ಧಾರ್ಮಿಕ ಉಡುಗೆಗೆ (Religious dress) ಸಂಬಂಧಿಸಿದಂತೆ ಫ್ರಾನ್ಸ್ (France) ದೇಶ ಸಾಕಷ್ಟು ತೀವ್ರವಾದ ಸಮಸ್ಯೆಯನ್ನು ಈ ಹಿಂದೆ ಎದುರಿಸಿದ್ದು ಈಗಲೂ ಅದು ಒಂದು ಬಗೆಯ ಬಿಸಿ ಬಿಸಿ ವಿಷಯವಾಗಿದೆ ಅಂತಾನೇ ಹೇಳಬಹುದು. ಏತನ್ಮಧ್ಯೆ ಗ್ರೆನೋಬಲ್ (Grenoble) ಎಂಬ ಫ್ರೆಂಚ್ ನಗರದಲ್ಲಿ ಕಳೆದ ಸೋಮವಾರದಂದು (Monday) ಅಲ್ಲಿನ ಪ್ರಾಧಿಕಾರವು ತನ್ನ ವ್ಯಾಪ್ತಿಯಲ್ಲಿ ಬರುವ ಈಜು ಕೊಳಗಳಲ್ಲಿ (Swimming Pool) ಮುಸ್ಲಿಮ್ ಮಹಿಳೆಯರು (Muslim Women) ಬುರ್ಕಿನಿ (Burkini) ಎಂದು ಕರೆಯಲಾಗುವ ಮುಸ್ಲಿಮ್ ಈಜು ಉಡುಗೆಯನ್ನು (Swim Suit) ಧರಿಸಲು ಅನುಮತಿಸಿದ್ದು ಅದೀಗ ಮತ್ತೊಂದು ವಿವಾದ ಉಂಟು ಮಾಡಬಹುದಾದ ಸ್ಥಿತಿ ನಿರ್ಮಾಣಕ್ಕೆ ಕಾರಣವಾಗಬಹುದು ಎನ್ನಲಾಗುತ್ತಿದೆ.
ಆಲ್-ಇನ್-ಒನ್ ಉಡುಪು
ಇತ್ತೀಚಿನ ವರ್ಷಗಳಲ್ಲಿ ರಜಾ ಸಮಯದಲ್ಲಿ ಫ್ರಾನ್ಸ್ ದೇಶದಲ್ಲಿ ಕೆಲ ಮುಸ್ಲಿಮ್ ಮಹಿಳೆಯರು ತಮ್ಮ ಕೂದಲು ಸೇರಿದಂತೆ ದೇಹದ ಅಂಗಾಂಗಗಳು ಮುಚ್ಚುವಂತಿರುವ ಆಲ್-ಇನ್-ಒನ್ ಎಂಬಂತೆ ಉಡುಪನ್ನು ಧರಿಸುತ್ತಿದ್ದು ಅದು ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು.
ಈ ರೀತಿಯ ಉಡುಗೆಯನ್ನು ಫ್ರಾನ್ಸ್ ದೇಶದ ಕೆಲ ವಿಮರ್ಶಕರು ವಿರೋಧಿಸಿದ್ದು ಇದು ದೇಶದ ಜಾತ್ಯಾತೀತತೆಯನ್ನು ಭಗ್ನಗೊಳಿಸುವ ಹಾಗೂ ಇಸ್ಲಾಂ ಹರಡಿಸುವ ಅಂಶವೆಂದು ಬಿಂಬಿಸಿದ್ದಾರೆ ಹಾಗೂ ಫ್ರಾನ್ಸ್ ದೇಶದಲ್ಲಿರುವ ಕೆಲ ಬಲ ಪಂಥಿಯರು ಮತ್ತು ಸ್ತ್ರೀವಾದಿಗಳು ಈ ಉಡುಗೆಯ ಮೇಲೆ ತಕ್ಷಣ ನಿರ್ಬಂಧ ಹೇರಬೇಕೆಂದು ಬಯಸುತ್ತಿದ್ದಾರೆ.
ಈಜು ಕೊಳಗಳಲ್ಲಿಕೆಲವು ದಿರಿಸನ್ನುನಿರ್ಬಂಧಿಸಿದ ಫ್ರಾನ್ಸ್
ಹಾಗೇ ನೋಡಿದರೆ ಫ್ರಾನ್ಸ್ ದೇಶದ ಸರ್ಕಾರಿ ಒಡೆತನವಿರುವ ಅನೇಕ ಈಜು ಕೊಳಗಳಲ್ಲಿ ಈ ದಿರಿಸನ್ನು ನಿರ್ಬಂಧಿಸಲಾಗಿದೆ ಹಾಗೂ ನಿರ್ಬಂಧಕ್ಕೆ ಕಾರಣ ಸ್ವಚ್ಛತೆಗೆ ಸಂಬಂಧಿಸಿದುದಾಗಿದೆಯೇ ಹೊರತು ಧಾರ್ಮಿಕ ಅಂಶವಲ್ಲ ಎಂದು ಹೇಳಲಾಗಿದೆ. ಅಂತಹ ಕೊಳಗಳಲ್ಲಿ ಪುರುಷರು ಸೇರಿದಂತೆ ಎಲ್ಲರಿಗೂ ಈಜು ಕೊಳದ ಕಠಿಣ ನಿಯಮಗಳನ್ನೇ ಅನುಸರಿಸಲು ಸೂಚಿಸಲಾಗಿರುವುದು ಸಾಮಾನ್ಯ ಸಂಗತಿಯಾಗಿದೆ.
ಇದನ್ನೂ ಓದಿ: Most Poisonous Fruits: ಸಾವಿನ ದವಡೆಯಲ್ಲಿ ಸಿಲುಕಿಸುವ ಡೇಂಜರಸ್ ಹಣ್ಣುಗಳಿವು! ತಿನ್ಬೇಡಿ ಹುಷಾರ್!
ಗ್ರೆನೋಬಲ್ ನಗರದ ಮೇಯರ್ ಆಗಿರುವ ಎರಿಕ್ ಪಿಯೊಲ್ಲೆ ಫ್ರಾನ್ಸ್ ದೇಶದ ಹೈ ಪ್ರೊಫೈಲ್ ಹೊಂದಿರುವ ರಾಜಕಾರಣಿಗಳಲ್ಲೊಬ್ಬರಾಗಿದ್ದಾರೆ ಹಾಗೂ ನಗರ ಕೌನ್ಸಿಲ್ ಪ್ರಾಧಿಕಾರದಲ್ಲಿರುವ ಎಡಪಂಥೀಯ ಸಂಘಟನೆಯನ್ನು ಮುನ್ನಡೆಸುತ್ತಿರುವ ನಾಯಕರಾಗಿದ್ದು ಅವರಿಂದಲೇ ಈ ಬಗ್ಗೆ ಬುರ್ಕಾನಿ ಧರಿಸುವ ಅನುಮತಿ ನೀಡಲಾಗಿದೆ. ಆದರೆ, ಅವರು ತಮ್ಮ ಈ ಅನುಮತಿ ನೀಡಿರುವುದಕ್ಕೆ ವಿರುದ್ಧವಾಗಿ ಈಗ ಸಾಕಷ್ಟು ಪ್ರತಿಭಟನೆ ಎದುರಿಸುವಂತಾಗಿದೆ ಎಂದು ತಿಳಿದುಬಂದಿದೆ.
ಬುರ್ಕಾನಿ ದಿರಿಸನ್ನು ಪ್ರಸ್ತಾವನೆಗೆ ಸಂಬಂಧಿಸಿದಂತೆ ಮತದಾನ
ಅವರು ಸಿಟಿ ಕೌನ್ಸಿಲ್ ಸಭೆಯಲ್ಲಿ ಈ ಬುರ್ಕಾನಿ ದಿರಿಸನ್ನು ಅನುಮತಿಸುವ ಪ್ರಸ್ತಾವನೆಗೆ ಸಂಬಂಧಿಸಿದಂತೆ ಹರಸಾಹಸ ಪಟ್ಟು ಬೇಕಾದ ಅವಶ್ಯಕ ಪ್ರಮಾಣದಷ್ಟು ಮತಗಳನ್ನು ಗಳಿಸುವಲ್ಲಿ ಸಫಲರಾಗಿದ್ದರೂ ಸಹ ಅವರದ್ದೆ ಪಕ್ಷವಾದ ಇಇಎಲ್‍ವಿ ಎರಿಕ್ ಅವರ ಈ ಕ್ರಮವನ್ನು ಸಮರ್ಥಿಸದೆ ಹೊರಗುಳಿದಿದೆ ಎಂದು ತಿಳಿದುಬಂದಿದೆ. ಈ ಸಭೆಯಲ್ಲಿ ಈ ಬಗ್ಗೆ ಮತದಾನ ಮಾಡುವ ಮುಂಚೆ ಬಿಸಿಬಿಸಿ ಚರ್ಚೆಯಾಗಿದ್ದು ದಿರಿಸನ್ನು ಅನುಮತಿಸುವ ಪರ 29 ಮತಗಳು ಬಿದ್ದರೆ ಅದರ ವಿರುದ್ಧವಾಗಿ 27 ಮತಗಳು ಬಿದ್ದಿದ್ದು 2 ಮತಗಳನ್ನು ಚಲಾಯಿಸಲಾಗಿಲ್ಲ ಎಂದು ತಿಳಿದುಬಂದಿದೆ.
ಇದಾದ ಬಳಿಕ ಎರಿಕ್ ಅವರು ಮಾಧ್ಯಮದ ಮುಂದೆ ಪ್ರತಿಕ್ರಿಯಿಸುತ್ತ, "ನಮಗೆ ಕೇವಲ ಬೇಕಾಗಿರುವುದು ಪುರುಷ ಹಾಗೂ ಮಹಿಳೆ ತಮಗೆ ಹೇಗೆ ಬೇಕೋ ಹಾಗೆ ಉಡುಪನ್ನು ಧರಿಸಲು ಸಮರ್ಥರಾಗಿರುವುದು" ಎಂದಿದ್ದಾರೆ. ಆದರೆ ಅವರ ವಿರೋಧಿಗಳು ಈ ಪ್ರಸ್ತಾವನೆಗೆ ಆಕ್ರೋಶ ವ್ಯಕ್ತಪಡಿಸಿದ್ದು ಅದರಲ್ಲಿ ಅವೆರ್ನ್-ರೋನ್-ಅಲ್ಪ್ಸ್ ಪ್ರದೇಶದ ಸಾಂಪ್ರದಾಯಿಕ ಮುಖ್ಯಸ್ಥರಾಗಿರುವ ಲೌರೆಂಟ್ ವಾಕ್ವೆಜ್ ಅವರು "ಎರಿಕ್ ಅವರ ಈ ನಡೆ ನಮ್ಮ ದೇಶಕ್ಕೆ ಅಂತ್ಯದ ಹಾದಿ" ಎಂಬ ಆಕ್ರೋಶಭರಿತ ನುಡಿಗಳನ್ನಾಡಿ ಈ ನಗರದಲ್ಲಿನ ತಮ್ಮ ಹೂಡಿಕೆಗಳನ್ನು ವಾಪಸ್ ಪಡೇಯುವುದಾಗಿ ಪ್ರಮಾಣ ಮಾಡಿದ್ದಾರೆಂದು ವರದಿಯಾಗಿದೆ.
ಜಾತ್ಯಾತೀತ ಸಂಸ್ಕೃತಿಯ ಮೇಲೆ ಒಂದು ರೀತಿಯ ಕರಿ ನೆರಳು
ಈಗ ದೇಶದೆಲ್ಲೆಡೆ ನಿಧಾನವಾಗಿ ವೃತ್ತಪತ್ರಿಕೆಗಳಲ್ಲಿ, ಸುದ್ದಿ ಗೋಷ್ಠಿಗಳಲ್ಲಿ ಹಾಗೂ ಮಾಧ್ಯಮಗಳಲ್ಲಿ ಬುರ್ಕಿನಿ ವಿಷಯ ಮತ್ತೆ ಪ್ರಸ್ತಾಪವಾಗತೊಡಗಿದೆ. ಫ್ರಾನ್ಸ್ ದೇಶದಲ್ಲಿ ಜನರು ಈಜು ಕೊಳಗಳಲ್ಲಿ ಯಾವ ರೀತಿ ಉಡುಪು ಧರಿಸಬೇಕೆಂಬುದು ಬಹು ಸೂಕ್ಷ್ಮ ವಿಷಯವಾಗಿದೆ. ಇಸ್ಲಾಂ ಧರ್ಮದ ಕೆಲ ಮತಾಂಧರಿಂದ ಬರಬಹುದಾದ ಬೆದರಿಕೆಗಳು ದೇಶದ ಜಾತ್ಯಾತೀತ ಸಂಸ್ಕೃತಿಯ ಮೇಲೆ ಒಂದು ರೀತಿಯ ಕರಿ ನೆರಳು ಇದ್ದಂತಹ ಪರಿಸ್ಥಿತಿ ಫ್ರಾನ್ಸ್ ದೇಶದಲ್ಲಿದೆ.
ಇದನ್ನೂ ಓದಿ: Bride Video: ರೆಟ್ರೋ ಹಾಡಿಗೆ ಗೆಳತಿಯರ ಜೊತೆ ವಧುವಿನ ಸಖತ್ ಡ್ಯಾನ್ಸ್, ನೆಟ್ಟಿಗರು ಫಿದಾ
ಹಲವು ಜನರು ಎರಿಕ್ ಅವರ ಈ ಕ್ರಮವನ್ನು ವಿರೋಧಿಸಿದ್ದು ಇದು ಫ್ರಾನ್ಸ್ ದೇಶಕ್ಕೆ ಯಾವ ರೀತಿ ಹಾನಿ ಮಾಡಲಿದೆ ಎಂಬ ಆಕ್ರೋಶ ವ್ಯಕ್ತಪಡಿಸಿದರೆ ಕೆಲವರು ಧಾರ್ಮಿಕ ನೆಲೆಗಟ್ಟಿನಡಿಯಲ್ಲಿ ತಮ್ಮ ರಾಜಕೀಯ ದುರಾಸೆಗಳನ್ನು ತೀರಿಸಿಕೊಳ್ಳುವ ನಿಟ್ಟಿನಲ್ಲಿ ತೆಗೆದುಕೊಂಡ ಕ್ರಮ ಎಂದು ಹತಾಶೆ ವ್ಯಕ್ತಪಡಿಸಿದ್ದಾರೆ.
2016 ರ ಬೇಸಿಗೆಯಲ್ಲಿ ಮೆಡಿಟರೇನಿಯನ್ ಕಡಲತೀರಗಳಲ್ಲಿ ಬುರ್ಕಿನಿಯನ್ನು ನಿಷೇಧಿಸಲು ಫ್ರಾನ್ಸ್‌ನ ದಕ್ಷಿಣದಲ್ಲಿ ಹಲವಾರು ಸ್ಥಳೀಯ ಮೇಯರ್‌ಗಳು ಮಾಡಿದ ಪ್ರಯತ್ನಗಳು ಈ ಸ್ನಾನದ ಸೂಟ್‌ನ ಸುತ್ತ ಮೊದಲ ಬೆಂಕಿಯ ಬಿರುಗಾಳಿಯನ್ನು ಪ್ರಾರಂಭಿಸಿತ್ತು. ಫ್ರಾನ್ಸ್‌ನಲ್ಲಿ ಭಯೋತ್ಪಾದಕ ದಾಳಿಯ ಸರಣಿಯ ನಂತರ ಪರಿಚಯಿಸಲಾದ ನಿಯಮಗಳನ್ನು ಅಂತಿಮವಾಗಿ ತಾರತಮ್ಯವೆಂದು ಹೊಡೆದು ಹಾಕಲಾಯಿತು.
ಮಹಿಳೆಯರಿಗೆ ಸ್ಪೋರ್ಟ್ಸ್ ಹಿಜಾಬ್
ಮೂರು ವರ್ಷಗಳ ನಂತರ, ಗ್ರೆನೋಬಲ್‌ನಲ್ಲಿರುವ ಮಹಿಳೆಯರ ಗುಂಪೊಂದು ಬುರ್ಕಿನಿಗಳೊಂದಿಗೆ ಕೊಳದೊಳಗೆ ಬಲವಂತವಾಗಿ ನುಗ್ಗಲು ಪ್ರಯತ್ನಿಸಿದ ಸಮಯದಲ್ಲಿ ಪ್ರಧಾನ ಮಂತ್ರಿಗಳೇ ಖುದ್ದು ಅಖಾಡದೊಳಗೆ ಇಳಿದು ನಿಯಮಗಳನ್ನು ಅನುಸರಿಸಬೇಕು ಎಂದು ಒತ್ತಾಯಿಸಿದ್ದರು.
ಇದನ್ನೂ ಓದಿ: Father-Daughter: ಮಗಳಿಗೆ ಮೌಸ್ ಹಿಡಿಯಲು ಕಲಿಸೋ ತಂದೆ, ಮಗಳೇನು ಮಾಡ್ತಾಳೆ ನೋಡಿ!
ಪ್ರಸಿದ್ಧ ಫ್ರೆಂಚ್ ಸ್ಪೋರ್ಟ್ಸ್ ಬ್ರಾಂಡ್ ಆದ ಡೆಕಾಥ್ಲಾನ್ ಸಹ 2019 ರಲ್ಲಿ ಮುಸ್ಲಿಮ್ ಮಹಿಳೆಯರಿಗೆ ಓಟದ ಸಮಯದಲ್ಲಿ ತಮ್ಮ ಕೂದಲನ್ನು ಮುಚ್ಚಲು ಅನುವು ಮಾಡಿಕೊಡುವಂತಹ "ಸ್ಪೋರ್ಟ್ಸ್ ಹಿಜಾಬ್" ಅನ್ನು ಪರಿಚಯಿಸಿ ಮಾರಾಟ ಮಾಡುವ ಯೋಜನೆಯನ್ನು ಘೋಷಿಸಿದಾಗ ಇದೇ ರೀತಿಯ ವಿವಾದದಲ್ಲಿ ಸಿಲುಕಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು. ಇದೀಗ ಎರಿಕ್ ಅವರ ಈ ಕ್ರಮ ಮುಂದೆ ಯಾವ ಸ್ಥಿತಿ ಉಂಟು ಮಾಡಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ ಅಷ್ಟೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ