• Home
 • »
 • News
 • »
 • trend
 • »
 • Twitter: ಮಗನ ಸ್ವಾರಸ್ಯಕರ ಉತ್ತರವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡ ಮಾಜಿ ಗೂಗಲ್ ಎಂಡಿ

Twitter: ಮಗನ ಸ್ವಾರಸ್ಯಕರ ಉತ್ತರವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡ ಮಾಜಿ ಗೂಗಲ್ ಎಂಡಿ

ಪರ್ಮಿಂದರ್ ಸಿಂಗ್ ಮಾಜಿ ಗೂಗಲ್ ಎಂಡಿ

ಪರ್ಮಿಂದರ್ ಸಿಂಗ್ ಮಾಜಿ ಗೂಗಲ್ ಎಂಡಿ

ವಿದೇಶದಲ್ಲಿ ನೆಲೆಸಿರುವ ಭಾರತೀಯ ಮೂಲದ ಗೂಗಲ್‌ ಮಾಜಿ ಎಂಡಿ ಪರ್ಮಿಂದರ್ ಸಿಂಗ್ ಮೊನ್ನೆ ತಾನೇ ನನಗೆ ಭಾರತೀಯ ತಿಂಡಿ ರಸ್ಕ್‌ ಎಂದರೆ ತುಂಬಾನೇ ಇಷ್ಟ, ವಿದೇಶಕ್ಕೆ ಹೋಗುವಾಗ ಪ್ರತಿಬಾರಿ ಕೊಂಡೊಯ್ಯುತ್ತೇನೆ ಎಂದಿದ್ದರು. ಅದಾದ ನಂತರ ಇನ್ನೊಂದು ಸ್ವಾರಸ್ಯಕರ ವಿಚಾರವನ್ನು ರಿವೀಲ್‌ ಮಾಡಿದ್ದಾರೆ.

ಮುಂದೆ ಓದಿ ...
 • Share this:

  ವಿದೇಶದಲ್ಲಿ (Foreign)  ನೆಲೆಸಿರುವ ಭಾರತೀಯ (India) ಮೂಲದ ಗೂಗಲ್‌ ಮಾಜಿ ಎಂಡಿ ಪರ್ಮಿಂದರ್ ಸಿಂಗ್ ಮೊನ್ನೆ ತಾನೇ ನನಗೆ ಭಾರತೀಯ ತಿಂಡಿ ರಸ್ಕ್‌ (Indian Food Rusk) ಎಂದರೆ ತುಂಬಾನೇ ಇಷ್ಟ, ವಿದೇಶಕ್ಕೆ ಹೋಗುವಾಗ ಪ್ರತಿಬಾರಿ ಕೊಂಡೊಯ್ಯುತ್ತೇನೆ ಎಂದಿದ್ದರು. ಅದಾದ ನಂತರ ಇನ್ನೊಂದು ಸ್ವಾರಸ್ಯಕರ ವಿಚಾರವನ್ನು ರಿವೀಲ್‌ (Reveal)  ಮಾಡಿದ್ದಾರೆ. ಅಷ್ಟಕ್ಕೂ ಏನು ಅಂತ ಯೋಚನೆ ಮಾಡುತ್ತಾ ಇದ್ದಿರ ಬನ್ನಿ ತಿಳಿದುಕೊಳ್ಳೋಣ.


  ಮಜಾವಾಗಿತ್ತು ಪರ್ಮಿಂದರ್ ಸಿಂಗ್ ಮಗ ಕೊಟ್ಟ ಉತ್ತರ


  ಮಾಜಿ ಗೂಗಲ್ ಎಂಡಿ ಪರ್ಮಿಂದರ್ ಸಿಂಗ್ ಅವರು ತಮ್ಮ ಮಗನ ಒಂದು ಉತ್ತರದ ಸನ್ನಿವೇಶವನ್ನು ತಮ್ಮ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಪರ್ಮಿಂದರ್‌ ಮೂಲತಃ ಭಾರತದವರು. ಪ್ರಸ್ತುತ ವಿದೇಶದಲ್ಲಿ ವಾಸವಾಗಿದ್ದಾರೆ.


  ಮಗನಿಗೆ ನೀನು ನಾರ್ತ್‌ ಇಂಡಿಯನ್‌ (ಉತ್ತರ ಭಾರತೀಯ) ಅಥವಾ ಸೌತ್‌ ಇಂಡಿಯನ್ (ದಕ್ಷಿಣ ಭಾರತೀಯ) ಎಂಬ ಪ್ರಶ್ನೆಯನ್ನು ಕೇಳಲಾಗಿತ್ತಂತೆ. ಆ ಪ್ರಶ್ನೆಗೆ ಮಗನು ಕೊಟ್ಟ ಮಜಾವಾದ ಉತ್ತರವನ್ನು ಹಂಚಿಕೊಂಡಿದ್ದಾರೆ. ಈ ಮೂಲಕ ನೆಟಿಜನ್‌ಗಳ ಗಮನ ಸೆಳೆದಿದ್ದಾರೆ.


  Former Google MD shared his son s interesting reply on Twitter
  ಪರ್ಮಿಂದರ್ ಸಿಂಗ್ ಮಾಜಿ ಗೂಗಲ್ ಎಂಡಿ


  ನಾನು ನೌತ್‌ ಇಂಡಿಯನ್ ಎಂದಿದ್ದ ಬಾಲಕ


  ಯಾರೋ ಒಬ್ಬರು ಗೂಗಲ್‌ ಮಾಜಿ ಎಂಡಿ ಪರ್ಮಿಂದರ್ ಸಿಂಗ್ ಅವರ ಮಗನಿಗೆ ನೀನು ನಾರ್ತ್‌ ಇಂಡಿಯನ್‌ ಅಥವಾ ಸೌತ್‌ ಇಂಡಿಯನ್ನೇ ಎಂದು ಕೇಳಿದ್ದರಂತೆ. ಅದಕ್ಕೆ ಆ ಹುಡುಗ ನಾನು "ನೌತ್‌ ಇಂಡಿಯನ್" ಎಂದಿದ್ದನಂತೆ.


  ಟ್ವಿಟರ್‌ ಪೋಸ್ಟ್‌ನಲ್ಲಿ ಏನಿದೆ?


  ಟ್ವಿಟರ್‌ ಪೋಸ್ಟ್‌ನಲ್ಲಿ, "ಪಂಜಾಬಿ ಕುಟುಂಬದವರಾದ ನಾವು, ಬೆಂಗಳೂರಲ್ಲಿ ನೆಲೆಸಿದ್ದವು. ನನ್ನ ಮಗನಿಗೆ 9 ವರ್ಷ. ಯಾರೋ ಒಮ್ಮೆ ಆಗ ನೀನು ನಾರ್ತ್‌ ಇಂಡಿಯನ್‌ ಅಥವಾ ಸೌತ್‌ ಇಂಡಿಯನ್ನೇ ಎಂದು ಕೇಳಿದ್ದರು.


  ಅದಕ್ಕೆ ಅವನು ನೀಡಿದ ಉತ್ತರ ತುಂಬಾ ಹಾಸ್ಯಮಯವಾಗಿತ್ತು. ನನ್ನ ಮಗ ಅವರ ಪ್ರಶ್ನೆಗೆ ನಾನು ನೌತ್‌ ಇಂಡಿಯನ್‌ ಎಂದಿದ್ದ" ಎಂದು ಮಗನ ಉತ್ತರದ ಹಾಸ್ಯ ಪ್ರಸಂಗವನ್ನು ಹಂಚಿಕೊಂಡಿದ್ದಾರೆ. ಪರ್ಮಿಂದರ್ ಸಿಂಗ್ ಅವರ ಮಗನ ಉತ್ತರ ನಾರ್ತ್‌ ಇಂಡಿಯನ್‌ ಮತ್ತು ಸೌತ್‌ ಇಂಡಿಯನ್ ಮಿಶ್ರಣದ ಉತ್ತರವಾಗಿತ್ತು.


  ನೆಟಿಜನ್‌ಗಳ ಮನಗೆದ್ದ ಪೋಸ್ಟ್


  ಎರಡು ದಿನಗಳ ಹಿಂದಷ್ಟೇ ಈ ಪೋಸ್ಟ್ ಅನ್ನು ಶೇರ್ ಮಾಡಲಾಗಿದೆ. ಅಪ್ಲೋಡ್ ಮಾಡಿದ ನಂತರ, ಇದು 4000 ಲೈಕ್ಸ್ ಮತ್ತು ಹಲವಾರು ‌ಕಾಮೆಂಟ್‌ಗಳನ್ನು ಪಡೆದುಕೊಂಡಿದೆ.


  ತಮ್ಮ ಅನುಭವ ಹಂಚಿಕೊಂಡ ನೆಟ್ಟಿಗರು


  ಟ್ವಿಟ್ಟರ್ ಕಾಮೆಂಟ್‌ಗಳಲ್ಲಿ ಹಲವರು ಇದೇ ರೀತಿಯ ಅನುಭವವನ್ನು ಕಾಮೆಂಟ್‌ ಮೂಲಕ ಹಂಚಿಕೊಂಡಿದ್ದಾರೆ. ಕೆಲವೊಮ್ಮೆ ನಾವು ಹೀಗೆ ಉತ್ತರ ನೀಡುತ್ತೇವೆ ಎಂದು ಕೆಲವರು ಬರೆದುಕೊಂಡಿದ್ದಾರೆ.


  ಮಕ್ಕಳಿಗೆ ದೊಡ್ಡವರಾದವರು ಹೀಗೆ ಇಂತಹ ಅಸಂಬದ್ಧ ಪ್ರಶ್ನೆಗಳನ್ನು ಕೇಳುತ್ತಾರೆ. ಇದು ಮಕ್ಕಳಿಗೆ ತುಂಬಾ ಗೊಂದಲಮಯವಾಗಿದೆ ಎಂದಿದ್ದಾರೆ.


  ಸ್ವಾರಸ್ಯಕರ ವಿಚಾರಗಳನ್ನು ಹಂಚಿಕೊಂಡ‌ ಪರ್ಮಿಂದರ್ ಸಿಂಗ್


  ಮೊನ್ನೆ ಪರ್ಮಿಂದರ್ ಸಿಂಗ್ ಭಾರತದಿಂದ ಸಿಂಗಾಪುರಕ್ಕೆ ಹೋಗುವಾಗ ಯಾವಾಗಲೂ ಸೂಜಿ ರಸ್ಕ್ ಗಳನ್ನು ತೆಗೆದುಕೊಂಡು ಹೋಗುತ್ತೇನೆ, ನನಗೆ ಈ ತಿಂಡಿಗಳು ತುಂಬಾನೇ ಇಷ್ಟ ಎಂದು ಅವುಗಳ ಫೋಟೋವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದರು.


  ಕ್ಯಾಬ್‌ಗೆ ಹಣ ಕೊಡದ ಸಂಗತಿ ನೆನಪಿಸಿಕೊಂಡ ಮಾಜಿ ಎಂಡಿ


  ಸದಾ ಏನಾದರೂ ಸ್ವಾರಸ್ಯಕರ ವಿಚಾರವನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ ಪರ್ಮಿಂದರ್. ಹಿಂದೆ​ ದೆಹಲಿ ವಿಮಾನ ನಿಲ್ದಾಣಕ್ಕೆ ಕ್ಯಾಬ್​ನಲ್ಲಿ ಪ್ರಯಾಣಿಸಿದ್ದಾ ಒಂದು ವಿಚಾರವನ್ನು ಹಂಚಿಕೊಂಡಿದ್ದರು.


  ಇದನ್ನೂ ಓದಿ: Viral Video: ವಯಸ್ಸು ಎಂಬುದು ಬರೀ ಒಂದು ಸಂಖ್ಯೆ ಮಾತನ್ನು ಸಾಬೀತು ಮಾಡಿದ ವ್ಯಕ್ತಿ!


  ವಿಮಾನ ನಿಲ್ದಾಣಕ್ಕೆ ಕ್ಯಾಬ್​ನಲ್ಲಿ ಪ್ರಯಾಣಿಸಿದ್ದೆ ಆದರೆ ಕ್ಯಾಬ್​ ಡ್ರೈವರ್​ಗೆ ಹಣ ಪಾವತಿಸುವುದನ್ನೇ ಮರೆತಿದ್ದೆ. ಇದ್ದಕ್ಕಿದ್ದಂತೆ ನೆನಪಾಗಿ ಹೇಗೆ ಹಣ ಪಾವತಿಸುವುದು ಎಂದು ವಾಪಸ್​ ಡ್ರೈವರ್​ಗೆ ಫೋನ್ ಮಾಡಿ ಕೇಳಿದಾಗ, ‘ಪರ್ವಾಗಿಲ್ಲ ಸರ್. ಮತ್ತೆ ಯಾವಾಗಲಾದರೂ ಬರುತ್ತೀರಲ್ಲ’ ಎಂದಿದ್ದರು ಎಂದು ಮಾಜಿ ಎಂಡಿ ಹಂಚಿಕೊಂಡಿದ್ದರು.


  ಹೀಗೆ ಹಲವು ವಿಷಯಗಳನ್ನು ಪರ್ಮಿಂದರ್ ಸಿಂಗ್ ತಮ್ಮ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಳ್ಳುತ್ತಲೇ ಇರುತ್ತಿರುತ್ತಾರೆ, ಇವರ ಪೋಸ್ಟ್‌ ಕೂಡ ಬಳಕೆದಾರರ ಮನಗೆಲ್ಲುತ್ತಿರುತ್ತವೆ.

  Published by:Gowtham K
  First published: