ಕೇವಲ 5 ವರ್ಷಗಳಲ್ಲಿ 300ಕ್ಕೂ ಹೆಚ್ಚು ಮಂದಿಯನ್ನು ಹತ್ಯೆ ಮಾಡಿದ ನರ್ಸ್​!

ಆದರೆ ಇದ್ಯಾವುದೇ ಹೊರ ಜಗತ್ತಿಗೆ ತಿಳಿಯದಂತೆ ಕಾಪಾಡಿಕೊಂಡು ಬಂದಿದ್ದ ಈ ನರ್ಸ್​, ವೈದ್ಯರ ಮುಂದೆ ಅನಾರೋಗ್ಯದಿಂದ ರೋಗಿಗಳು ಮೃತಪಟ್ಟಿರುವುದಾಗಿ ತಿಳಿಸುತ್ತಿದ್ದರು.

zahir | news18
Updated:May 12, 2019, 3:01 PM IST
ಕೇವಲ 5 ವರ್ಷಗಳಲ್ಲಿ 300ಕ್ಕೂ ಹೆಚ್ಚು ಮಂದಿಯನ್ನು ಹತ್ಯೆ ಮಾಡಿದ ನರ್ಸ್​!
ನೀಲ್ಸ್
zahir | news18
Updated: May 12, 2019, 3:01 PM IST
ಕೇವಲ ಐದು ವರ್ಷಗಳಲ್ಲಿ 300ಕ್ಕೂ ಹೆಚ್ಚು ಜನರನ್ನು ಕೊಂದು ಹಾಕಿದ ನರ್ಸ್​ರೊಬ್ಬರ ಭಯಾನಕ ಕೃತ್ಯ ಬೆಳಕಿಗೆ ಬಂದಿದೆ. ಜರ್ಮನಿಯ ಡೆಲ್‍ಮೆನ್ ಹೊಸ್ರ್ಟ್ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ನೀಲ್ಸ್ ಹೋಗೆಲ್(42) ಇಂತಹ ನೀಚ ಕೃತ್ಯ ಎಸೆಗಿದ ಮಹಾ ಪಾಪಿ.

ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗುತ್ತಿದ್ದ ರೋಗಿಗಳನ್ನೇ ಟಾರ್ಗೆಟ್​ ಮಾಡುತ್ತಿದ್ದ ನೀಲ್ಸ್​, ರೋಗಿಗಳನ್ನು ಉಸಿರುಗಟ್ಟಿಸಿ ಹಾಗೂ ಓವರ್​ ಡೋಸ್ ಚುಚ್ಚುಮದ್ದು ನೀಡಿ ಕೊಲ್ಲುತ್ತಿದ್ದನು ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.

ಆದರೆ ಇದ್ಯಾವುದೇ ಹೊರ ಜಗತ್ತಿಗೆ ತಿಳಿಯದಂತೆ ಕಾಪಾಡಿಕೊಂಡು ಬಂದಿದ್ದ ಈ ನರ್ಸ್​, ವೈದ್ಯರ ಮುಂದೆ ಅನಾರೋಗ್ಯದಿಂದ ರೋಗಿಗಳು ಮೃತಪಟ್ಟಿರುವುದಾಗಿ ತಿಳಿಸುತ್ತಿದ್ದರು. ಹಾಗೆಯೇ ವೈದ್ಯರು ಸಹ ರೋಗ ಉಲ್ಬಣದಿಂದ ರೋಗಿಗಳು ಸಾವನ್ನಪ್ಪಿದ್ದಾರೆ ಎಂದು ಮೃತದೇಹಗಳನ್ನು ಕುಟುಂಬ ವರ್ಗದವರಿಗೆ ಹಸ್ತಾಂತರಿಸುತ್ತಿದ್ದರು. 2000 ರಿಂದ ಕೇವಲ ಐದು ವರ್ಷಗಳಲ್ಲಿ 300ಕ್ಕೂ ಹೆಚ್ಚು ಮಂದಿಯನ್ನು ನಿರ್ದಾಕ್ಷಿಣ್ಯವಾಗಿ ನೀಲ್ಸ್​ ಹತ್ಯೆ ಮಾಡಿದ್ದಾನೆ ಎಂದು ತನಿಖಾ ಅಧಿಕಾರಿಗಳು ತಿಳಿಸಿದ್ದಾರೆ.

ಆಸ್ಪತ್ರೆಯಲ್ಲಿ ದಾಖಲಾಗುತ್ತಿದ್ದ ರೋಗಿಗಳ ಬಗ್ಗೆ ನೀಲ್ಸ್ ತಾತ್ಸಾರ​ ಮನೋಭಾವ ಹೊಂದಿದ್ದನು. ಹೀಗಾಗಿ ತನ್ನ ಮನಃಶಾಂತಿಗಾಗಿ ಅವರನ್ನೇ ತನ್ನ ಬಲಿ ತೆಗೆಯುತ್ತಿದ್ದ ಎನ್ನಲಾಗಿದೆ. ಐಸಿಯುನಲ್ಲಿ ದಾಖಲಾಗುತ್ತಿದ್ದ ರೋಗಿಗಳನ್ನು ಕೊಲ್ಲುವ ಪ್ರವೃತ್ತಿ ಹೊಂದಿದ್ದರಿಂದ ಯಾರಿಗೂ ಕೂಡ ಈತನೇ ಮೇಲೆ ಸಂದೇಹಗಳು ಮೂಡುತ್ತಿರಲಿಲ್ಲ.

ಆದರೆ ರೋಗಿಯೊಬ್ಬರ ಸಂಶಯಾಸ್ಪದ ಸಾವನ್ನು ತನಿಖಾ ನಡೆಸಿದ ಅಧಿಕಾರಿಗಳ ಮುಂದೆ ನೀಲ್ಸ್​ನ ಕ್ರೂರ ಮುಖವೊಂದು ಬೆಳಕಿಗೆ ಬಂತು. ಈ ವೇಳೆ ವಿಚಾರಣೆ ನಡೆಸಿದಾಗ ಮೊದಲಿಗೆ ತಪ್ಪೊಪ್ಪಿಕೊಂಡಿದ್ದಾನೆ. ಆದರೆ ಕೇವಲ 43 ಕೊಲೆಗಳನ್ನು ಮಾತ್ರ ಮಾಡಿರುವುದಾಗಿ ತಿಳಿಸಿದ ನೀಲ್ಸ್, ಉಳಿದ ಹತ್ಯೆಗಳಿಗೂ ತನಗೂ ಸಂಬಂಧವಿಲ್ಲ ಎಂದು ವಾದಿಸಿದ್ದನು.

ನೀಲ್ಸ್ ಹೋಗೆಲ್


2006 ರಿಂದಲೇ ಪೊಲೀಸರ ವಶದಲ್ಲಿರುವ ನೀಲ್ಸ್​ ವಿರುದ್ಧ ಮೂರು ತೀರ್ಪುಗಳು ಹೊರಬಿದ್ದಿದ್ದು, ಆತನಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ವಿಚಾರಣೆ ಸಂದರ್ಭದಲ್ಲಿ ತನ್ನ ಕೃತ್ಯದ ಕುರಿತಾಗಿ ನಾನಾ ಹೇಳಿಕೆಗಳನ್ನು ನೀಡಿ ತನಿಖಾ ಅಧಿಕಾರಿಗಳನ್ನು ಗೊಂದಲಕ್ಕೆ ಸಿಲುಕಿಸಿ ತನಿಖೆಯ ಜಾಡನ್ನು ದಾರಿ ತಪ್ಪಿಸುತ್ತಿದ್ದಾನೆ. ಇದರಿಂದಾಗಿ ತನಿಖೆಯು ವಿಳಂಬವಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈಗಾಗಲೇ 100 ಕೊಲೆ ಪ್ರಕರಣವನ್ನು ಬೇಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಇದೆಲ್ಲದರ ಹಿಂದೆ ನೀಲ್ಸ್​ರ ಕೈವಾಡ ಇರುವುದು ಪತ್ತೆಯಾಗಿದೆ. ಇನ್ನು ಉಳಿದ ಕಗ್ಗೊಲೆಗಳ ತನಿಖೆಯು ಪ್ರಗತಿಯಲ್ಲಿದ್ದು ಈತನಿಗೆ ಮರಣ ದಂಡನೆ ಜಾರಿಯಾಗುವ ಸಾಧ್ಯೆತೆಯಿದೆ ಎನ್ನಲಾಗಿದೆ.

ಇದನ್ನೂ ಓದಿ: ಚಾಲೆಂಜಿಂಗ್ ಸ್ಟಾರ್ ದರ್ಶನ್ ಮಾನವೀಯತೆಗೆ ಇದುವೇ ಸಾಕ್ಷಿ!

First published:May 12, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...