Paris-Bihar Love Story: ಭಾರತ ನೋಡಲು ಬಂದ ಪ್ಯಾರಿಸ್ ಯುವತಿ, ಇಲ್ಲಿನ ಟೂರಿಸ್ಟ್ ಗೈಡ್ ಮಧ್ಯೆ ಲವ್-ಈಗ ಮದುವೆ

ಪ್ಯಾರಿಸ್‌ನಲ್ಲಿ ಉದ್ಯಮಿಯಾಗಿರುವ ಮೇರಿ ಲೋರಿ ಹೆರಾಲ್ ಸುಮಾರು ಆರು ವರ್ಷಗಳ ಹಿಂದೆ ಭಾರತಕ್ಕೆ ಬಂದು ಬೇಗುಸರಾಯ್‌ನ ಕಥಾರಿಯಾ ಗ್ರಾಮದ ನಿವಾಸಿ ರಾಕೇಶ್ ಅವರನ್ನು ಪ್ರೀತಿಸುತ್ತಿದ್ದರು. ಆಗ ರಾಕೇಶ್ ನವದೆಹಲಿಯಲ್ಲಿ ಪ್ರವಾಸಿ ಮಾರ್ಗದರ್ಶಿಯಾಗಿ ಕೆಲಸ ಮಾಡುತ್ತಿದ್ದರು.

ಪ್ಯಾರಿಸ್- ಬಿಹಾರ್‌ ಜೋಡಿ

ಪ್ಯಾರಿಸ್- ಬಿಹಾರ್‌ ಜೋಡಿ

 • Share this:
  Paris-Bihar love story: ಇದು ಪ್ಯಾರಿಸ್- ಬಿಹಾರ್‌ ಲವ್‌ ಸ್ಟೋರಿ.... ಪ್ಯಾರಿಸ್ ಮೂಲದ ಯುವತಿ, ಬಿಹಾರದ ಮೂಲದ ಯುವಕನೊಂದಿಗೆ ಸಪ್ತಪದಿ ತುಳಿದಿದೆ ತಡ, ಫಿರಂಗಿ ದುಲ್ಹಾನ್ (Parisian girl)ನ್ನು ನೋಡಲು ಗ್ರಾಮಸ್ಥರ ದಂಡು ಹರಿದು ಬಂದಿದ್ದು ಉಂಟು, ಪ್ರೀತಿಗೆ ಸಂಸ್ಕೃತಿ, ಗಡಿ, ಜನಾಂಗ ಮತ್ತು ಧರ್ಮವಿಲ್ಲ. ಇದು ಸರೋವರದಲ್ಲಿ ಬೀಳುವ ಮುಂಜಾನೆ ಸೂರ್ಯೋದಯದಂತೆ (sunrise)ಶುದ್ಧ ಮತ್ತು ಸುಂದರವಾಗಿದೆ. ಇತ್ತೀಚೆಗೆ ಬಿಹಾರದ ಬೇಗುಸರಾಯ್‌ನಲ್ಲಿ (Begusarai, Bihar,)ಫ್ರೆಂಚ್ ಮಹಿಳೆಯೊಂದಿಗೆ ಭಾರತೀಯ ಯುವಕನೊಬ್ಬ ಸಪ್ತಪದಿ ತುಳಿದ ಅಂತರ್ ಜಾತಿಯ ವಿವಾಹದ ಕಥೆ ಸಾಮಾಜಿಕ ಜಾಣತಾಣದಲ್ಲಿ ವೈರಲ್ ಆಗಿದೆ.

  ಇದನ್ನು ಓದಿ:Naga Chaitanya : ಸಮಂತಾಗೂ ಮುಂಚೆ ನಾಗ ಚೈತನ್ಯಗೆ ಈ ನಟಿ ಅಂದ್ರೆ ಸಿಕ್ಕಾಪಟ್ಟೆ ಇಷ್ಟ ಇತ್ತಂತೆ! ಯಾರದು?

  ಪ್ರವಾಸಿ ಮಾರ್ಗದರ್ಶಿ ಜೊತೆ ಪ್ರೇಮಾಂಕುರ(Love with a tour guide)
  ಪ್ಯಾರಿಸ್‌ನಲ್ಲಿ ಉದ್ಯಮಿಯಾಗಿರುವ ಮೇರಿ ಲೋರಿ ಹೆರಾಲ್ ಸುಮಾರು ಆರು ವರ್ಷಗಳ ಹಿಂದೆ ಭಾರತಕ್ಕೆ ಬಂದು ಬೇಗುಸರಾಯ್‌ನ ಕಥಾರಿಯಾ ಗ್ರಾಮದ ನಿವಾಸಿ ರಾಕೇಶ್ ಅವರನ್ನು ಪ್ರೀತಿಸುತ್ತಿದ್ದರು. ಆಗ ರಾಕೇಶ್ ನವದೆಹಲಿಯಲ್ಲಿ ಪ್ರವಾಸಿ ಮಾರ್ಗದರ್ಶಿಯಾಗಿ ಕೆಲಸ ಮಾಡುತ್ತಿದ್ದರು. ಆಕೆ ಪ್ಯಾರಿಸ್‌ಗೆ ಹಿಂತಿರುಗಿದ ನಂತರವೂ ಇಬ್ಬರೂ ಸಂಪರ್ಕದಲ್ಲಿದ್ದರು. ಈ ವೇಳೆ ಫೋನ್ ಮೂಲಕ ತಮ್ಮ ಪ್ರೀತಿಯನ್ನು ನಿವೇದಿಸಿಕೊಂಡಿದ್ದಾರೆ. ಮೂರು ವರ್ಷಗಳ ನಂತರ, ಮೇರಿ ರಾಕೇಶ್‌ಗೆ ಪ್ಯಾರಿಸ್‌ಗೆ ತೆರಳಿ ತನ್ನೊಂದಿಗೆ ಜವಳಿ ವ್ಯಾಪಾರವನ್ನು ಪ್ರಾರಂಭಿಸಲು ಕೇಳಿಕೊಂಡರು. ಒಟ್ಟಿಗೆ ಕೆಲಸ ಮಾಡಲು ಪ್ರಾರಂಭಿಸಿದ ನಂತರ, ಅವರು ಪರಸ್ಪರ ಹತ್ತಿರವಾದರು ಮತ್ತು ಮದುವೆಯಾಗಲು ನಿರ್ಧರಿಸಿದರು.

  ಹಿಂದೂ ಸಂಪ್ರದಾಯದಂತೆ ಮದುವೆ(Hindu tradition)
  ಮೇರಿ ಭಾರತೀಯ ಸಂಸ್ಕೃತಿಯಿಂದ ಪ್ರಭಾವಿತಳಾಗಿದ್ದು ಇಲ್ಲಿಗೆ ಬಂದು ಮದುವೆಯಾಗಲು ನಿರ್ಧರಿಸಿದ್ದರು ಎಂದು ರಾಕೇಶ್ ತಂದೆ ರಾಮಚಂದ್ರ ಶಾ ಹೇಳಿದ್ದಾರೆ. ಎರಡೂ ಕುಟುಂಬಗಳ ಒಪ್ಪಿಗೆ ಪಡೆದು ಮೇರಿ ಮತ್ತು ರಾಕೇಶ್ ಭಾನುವಾರ ಹಿಂದೂ ಸಂಪ್ರದಾಯದಂತೆ ಮದುವೆಯಾದರು. ಸಮಾರಂಭದಲ್ಲಿ ಪಾಲ್ಗೊಳ್ಳಲು ಫ್ರಾನ್ಸ್‌ನಿಂದ ಆಗಮಿಸಿದ್ದ ಮೇರಿ ಅವರ ಕುಟುಂಬ ಸದಸ್ಯರು ನವದಂಪತಿಗಳಿಗೆ ಶುಭ ಕೋರಿದರು.

  ಫ್ರೆಂಚ್ ವಧುವನ್ನು ನೋಡಲು ಜನರ ದಂಡು(people to see a French bride)
  ಎರಡೂ ಕುಟುಂಬಗಳು ಹಿಂದೂ ಸಂಪ್ರದಾಯದಲ್ಲಿ ಸಪ್ತಪದಿ ತುಳಿದರು.ಮದುವೆ ಸಮಾರಂಭದ ನಂತರ ಹಿಂದಿ ಮತ್ತು ಭೋಜ್‌ಪುರಿ ಹಾಡುಗಳಿಗೆ ನೃತ್ಯ ಮಾಡಿದರು ಎಂದು ರಾಕೇಶ್ ಕುಟುಂಬ ತಿಳಿಸಿದೆ. ಬಿಹಾರ ಸಂಸ್ಕೃತಿಯನ್ನು ಇಷ್ಟಪಡುವ ವಿದೇಶಿ ಅತಿಥಿಗಳು ಸಮಾರಂಭದಲ್ಲಿ ಭಾಗವಹಿಸಿದ್ದರು. ರಾಕೇಶ್ ಕುಟುಂಬದ ಪ್ರಕಾರ, ಮೇರಿ ಅವರು ಬಿಹಾರಿ ಸಂಪ್ರದಾಯದ ಆಚರಣೆಗಳನ್ನು ಇಷ್ಟಪಟ್ಟಿದ್ದರಿಂದ ಬೇಗುಸರಾಯ್‌ನಂತಹ ಸಣ್ಣ ಪಟ್ಟಣದಲ್ಲಿ ಮದುವೆಯಾಗಲು ಬಯಸಿದ್ದರು. ಸಮಾರಂಭದ ಎಲ್ಲಾ ವ್ಯವಸ್ಥೆಗಳು ಮತ್ತು ನಿರ್ಧಾರಗಳನ್ನು ಎರಡೂ ಕುಟುಂಬದವರು ಒಟ್ಟಾಗಿ ಮಾಡಿದ್ದಾರೆ. ನವವಿವಾಹಿತರು ಒಂದು ವಾರ ಭಾರತದಲ್ಲಿ ಉಳಿದುಕೊಂಡು ಪ್ಯಾರಿಸ್‌ಗೆ ಹಿಂತಿರುಗುತ್ತಾರೆ. ಏತನ್ಮಧ್ಯೆ, ಅಂತರ್ಜಾತಿ ವಿವಾಹದ ಸುದ್ದಿ ತಿಳಿದ ನಂತರ, ಫ್ರೆಂಚ್ ವಧುವನ್ನು ನೋಡಲು ಗ್ರಾಮಸ್ಥರು ಹೆಚ್ಚಿನ ಸಂಖೈಯಲ್ಲಿ ದೌಡಯಿಸಿದ್ದರು.

  ಅಂತರ್ಜಾತಿ ವಿವಾಹ
  ಭಾರತೀಯ ಸನಾತನ ಸಂಪ್ರದಾಯದಂತೆ ದಂಪತಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಹಳದಿ ಯಿಂದ ಮೆಹೆಂದಿಯವರೆಗೆ ಎಲ್ಲಾ ಭಾರತೀಯ ವಿವಾಹ ಆಚರಣೆಗಳು ನಡೆದವು. ಅಂತರ್ಜಾತಿ ವಿವಾಹವನ್ನು ವೀಕ್ಷಿಸಲು ಸಮೀಪದ ಗ್ರಾಮಗಳಿಂದ ಆಗಮಿಸಿದ್ದ ಅಪಾರ ಸಂಖ್ಯೆಯ ಗ್ರಾಮಸ್ಥರ ಸಮ್ಮುಖದಲ್ಲಿ ವಿವಾಹ ನೆರವೇರಿತು. ಇದು ನಿಜವಾದ ಪ್ರೀತಿಯಲ್ಲಿನ ನಂಬಿಕೆಯನ್ನು ಪುನರುಜ್ಜೀವನಗೊಳಿಸಿದೆ.

  ಇದನ್ನು ಓದಿ:Love: ಪ್ರೀತಿ ಅಂದ್ರೆ ನಿಜವಾಗ್ಲೂ ಏನು? ಅದರಲ್ಲಿ ಎಷ್ಟು ವಿಧ ಇದೆ? ನಿಮ್ದು ಯಾವ ಬಗೆಯ ಪ್ರೀತಿ?

  ಹಿಂದೂ ಧರ್ಮ ಅದರಲ್ಲೂ ಭಾರತದಲ್ಲಿ ಇರುವಂತಹ ಕೆಲವೊಂದು ಆಚರಣೆಗಳ ಹಿಂದೆ ವೈಜ್ಞಾನಿಕವಾದ ಕಾರಣಗಳು ಇವೆ ಎಂದು ಹಲವಾರು ಸಂಶೋಧನೆಗಳಿಂದಲೂ ಸಾಬೀತು ಆಗಿದೆ. ಇದರಿಂದಾಗಿಯೇ ಇಂದಿನ ದಿನಗಳಲ್ಲಿ ವಿದೇಶಿಯರು ಕೂಡ ಭಾರತೀಯ ಸಂಸ್ಕೃತಿಗೆ ಮಾರು ಹೋಗುತ್ತಿದ್ದಾರೆ. ಹೆಚ್ಚು ವಿದೇಶಿಯರು ಹಿಂದೂ ಧರ್ಮವನ್ನು ಅಪ್ಪಿಕೊಳ್ಳುತ್ತಿದ್ದಾರೆ ಅಂದರೆ ಭಾರತೀಯತೆಗೆ ಮಾರು ಹೋಗಿದ್ದಾರೆ.
  Published by:vanithasanjevani vanithasanjevani
  First published: