SHOCKING; ಬಂಗೀ ಜಂಪಿಂಗ್​ ವೇಳೆ ಕಟ್​ ಆಯ್ತು ಹಗ್ಗ, 80 ಅಡಿ ಎತ್ತರದಿಂದ ಬಿದ್ದು ಮಹಿಳೆ ದಾರುಣ ಸಾವು

33 ವರ್ಷದ ಎವ್ಗೆನಿಯಾ ಲಿಯೊಂಟೀವಾ (Yevgenia Leontyeva) ಎಂಬ ಮಹಿಳೆ ಬಂಗೀ ಜಂಪ್​ ಆಸೆಗೆ ಪ್ರಾಣಬಿಟ್ಟಿದ್ದಾಳೆ. ನೋಡ ನೋಡುತ್ತಿದ್ದಂತೆ ಕಣ್ಣು ಮುಂದೆಯೇ ಆಕೆಯ ಪ್ರಾಣ ಪಕ್ಷಿ ಹಾರಿಹೋಗಿದೆ. ಎವ್ಗೆನಿಯಾ ತನ್ನ ಪತಿ ಹಾಗೂ ಸ್ನೇಹಿತನೊಂದಿಗೆ ಕಜಕಿಸ್ತಾನದ ಕಾರಗಡ ನಗರದಕ್ಕೆ ಭೇಟಿ ನೀಡಿದ್ರು.

80 ಅಡಿ ಎತ್ತರದಿಂದ ಬಿದ್ದು ಮಹಿಳೆ

80 ಅಡಿ ಎತ್ತರದಿಂದ ಬಿದ್ದು ಮಹಿಳೆ

 • Share this:
  ಸಾಹಸ ಕ್ರೀಡೆ(Adventure games) ಗಳು ಅಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಆಡಲು ಭಯವಿದ್ದವರು, ಆಟ ಆಡುವವರನ್ನ ನೋಡಿ, ನಾವು ಒಂದು ಕೈ ನೋಡೇ ಬೀಡೋಣ ಎಂದು ಆಡ್​ವೆಂಚರ್ಸ್​​ ಗೇಮ್​ಗಳನ್ನ ಆಡುತ್ತಾರೆ.ವಿದೇಶಕ್ಕೆ ಹೋಲಿಸಿಕೊಂಡರೇ ಭಾರತದಲ್ಲಿ ಈ ಸಾಹಸಿ ಕ್ರೀಡಾಪಟುಗಳ ಸಂಖ್ಯೆ ಕಡಿಮೆ. ಸಾಹಸ ಕ್ರೀಡೆಗಳು ಆಡುವಾಗ ಕಿಕ್​, ಮಜಾಗೋಸ್ಕರ ಜನ ದೂರದ ವಿದೇಶಗಳಿಗೆ ಹೋಗಿ ಈ ಸಾಹಸಿ ಕ್ರೀಡೆಗಳನ್ನ ಆಡುತ್ತಾರೆ. ಉದಾಹರಣೆಗೆ ಸ್ಕೈ ಡೈವಿಂಗ್ (skydiving)​, ಬಂಗೀ ಜಂಪ್ (bungee jumping)​, ಹಿಲ್​ ಕ್ಲೈಂಬಿಂಗ್ (Hill climbing)​ ಹೀಗೆ ಹತ್ತು ಹಲವು ಮೈ ರೋಮಾಂಚನ ಗೊಳಿಸುವ ಸಾಹಸ ಕ್ರೀಡೆಗಳು ನಮ್ಮಲ್ಲೂ ಇದೆ.

  ಗುಂಡಿಗೆ ಗಟ್ಟಿ ಇದ್ದರೆ ಮಾತ್ರ ಆಡು ಅನ್ನುವ ಡೈಲಾಗ್​ನಂತೆ ಈ ಸಾಹಸ ಕ್ರೀಡೆಗಳು ಅಷ್ಟೇ ಗುಂಡಿಗೆ ಗಟ್ಟಿ ಇದ್ದರೆ ಮಾತ್ರ ಟ್ರೈ ಮಾಡಬೇಕು. ಆದರೆ ಕೆಲವೊಬ್ಬರ ಜೀವನದಲ್ಲಿ ಸಾಹಸ ಆಟಗಳು ಅವರ ಪ್ರಾಣವನ್ನೇ ಕಸಿದುಕೊಳ್ಳುತ್ತೆ. ಕೆಲವೊಮ್ಮೆ ಈ ಸಾಹಸ ಆಟಗಳೇ ನಮ್ಮ ಬದುಕಲ್ಲಿ ಯಮನಾಗಿ ಬಿಡುತ್ತವೆ. ಎಷ್ಟೋ ಪ್ರಕರಣದಲ್ಲಿ ಆಟ ಆಡುವಾಗ ಪ್ರಾಣ ಬಿಟ್ಟಿರುವುದನ್ನ ನೋಡಿದ್ದೇವೆ. ಕಜಕಿಸ್ತಾನ (kazakstan)ದಲ್ಲೂ ಇಂತಹದ್ದೇ ಶಾಕಿಂಗ್​ ಘಟನೆಯೊಂದು ನಡೆದು ಹೋಗಿದೆ. ಬಂಗೀ ಜಪ್​ ಮಾಡುವಾಗ ಹಗ್ಗ ಕಟ್​​ ಆಗಿ, 80 ಅಡಿ ಎತ್ತರದಿಂದ ಬಿದ್ದು ಮಹಿಳೆಯೊಬ್ಬಳು ಅಸುನೀಗಿದ್ದಾಳೆ.

  ಇದನ್ನೂ ಓದಿ: ನವರಾತ್ರಿಗೆ ಈ ದೇವಸ್ಥಾನದಲ್ಲಿ ಮುಸ್ಲಿಂ ಮಹಿಳೆಯಿಂದ ಪೂಜೆ

  33 ವರ್ಷದ ಎವ್ಗೆನಿಯಾ ಲಿಯೊಂಟೀವಾ (Yevgenia Leontyeva) ಎಂಬ ಮಹಿಳೆ ಬಂಗೀ ಜಂಪ್​ ಆಸೆಗೆ ಪ್ರಾಣಬಿಟ್ಟಿದ್ದಾಳೆ. ನೋಡ ನೋಡುತ್ತಿದ್ದಂತೆ ಕಣ್ಣು ಮುಂದೆಯೇ ಆಕೆಯ ಪ್ರಾಣ ಪಕ್ಷಿ ಹಾರಿಹೋಗಿದೆ. ಎವ್ಗೆನಿಯಾ ತನ್ನ ಪತಿ ಹಾಗೂ ಸ್ನೇಹಿತನೊಂದಿಗೆ ಕಜಕಿಸ್ತಾನದ ಕಾರಗಡ ನಗರದಕ್ಕೆ ಭೇಟಿ ನೀಡಿದ್ರು. ಇಲ್ಲೇ ಒಂದು ಹೋಟೆಲ್​ ಮೇಲೆ ಸಾಹಸ ಕ್ರೀಡೆಯಾದ ಬಂಗೀ ಜಂಪ್​ ಆಟವನ್ನು ನಡೆಸಲಾಗುತ್ತಿತ್ತು. ಎವ್ಗೆನಿಯಾಗೂ ಬಂಗೀ ಜಂಪ್​ ಮಾಡಬೇಕೆಂಬ ಆಸೆ ಹೆಚ್ಚಾಗಿ, ತನ್ನ ಪತಿ ಬಳಿ ಹೇಳಿಕೊಂಡಿದ್ದಳು.

  ದಂಪತಿ ಹಾಗೂ ಸ್ನೇಹಿತ ಮೂವರು ಹೋಟೆಲ್​ ಟಾಪ್​ ಮೇಲೆ ತೆರಳಿದ್ದರು. ಮೊದಲು ತಾನು ಜಂಪ್​ ಮಾಡುವುದಾಗಿ ಎವ್ಗೆನಿಯಾ ಹೇಳಿದ್ದಳು. ಅಷ್ಟೇ ಅಲ್ಲದೇ ತಾನೂ ಜಂಪ್​ ಮಾಡುವ ಸಂಪೂರ್ಣ ದೃಶ್ಯವನ್ನು ಮೊಬೈಲ್​ನಲ್ಲಿ ಸೆರೆಹಿಡಿಯಲು ಹೇಳಿದ್ದಳು. ಆಕೆಯ ದೇಹಕ್ಕೆ ವ್ಯಕ್ತಿಯೋರ್ವ ಬಂಗೀ ಹಗ್ಗವನ್ನು ಕಟ್ಟಿದ್ದಾನೆ. ಇತ್ತ ಪತಿ ವಿಡಿಯೋ ಮಾಡುತ್ತಾ ಜೋರಾಗಿ ಐ ಲವ್​ ಯೂ ಎಂದು ಕೂಗಿದ್ದಾನೆ. ಅತ್ತ ಪತ್ನಿ ಮೇಲಿಂದ ಹಾರಿದ್ದಾಳೆ, ಈ ವೇಳೆ ಹಗ್ಗ ಕತ್ತರಿಸಿ ಕೆಳಗೆ ಬಿದ್ದು ಮೃತಪಟ್ಟಿದ್ದಾಳೆ. ಕೆಲವೇ ಸೆಕೆಂಡ್​ಗಳಲ್ಲಿ ಈ ದುರ್ಘಟನೆ ಸಂಭವಿಸಿದೆ. ಇತ್ತ ಪತಿ ತನ್ನ ಪತ್ನಿ ಹಗ್ಗ ಕತ್ತರಿಸಿ ಕೆಳಗೆ ಬಿದ್ದಿದ್ದನ್ನು ಕಂಡು, ಕೆಲ ಕಾಲ ಮೂರ್ಛೆ ಹೋಗಿದ್ದನಂತೆ.

  ಇದನ್ನೂ ಓದಿ: ಪಾತ್ರೆಯಲ್ಲಿ ಬೆಂಕಿ ಉರಿಸಿ ಸಪ್ತಪದಿ ತುಳಿದ ಜೋಡಿ, 25 ಸಾವಿರ ರೂ. ದಂಡ ವಿಧಿಸಿದ ಕೋರ್ಟ್‌!

  ಕೆಳಗೆ ಬಿದ್ದ ಎವ್ಗೆನಿಯಾ ತೀವ್ರವಾಗಿ ಗಾಯಗೊಂಡಿದ್ದರು. ಬಳಿಕ ಅವರನ್ನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯ್ತು. ಆಕೆಯನ್ನ ಉಳಿಸಿಕೊಳ್ಳಲು ಹಲವಾರು ಶಸ್ತ್ರಚಿಕಿತ್ಸೆಗಳನ್ನ ಮಾಡಲಾಯಿತಾದಾರೂ, ಆಕೆ ಕೊನೆಯಿಸಿರೆಳೆದಿದ್ದಾರೆ. ಇನ್ನೂ ಆಕೆ ಮೂರು ಮಕ್ಕಳ ತಾಯಿ. ಈಗ ತಾಯಿಯನ್ನ ಕಳೆದುಕೊಂಡ ಮಕ್ಕಳು ಬಿಕ್ಕಿಸಿ ಬಿಕ್ಕಿಸಿ ಅಳುತ್ತಿದ್ದಾರೆ. ಇನ್ನೂ ಎವ್ಗೆನಿಯಾ ಈ ಹಿಂದೆಯೂ ಹಲವು ಬಾರಿ ಬಂಗೀ ಜಂಪ್​ ಮಾಡಿದ್ದಳು. ನಮ್ಮ ಟೈಂ ಕೆಟ್ಟು ಈ ಸಲ ಹೀಗಾಗಿದೆ ಎಂದು ಪತಿ ಕಣ್ಣೀರಿಡುತ್ತಿದ್ದಾರೆ. ಇನ್ನೂ ಬಂಗೀ ಜಂಪ್​ ಆಯೋಜಕರ ವಿರುದ್ಧ ಕೇಸ್​ ದಾಖಲಾಗಿದೆ.

  ವರದಿ - ವಾಸುದೇವ್​. ಎಂ
  Published by:Sandhya M
  First published: