, Paris, Culture, ಫ್ರೆಂಚ್ ಒಪೆರಾ, ಒಪೆರಾ, ಫಿಯಾನೋ ಮ್ಯಾಕ್‍ಗೋವನ್, ಪ್ಯಾರಿಸ್, ಸಂಸ್ಕೃತಿ, French Opera Singers are Performing Shows at Private Residences due to covid 19 stg ae
ಒಪೆರಾ ಹಾಲ್​ (ಸಂಗ್ರಹ ಚಿತ್ರ)


ನಾವು ಸಂಗೀತ ಕಚೇರಿಗಳಲ್ಲಿ ಕೇಳುವ ಸಂಗೀತಕ್ಕಿಂತ ಮನೆಯಲ್ಲಿ ಕೇಳುವ ಹಾಡುಗಳು ಹೆಚ್ಚು ಇಂಪಾಗಿರುತ್ತದೆ ಎಂದು ಮಾಜಿ ಬ್ಯಾಂಕರ್ ಜಾಕ್ವೆಸ್ ತಮ್ಮ ಖುಷಿಯನ್ನು ಹಂಚಿಕೊಂಡರು.


ಇದನ್ನೂ ಓದಿ: Sridevi-Janhvi Kapoor: ಅಮ್ಮ ಶ್ರೀದೇವಿಯ ಅಪರೂಪದ ಫೋಟೋಗಳನ್ನು ಹಂಚಿಕೊಂಡ ಜಾಹ್ನವಿ ಕಪೂರ್​..!


ಇಂದಿನ ಪರಿಸ್ಥಿತಿಯಲ್ಲಿ ಕೆಲವು ಸಂಸ್ಥೆಗಳು ಹಿಂದಿನ ಪಿಸಿಆರ್ ಪರೀಕ್ಷೆಯನ್ನು ಕೈಗೊಳ್ಳುತ್ತದೆ. ಕೋಣೆಯಲ್ಲಿ ಗರಿಷ್ಠ ಆರು ಜನರಿಗೆ ಮಾತ್ರ ಅವಕಾಶವಿದ್ದು ಅದು ಅವರು ವ್ಯಾಕ್ಸಿನೇಷನ್ ಮಾಡಿಸಿಕೊಂಡವರಿಗೆ ಅಥವಾ ಮಾಸ್ಕ್ ಹಾಕಿಕೊಂಡವರಿಗೆ. ಆದರೆ ಇದೀಗ ಮನೆಮನೆ ತಲುಪಿಸುವ ಈ ಸಂಗೀತ ನಾವು ಹಿಂದಿನ ದಿನಗಳಲ್ಲಿದ್ದ ಭಾವನೆಯನ್ನು ಮರುಕಳಿಸುತ್ತಿವೆ ಎಂದಿದ್ದಾರೆ.


ಇದು 19ನೇ ಶತಮಾನವನ್ನು ಪುನಃ ಮರುಕಳಿಸಿದಂತಾಗುತ್ತದೆ. ನಾವು ಹಾಲ್‍ಗಳಲ್ಲಿ ನಮ್ಮ ಮುಂದೆ ಬೆಳಕಿದ್ದರೂ ನಾವು ಕುರುಡರಾಗಿರುತ್ತಿದ್ದೆವು. ನಮಗೆ ಪ್ರೇಕ್ಷಕರ ಮುಖಗಳು ಕಾಣುತ್ತಿರಲಿಲ್ಲ. ಆದರೆ ನಾವು ಪ್ರೇಕ್ಷಕರನ್ನು ನೋಡಬಹುದು ಮತ್ತು ಅವರ ಭಾವನೆಗಳನ್ನು ಅರಿತುಕೊಳ್ಳಬಹುದು ಎಂದು ಹೇಳುತ್ತಾರೆ ಮ್ಯಾಕ್‍ಗೌನ್.


ಮ್ಯಾಕ್‍ಗೌನ್ 12 ವರ್ಷದವರಿದ್ದಾಗಿನಿಂದಲೂ ಅವರನ್ನು ಫ್ರೆಂಚ್ ಸ್ಕಾಟೀಷ್ ಗಾಯಕ ಆಕೆಯನ್ನು ತಿಂಗಳಲ್ಲಿ ನಾಲ್ಕು ಬಾರಿ ವೇದಿಕೆಯ ಮೇಲೆ ಸಂಗೀತದ ಪ್ರದರ್ಶನ ನೀಡಲು ಬಳಸಿಕೊಳ್ಳುತ್ತಿದ್ದರು. ಇಲ್ಲಿಂದಲೂ ಸಂಗೀತದ ಬಗ್ಗೆ ದಿಟ್ಟ ನಿರ್ಧಾರದೊಂದಿಗೆ ಮುಂದುವರೆಯುತ್ತಿದ್ದ ಈಕೆ ಕೋವಿಡ್ ಎರಡನೇ ಅಲೆಯ ಸಂದರ್ಭದಲ್ಲಿ ತಾನು ಕಲಿತದ್ದನ್ನು ತನ್ನ ಉಸ್ತುವಾರಿಯಲ್ಲೇ ಮುಂದುವರೆಸುವ ನಿರ್ಧಾರ ಮಾಡಿದರು.


ಇದನ್ನೂ ಓದಿ: ಸಿನಿರಂಗದವರಿಗಾಗಿ ಬಿಗ್​ ಬಾಸ್​ ಮನೆಯನ್ನು ಕೋವಿಡ್​ ಕೇಂದ್ರವನ್ನಾಗಿ ಪರಿವರ್ತಿಸಲು ಮನವಿ


ನಾನು ನನ್ನೊಟ್ಟಿಗೆ ಮಾತನಾಡಿಕೊಂಡೆ. ನನ್ನ ಡೈರಿ ಖಾಲಿ ಇದೆ. ನಾನು ಏನು ಕೆಲಸವಿಲ್ಲದೇ ಸುಮ್ಮನೆ ಕುಳಿತುಕೊಳ್ಳಬೇಕು. ಇಲ್ಲವೆಂದರೆ ಪ್ರೇಕ್ಷಕರನ್ನು ಅವರ ಮನೆಯಲ್ಲೇ ಸೇರುವಂತೆ ಮಾಡಬೇಕು ಎಂದು ಯೋಚಿಸಿದೆ. ಸ್ವಲ್ಪ ಸಮಯದವರೆಗೆ ಪ್ರೇಕ್ಷಕರಿಗಾಗಿ ಮತ್ತೆ ಹಾಡಲು ಸಾಧ್ಯವಾಗಿರುವುದು ನಿಜಕ್ಕೂ ಆಶ್ಚರ್ಯ ಉಂಟು ಮಾಡಿದೆ. ಜೀವನದ ಮುಖ್ಯವಾದ ಸಂಗತಿಗಳೊಂದಿಗೆ ಮತ್ತೆ ಒಂದುಗೂಡುತ್ತಿದ್ದೇವೆ, ಇದು ನನಗೆ ದೊಡ್ಡ ಉಡುಗೊರೆ ಎಂದು ಸಂತೋಷಗೊಂಡರು.


ಮ್ಯಾಕ್‍ಗೌನ್ ಇಟ್ಟ ಹೆಜ್ಜೆ ಅವರ ಕಾರ್ಯಕ್ರಮಗಳ ಪಟ್ಟಿಯನ್ನು ಬೆಳೆಸಿದೆ. ಏಪ್ರಿಲ್‍ನಲ್ಲಿ ಏಳು ಪ್ರದರ್ಶನಗಳು ಮತ್ತು ಇದೇ ತಿಂಗಳಲ್ಲಿ ಪ್ಯಾರಿಸ್, ಲೇಹ್ಯಾವ್ರೇ ಮತ್ತು ರೇನಸ್‍ನಲ್ಲಿ. ಪ್ರಾರಂಭದಲ್ಲಿ ಇದು ಕೇವಲ ಬಾಯಿ ಮಾತಾಗಿತ್ತು. ನಂತರದ ದಿನಗಳಲ್ಲಿ ಇಮೇಲ್ ಮತ್ತು ಸಾಮಾಜಿಕ ಜಾಲತಾಣದವರೆಗೂ ವಿಸ್ತರಿಸಲ್ಪಟ್ಟಿತು ಎಷ್ಟರಮಟ್ಟಿಗೆ ಎಂದರೆ ತಮ್ಮ ಮಕ್ಕಳಿಗಾಗಿ ಹಾಡುವಂತೆ ಒಬ್ಬ ನರ್ಸ್ ಕೇಳುವಷ್ಟರ ಮಟ್ಟಿಗೆ ಎಂದು ತಾವು ನಡೆದು ಬಂದ ಹಾದಿಯನ್ನು ನೆನೆಸಿಕೊಂಡರು.


ಫ್ರಾನ್ಸ್‌ನಲ್ಲಿ ಮೇ 19ರಿಂದ ಪುನಃ ಸಾಂಸ್ಕೃತಿಕ ಕಾರ್ಯಕ್ರಮಗಳು ಆರಂಭವಾಗಲಿವೆ. ಬೇಸಿಗೆಯ ಕಾರ್ಯಕ್ರಮಗಳಲ್ಲಿ ಹೆಚ್ಚು ಹೆಚ್ಚು ಹಾಡುವ ಅವಕಾಶಗಳು ಬರುತ್ತದೆ. ಇದರ ಜೊತೆ ನಾನು ನನ್ನ ಈ ಹೊಸ ದಾರಿಯನ್ನು ಮುಂದುವರಿಸುವ ವಿಶ್ವಾಸದಲ್ಲಿದ್ದೇನೆ. ತಿಂಗಳಿಗೆ ಒಮ್ಮೆಯಾದರೂ ಇಂತಹ ಕಾರ್ಯಕ್ರಮ ಮಾಡುವ ಆಲೋಚನೆ ಇದೆ ಎಂದು ನಗುವ ಮೊಗದಲ್ಲೇ ಹೇಳುತ್ತಾರೆ ಮ್ಯಾಕ್‍ಗೌನ್.

Published by:Anitha E
First published: