• Home
  • »
  • News
  • »
  • trend
  • »
  • Baguettes: ಫ್ರಾನ್ಸ್‌ನ ತಿನಿಸು ಬಗೇಟ್‌ಗೆ ಯುನೆಸ್ಕೋ ನೀಡಿದೆ ವಿಶ್ವಪರಂಪರೆಯ ಸ್ಥಾನಮಾನ!

Baguettes: ಫ್ರಾನ್ಸ್‌ನ ತಿನಿಸು ಬಗೇಟ್‌ಗೆ ಯುನೆಸ್ಕೋ ನೀಡಿದೆ ವಿಶ್ವಪರಂಪರೆಯ ಸ್ಥಾನಮಾನ!

ತಿಂಡಿ

ತಿಂಡಿ

ಕಳೆದ ದಶಕಗಳಲ್ಲಿ ಬಗೇಟ್ (ಒಂದು ತೆರನಾದ ಬ್ರೆಡ್) ಬಳಕೆ ಇಳಿಮುಖಗೊಂಡಿದ್ದರೂ ಫ್ರಾನ್ಸ್ ದಿನಕ್ಕೆ 16 ಮಿಲಿಯನ್ ಬ್ರೆಡ್‌ಗಳನ್ನು ತಯಾರಿಸುತ್ತದೆ. 2019 ರ ಅಂಕಿಅಂಶಗಳ ಪ್ರಕಾರ ಫ್ರಾನ್ಸ್ ವರ್ಷಕ್ಕೆ ಸರಿಸುಮಾರು 6 ಬಿಲಿಯನ್ ಬಗೇಟ್‌ಗಳನ್ನು ತಯಾರಿಸುತ್ತದೆ

  • Share this:

ಗೋಧಿ ಹಿಟ್ಟು, ನೀರು, ಯೀಸ್ಟ್, ಉಪ್ಪು (Salt) ಹಾಗೂ ಒಂದು ಚಿಟಿಕೆ ಸವೊಯಿರ್-ಫೇರ್ ಮಿಶ್ರಣದಿಂದ ತಯಾರಿಸಲಾದ ಬಗೇಟ್, ಐಫೆಲ್ ಟವರ್‌ನಂತೆಯೇ ಫ್ರಾನ್ಸ್‌ನ ಸಂಕೇತವಾಗಿದ್ದು, ಇದೀಗ ಯುನೆಸ್ಕೋದ (UNESCO) ಮಾನ್ಯತೆ ಗಳಿಸಿದೆ. ವಿಶ್ವದಾದ್ಯಂತ ಫ್ರಾನ್ಸ್‌ನ ಸಂಕೇತವಾಗಿ ಹೆಸರುವಾಸಿಯಾಗಿರುವ ಬಗೇಟ್ ಕನಿಷ್ಠ 100 ವರ್ಷಗಳಿಂದ ಫ್ರೆಂಚ್ ಆಹಾರದ (French Food) ಕೇಂದ್ರ ಭಾಗವಾಗಿದೆ ಹಾಗೂ ಈ ತಿನಿಸಿನ ಮೂಲದ ಕುರಿತು ಹಲವಾರು ದಂತ ಕಥೆಗಳಿವೆ (Story).


ಹಂಚಿಕೆ ಹಾಗೂ ಸ್ನೇಹಶೀಲತೆಗೆ ಸಮನಾರ್ಥಕ
ಬಗೇಟ್ ಫ್ರೆಂಚ್ ಜೀವನದ ಅತ್ಯಂತ ಪ್ರಮುಖ ಆಹಾರವೆಂದು ಬಿಂಬಿತವಾಗಿದ್ದು ಹಂಚಿಕೆ ಹಾಗೂ ಸ್ನೇಹಶೀಲತೆಗೆ ಸಮನಾರ್ಥಕವಾಗಿದೆ ಎಂದು ಯುನೆಸ್ಕೋ ಮುಖ್ಯಸ್ಥ ಆಡ್ರೆ ಅಜೌಲೆ ತಿಳಿಸಿದ್ದಾರೆ. ಬಗೇಟ್ ತಿನಿಸನ್ನು ತಯಾರಿಸುವ ಕೌಶಲ್ಯಗಳು ಹಾಗೂ ಸಾಮಾಜಿಕ ಅಭ್ಯಾಸಗಳು ಭವಿಷ್ಯದ ಅಸ್ತಿತ್ವಕ್ಕೆ ಕಾರಣವಾಗಿವೆ ಎಂದು ಮುಖ್ಯಸ್ಥರು ತಿಳಿಸಿದ್ದಾರೆ.


ಕಳೆದ ದಶಕಗಳಲ್ಲಿ ಬಗೇಟ್ (ಒಂದು ತೆರನಾದ ಬ್ರೆಡ್) ಬಳಕೆ ಇಳಿಮುಖಗೊಂಡಿದ್ದರೂ ಫ್ರಾನ್ಸ್ ದಿನಕ್ಕೆ 16 ಮಿಲಿಯನ್ ಬ್ರೆಡ್‌ಗಳನ್ನು ತಯಾರಿಸುತ್ತದೆ. 2019 ರ ಅಂಕಿಅಂಶಗಳ ಪ್ರಕಾರ ಫ್ರಾನ್ಸ್ ವರ್ಷಕ್ಕೆ ಸರಿಸುಮಾರು 6 ಬಿಲಿಯನ್ ಬಗೇಟ್‌ಗಳನ್ನು ತಯಾರಿಸುತ್ತದೆ ಎಂದಾಗಿದೆ. ಬಗೇಟ್ ಗರಿಗಿರಯಾದ ಮೇಲುಹೊದಿಕೆಯೊಂದಿಗೆ ತುಪ್ಪಳದಂತಿರುವ ಮೃದುವಾದ ಉದ್ದನೆಯ ಬ್ರೆಡ್ ಅನ್ನು ಹೊಂದಿದೆ ಹಾಗೂ ಫ್ರಾನ್ಸ್‌ನ ಸಂಕೇತವಾಗಿದೆ.


ಬಗೇಟ್ ತಯಾರಿ ಹೇಗೆ?"
ಬಗೇಟ್ ತಯಾರಿಗೆ ಮುಖ್ಯವಾಗಿ ಬೇಕಾಗಿರುವುದು ಹಿಟ್ಟು, ನೀರು, ಉಪ್ಪು ಹಾಗೂ ಯೀಸ್ಟ್ ಆಗಿದೆ. ಬಗೇಟ್ ಹಿಟ್ಟನ್ನು 4 ಮತ್ತು 6 ಡಿಗ್ರಿ ಸೆಲ್ಸಿಯಸ್ ನಡುವಿನ ತಾಪಮಾನದಲ್ಲಿ 15 ರಿಂದ 20 ಗಂಟೆಗಳ ಕಾಲ ನೆನಸಲಾಗುತ್ತದೆ ಎಂದು ಕೈಗಾರಿಕಾ ಬೇಕರಿಗಳಿಂದ ತನ್ನ ಮಾರುಕಟ್ಟೆಯನ್ನು ರಕ್ಷಿಸಲು ಹೋರಾಟ ನಡೆಸುತ್ತಿರುವ ಫ್ರೆಂಚ್ ಬೇಕರ್ಸ್ ಕಾನ್ಫೆಡರೇಶನ್ ತಿಳಿಸಿದೆ.


ಇದನ್ನೂ ಓದಿ:  ಅಬ್ಬಬ್ಬಾ ಏನ್ ಐಡಿಯಾ ಗುರೂ ಇದು; ತಲೆ ಕೂದಲನ್ನು ಹೀಗೂ ತೊಳೆಯಬಹುದು!


ಬಗೇಟ್ ಇತಿಹಾಸ
ಬಗೇಟ್‌ನ ರೂಪವು ವಿಯೆನ್ನಾದ ಬೇಕರ್‌ಗಳಿಂದ ಪ್ರೇರಿತವಾಗಿದೆ ಅಥವಾ ರಚಿಸಲಾಗಿದೆ. 19 ನೇ ಶತಮಾನದ ಆರಂಭದಲ್ಲಿ, ಆಗಸ್ಟ್ ಝಾಂಗ್‌ನಂತಹ ಬೇಕರ್‌ಗಳು ಫ್ರಾನ್ಸ್‌ನಲ್ಲಿ ಅಂಗಡಿಯನ್ನು ಸ್ಥಾಪಿಸಿದರು ಹಾಗೂ ತಮ್ಮ ರುಚಿಕರವಾದ ಪೇಸ್ಟ್ರಿಗಳೊಂದಿಗೆ ಜನರನ್ನು ಸಂತೋಷಪಡಿಸಿದರು ಮತ್ತು ಫ್ರೆಂಚ್ ಪೇಸ್ಟ್ರಿಗಳ ನಿರ್ದಿಷ್ಟ ಗುಂಪಿಗೆ ಹೆಸರನ್ನು ನೀಡಿದರು.


ಬಗೇಟ್ ಕುರಿತಾಗಿರುವ ಪ್ರಸಿದ್ಧ ದಂತಕಥೆಗಳು ಹೇಳುವಂತೆ, ನೆಪೋಲಿಯನ್ ಬೋನಾಪಾರ್ಟೆ ತನ್ನ ಸೇನೆಗೆ, ಸಾಗಾಟಕ್ಕೆ ಒಯ್ಯಲು ನೆರವಾಗುವಂತೆ ಉದ್ದನೆಯ ಆಕಾರದ ಬ್ರೆಡ್ ಅನ್ನು ತಯಾರಿಸಿದನು ಎಂದು ತಿಳಿಸಿದರೆ, ಬಗೇಟ್ ಅನ್ನು ಕಂಡುಹಿಡಿದವರು ಆಗಸ್ಟ್ ಝಾಂಗ್ ಎಂಬ ಆಸ್ಟ್ರಿಯನ್ ಬೇಕರ್ ಎಂದು ಇನ್ನಿತರರು ಪ್ರತಿಪಾದಿಸುತ್ತಾರೆ.


ಈ ದಿನಗಳಲ್ಲಿ ಬಗೇಟ್‌ ಅನ್ನು ಸುಮಾರು € 1 ($1.0) ಗೆ ಮಾರಲಾಗುತ್ತದೆ ಎಂದು ಬೇಕರಿಯವರು ತಿಳಿಸುತ್ತಾರೆ. ಬಗೇಟ್ ತಯಾರಿಗೆ ಬಳಸುವ ಸಾಮಾಗ್ರಿಗಳು ಒಂದೇ ಆಗಿದ್ದರೂ ಪ್ರತಿ ಬೇಕರಿಯು ತನ್ನದೇ ಆದ ಸೂಕ್ಷ್ಮ ಶೈಲಿಯನ್ನು ಹೊಂದಿದೆ, ಮತ್ತು ಪ್ರತಿ ವರ್ಷವೂ ಉತ್ತಮ ಬಗೇಟ್ ಅನ್ನು ಹುಡುಕಲು ರಾಷ್ಟ್ರವ್ಯಾಪಿ ಸ್ಪರ್ಧೆಗಳನ್ನೂ ಆಯೋಜಿಸಲಾಗುತ್ತದೆ.


ಸಾಂಪ್ರದಾಯಿಕ ಕುಶಲಕರ್ಮಿ ಬೇಕರಿಗಳ ಅಂತ್ಯ
ಫ್ರಾನ್ಸ್ 1970 ರಿಂದ ವರ್ಷಕ್ಕೆ ಸುಮಾರು 400 ಕುಶಲಕರ್ಮಿ ಬೇಕರಿಗಳನ್ನು ಕಳೆದುಕೊಳ್ಳುತ್ತಿದ್ದು ಈ ಇಳಿಕೆ 55,000 ದಿಂದ 35,000 ಕ್ಕೆ ಇಳಿಕೆಯಾಗಿದೆ ಎಂದು ವರದಿ ತಿಳಿಸಿದೆ. ನಗರವಾಸಿಗಳು ಬರ್ಗರ್‌ಗಳಂತಹ ತಿನಿಸುಗಳನ್ನು ಹೆಚ್ಚು ಆಯ್ದುಕೊಳ್ಳುತ್ತಿದ್ದು ಗ್ರಾಮೀಣ ಪ್ರದೇಶಗಳಲ್ಲಿ ಕೈಗಾರಿಕಾ ಬೇಕರಿಗಳು ಮತ್ತು ಪಟ್ಟಣದಿಂದ ಹೊರಗಿರುವ ಸೂಪರ್ ಮಾರ್ಕೆಟ್‌ಗಳ ಹರಡುವಿಕೆಯಿಂದಾಗಿ ಈ ಕುಸಿತವು ಉಂಟಾಗುತ್ತಿದೆ ಎಂದು ವರದಿಯಾಗಿದೆ.


ಬಗೇಟ್ ಸೇವನೆಗೂ ನಿಯಮವಿದೆ
ಬಗೇಟ್ ಸೇವಿಸುವುದಕ್ಕೂ ಕೆಲವೊಂದು ನಿಯಮಗಳಿದ್ದು ಇದನ್ನು ಚಾಕುವಿನಿಂದ ತುಂಡರಿಸುವಂತಿಲ್ಲ, ಕೈಗಳನ್ನು ಬಳಸಿ ಬಗೇಟ್ ಅನ್ನು ಬೇರ್ಪಡಿಸಬೇಕು ಎಂಬ ನಿಯಮವಿದೆ. ಹಾಗೆಯೇ ಇದನ್ನು ಬೀದಿಬದಿಗಳಲ್ಲಿ ಕೂಡ ಸೇವಿಸುವಂತಿಲ್ಲ ಏಕೆಂದರೆ ಫ್ರೆಂಚರು ತಾವು ಸೇವಿಸುವ ಆಹಾರ ಇಲ್ಲವೇ ಪಾನೀಯವನ್ನು ಆಸ್ವಾದಿಸಿಕೊಂಡು ಸೇವಿಸಬೇಕು ಎಂಬ ನಿಯಮಕ್ಕೆ ಬದ್ಧರಾಗಿದ್ದಾರೆ.

First published: