• Home
  • »
  • News
  • »
  • trend
  • »
  • Trending: ಟ್ಯಾಕ್ಸಿ ಬಿಲ್ ಕೊಡಲು ಮರೆತು ಹಾಗೆ ಹೋಗಿದ್ರಂತೆ ಗೂಗಲ್ ನ ಮಾಜಿ ಮ್ಯಾನೇಜರ್! ಡ್ರೈವರ್ ಪ್ರತಿಕ್ರಿಯೆ ಹೇಗಿತ್ತು ನೋಡಿ

Trending: ಟ್ಯಾಕ್ಸಿ ಬಿಲ್ ಕೊಡಲು ಮರೆತು ಹಾಗೆ ಹೋಗಿದ್ರಂತೆ ಗೂಗಲ್ ನ ಮಾಜಿ ಮ್ಯಾನೇಜರ್! ಡ್ರೈವರ್ ಪ್ರತಿಕ್ರಿಯೆ ಹೇಗಿತ್ತು ನೋಡಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಎಷ್ಟೋ ಬಾರಿ ಟ್ಯಾಕ್ಸಿ ಚಾಲಕರು ತಮ್ಮ ಹಣವನ್ನು ಕೇಳಿಯೇ ಪಡೆಯುತ್ತಾರೆ. ಆದರೆ ಇಲ್ಲೊಬ್ಬ ಟ್ಯಾಕ್ಸಿ ಚಾಲಕ ಪ್ರಯಾಣಿಕರೊಬ್ಬರು ಹಾಗೆಯೇ ಹಣ ಕೊಡಲು ಮರೆತು ಟ್ಯಾಕ್ಸಿ ಇಳಿದು ಹೋದರೂ ಸಹ ಒಂದು ಮಾತಾಡದೆ ಸುಮ್ಮನೆ ಹೋಗಿದ್ದಾರೆ ನೋಡಿ. ಯಾರು ಆ ವ್ಯಕ್ತಿ? ಮತ್ತೆ ಏನಾಯ್ತು ಎಂಬುದನ್ನು ನೋಡಿ

ಮುಂದೆ ಓದಿ ...
  • Share this:

    ಸಾಮಾನ್ಯವಾಗಿ ನಾವು ಯಾವುದಾದರೂ ಒಂದು ಕ್ಯಾಬ್ ಹತ್ತಿ ವಿಮಾನ ನಿಲ್ದಾಣಕ್ಕೂ ಅಥವಾ ರೈಲ್ವೆ ನಿಲ್ದಾಣಕ್ಕೂ ಹೋದಾಗ, ಅಲ್ಲಿ ಇಳಿಯುವ ಸಂದರ್ಭದಲ್ಲಿ ನಮ್ಮ ಲಗೇಜ್ ಗಳನ್ನು ತೆಗೆದುಕೊಳ್ಳುವ ಅವಸರದಲ್ಲಿ ಎಷ್ಟೋ ಬಾರಿ ನಾವು ಕುಳಿತುಕೊಂಡು ಬಂದಂತಹ ಟ್ಯಾಕ್ಸಿ ಡ್ರೈವರ್ ಗೆ ಟ್ಯಾಕ್ಸಿ ಬಿಲ್ ಕೊಡುವುದನ್ನೇ ಮರೆತು ಬಿಟ್ಟಿರುತ್ತೇವೆ. ಅಂತಹ ಸಂದರ್ಭಗಳಲ್ಲಿ ಆ ಟ್ಯಾಕ್ಸಿ ಡ್ರೈವರ್ ನಮ್ಮನ್ನು ‘ಸರ್, ಟ್ಯಾಕ್ಸಿ ಬಿಲ್ ಕೊಡೋದನ್ನ ಮರ್ತಿದ್ದೀರಾ’ ಅಂತ ನೆನಪಿಸಿದ್ದು ಇರುತ್ತದೆ ಅಂತ ಹೇಳಬಹುದು. ಇದು ಪ್ರಯಾಣಿಕರು ಬೇಕಂತಲೇ ಮಾಡುವುದಲ್ಲ ಆದರೆ ಡ್ರೈವರ್​ ಕೇಳುವುದು ಮಾತ್ರ ಅವರ ಧರ್ಮವಾಗಿರುತ್ತದೆ.


    ಎಷ್ಟೋ ಬಾರಿ ಟ್ಯಾಕ್ಸಿ ಚಾಲಕರು ತಮ್ಮ ಹಣವನ್ನು ಕೇಳಿಯೇ ಪಡೆಯುತ್ತಾರೆ. ಆದರೆ ಇಲ್ಲೊಬ್ಬ ಟ್ಯಾಕ್ಸಿ ಚಾಲಕ ಪ್ರಯಾಣಿಕರೊಬ್ಬರು ಹಾಗೆಯೇ ಹಣ ಕೊಡಲು ಮರೆತು ಟ್ಯಾಕ್ಸಿ ಇಳಿದು ಹೋದರೂ ಸಹ ಒಂದು ಮಾತಾಡದೆ ಸುಮ್ಮನೆ ಹೋಗಿದ್ದಾರೆ ನೋಡಿ.


    ಈ ಚಾಲಕನ ಪ್ರತಿಕ್ರಿಯೆಯನ್ನು ನೋಡಿ ನೆಟ್ಟಿಗರ ಮನಸ್ಸು ಮತ್ತು ಹೃದಯ ಎರಡೂ ಕರಗಿದೆ ಅಂತ ಹೇಳಿದರೆ ತಪ್ಪಾಗುವುದಿಲ್ಲ.


    ಟ್ಯಾಕ್ಸಿ ಬಿಲ್ ಕೊಡದೆ ಮರೆತು ಹೋದರೂ ಟ್ಯಾಕ್ಸಿ ಚಾಲಕ ಏನೂ ಅನ್ಲಿಲ್ವಂತೆ!


    ಗೂಗಲ್ ಮತ್ತು ಟ್ವಿಟರ್ ನ ಮಾಜಿ ವ್ಯವಸ್ಥಾಪಕ ನಿರ್ದೇಶಕ ಪರ್ಮಿಂದರ್ ಸಿಂಗ್ ಈ ಹೃದಯಸ್ಪರ್ಶಿ ಘಟನೆಯನ್ನು ಮೈಕ್ರೋಬ್ಲಾಗಿಂಗ್ ಸೈಟ್ ನಲ್ಲಿ ಹಂಚಿಕೊಂಡಿದ್ದಾರೆ. ಕ್ಯಾಬ್ ಡ್ರೈವರ್ ತಾನು ಭಾರತದಲ್ಲಿ ವಾಸಿಸುವುದಿಲ್ಲ ಎಂದು ಅರ್ಥಮಾಡಿಕೊಂಡಿದ್ದಾನೆ ಎಂದು ಅವರು ಹಂಚಿಕೊಂಡರು. ಕರೆ ಮಾಡಿದಾಗ ಮತ್ತು ಹಣವನ್ನು ವರ್ಗಾಯಿಸಲು ವಿವರಗಳನ್ನು ಕೇಳಿದಾಗ ತುಂಬಾನೇ ಸಮಾಧಾನವಾಗಿ ಮಾತನಾಡಿದ ಕ್ಯಾಬ್ ಚಾಲಕ ಅದನ್ನು ಸ್ವೀಕರಿಸಲು ನಿರಾಕರಿಸಿದನು.


    ಇದನ್ನೂ ಓದಿ: ಮಹಿಳಾ ಪೊಲೀಸ್ ವಿಡಿಯೋ ವೈರಲ್​ ಆಗಿದ್ಯಾಕೆ ಗೊತ್ತಾ! ನೀವು ನೋಡಿ ಆ ವೈರಲ್​ ವಿಡಿಯೋ


    ಚಾಲಕ "ಪರವಾಗಿಲ್ಲಾ ಬಿಡಿ ಸರ್, ಸ್ವಲ್ಪ ದಿನಗಳ ನಂತರ ನೀವು ಮತ್ತೆ ಬರಬಹುದು” ಎಂದು ಹೇಳಿದರಂತೆ. ಆದರೂ ಅಂತಿಮವಾಗಿ ಈ ಚಾಲಕನಿಗೆ ಸರಿಯಾದ ಹಣವನ್ನು ಪಾವತಿಸಿದರಂತೆ.


    ಸಿಂಗ್ ಅವರು ತಮ್ಮ ಟ್ವೀಟ್ ನಲ್ಲಿ ಏನಂತ ಬರೆದುಕೊಂಡಿದ್ದಾರೆ?


    ಸಿಂಗ್ ಅವರು ತಮ್ಮ ಟ್ವೀಟ್ ನಲ್ಲಿ ಘಟನೆಯ ಬಗ್ಗೆ ವಿವರಿಸುತ್ತಾ "ಆ ಕ್ಯಾಬ್ ಚಾಲಕ ನಮ್ಮನ್ನು ದೆಹಲಿ ವಿಮಾನ ನಿಲ್ದಾಣಕ್ಕೆ ಡ್ರಾಪ್ ಮಾಡಿದರು. ನಾವು ಸಹ ಕ್ಯಾಬ್ ಇಳಿದುಕೊಂಡು ಹಣ ಕೊಡದೆ ಹೊರಟು ಹೋದೆವು. ನಂತರ ಅಯ್ಯೋ ಹಣ ಕೊಡಲಿಲ್ಲ ಅಂತ ನೆನಪಿಗೆ ಬಂತು ಮತ್ತು ಆ ಹಣವನ್ನು ಚಾಲಕನಿಗೆ ಹೇಗೆ ಪಾವತಿಸುವುದು ಎಂದು ಕೇಳಲು ಕಾಲ್ ಮಾಡಿದೆ.


    ಅದಕ್ಕೆ ಅವರು ‘ಪರವಾಗಿಲ್ಲಾ ಬಿಡಿ ಸರ್, ಸ್ವಲ್ಪ ದಿನಗಳ ನಂತರ ಮತ್ತೆ ಬರ್ತಿರಲ್ಲ’ ಎಂದು ಉತ್ತರಿಸಿದರು. ಕ್ಯಾಬ್ ಬಿಲ್ ಎಷ್ಟಾಗಿದೆ ಅಂತ ಸಹ ಹೇಳಲಿಲ್ಲ. ನಾವು ಇಲ್ಲಿ ವಾಸಿಸುವುದಿಲ್ಲ ಎಂದು ಅವನಿಗೆ ತಿಳಿದಿತ್ತು. ಕೊನೆಗೂ ನಾವು ಅವರಿಗೆ ಹಣವನ್ನು ಪಾವತಿಸಿದೆವು” ಎಂದು ಹೇಳಿದರು.


    ಈ ಟ್ವೀಟ್ ಅನ್ನು ಹಂಚಿಕೊಂಡಾಗಿನಿಂದ 900ಕ್ಕೂ ಹೆಚ್ಚು ಲೈಕ್ ಗಳನ್ನು ಗಳಿಸಿದೆ ಮತ್ತು 50ಕ್ಕೂ ಹೆಚ್ಚು ಬಾರಿ ಮರು ಹಂಚಿಕೊಂಡಿದ್ದಾರೆ.


    ವೀಡಿಯೋ ನೋಡಿ ಏನಂದ್ರು ನೋಡಿ ನೆಟ್ಟಿಗರು..


    ಒಬ್ಬ ಸಾಮಾಜಿಕ ಮಾಧ್ಯಮ ಬಳಕೆದಾರರು "ಮುಂಬೈನಲ್ಲಿ ಒಮ್ಮೆ ನನ್ನೊಂದಿಗೂ ಸಹ ಹೀಗೆ ಆಗಿತ್ತು. ಪಂಜಾಬ್ ನಲ್ಲಿ ಮರೆತು ನಾವು ಮಾತುಕತೆಯಲ್ಲಿ ನಿರತರಾಗಿ ಟ್ಯಾಕ್ಸಿಯಿಂದ ಹೊರ ಬಂದೆವು.ಆದರೆ ಕ್ಯಾಬ್ ಡ್ರೈವರ್ ತುಂಬಾ ಮೃದು ಸ್ವಭಾವದಿಂದ ಕೇಳಿದ್ದಕ್ಕೆ ನಾನು ಅವನಿಗೆ ಬಿಲ್ ಗಿಂತಲೂ ಸ್ವಲ್ಪ ಹೆಚ್ಚು ಹಣವನ್ನು ಕೊಟ್ಟೆ. ಹೆಚ್ಚಿನ ಕ್ಯಾಬ್ ಚಾಲಕರು ಒಳ್ಳೆಯ ಚಾಲಕರಾಗಿರುತ್ತಾರೆ" ಎಂದು ಹೇಳಿದರು.


    “ಹೈದರಾಬಾದ್ ನ ಆಟೋ ಚಾಲಕರು ಕೆಲವರು ನನಗೆ ಮೀಟರ್ ಗೆ ತಕ್ಕಂತೆ ಹಣ ಕೇಳಿದರೆ ಅವರಿಗೆ ನಾನು ದುಪ್ಪಟ್ಟು ಹಣವನ್ನು ನೀಡುತ್ತಿದ್ದೆ" ಎಂದು ಇನ್ನೊಬ್ಬ ಬಳಕೆದಾರರು ಹೇಳಿದರು.

    First published: