ಪೊಲೀಸ್ ಅಧಿಕಾರಿಯಾಗಿದ್ದವಳು ಮಾಡೆಲ್ ಆದ ಕಥೆ; ಯಾರೀಕೆ? ಒಳಉಡುಪಿನ ಪ್ರಚಾರದಲ್ಲಿ ಅಷ್ಟೊಂದು ಆದಾಯ ಬರುತ್ತಾ?
Charlotte Rose: ಸರ್ಕಾರಿ ಕೆಲಸ ಬೇಕು ಎಂದು ರಾತ್ರಿಯಿಡಿ ಓದಿ ಪರೀಕ್ಷೆ ಬರೆದು ಪಾಸ್ ಮಾಡಲು ಪಣತೊಡುವ ಕಾಲವಿದು. ಅದರಲ್ಲಿ ಚಾರ್ಲೆಟ್ ರೋಸ್ ಮಾತ್ರ ಸಿಕ್ಕ ಸರ್ಕಾರಿ ಕೆಲಸದಿಂದ ಹೊರಬಂದು ಬಣ್ಣದ ಲೋಕಕ್ಕೆ ಕಾಲಿಟ್ಟರು. ಆದರೀಗ ಆಕೆ ಅಂದುಕೊಂಡಂತೆ ಐಷಾರಾಮಿಯಾಗಿ ಬದುಕುತ್ತಿದ್ದಾಳೆ. ಕೋಟಿ ಬೆಲೆಯ ಕಾರಿನಲ್ಲಿ ಓಡಾಡುತ್ತಿದ್ದಾಳೆ.
ಜೀವನದಲ್ಲಿ ಒಮ್ಮೆಯಾದರು ಕೋಟ್ಯಾಧಿಪತಿಯಾಗಿ ಬದುಕಬೇಕು, ಐಷಾರಾಮಿ ಕಾರಿನಲ್ಲಿ ಓಡಾಡಬೇಕು. ಜತೆಗಿಬ್ಬರು ಬಾಡಿಗಾರ್ಡ್ ಬೇಕು. ಪ್ರತಿಯೊಬ್ಬನ ಮನಸ್ಸಿನ ಮೂಲೆಯಲ್ಲಿ ಇಂತಹದೊಂದು ಆಸೆ ಇದ್ದೇ ಇರುತ್ತದೆ. ಅದರಲ್ಲೂ ಬಣ್ಣದ ಬದುಕಿನಲ್ಲಿ ಬದುಕುತ್ತಿರುವ ತಾರೆಯರು ಜೀವನ ನೋಡಿದಾಗ ಆಸೆಯಾಗುತ್ತದೆ. ಅವರಂತೆಯೇ ನಾನು ಕೂಡ ಬೇಗನೆ ಈ ಹಂತವನ್ನು ತಲುಪಬೇಕು ಅಂದುಕೊಳ್ಳುತ್ತೇವೆ. ಅLonದರಂತೆ ಇಲ್ಲೊಬ್ಬಳು ಪೊಲೀಸ್ ಅಧಿಕಾರಿ ಕೂಡ ತನ್ನ ವೃತ್ತಿಗೆ ಗುಡ್ ಬಾಯ್ ಹೇಲಿ ಬಣ್ಣದ ಬದುಕಿನ ಜೀವನದತ್ತ ಧುಮುಕಿ ಕೋಟ್ಯಾಧೀಶೆಯಾಗಿ ಹೊರಹಿಮ್ಮಿದ್ದಾಳೆ..ಯಾರೀಕೆ ಗೊತ್ತಾ?.
ಹೆಸರು ಚಾರ್ಲೆಟ್ ರೋಸ್. ಲಂಡನ್ನ ಮಾಜಿ ಪೊಲೀಸ್ ಅಧಿಕಾರಿ. ಈಕೆ ಒಂದು ಫೋಟೋಗೆ ಲಕ್ಷಾಂತರ ರೂ ಪಡೆದುಕೊಳ್ಳುತ್ತಿದ್ದಾಳೆ. ಸಾಮಾಜಿಕ ಜಾಲತಾಣದಲ್ಲಂತೂ ರೋಸ್ ಫೋಟೋಗಳು ಆಗಾಗ ಹರಿದಾಡುತ್ತಿರುತ್ತದೆ. ಆಕೆಯ ಮಾದಕ ನೋಟಕ್ಕೆ ಅನೇಕರು ಮನಸೋತಿದ್ದರೆ ಕೂಡ.
ಸರ್ಕಾರಿ ಕೆಲಸ ಬೇಕು ಎಂದು ರಾತ್ರಿಯಿಡಿ ಓದಿ ಪರೀಕ್ಷೆ ಬರೆದು ಪಾಸ್ ಮಾಡಲು ಪಣತೊಡುವ ಕಾಲವಿದು. ಅದರಲ್ಲಿ ಚಾರ್ಲೆಟ್ ರೋಸ್ ಮಾತ್ರ ಸಿಕ್ಕ ಸರ್ಕಾರಿ ಕೆಲಸದಿಂದ ಹೊರಬಂದು ಬಣ್ಣದ ಲೋಕಕ್ಕೆ ಕಾಲಿಟ್ಟರು. ಆದರೀಗ ಆಕೆ ಅಂದುಕೊಂಡಂತೆ ಐಷಾರಾಮಿಯಾಗಿ ಬದುಕುತ್ತಿದ್ದಾಳೆ. ಕೋಟಿ ಬೆಲೆಯ ಕಾರಿನಲ್ಲಿ ಓಡಾಡುತ್ತಿದ್ದಾಳೆ.
ಚಾರ್ಲೆಟ್ ರೋಸ್ ಈ ಬಗ್ಗೆ ಮಾತನಾಡಿದ್ದು, ನಾನು ಕಷ್ಟಪಟ್ಟು ಪೊಲೀಸ್ ಕೆಲಸ ಗಿಟ್ಟಿಸಿಕೊಂಡೆ. ಆದರೆ ನನ್ನಂತವರಿಗೆ ಅದು ಸೂಕ್ತವಲ್ಲ ಎಂದು ಅನಿಸತೊಡಗಿತು. ಪುರುಷರು ಹೆಚ್ಚಾಗಿರುವ ಆ ವೃತ್ತಿಯಲ್ಲಿ ನನಗೆ ಸರಿ ಹೊಂದಲಿಲ್ಲ. ಹಾಗಾಗಿ ಪೊಲೀಸ್ ವೃತ್ತಿಯಿಂದ ಹೊರಬರಲು ಆಲೋಚಿಸಿದೆ. 2014ರಲ್ಲಿ ಕೆಲಸಕ್ಕೆ ಗುಡ್ ಬಾಯ್ ಹೇಳಿದೆ ಎಂದರು.
2016ರ ಬಳಿಕ ಚಾರ್ಲೆಟ್ ರೋಸ್ ಮಾಡೆಲಿಂಗ್ ಕ್ಷೇತ್ರಕ್ಕೆ ಕಾಲಿಡುತ್ತಾಳೆ. ಕಾರು, ಒಳ ಉಡುಪಿನ ಪ್ರಚಾರದಲ್ಲಿ ಗುರುತಿಸಿಕೊಳ್ಳುತ್ತಾಳೆ. ನಂತರ ಇಂಗ್ಲೇಂಡ್ನ ಓನ್ಲಿ ಫ್ಯಾನ್ಸ್ ಆ್ಯಪ್ನಲ್ಲಿ ಪೇಜ್ ತೆರೆಯುತ್ತಾಳೆ. ಇದರಿಂದಾಗಿ ಸಾಕಷ್ಟು ಅಭಿಮಾನಿಗಳನ್ನು ಚಾರ್ಲೆಟ್ ರೋಸ್ ಪಡೆಯುತ್ತಾಳೆ. ಆಕೆಯ ಮೈಮಾಟದ ಫೋಟೋ, ವಿಡಿಯೋ ನೋಡಿ ಫ್ಯಾನ್ಸ್ ಪ್ರತಿಕ್ರಿಯೆ ಹೆಚ್ಚಾಗುತ್ತದೆ. ಹಣ ನೀಡಿ ಆಕೆಯ ಫೋಟೋ ನೋಡಲು ಮುಗಿಬೀಳುತ್ತಾರೆ. ಸದ್ಯ ಆಕೆ ತಿಂಗಳಿಗೆ 1.50 ಕೋಟಿ ಆದಾಯ ಗಳಿಸುತ್ತಿದ್ದಾಳಂತೆ.
Published by:Harshith AS
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ