• Home
 • »
 • News
 • »
 • trend
 • »
 • ಫ್ರಾನ್ಸ್‌ನಷ್ಟು ವಿಸ್ತಾರವಾದ ಅರಣ್ಯವು ಕಳೆದ 20 ವರ್ಷಗಳಲ್ಲಿ ಬೆಳೆದಿದೆ; ಸಂಶೋಧನೆಯಿಂದ ಬಹಿರಂಗ

ಫ್ರಾನ್ಸ್‌ನಷ್ಟು ವಿಸ್ತಾರವಾದ ಅರಣ್ಯವು ಕಳೆದ 20 ವರ್ಷಗಳಲ್ಲಿ ಬೆಳೆದಿದೆ; ಸಂಶೋಧನೆಯಿಂದ ಬಹಿರಂಗ

ಕಾಡು

ಕಾಡು

'ಸಾಮಾನ್ಯವಾಗಿ ನಿಸರ್ಗಕ್ಕೆ ಮನುಷ್ಯನಿಂದ ಸ್ವಲ್ಪ ಅಂತರ ಸಿಕ್ಕಾಗ ಈ ರೀತಿ ಚೇತರಿಸಿಕೊಳ್ಳಲು ಸಾಧ್ಯ ಎನ್ನುವುದನ್ನು ಡೇಟಾ ತಿಳಿಸುತ್ತವೆ' ಎಂದು ಟ್ರಿಲಿಯನ್ ಟ್ರೀ ಎಕ್ಸಿಕ್ಯೂಟಿವ್ ನಿರ್ದೇಶಕರಾದ ಜಾನ್ ಲಾಟ್ಸ್‌ಪೀಚ್ ಹೇಳಿದರು. ನಿಸರ್ಗದ ಈ ಬೆಳವಣಿಗೆ ನಮ್ಮ ಕರ್ತವ್ಯ ವಿಮುಖತೆಗೆ ಒಂದು ಕಾರಣವಾಗಬಾರದು ಎಂದಿದ್ದಾರೆ.

ಮುಂದೆ ಓದಿ ...
 • Share this:

  ಬರಿದಾಗಿದ್ದ ಭೂಮಿಯಲ್ಲಿ ಕಳೆದ 20 ವರ್ಷಗಳಲ್ಲಿ ದೈತ್ಯ ಮರಗಳು ಪುನಃ ಬೆಳೆದು ನಿಂತಿವೆ. ಆ ಮೂಲಕ ಇಂಗಾಲದ ಡೈ ಆಕ್ಸೈಡ್ ಸಮಸ್ಯೆಯನ್ನು ಎದುರಿಸಲು ಸಣ್ಣ ಕಿರುಕಾಣಿಕೆಯನ್ನು ಈ ಕಾಡುಗಳು ನೀಡಿವೆ. ಹೌದು! ಮಂಗೋಲಿಯಾದಿಂದ ದಕ್ಷಿಣ ಬ್ರೆಜಿಲ್‌ವರೆಗೆ ಕಾಡುಗಳು ಮತ್ತೆ ಬೆಳವಣಿಗೆ ಕಂಡಿದೆ. ಈ ಕಾಡಿನ ಅಗಾಧತೆಯು ಫ್ರಾನ್ಸ್ ದೇಶದಷ್ಟಿದೆ. ಫ್ರಾನ್ಸ್ ವಿಸ್ತೀರ್ಣದಷ್ಟು ಮಂಗೋಲಿಯಾದಿಂದ ದಕ್ಷಿಣ ಬ್ರೆಜಿಲ್‌ವರೆಗಿನ ಕಾಡುಗಳು ನೈಸರ್ಗಿಕವಾಗಿ ಬೆಳೆದು ನಿಂತಿವೆ. ಆ ಮೂಲಕ ಹೇರಳ ವನಸಿರಿ ನಳ ನಳಿಸುತ್ತಿದೆ ಎನ್ನುವ ಅಂಶವನ್ನು ಮಂಗಳವಾರ ಅಧ್ಯಯನವೊಂದು ಕಂಡುಕೊಂಡಿದೆ.


  ವರ್ಲ್ಡ್ ವೈಡ್ ಫಂಡ್ ಫಾರ್ ನೇಚರ್ (ಡಬ್ಲ್ಯುಡಬ್ಲ್ಯುಎಫ್) ನೇತೃತ್ವದ ಸಂಶೋಧಕರ ತಂಡ ನಡೆಸಿದ ಉಪಗ್ರಹ ಡೇಟಾದ ವಿಶ್ಲೇಷಣೆಯ ಪ್ರಕಾರ ಸುಮಾರು 59 ದಶಲಕ್ಷ ಹೆಕ್ಟೇರ್ (146 ಮಿಲಿಯನ್ ಎಕರೆ) ಕಾಡುಗಳು 2000ನೇ ಇಸವಿಯಿಂದ ಮತ್ತೆ ಬೆಳೆಯಲು ಆರಂಭಿಸಿ ಸದೃಢ ಮರವಾಗಳಾಗಿವೆ ಎಂದು ತಿಳಿಸಿದೆ. ಈ ಅರಣ್ಯವು 5.9 ಗಿಗಾ ಟನ್ ಇಂಗಾಲದ ಡೈಆಕ್ಸೈಡ್ (CO2) ಅನ್ನು ಹೀರಿಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ. ಒಂದು ಅಧ್ಯಯನದ ಪ್ರಕಾರ ಅಮೆರಿಕದ ವಾರ್ಷಿಕ ಹೊರಸೂಸುವಿಕೆಗಿಂತಲೂ ಇದು ಹೆಚ್ಚಾಗಿದೆ.


  'ಸಾಮಾನ್ಯವಾಗಿ ನಿಸರ್ಗಕ್ಕೆ ಮನುಷ್ಯನಿಂದ ಸ್ವಲ್ಪ ಅಂತರ ಸಿಕ್ಕಾಗ ಈ ರೀತಿ ಚೇತರಿಸಿಕೊಳ್ಳಲು ಸಾಧ್ಯ ಎನ್ನುವುದನ್ನು ಡೇಟಾ ತಿಳಿಸುತ್ತವೆ' ಎಂದು ಟ್ರಿಲಿಯನ್ ಟ್ರೀ ಎಕ್ಸಿಕ್ಯೂಟಿವ್ ನಿರ್ದೇಶಕರಾದ ಜಾನ್ ಲಾಟ್ಸ್‌ಪೀಚ್ ಹೇಳಿದರು. ನಿಸರ್ಗದ ಈ ಬೆಳವಣಿಗೆ ನಮ್ಮ ಕರ್ತವ್ಯ ವಿಮುಖತೆಗೆ ಒಂದು ಕಾರಣವಾಗಬಾರದು ಎಂದಿದ್ದಾರೆ.


  ನ್ಯಾಯಾಧೀಶರೇನು ಸರ್ವಜ್ಞರಲ್ಲ; ಸಿ.ಟಿ.ರವಿ


  'ಸಂಶೋಧಕರು ಪರಿಶೀಲಿಸಿದಾಗ ಮರಗಳು ಸಹಜವಾಗಿ ಬೆಳೆದಿರಬಹುದು ಜೊತೆಗೆ ಮನುಷ್ಯನ ಪ್ರಯತ್ನವೂ ಇರಬಹುದು' ಎಂದು ಗೋಚರಿಸುತ್ತದೆ ಎನ್ನುವ ಅಂಶವನ್ನು ತಿಳಿಸಿದ್ದಾರೆ.


  'ಕಾಡುಗಳ ರಕ್ಷಣೆ ಮತ್ತು ಪುನಃ ಬೆಳೆಸುವುದು ಹವಾಮಾನ ಬದಲಾವಣೆ ಪರಿಣಾಮಗಳನ್ನು ನಿಯಂತ್ರಿಸಲು ಉತ್ತಮ ಪರಿಹಾರವಾಗಿದೆ. ಈಗಾಗಲೇ ಇರುವ ಅರಣ್ಯಗಳು ಹೆಚ್ಚು ಇಂಗಾಲವನ್ನು ಹೀರಿಕೊಳ್ಳುವ ಸಾಮರ್ಥ್ಯದ ಜೊತೆಗೆ ವನ್ಯಜೀವಿಗಳನ್ನು ರಕ್ಷಿಸುತ್ತದೆ. ಆ ಮೂಲಕ ಜೀವ ವೈವಿಧ್ಯತೆಗೆ ನೆರವಾಗುತ್ತದೆ' ಎಂದು ವಿಜ್ಞಾನಿಗಳು ಹೇಳುತ್ತಾರೆ.


  'ನೈಸರ್ಗಿಕವಾಗಿ ಬೆಳೆಯುವ ಮರಗಳು, ಮಾನವ ನಿರ್ಮಿತ ಕಾಡುಗಳಿಗಿಂತ ಉತ್ತಮ ಹಾಗೂ ಜೀವ ವೈವಿಧ್ಯತೆಗೆ ಅನುಕೂಲಕರ' ಎಂದು ಡಬ್ಲ್ಯುಡಬ್ಲ್ಯುಎಫ್ - ಯುಕೆಯ ನೇಚರ್ ಬೇಸ್ಡ್ ಸಲ್ಯೂಷನ್ಸ್‌ನ ನಿರ್ದೇಶಕ ವಿಲಿಯಂ ಬಾಲ್ಡ್ವಿನ್ ಕ್ಯಾಂಟೆಲ್ಲೊ ಹೇಳಿದರು.


  ಇನ್ನು ಈ ಸಂಶೋಧನೆಯೂ ಕಾಡುಗಳು ಎಲ್ಲಿ ಹಾಗೂ ಏಕೆ ಮರು ಬೆಳವಣಿಗೆಯಾಗುತ್ತಿದೆ. ಈ ಸ್ಥಿತಿಯನ್ನು ಬೇರೆ ಕಡೆ ಸೃಷ್ಟಿಸುವುದು ಹೇಗೆ? ಎನ್ನುವುದನ್ನು ತಿಳಿಸುತ್ತದೆ.


  ಬ್ರೆಜಿಲ್‌ನ ಅಟ್ಲಾಂಟಿಕ್ ಅರಣ್ಯವು 4.2 ಮಿಲಿಯನ್ ಹೆಕ್ಟೇರ್ ಮರಗಳನ್ನು ಮತ್ತೆ ಪಡೆದುಕೊಂಡಿದೆ. ಇದು ನೆದರ್ಲ್ಯಾಂಡ್‌ನಷ್ಟು ವಿಸ್ತೀರ್ಣವನ್ನು ಹೊಂದಿದ ಅರಣ್ಯ ಪ್ರದೇಶವಾಗಿದೆ. 2000 ರಿಂದ ಈ ಬೆಳವಣಿಗೆ ನಡೆದಿದೆ.
  ಇದೇ ಸಮಯದಲ್ಲಿ ಉತ್ತರ ಮಂಗೋಲಿಯಾದಲ್ಲಿ 1.2 ದಶಲಕ್ಷ ಹೆಕ್ಟೇರ್ ಬೋರಿಯಲ್ ಕಾಡಿನಲ್ಲೂ ಪುನಃ ಮರಗಳು ಬೆಳೆದು ನಿಂತಿವೆ. ಮಧ್ಯ ಆಫ್ರಿಕಾ ಮತ್ತು ಕೆನಡಾದಲ್ಲೂ ಅರಣ್ಯ ಮತ್ತೆ ಬೆಳವಣಿಗೆ ಕಂಡಿದೆ.


  ನಿಸರ್ಗದಲ್ಲಿ ಮರಗಳ ಬೆಳವಣಿಗೆ ನಡೆಯುತ್ತಿದೆ ಎನ್ನುವ ನಿರ್ಲಕ್ಷ್ಯ ಸಲ್ಲುವುದಿಲ್ಲ. ಏಕೆಂದರೆ ಅರಣ್ಯಗಳ ಮರು ಬೆಳವಣಿಗೆಗಿಂತಲೂ ಹೆಚ್ಚಾಗಿ ಕಾಡುಗಳು ನಶಿಸಿ ಹೋಗಿವೆ ಎನ್ನುವುದು ನಮ್ಮೆಲ್ಲರಿಗೂ ಎಚ್ಚರಿಕೆ ಘಂಟೆ.
  ಬ್ರೆಜಿಲ್‌ನ ಅಟ್ಲಾಂಟಿಕ್ ಅರಣ್ಯವು ತನ್ನ ಮೂಲ ವಿಸ್ತೀರ್ಣಕ್ಕಿಂತಲೂ ಶೇಕಡಾ 12 ರಷ್ಟು ಮಾತ್ರವನ್ನಷ್ಟೇ ಹೊಂದಿದ್ದು, ಇನ್ನೂ ಅಭಿವೃದ್ಧಿಯಾಗಬೇಕು ಎನ್ನುತ್ತಾರೆ.


  ಕಳೆದ ಎರಡು ದಶಕದಲ್ಲಿ ಈ ಮರಗಳು ಮತ್ತೆ ಬೆಳವಣಿಗೆ ಕಂಡಿರುವುದು ಸಂತೋಷದಾಯಕ. ಆದರೆ ಇದೇ ಸಮಯದಲ್ಲಿ ಇದಕ್ಕಿಂತಲೂ 7 ಪಟ್ಟು ಹೆಚ್ಚಾಗಿ ಅರಣ್ಯ ನಾಶವಾಗಿದೆ ಅನ್ನೋದು ಆತಂಕಕಾರಿ ವಿಷಯವಾಗಿದೆ.


  'ಕಾಡುಗಳ ಮರು ಬೆಳವಣಿಗೆಗೆ ಅವಕಾಶ ನೀಡುವ ಮೂಲಕ ಹವಾಮಾನ ವೈಪರೀತ್ಯದ ಸವಾಲುಗಳನ್ನು ಸರಳವಾಗಿ ಎದುರಿಸಬಹುದು' ಎಂದು ಬಾಲ್ಡ್ವಿನ್ ಕ್ಯಾಂಟೆಲ್ಲೊ ಅವರು ಆನ್ಲೈನ್ ಕರೆಯ ಮೂಲಕ ರಾಯಿಟರ್ಸ್ ಫೌಂಡೇಶನ್‌ನ ಥಾಮ್ಸನ್‌ ಅವರಿಗೆ ತಿಳಿಸಿದರು.


  ಇಷ್ಟೆಲ್ಲಾ ಹೇಳಿದ ಮೇಲೂ ಅರಣ್ಯ ನಾಶ ನಿಲ್ಲಿಸುತ್ತೇವೆಯೇ? ಖಂಡಿತಾ ಇಲ್ಲ. ಹೊರಸೂಸುವಿಕೆಯೂ ಇರುವುದಿಲ್ಲವೆಂದಲ್ಲ ಆದರೆ ಇದೆಲ್ಲವನ್ನು ಹೊಂದಾಣಿಕೆಯಿಂದ ನಿಭಾಯಿಸಬೇಕು.

  Published by:Latha CG
  First published: