Four day work: ವಾರದಲ್ಲಿ 4 ದಿನ ಕೆಲಸ, ನಾಳೆಯಿಂದಲೇ ಹೊಸಾ ನಿಯಮ ಜಾರಿ!

Four Day Work Week Pilot Project Launch From 1 June hg

Four Day Work Week Pilot Project Launch From 1 June hg

Four day work: ಇದೀಗ ಬ್ರಿಟನ್ ಕೂಡ ಫೋರ್ ಡೇ ವರ್ಕ್ ವೀಕ್ ಕ್ಲಬ್ ಸೇರಲಿದೆ. ವಾರದಲ್ಲಿ ನಾಲ್ಕು ದಿನಗಳ ಪ್ರಾಯೋಗಿಕ ಯೋಜನೆಯು ಜೂನ್ 1 ರಿಂದ ಯುಕೆಯಲ್ಲಿ ಪ್ರಾರಂಭವಾಗುತ್ತಿದೆ. ದೇಶದ 60 ದೊಡ್ಡ ಕಂಪನಿಗಳು ಇದನ್ನು ಜಾರಿಗೊಳಿಸುತ್ತಿವೆ.

  • Share this:

    ಪ್ರಪಂಚದಾದ್ಯಂತ ಕೊರೊನಾ (Corona) ಆವರಿಸಿದ ನಂತರ ಬಹುತೇಕ ಕಂಪನಿಗಳು (Company) ತನ್ನ ನೌಕಕರಿಗೆ ವರ್ಕ್​ ಫ್ರಂ ಹೋಮ್ (Work From Home)​ ನೀಡಿತ್ತು. ಆದರೀಗ ಕಂಪನಿಗಳು ನೌಕಕರನ್ನು ಮರಳಿ ಕರೆಸಿಕೊಳ್ಳುತ್ತಿವೆ. ಆದರೆ ಕೆಲವೊಂದು ಕಂಪನಿಗಳು ಇಂದಿಗೂ ವಾರದ ಮೂರು ದಿನ ಆಫೀಸು (Office) ಮತ್ತೆ ಮೂರು ದಿನ ಮನೆಯಿಂದ ಕೆಲಸ ಮಾಡುವ ಆಯ್ಕೆ ನೀಡಿವೆ. ಆದರೆ ಕೆಲವು ದೇಶಗಳು ಎಲ್ಲಾ ದೃಷ್ಟಿಯಿಂದಲೂ ತನ್ನ ನೌಕಕರಿಗೆ ವಾರದಲ್ಲಿ 4 ದಿನ ಕೆಲಸ (Work) ಮಾಡುವ ಸೂತ್ರವನ್ನು ಅನುಸರಿಸುತ್ತಿದೆ.


    ಇದೀಗ ಬ್ರಿಟನ್ ಕೂಡ ಫೋರ್ ಡೇ ವರ್ಕ್ ವೀಕ್ ಕ್ಲಬ್ ಸೇರಲಿದೆ. ವಾರದಲ್ಲಿ ನಾಲ್ಕು ದಿನಗಳ ಪ್ರಾಯೋಗಿಕ ಯೋಜನೆಯು ಜೂನ್ 1 ರಿಂದ ಯುಕೆಯಲ್ಲಿ ಪ್ರಾರಂಭವಾಗುತ್ತಿದೆ. ದೇಶದ 60 ದೊಡ್ಡ ಕಂಪನಿಗಳು ಇದನ್ನು ಜಾರಿಗೊಳಿಸುತ್ತಿವೆ. ಸುಮಾರು ಆರು ತಿಂಗಳ ಕಾಲ ನಡೆಯುವ ಈ ಪ್ರಯೋಗದಲ್ಲಿ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ವಾರದಲ್ಲಿ ನಾಲ್ಕು ದಿನ ಅಥವಾ ಗರಿಷ್ಠ 32 ಗಂಟೆಗಳ ಕಾಲ ಕೆಲಸ ಮಾಡುವಂತೆ ಹೇಳುತ್ತವೆ. ಅಂದರೆ, ಉದ್ಯೋಗಿಗಳಿಗೆ ಪ್ರತಿ ವಾರ ಮೂರು ದಿನಗಳ ರಜೆ ಸಿಗುತ್ತದೆ.ಇದರಲ್ಲಿ ದೇಶದ 60 ದೊಡ್ಡ ಕಂಪನಿಗಳ 3000 ಉದ್ಯೋಗಿಗಳನ್ನು ಸೇರಿಸಲಾಗಿದೆ. ಈ ಅವಧಿಯಲ್ಲಿ ನೌಕರರ ವೇತನದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.


    ಈ ಬಗ್ಗೆ ಮಾತನಾಡಿದ ಕಾರ್ಮಿಕ ಅರ್ಥಶಾಸ್ತ್ರಜ್ಞ ಜೊನಾಥನ್ ಬಾಯ್ಸ್ ಅವರು ಉತ್ಪಾದಕತೆಯನ್ನು ಹೇಗೆ ಅಳೆಯುವುದು ದೊಡ್ಡ ಸವಾಲಾಗಿದೆ ಎಂದು ಹೇಳಿದರು. ನೌಕರರು ನಾಲ್ಕು ದಿನಗಳಲ್ಲಿ ಐದು ದಿನಗಳ ಕೆಲಸವನ್ನು ಮಾಡಬೇಕಾಗುತ್ತದೆ ಎಂದು ಅವರು ವಿವರಿಸಿದರು.


    ಇದಕ್ಕೂ ಮೊದಲು, ಯುನೈಟೆಡ್ ಅರಬ್ ಎಮಿರೇಟ್ಸ್ ಜನವರಿ 2022 ರಿಂದ ಸರ್ಕಾರಿ ಸಂಸ್ಥೆಗಳಿಗೆ ವಾರದಲ್ಲಿ ಕೆಲಸದ ದಿನಗಳನ್ನು ಐದರಿಂದ ನಾಲ್ಕೂವರೆ ವರ್ಷಗಳವರೆಗೆ ಕಡಿಮೆ ಮಾಡಿದೆ. ಶುಕ್ರವಾರ ಅರ್ಧ-ದಿನದ ಕೆಲಸವಿರುತ್ತದೆ. ಶುಕ್ರವಾರದ ಮಧ್ಯಾಹ್ನದ ನಂತರ ನಮಾಜ್​ ಇರುವುದರಿಂದ ಮತ್ತು ಶನಿವಾರ, ಆದಿತ್ಯವಾರ ವಾರದ ರಝೆ ಎಂದು ಘೋಷಣೆ ಮಾಡಿದೆ.


    ಕೆಲಸ-ಜೀವನದ ಸಮತೋಲನವನ್ನು ಸುಧಾರಿಸುವ ಸಲುವಾಗಿ, ಜೂನ್ 2021 ರಲ್ಲಿ, ಜಪಾನ್ ಸರ್ಕಾರವು ಕೂಡ ಇದೇ ರೋತಿಯ ಉಪಕ್ರಮವನ್ನು ತೆಗೆದುಕೊಂಡಿತು ಮತ್ತು ನಾಲ್ಕು ದಿನಗಳ ಕೆಲಸದ ವಾರವನ್ನು ಪ್ರಾರಂಭಿಸಲು ಕಂಪನಿಗಳನ್ನು ಕೇಳಿತು. ಪ್ಯಾನಸೋನಿಕ್​ (Panasonic) ಈ ನಿಯಮವನ್ನು ಜಾರಿಗೆ ತಂದ ಮೊದಲ ಜಪಾನಿನ ಕಂಪನಿಯಾಗಿದೆ.


    ಇದನ್ನೂ ಓದಿ: Blood Bribe: ಇಲ್ಲಿ ರಕ್ತ ಬೇಕಾದ್ರೂ ಲಂಚ ಕೊಡಬೇಕು! ಇಲ್ಲವಾದ್ರೆ ಕೊಡ್ತಾರೆ ಔಷಧಿ ಬೆರೆಸಿದ ಕೆಂಪು ಗ್ಲುಕೋಸ್‍!


    ಬಹುರಾಷ್ಟ್ರೀಯ ಗ್ರಾಹಕ ಸರಕುಗಳ ಕಂಪನಿಯಾದ ಯೂನಿಲಿವರ್ ನ್ಯೂಜಿಲೆಂಡ್ ತನ್ನ ಉದ್ಯೋಗಿಗಳಿಗೆ ವೇತನ ಕಡಿತವಿಲ್ಲದೆ ಡಿಸೆಂಬರ್ 2020 ರಲ್ಲಿ ಒಂದು ವರ್ಷದ ನಾಲ್ಕು ದಿನಗಳ ಕೆಲಸದ ವಾರವನ್ನು ಪರಿಚಯಿಸಿತು.


    ಬೆಲ್ಜಿಯಂ ತನ್ನ ಉದ್ಯೋಗಿಗಳಿಗೆ ವಾರದಲ್ಲಿ ನಾಲ್ಕು ದಿನ ಕೆಲಸ ಮಾಡುವ ಆಯ್ಕೆಯನ್ನು ನೀಡುವ ದೇಶಗಳ ಪಟ್ಟಿಯಲ್ಲಿ ಸೇರ್ಪಡೆಗೊಳ್ಳುವ ಹೊಸ ದೇಶವಾಗಿದೆ.


    ಕಳೆದ ವರ್ಷ ಸ್ಪ್ಯಾನಿಷ್ ಸರ್ಕಾರವು ನೌಕರರ ವೇತನವನ್ನು ಕಡಿತಗೊಳಿಸದೆ 32 ಗಂಟೆಗಳ ಕೆಲಸದ ವಾರವನ್ನು ಘೋಷಿಸಿತು.


    ಇದನ್ನೂ ಓದಿ: Labour Salary: 10 ಸಾವಿರಕ್ಕಿಂತ ಕಡಿಮೆ ಈ ಕಾರ್ಮಿಕರ ಆದಾಯ! ಆಘಾತಕಾರಿ ಮಾಹಿತಿ ಬಹಿರಂಗ


    ಆಡಳಿತ ಪಕ್ಷದ ಪ್ರಚಾರದ ಸಮಯದಲ್ಲಿ ಭರವಸೆ ನೀಡಿದಂತೆ ಸ್ಕಾಟ್ಲೆಂಡ್ ಪ್ರಾಯೋಗಿಕ ಆಧಾರದ ಮೇಲೆ ನಾಲ್ಕು ದಿನಗಳ ಕೆಲಸದ ವಾರವನ್ನು ಪ್ರಾರಂಭಿಸುತ್ತದೆ. ಅದೇ ಸಮಯದಲ್ಲಿ, ನೌಕರರ ಕೆಲಸದ ಸಮಯವನ್ನು 20% ರಷ್ಟು ಕಡಿತಗೊಳಿಸಲಾಯಿತು  ಜನವರಿ 2022 ರಲ್ಲಿ, ಐರ್ಲೆಂಡ್‌ನಲ್ಲಿ ನಾಲ್ಕು ದಿನಗಳ ಕೆಲಸದ ವಾರ ಪ್ರಾರಂಭವಾಯಿತು. ಹೊಸ ನಿಯಮದ ಪ್ರಕಾರ, ನೌಕರರ ವೇತನದಲ್ಲಿ ಯಾವುದೇ ನಷ್ಟವಾಗುವುದಿಲ್ಲ.


    ಭಾರತದಲ್ಲಿಯೂ ಕೆಲಸದ ವಾರವನ್ನು ಕಡಿಮೆ ಮಾಡಲು ಸರ್ಕಾರವು ಪರಿಗಣಿಸುತ್ತಿದೆ. ಕಾರ್ಮಿಕ ಕಾನೂನುಗಳ ಸುಧಾರಣೆಯ ಅಡಿಯಲ್ಲಿ ಈ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಇದು ಅನ್ವಯಿಸಿದರೆ, ಉದ್ಯೋಗಿಗಳು ಕನಿಷ್ಠ 48 ಕೆಲಸದ ಸಮಯವನ್ನು ಪೂರ್ಣಗೊಳಿಸಬೇಕು. ನಾಲ್ಕು ದಿನಗಳ ನಿಯಮ ಅನ್ವಯಿಸಿದರೆ, ನೌಕರರು ದಿನಕ್ಕೆ 12 ಗಂಟೆಗಳ ಕಾಲ ಕೆಲಸ ಮಾಡಿದ ನಂತರ ಮೂರು ದಿನಗಳ ರಜೆ ತೆಗೆದುಕೊಳ್ಳಲು ಸಾಧ್ಯವಾಗುತ್ತದೆ.

    Published by:Harshith AS
    First published: