• Home
  • »
  • News
  • »
  • trend
  • »
  • ಆನ್​ಲೈನ್​ನಲ್ಲಿ ಬೆಕ್ಕಿನ ಮರಿ ಆರ್ಡರ್ ಮಾಡಿದ ದಂಪತಿ..ಬಂದಿದ್ದು ಹುಲಿಮರಿ!

ಆನ್​ಲೈನ್​ನಲ್ಲಿ ಬೆಕ್ಕಿನ ಮರಿ ಆರ್ಡರ್ ಮಾಡಿದ ದಂಪತಿ..ಬಂದಿದ್ದು ಹುಲಿಮರಿ!

ಸವನ್ನಾ ಬೆಕ್ಕಿನ ಮರಿ

ಸವನ್ನಾ ಬೆಕ್ಕಿನ ಮರಿ

ಫ್ರಾನ್ಸ್​ನ ಲೆ ಹ್ಯಾವ್ರೆಯಲ್ಲಿ ವಾಸಿಸುತ್ತಿದ್ದ ದಂಪತಿ ಆನ್​ಲೈನ್​​​ನಲ್ಲಿ​ ಬೆಕ್ಕಿನ ಮರಿಯ ಜಾಹೀರಾತು ಕಂಡು ಕೊಂಡುಕೊಳ್ಳಲು ಮುಂದಾಗಿದ್ದಾರೆ. ಬರೋಬ್ಬರಿ 5 ಲಕ್ಷ ಬೆಲೆಯ ಸವನ್ನಾ ಬೆಕ್ಕಿನ ಮರಿಯನ್ನು ಬುಕ್​ ಮಾಡಿದ್ದಾರೆ

  • Share this:

    ಸದ್ಯ ಎಲ್ಲವೂ ಆನ್​ಲೈನ್​ಮಯವಾಗಿದೆ. ಒಂದು ಕ್ಲಿಕ್​ ಸಾಕು​ ಬೇಕಾದ ವಸ್ತುಗಳನ್ನು ಖರೀದಿಸಬಹುದಾಗಿದೆ. ಅಷ್ಟೇ ಏಕೆ ಮನೆ ಬಾಗಿಲಿಗೆ ತಂದು ತಲುಪಿಸುವ ವ್ಯವಸ್ಥೆಯೂ ಇದೆ. ಅದರಂತೆ ಇಲ್ಲೊಬ್ಬರು ದಂಪತಿ ಆನ್​ಲೈನ್​ ಮೂಲಕ ಭಾರೀ ಮೊತ್ತಕ್ಕೆ ಸವನ್ನಾ ಬೆಕ್ಕಿನ ಮರಿಯನ್ನು ಆರ್ಡರ್​ ಮಾಡಿದ್ದಾರೆ. ಆದರೆ ಬಂದಿರುವ ಆರ್ಡರ್​ ತೆರೆದು ನೋಡಿದಾಗ ಶಾಕ್​ ಆಗಿದ್ದಾರೆ.


    ಫ್ರಾನ್ಸ್​ನ ಲೆ ಹ್ಯಾವ್ರೆಯಲ್ಲಿ ವಾಸಿಸುತ್ತಿದ್ದ ದಂಪತಿ ಆನ್​ಲೈನ್​​​ನಲ್ಲಿ​ ಬೆಕ್ಕಿನ ಮರಿಯ ಜಾಹೀರಾತು ಕಂಡು ಕೊಂಡುಕೊಳ್ಳಲು ಮುಂದಾಗಿದ್ದಾರೆ. ಬರೋಬ್ಬರಿ 5 ಲಕ್ಷ ಬೆಲೆಯ ಸವನ್ನಾ ಬೆಕ್ಕಿನ ಮರಿಯನ್ನು ಬುಕ್​ ಮಾಡಿದ್ದಾರೆ. ಹಣವನ್ನು ನೀಡಿದ್ದಾರೆ. ಆದರೆ ಸ್ವಲ್ಪ ದಿನಗಳ ಬಳಿಕ ಆರ್ಡರ್​ ಮನೆ ಬಾಗಿಲಿಗೆ ತಲುಪಿದೆ. ಬಂದಿರುವ ಆರ್ಡರ್​ ಅನ್ನು ತೆಗೆದು ನೋಡಿದಾಗ ದಂಪತಿ ಶಾಕ್​ ಆಗಿದ್ದಾರೆ. ಬೆಕ್ಕಿನ ಮರಿ ಬದಲು ಸುಮಾತ್ರನ್​​ ಹುಲಿಮರಿಯನ್ನು ಕಳುಹಿಸಿಕೊಡಲಾಗಿತ್ತು. ಈ ವಿಚಾರ ತಿಳಿದ ದಂಪತಿ ಪೊಲೀಸರಿಗೆ ದೂರು ನೀಡಿದ್ದಾರೆ.


    ಸುಮಾತ್ರನ್​​ ಹುಲಿಮರಿ


    ಸುಮಾತ್ರನ್​​ ಹುಲಿಮರಿಯನ್ನು ಮನೆಯಲ್ಲಿ ಖಾಸಗಿಯಾಗಿ ಸಾಕುವುದನ್ನು ವಿಷೇಧಿಸಲಾಗಿದೆ, ಮಾತ್ರವಲ್ಲದೆ, ಸರಿಯಾದ ದಾಖಲೆಗಳಿಲ್ಲದೆ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಕೊಂಡೊಯ್ಯುವ ಹಾಗಿಲ್ಲ. ದಂಪತಿಗಳು ನೀಡಿದ ದೂರಿನ ಅನ್ವಯ ಸುಮಾತ್ರನ್​​ ಹುಲಿಮರಿಯನ್ನು ಡೆಲಿವರಿ ಮಾಡಿದ ಸಂಸ್ಥೆಯ 9 ಜನರನ್ನು ಪೊಲೀಸರು ಬಂಧಿಸಿದ್ದಾರೆ.

    Published by:Harshith AS
    First published: