ಸೊಳ್ಳೆಗಳಿಗೆ ನಿಷೇಧ ಹೇರಿದ ಮೇಯರ್​ !

news18
Updated:July 26, 2018, 9:00 PM IST
ಸೊಳ್ಳೆಗಳಿಗೆ ನಿಷೇಧ ಹೇರಿದ ಮೇಯರ್​ !
news18
Updated: July 26, 2018, 9:00 PM IST
-ನ್ಯೂಸ್ 18 ಕನ್ನಡ

ರೋಗವೊಂದು ಇಡೀ ಊರಿಗೆ ಹರಡಲು ಒಂದು ಸೊಳ್ಳೆ ಇದ್ದರೆ ಸಾಕು. ಸಾಂಕ್ರಾಮಿಕ ರೋಗಗಳು ಹರಡಲು ಸೊಳ್ಳೆಗಳು ಮುಖ್ಯ ಕಾರಣವಾಗುತ್ತದೆ. ಊರು ಕೇರಿಗಳಲ್ಲಿ ತನ್ನದೇಯಾದ ಪಟಾಲಂನಲ್ಲಿ ಕಟ್ಟಿಕೊಂಡಿರುವ ಸೊಳ್ಳೆಗಳನ್ನು ನಿಯಂತ್ರಿಸುವುದೇ ದೊಡ್ಡ ಸಮಸ್ಯೆಯಾಗಿರುತ್ತದೆ. ಇಂತಹದೊಂದು ಸಮಸ್ಯೆ ದೂರದ ಫ್ರೆಂಚ್ ದೇಶದಲ್ಲೂ ಕಾಣಿಸಿಕೊಂಡಿದೆ. ಬ್ರಿವೊಲ್ಲೆ ನಗರದಲ್ಲಿ ತಲೆದೂರಿರುವ ಸೊಳ್ಳೆಗಳ ಕಾಟಕ್ಕೆ ಅಲ್ಲಿನ ಮೇಯರ್ ಪರಿಹಾರ ಕಂಡುಕೊಂಡಿದ್ದಾರೆ. ಅದು ವಿಚಿತ್ರ ಎನಿಸುವ 'ಸೊಳ್ಳೆಗಳ ನಿಷೇಧ'. ಮಹಾಪೌರ ಆಂಡ್ರೆ ಮಾರ್ಚ್ಯಾಂಡ್ ಅವರು ತೆಗೆದುಕೊಂಡ ಈ ನಿರ್ಧಾರವು ತಮಾಷೆ ಎಂದು ಅನಿಸಿದರೂ ಯಶಸ್ವಿನ ಹಾದಿ ಹಿಡಿದಿದೆಯಂತೆ.

ಇತ್ತೀಚೆಗೆ ಬ್ರಿವೊಲ್ಲೆ ನಗರದಲ್ಲಿ ಉಂಟಾದ ಪ್ರವಾಹದಿಂದ ಸೊಳ್ಳೆ ಮತ್ತು ಕೀಟಗಳ ಕಾಟ ನಗರದಾದ್ಯಂತ ಹೆಚ್ಚಾಗಿತ್ತು. ನಗರದ ಭಾಗದಲ್ಲಿ ತೊಟ್ಟಿಗಳು, ಟ್ಯಾಂಕ್, ಘನ ತ್ಯಾಜ್ಯಗಳನ್ನು ಸ್ವಚ್ಛಗೊಳಿಸಿದರೂ ಸೊಳ್ಳೆ ಹಾವಳಿ ಕಡಿಮೆ ಆಗಿರಲಿಲ್ಲ.ಈ ಬಗ್ಗೆ ನಿರಂತರ ದೂರುಗಳು ಬರುತ್ತಿದ್ದರಿಂದ ಸಮಸ್ಯೆ ನಿವಾರಿಸುವುದು ಅನಿವಾರ್ಯವಾಗಿತ್ತು. ಹೀಗಾಗಿ ಸೊಳ್ಳೆಗಳನ್ನೇ ನಿಷೇಧಿಸಬೇಕೆಂದು ಮೇಯರ್ ತೀರ್ಮಾನಿಸಿದ್ದಾರೆ.

ಹಾಸ್ಯಾಸ್ಪದವಾಗಿರುವ ಈ ತೀರ್ಮಾನವು ಸ್ಥಳೀಯರು ಬೇಗನೆ ಅರ್ಥ ಮಾಡಿಕೊಳ್ಳಲಿದ್ದಾರೆಂಬ ವಿಶ್ವಾಸವಿತ್ತು. ಅಲ್ಲದೆ ಈ ನಿರ್ಧಾರವನ್ನು ಯಾಕಾಗಿ ಮಾಡಿದ್ದಾರೆಂದು ಜನರು ಯೋಚಿಸುತ್ತಾರೆ ಎಂಬುದು ನನ್ನ ಆಲೋಚನೆಯಾಗಿತ್ತು ಎಂದು ಮೇಯರ್ ಮಾರ್ಚ್ಯಾಂಡ್  ಮಾಧ್ಯಮಕ್ಕೆ ತಿಳಿಸಿದ್ದಾರೆ.'ಸೊಳ್ಳೆ ಬ್ಯಾನ್' ನಿಯಮ ಬರುತ್ತಿದ್ದಂತೆ ಜನರೇ ಸೊಳ್ಳೆಗಳು ಕಾಣಿಸಿಕೊಳ್ಳುವ ಜಾಗಗಳನ್ನು ಸ್ವಚ್ಛಗೊಳಿಸಲು ಮುಂದಾಗಿದ್ದಾರೆ. ಅಲ್ಲದೆ ಗ್ರಾಮದ ಕೆಲ ಭಾಗಗಳಲ್ಲಿ ಸೊಳ್ಳೆ ಬಲೆಗಳನ್ನು ಸರ್ಕಾರ ನಿರ್ಮಿಸಿದೆ. ಈ ಬಲೆಗಳು ಕೀಟಗಳನ್ನು ಆಕರ್ಷಿಸುವ ಪೆರೋಮೊನ್​ಗಳನ್ನು ಒಳಗೊಂಡಿದ್ದು, ಇದರಲ್ಲಿ ಸಿಲುಕಿದ ಸೊಳ್ಳೆಗಳನ್ನು ಕಾರ್ಬನ್ ಡೈ ಆಕ್ಸೈಡ್ ಬಳಸಿ ಕೊಲ್ಲಲಾಗುತ್ತದೆ. ಅಷ್ಟೇ ಅಲ್ಲದೆ ಮನೆಯ ಸುತ್ತ ಮುತ್ತ ಸೊಳ್ಳೆಗಳ ಹಾವಳಿ ತಪ್ಪಿಸಲು ಜನರು ಸ್ಪ್ರೇಗಳನ್ನು ಬಳಸುತ್ತಿದ್ದಾರೆ.ಆದರೆ ಮುಂದಿನ ದಿನಗಳಲ್ಲಿ ಪ್ರವಾಹ ಉಲ್ಬಣವಾದರೆ ಮತ್ತೆ ಸೊಳ್ಳೆ ಸಮಸ್ಯೆ ಕಾಣಿಸಿಕೊಳ್ಳುತ್ತದೆ ಎಂಬ ಆತಂಕ ಕೂಡ ಬ್ರಿವೊಲ್ಲೆ ವಾಸಿಗಳಲ್ಲಿದೆ. ಒಟ್ಟಾರೆ ಒಂದು ನಗರದ ಜನರು ಸೊಳ್ಳೆಗಳನ್ನು ನಿಷೇಧಿಸಿ ಸೊಳ್ಳೆ ಕಾಟಕ್ಕೆ ಪರಿಹಾರ ಕಂಡುಕೊಳ್ಳಲು ಮುಂದಾಗಿರುವುದು ಉತ್ತಮ ಬೆಳವಣಿಗೆ ಎನ್ನಬಹುದು.
First published:July 26, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ