• Home
  • »
  • News
  • »
  • trend
  • »
  • Shocking News: ಛೇ..4 ತಿಂಗಳ ಮಗುವನ್ನು ಟೆರೇಸ್​ನಿಂದ ಕೆಳಕ್ಕೆಸೆದ ಕೋತಿ!

Shocking News: ಛೇ..4 ತಿಂಗಳ ಮಗುವನ್ನು ಟೆರೇಸ್​ನಿಂದ ಕೆಳಕ್ಕೆಸೆದ ಕೋತಿ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಉತ್ತರಪ್ರದೇಶದ ಬರೇಲಿಯಲ್ಲಿ ನಾಲ್ಕು ತಿಂಗಳ ಮಗುವನ್ನು ಕೋತಿಯೊಂದು ಟೇರೆಸ್ನಿಂದ ಕೆಳಕ್ಕೆ ಎಸೆದ ಪರಿಣಾಮವಾಗಿ ಮಗು ಸ್ಥಳದಲ್ಲಿಯೇ ಸಾವನಪ್ಪಿದ ಧಾರುಣ ಘಟನೆ ಸಂಭವಿಸಿದೆ

  • News18 Kannada
  • Last Updated :
  • Forest Village Lakhipathar | Killannur
  • Share this:

ಈ ಪ್ರಕೃತಿಯಲ್ಲಿ ಮಾನವನನ್ನು ಸೇರಿದಂತೆ ಅನೇಕ ಜಾತಿಯ, ಬೇರೆ ಬೇರೆ ಪ್ರಭೇದದ ಪ್ರಾಣಿಗಳಿವೆ. ಇವುಗಳಲ್ಲಿ ಕೆಲವು ಪ್ರಾಣಿಗಳು ದೈಹಿಕವಾಗಿ, ನಡವಳಿಕೆಗಳಿಂದ ಅಥವಾ ಇನ್ನಿತರೆ ಗುಣಲಕ್ಷಣಗಳಿಂದ ಒಂದಕ್ಕೊಂದು ಹೋಲುತ್ತವೆ.  ಮಂಗನಿಂದ (Monkey) ಮಾನವ ಅನ್ನುವಂತಹ ಮಾತುಗಳನ್ನು ಸಾಮಾನ್ಯವಾಗಿ ಎಲ್ಲರೂ ಹೇಳುತ್ತಾರೆ. ಮಾನವನ ದೈಹಿಕ ಗುಣಲಕ್ಷಣಗಳೂ ಹೆಚ್ಚಾಗಿ ಮಂಗಗಳಿಗೆ ಹೋಲಿಕೆ ಆಗುತ್ತವೆ. ಮಂಗಗಳು ಕಾಡಿನಲ್ಲಿ  ಜೀವಿಸುವ ಅತಿ ಮುಗ್ಧತೆಯುಳ್ಳ ಪ್ರಾಣಿಗಳೆಂದು ಹೇಳುತ್ತಾರೆ. ಆದರೆ ಇದೀಗ ಈ ಮಾತು ಸುಳ್ಳಾಗಿದೆ. ಮಂಗವೊಂದು ನಾಲ್ಕು ತಿಂಗಳ ಮಗುವನ್ನ ಸಾಯಿಸಿದ ಧಾರುಣ ಘಟನೆ ಉತ್ತರ ಪ್ರದೇಶದ (Uttar Pradesh)  ಬರೇಲಿಯಲ್ಲಿ ನಡೆದಿದೆ. ಈ ಘಟನೆಯಿಂದಾಗಿ ಜನ ಮಂಗಗಳ ಗುಂಪನ್ನು (Monkey Gang) ಕಂಡರೆ ಭಯಭೀತರಾಗುವಂತೆ ಆಗಿದೆ. ಅಷ್ಟಕ್ಕೂ ಮಂಗಗಳಿಗೆ ಏನೂ ಮಾಡದ ನಾಲ್ಕು ತಿಂಗಳ ಮಗುವನ್ನು ಕೊಂದದ್ದಾದರೂಏಕೆ ಎಂಬುದು ಜನರಲ್ಲಿ ಇದೀಗ ಮೂಡಿದ ಪ್ರಶ್ನೆಯಾಗಿದೆ. 


ವರದಿಗಳ ಪ್ರಕಾರ ಉತ್ತರ ಪ್ರದೇಶದ ಬರೇಲಿಯ ಡುಂಕಾ ಗ್ರಾಮದ ನಿವಾಸಿ ನಿರ್ದೇಶ್ ಉಪಾಧ್ಯಾಯ ಮತ್ತು ಅವರ ಪತ್ನಿ ತಮ್ಮ ಮನೆಯ ಟೇರೆಸ್​ನಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಈ ಸಂದರ್ಭದಲ್ಲಿ ಅಲ್ಲಿಗೆ ಕೋತಿಗಳ ಗುಂಪೊಂದು ಧಾವಿಸಿದ್ದು. ನಾಲ್ಕು ತಿಂಗಳ ಮಗುವಿನ ಸಾವಿಗೆ ಕಾರಣವಾಯಿತು.


ಮನೆಯ ಟೇರಸ್​ಗೆ ಬಂದು ಕೋತಿಗಳಿಂದ ಹಲ್ಲೆ
ದಂಪತಿಗಳು ಟೇರೆಸ್​ನಲ್ಲಿ ಸುತ್ತಾಡುತ್ತಿದ್ದ ಸಂದರ್ಭದಲ್ಲಿ ಅಲ್ಲಿಗೆ ಮಂಗಗಳ ಹಿಂಡೊಂದು ಬಂದಿದೆ. ಇದನ್ನು ಕಂಡ ದಂಪತಿಗಳು ಮಂಗಗಳನ್ನು ಓಡಿಸಲು ಪ್ರಯತ್ನಿಸಿದರು. ಆದರೆ ಮಂಗಗಳು ಅಲ್ಲಿಂದ ಓಡದೆ ದಂಪತಿಗಳ ವಿರುದ್ಧವೇ ನಿಂತವು. ಭಯಭೀತರಾದ ದಂಪತಿಗಳು ಮಂಗಗಳಿಂದ ತಮ್ಮ ಜೀವ ರಕ್ಷಿಸಲು ಟೇರಸ್​ನಿಂದ ಕೆಳಕ್ಕೆ ಓಡಲು ಪ್ರಾರಂಭಿಸಿದರು.


ತಂದೆಯ ಕೈಯಿಂದ ಜಾರಿದ ಮಗು
ಮಂಗಗಳಿಂದ ಜೀವ ಉಳಿಸಿಕೊಳ್ಳುವುದಕ್ಕಾಗಿ ದಂಪತಿಗಳು ಮೆಟ್ಟಿಲಿನ ಕಡೆಗೆ ಓಡಲು ಆರಭಿಸಿದರು.  ಪತ್ನಿ ಅಲ್ಲಿಂದ ತಪ್ಪಿಸಿಕೊಂಡು ಬಂದರು. ಆದರೆ ಮಗುವಿನ ತಂದೆ ಓಡಿ ಬರುವ ಸಂದರ್ಭದಲ್ಲಿ ತನ್ನ ಕೈಯಲ್ಲಿದ್ದ ನಾಲ್ಕು ತಿಂಗಳ ಗಂಡು ಮಗು ಜಾರಿ ಕೆಳಕ್ಕೆ ಬೀಳುತ್ತದೆ. ಮಗುವನ್ನು ಮೇಲಕ್ಕೆ ಎತ್ತಬೇಕು ಎನ್ನುವಷ್ಟರಲ್ಲಿ ಕೋತಿ ಮಗುವಿನ ಮೇಲೆ ದಾಳಿ ಮಾಡಿದೆ.


ಇದನ್ನೂ ಓದಿ: Pitbull​ ಶ್ವಾನವನ್ನು ಬ್ಯಾನ್​ ಮಾಡಿರುವ ದೇಶಗಳಿವು! ಕೆಣಕಿದ್ರೆ ಯಾರನ್ನೂ ಬಿಡಲ್ಲ ಇದು!


ಟೇರಸ್​ನಿಂದ ಮಗುವನ್ನು ಕೆಳಗೆ ಎಸೆದ ಕೋತಿ
ತಂದೆಯ ಕೈ ಜಾರಿದ ಮಗುವನ್ನು ಕೋತಿಗಳ ಗುಂಪು ಸುತ್ತುವರೆದು ತಂದೆ ಮಗುವನ್ನು ಎತ್ತಿಕೊಳ್ಳುವ ಮೊದಲೇ ಮಗುವನ್ನು ಕೋತಿಯೊಂದು ಎತ್ತಿ ಹಿಡಿದಿದೆ. ಅಲ್ಲದೆ ಟೇರೆಸ್​ನ ಮೇಲಿಂದ ಕೆಳಕ್ಕೆ ಎಸೆದಿದೆ. ಮಗು ಸ್ಥಳದಲ್ಲಿಯೇ ಸಾವನ್ನಪ್ಪಿದೆ.


ಘಟನೆ ಕುರಿತು ವರದಿ ಮಾಡಿದ ಬರೇಲಿಯ ಅರಣ್ಯಾಧಿಕಾರಿ
ಬರೇಲಿಯ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಲಲಿತ್ ವರ್ಮಾ ಅವರು ಘಟನೆ ಕುರಿತು ವರದಿ ಮಾಡಿದ್ದಾರೆ. ಮತ್ತು ಈ ಘಟನೆಯ ಬಗ್ಗೆ ಇನ್ನಷ್ಟು  ತನಿಖೆ ನಡೆಸಲು ಅರಣ್ಯ ಇಲಾಖೆಯ ತಂಡವನ್ನು ಕಳುಹಿಸಲಾಗಿದೆ.


ಇದನ್ನೂ ಓದಿ: Viral Video: ಬರೀ ಮನುಷ್ಯರಷ್ಟೇ ಅಲ್ಲ ಮಂಗಗಳಿಗೂ ಸೋಶಿಯಲ್ ಮೀಡಿಯಾ ಕ್ರೇಜ್, ಇದೆಂಥಾ ಕಾಲ ಬಂದ್ಬಿಡ್ತು


ಕೋತಿಯು ಎಸೆದ ಪರಿಣಾಮವಾಗಿ ನಾಲ್ಕು ತಿಂಗಳ ಮಗು ಸಾವನ್ನಪ್ಪಿರುವ ಈ ಘಟನೆ ಪ್ರಾಣಿಗಳ ಮುಗ್ಧತೆಯ ಮೇಲೆ ಜನರಿಗಿರುವ ನಂಬಿಕೆಯನ್ನು ಸಾಯುವಂತೆ ಮಾಡಿದೆ. ಅಲ್ಲದೆ ಕೋತಿಗಳ ಗುಂಪನ್ನು ಕಂಡರೆ ಜನರು ಮುಖ್ಯವಾಗಿ ಸಣ್ಣ ಮಕ್ಕಳು ಭಯಭೀತರಾಗುವಂತೆ ಆಗಿದೆ. ನೀರ್ದೆಶ್ ಉಪಾಧ್ಯಾಯ ದಂಪತಿಗಳಿಗೆ ಈ ಮಗುವಲ್ಲದೆ ಇನ್ನೊಂದು ಮಗಳಿದ್ದಾಳೆ. ಆ ಮಗು  ಸಾವನ್ನಪ್ಪಿದ ಮಗುವಿಗಿಂತ ದೊಡ್ಡ ಮಗುವಾಗಿದೆ.

Published by:Nalini Suvarna
First published: