Viral News: ವಿಚಿತ್ರ ಆದ್ರೂ ಸತ್ಯ..! ಮೂತ್ರ ಮಾರಿ ಹಣ ಗಳಿಸ್ತಾಳಂತೆ ಈ ಮಾಜಿ ಮಾಡೆಲ್​

ಕ್ಯಾಕ್ಟಸ್ ಕುಟೀ ತನ್ನ ಅಭಿಮಾನಿಗಳಿಗೆ ತನ್ನ ಮೂತ್ರವನ್ನು ಮಾರಾಟ ಮಾಡುವುದರ ಜೊತೆಗೆ, ಮೂತ್ರ ವಿಸರ್ಜಿಸುವುದನ್ನು ಅವಳು ಸುಮಾರು 10 ನಿಮಿಷಗಳ ಕಾಲ ಚಿತ್ರೀಕರಿಸಿ ಬಿಡುತ್ತಾಳಂತೆ.

ಕ್ಯಾಕ್ಟಸ್ ಕುಟೀ

ಕ್ಯಾಕ್ಟಸ್ ಕುಟೀ

  • Share this:
ಜನ ಹಣ(Money) ಗಳಿಸಲು ಏನೆಲ್ಲಾ ಮಾಡ್ತಾರೆ ಅಂತ ಹೇಳಲು ಸಾಧ್ಯವಿಲ್ಲ. ಒಬ್ಬೊಬ್ಬರದ್ದು ಒಂದೊಂದು ರೀತಿ ಬ್ಯುಸಿನೆಸ್(Business). ಅನೇಕರು ಹಣ ಸಂಪಾದಿಸಲು ನಾನಾ ಸರ್ಕಸ್ ಮಾಡುತ್ತಾರೆ. ಹೆಚ್ಚು ಸಂಭಾವನೆ ಪಡೆಯಬೇಕೆಂಬ ಉದ್ದೇಶದಿಂದ ಸಿಕ್ಕ ಸಿಕ್ಕ ಕೆಲಸವನ್ನೆಲ್ಲಾ ಮಾಡುತ್ತಾರೆ. ಕೆಲವರು ವ್ಯಾಪಾರ- ವ್ಯವಹಾರ ಮಾಡಿದ್ರೆ, ಇನ್ನೂ ಕೆಲವರು ಸಾಮಾಜಿಕ ಜಾಲತಾಣದಲ್ಲಿ(Social Media) ವಿಡಿಯೋ, ಬ್ಲಾಗ್ ಅಂತೆಲ್ಲಾ ಮಾಡಿಕೊಂಡು ಹಣ ಗಳಿಸುತ್ತಾರೆ. ಆದ್ರೆ ಇಲ್ಲೊಬ್ಬಳು ಹೇಗ್ ಹಣ ಸಂಪಾದಿಸುತ್ತಿದ್ದಾಳೆ ಕೇಳಿದ್ರೆ ನಿಮಗೆ ಶಾಕ್ ಆಗುತ್ತೆ..!

ಇದು ನಿಮಗೆ ಸ್ವಲ್ಪ ವಿಚಿತ್ರವೆನಿಸಿದರೂ ನಿಜ. ಹಣ ಸಂಪಾದಿಸುವ ಹುಮ್ಮಸ್ಸಿನಲ್ಲಿ ಜನರು ಯಾವೆಲ್ಲ ರೀತಿಯ ಹುಚ್ಚುತನದ ಕೆಲಸಗಳನ್ನು ಮಾಡುತ್ತಾರೆ ಅನ್ನೋದಕ್ಕೆ ಈಕೆಯೇ ನಿದರ್ಶನ. ಈಕೆ ತನ್ನ ಮೂತ್ರ ಮಾರಾಟ ಮಾಡಿ ಲಕ್ಷ ಲಕ್ಷ ದುಡಿಯುತ್ತಿದ್ದಾಳೆ. ಮೂತ್ರ ಮಾರುವುದೇ ಆಕೆಯ ದೊಡ್ಡ ವ್ಯವಹಾರವಂತೆ..!

ಮೂತ್ರ ಮಾರಿ ಹಣ ಸಂಪಾದನೆ

ಮಾಜಿ ಮಾಡೆಲ್ ಮತ್ತು ಫೋಟೋಗ್ರಾಫರ್ ಆಗಿರುವ ಕ್ಯಾಕ್ಟಸ್ ಕುಟೀ ಆನ್‌ಲೈನ್‌ನಲ್ಲಿ ತನ್ನ ಮೂತ್ರವನ್ನು ಮಾರಾಟ ಮಾಡುವ ಮೂಲಕ ಹಣ ಸಂಪಾದಿಸುತ್ತಾಳೆ. ಒಂದು ವೈದ್ಯಕೀಯ ಕಪ್ ಮೂತ್ರ ಅಥವಾ 3 ಔನ್ಸ್ ಮೂತ್ರವನ್ನು ನೂರಾರು ರೂಪಾಯಿಗಳಿಗೆ ಮಾರಾಟ ಮಾಡುತ್ತಿದ್ದಾಳಂತೆ. ಮೂತ್ರ ತುಂಬಿದ 3 ಔನ್ಸ್ ವೈದ್ಯಕೀಯ ಕಪ್‌ಗಳಿಂದ ಸುಮಾರು 5,200 ರೂ. ಹಣ ಸಂಪಾದಿಸುತ್ತಿದ್ದಾಳಂತೆ. ಕೆಲವು ವ್ಯಕ್ತಿಗಳು ಇದನ್ನು ಅಸಹ್ಯಕರವಾಗಿ ಕಂಡರೂ, ಇತರರು ಅದನ್ನು ಇಷ್ಟಪಡುತ್ತಾರಂತೆ.

ಇದನ್ನೂ ಓದಿ: Clock: ಸೂರ್ಯನ ಬೆಳಕಿನಲ್ಲಿ ಚಲಿಸುತ್ತೆ ಗಡಿಯಾರ: 150 ವರ್ಷಗಳ ಹಳೆಯ ಗಡಿಯಾರದ ಚಿತ್ರಗಳನ್ನು ನೋಡಿ

ಡೈಲಿಸ್ಟಾರ್ ವರದಿಯ ಪ್ರಕಾರ, ಕ್ಯಾಕ್ಟಸ್ ಕುಟೀ Only Fans ವೆಬ್‌ಸೈಟ್‌ನಲ್ಲಿ ಮಾಡೆಲ್‌ ಆಗಿ ಕಾರ್ಯನಿರ್ವಹಿಸುತ್ತಾಳಂತೆ. 2016ರಲ್ಲಿ ವಯಸ್ಕರ ಕ್ಯಾಮ್ ವಿಡಿಯೊಗಳನ್ನು ಮಾಡಿ ಕುಟೀ ತನ್ನ ಸ್ವಂತ ವ್ಯವಹಾರವನ್ನು ಪ್ರಾರಂಭಿಸಿದಳು.

ಮೂತ್ರ ವಿಸರ್ಜನೆಯ ವಿಡಿಯೋ ಕೂಡ ಬಿಡ್ತಾಳಂತೆ

ಕ್ಯಾಕ್ಟಸ್ ಕುಟೀ ತನ್ನ ಅಭಿಮಾನಿಗಳಿಗೆ ತನ್ನ ಮೂತ್ರವನ್ನು ಮಾರಾಟ ಮಾಡುವುದರ ಜೊತೆಗೆ, ಮೂತ್ರ ವಿಸರ್ಜಿಸುವುದನ್ನು ಅವಳು ಸುಮಾರು 10 ನಿಮಿಷಗಳ ಕಾಲ ಚಿತ್ರೀಕರಿಸಿ ಬಿಡುತ್ತಾಳಂತೆ.

ಅಭಿಮಾನಿಗಳು ಫಿದಾ

ಕುಟೀ ಪ್ರಕಾರ, ಅವಳ ವಿಡಿಯೋಗಳನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದು, ಅವುಗಳನ್ನು ಮಾಡಲು ಕುಟೀ ಹೆಚ್ಚಿನ ಪ್ರಯತ್ನವನ್ನು ಮಾಡುತ್ತಾಳಂತೆ. ಅವಳು ತನ್ನ ಆರೋಗ್ಯದ ದೃಷ್ಠಿಯಿಂದ 10 ನಿಮಿಷಗಳ ಕಾಲ ಮೂತ್ರ ವಿಸರ್ಜನೆ ಮಾಡುವ ವಿಡಿಯೋವನ್ನು ತಿಂಗಳಿಗೊಮ್ಮೆ ಅಥವಾ ಎರಡು ಬಾರಿ ಮಾತ್ರ ಮಾಡುತ್ತಾಳಂತೆ. ಮೂತ್ರವನ್ನು ಹಿಡಿದಿಟ್ಟುಕೊಳ್ಳುವ ಆಕೆಯ ಸಾಮರ್ಥ್ಯವನ್ನು ಅಭಿಮಾನಿಗಳು ಎಷ್ಟು ಮೆಚ್ಚಿಕೊಂಡಿದ್ದಾರೆ ಎಂದರೆ ಅವರು ಅದನ್ನು ಹಣ ಕೊಟ್ಟು ತೆಗೆದುಕೊಳ್ಳತ್ತಾರಂತೆ. ಅಷ್ಟರ ಮಟ್ಟಿಗೆ ಕ್ಯಾಕ್ಟಸ್ ಕುಟೀ ಜನಪ್ರಿಯವಾಗಿದ್ದಾಳೆ.

ಹೆಚ್ಚಿನ ಪ್ರಮಾಣದ ಮೂತ್ರವನ್ನು ಖರೀದಿಸುವ ಗ್ರಾಹಕರಿಗೆ ಅವಳು ರಿಯಾಯಿತಿಯನ್ನೂ ಸಹ ನೀಡುತ್ತಾಳಂತೆ. ಅವಳು ಮೂತ್ರ ಮಾಡುವ ವಿಡಿಯೋಗಳನ್ನು ಕಸ್ಟಮೈಸ್ ಮಾಡಿ ಮಾರಾಟ ಮಾಡುತ್ತಾಳೆ. ಮೂತ್ರ ವಿಸರ್ಜಿಸುವ ವೀಡಿಯೊಗಳು. ಗ್ರಾಹಕರು, ಅದನ್ನು ಫ್ರೀಜ್ ಮಾಡಿ ಮತ್ತು ಐಸ್ ಆಗಿ ಸಂಗ್ರಹಿಸುತ್ತಾರೆ ಎಂದು ಮಾಡೆಲ್‌ ಹೇಳಿಕೊಳ್ಳುತ್ತಾಳೆ.

ಹೂಸು ಮಾರಿ ಹಣ ಸಂಪಾದಿಸುವ ಮತ್ತೊಬ್ಬ ಮಹಿಳೆ

ಮೊನ್ನೆ ಮೊನ್ನೆ ತಾನೇ ಇಂಥದ್ದೇ ವಿಚಿತ್ರ ಪ್ರಕರಣ ವರದಿಯಾಗಿತ್ತು. ಲುಶ್ ಬೊಟಾನಿಸ್ಟ್ ಎಂಬ ಮಹಿಳೆ ಹೂಸು ಮಾರಾಟ ಮಾಡಿ ಹಣ ಸಂಪಾದಿಸುತ್ತಿವುದಾಗಿ ವರದಿಯಾಗಿತ್ತು. ಕಿರುತೆರೆ ಮತ್ತು ಸಿನಿಮಾದಲ್ಲಿ ಕೆಲಸ ಮಾಡುವವರು ಲುಶ್ ಬಳಿ ಬೇಡಿಕೆ ಇಟ್ಟಿದ್ದು, ಹೂಸಿನಿಂದ ಬರುವ ವಿವಿಧ ಸೌಂಡ್‌ಗಳನ್ನು ರೆಕಾರ್ಡ್ ಮಾಡಿ ಕಳುಹಿಸಿ ಕೊಡಲು ಕೇಳುತ್ತಿದ್ದರಂತೆ. ಅಷ್ಟೇ ಏಕೆ ಸಾಮಾಜಿಕ ಜಾಲತಾಣದಲ್ಲೂ ಆಕೆಗೆ ಬೇಡಿಕೆ ಹೆಚ್ಚಿದ್ದು, ಅನೇಕರು ಆಕೆಯ ಹೂಸಿನ ಸೌಂಡ್ಗೆ ಮಾರು ಹೋಗಿ ಸೌಂಡ್ ರೆಕಾರ್ಡ್ ಕಳುಹಿಸಲು ಹೇಳುತ್ತಾರಂತೆ. ಟ್ಟಾರೆ ಲುಶ್ ಹೂಸು ಬಿಡುವ ಮೂಲಕ ಬರೋಬ್ಬರಿ 18 ಲಕ್ಷ ರೂ ಸಂಪಾದಿಸಿಸುತ್ತಿದ್ದಳಂತೆ.

ಇದನ್ನೂ ಓದಿ: Heart attack: ಕಡಲೆಕಾಯಿಯ ಸಿಹಿ ತಿಂದಿದ್ದಕ್ಕೆ ಹೃದಯಘಾತವಾಗಿ ಸಾವನ್ನಪ್ಪಿದ 3 ಮಕ್ಕಳ ತಾಯಿ!

ಜಗತ್ತಿನಲ್ಲಿ ಅನೇಕರು ಹಣ ಸಂಪಾದಿಸಲು ನಾನಾ ಸರ್ಕಸ್ ಮಾಡುತ್ತಾರೆ ಅನ್ನೋದಕ್ಕೆ ಇಂತವರೇ ಸಾಕ್ಷಿ.
Published by:Latha CG
First published: