Video: ಕಾಡಿನಲ್ಲಿ ಕಳೆದು ಹೋದ ಮರಿ ಆನೆಯನ್ನು ಮತ್ತೆ ಅದರ ಹಿಂಡಿನೊಂದಿಗೆ ಸೇರಿಸಿದ ಅರಣ್ಯ ಸಿಬ್ಬಂದಿ! ಈ ಸಂತಸದ ಕ್ಷಣವನ್ನೊಮ್ಮೆ ನೋಡಿ

ಆನೆಮರಿಯು ತನ್ನ ತಾಯಿಯಿಂದ ತಪ್ಪಿಸಿಕೊಂಡಿದ್ದು, ಬೆಳಗ್ಗೆ 8 ಗಂಟೆಯ ಸುಮಾರಿಗೆ ಏಕಾಂಗಿಯಾಗಿ ಅಲೆದಾಡುತ್ತಿರುವ ದೃಶ್ಯವನ್ನು ಅರಣ್ಯ ಸಿಬ್ಬಂದಿಗಳು ನೋಡಿದ್ದಾರೆ. ನಂತರ ಆನೆಮರಿಯನ್ನು ಹಿಡಿದು ತಾಯಿ ಆನೆ ಇದ್ದ ಹಿಂಡುಗಳ ಬಳಿ ಹೋಗಿ ಅರಣ್ಯ ಸಿಬ್ಬಂದಿಗಳು ಬಿಟ್ಟಿದ್ದಾರೆ.

ಆನೆಮರಿ

ಆನೆಮರಿ

 • Share this:
  ಆನೆಗಳ ಹಿಂಡಿನಿಂದ ತಪ್ಪಿಸಿಕೊಂಡಿದ್ದ ಪುಟ್ಟ ಮರಿ ಆನೆಯನ್ನು (elephant calf) ಅರಣ್ಯ ಸಿಬ್ಬಂದಿಗಳು ಮತ್ತೆ ಅದರ ಹಿಂಡಿನೊಂದಿಗೆ ಬಿಡುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಈ ದೃಶ್ಯವನ್ನು ಐಎಫ್​ಎಸ್​ ಅಧಿಕಾರಿ ಪ್ರವೀಣ್​ ಕಸ್ವಾನ್​ (Praveen Kaswan) ಅವರು ತಮ್ಮ ಟ್ವಿಟ್ಟರ್​​​(Twitter) ಖಾತೆಯಲ್ಲಿ ಶೇರ್​ ಮಾಡಿದ್ದಾರೆ. ಈ ಸಂಸದ ಕ್ಷಣದ ವಿಡಿಯೋ ಟ್ವಿಟ್ಟರ್​ನಲ್ಲಿ ಮುನ್ನೆಲೆಗೆ ಬಂದಿದೆ. ಅನೇಕರು ಈ ವಿಡಿಯೋ (Video) ನೋಡಿದ ಬಳಿಕ ಅರಣ್ಯ ಅಧಿಕಾರಿಗೆ ಅಭಿನಂದನೆ ತಿಳಿಸಿದ್ದಾರೆ. 

  ಆನೆಮರಿಯು ತನ್ನ ತಾಯಿಯಿಂದ ತಪ್ಪಿಸಿಕೊಂಡಿದ್ದು, ಬೆಳಗ್ಗೆ 8 ಗಂಟೆಯ ಸುಮಾರಿಗೆ ಏಕಾಂಗಿಯಾಗಿ ಅಲೆದಾಡುತ್ತಿರುವ ದೃಶ್ಯವನ್ನು ಅರಣ್ಯ ಸಿಬ್ಬಂದಿಗಳು ನೋಡಿದ್ದಾರೆ. ನಂತರ ಆನೆಮರಿಯನ್ನು ಹಿಡಿದು ತಾಯಿ ಆನೆ ಇದ್ದ ಹಿಂಡುಗಳ ಬಳಿ ಹೋಗಿ ಅರಣ್ಯ ಸಿಬ್ಬಂದಿಗಳು ಬಿಟ್ಟಿದ್ದಾರೆ. ಸಂಜೆ ವೇಳೆಗೆ ಆನೆಮರಿಯು ತಾಯಿಯನ್ನು ಸೇರಿದೆ.

  ಆನೆಗಳ ಹಿಂಡು ಸುಮಾರು 5 ಕಿಲೋ ಮೀಟರ್​ ದೂರ ಕ್ರಮಿಸಿತ್ತು. ಅರಣ್ಯ ಸಿಬ್ಬಂದಿಗಳು ಆನೆಗಳ ಹಿಂಡನ್ನು ಗುರುತಿಸಿ. ಬಳಿಕ ಮರಿ ಆನೆಯನ್ನು ಅವುಗಳ ಬಳಿ ಹೋಗಿ ಬಿಟ್ಟಿದ್ದಾರೆ.

  ಭಾರತೀಯ ಅರಣ್ಯ ಸೇವೆ ಅಧಿಕಾರಿ ಪರ್ವೀನ್ ಕಸ್ವಾನ್ ಈ ದೃಶ್ಯವನ್ನು ಟ್ವಿಟ್ಟರ್​ನಲ್ಲಿ ಶೇರ್​ ಮಾಡಿದ್ದಾರೆ. ಜೊತೆಗೆ, ‘‘ಆನೆಮರಿ ಕಾಡಿನಲ್ಲಿ ಬೆಳಿಗ್ಗೆ 8 ಗಂಟೆಯ ಹೊತ್ತಿಗೆ ಏಕಾಂಗಿಯಾಗಿ ಅಲೆದಾಡುತ್ತಿರುವುದನ್ನು ಅರಣ್ಯ ಅಧಿಕಾರಿಗಳು ಕಂಡುಕೊಂಡಿದ್ದಾರೆ. ಬಳಿಕ ಅದನ್ನು ಸುರಕ್ಷತೆಯ ದೃಷ್ಟಿಯಿಂದ ಸಂಜೆ ಹೊತ್ತಿಗೆ ಆನೆಗಳ ಹಿಂಡಿನತ್ತ ಬಿಟ್ಟಿದ್ದಾರೆ’’ ಎಂದು ಬರೆದಿದ್ದಾರೆ. ಟ್ವಿಟ್ಟರ್​ನಲ್ಲಿ ಈ ವಿಡಿಯೋ ವೈರಲ್​ ಆಗಿದ್ದು, ಅನೇಕರು ಶೇರ್ ಮಾಡಿದ್ದಾರೆ.

  ಇದನ್ನೂ ಓದಿ: Arthur: 8 ಹೆಂಡತಿಯರಿಗೆ ಬಂಗಲೆ ನಿರ್ಮಿಸುತ್ತಿರುವ ದೇವರಂಥಾ ಗಂಡ! ಅವರೊಂದಿಗೆ ಮುದ್ದಾಡಲು ಟೈಂ ಟೇಬಲ್​ ಕೂಡ ಫಿಕ್ಸ್  This is what satisfaction looks like. From finding a calf at morning 8 AM to making it survive. Then by evening taking it 5 kms to see getting back in the herd. Team ✌️ pic.twitter.com/ZRiCuxsTMO

  — Parveen Kaswan, IFS (@ParveenKaswan) August 18, 2022  ಇದನ್ನೂ ಓದಿ: Beard Hair Fall: ಪುರುಷರೇ, ಗಡ್ಡದ ಕೂದಲು ಉದುರುತ್ತಿದ್ರೆ ಹೀಗೆ ಮಾಡ್ಬೇಕಂತೆ

  ದೃಶ್ಯದಲ್ಲಿ ಆನೆ ಹಿಂಡುಗಳು ಆನೆಮರಿಯನ್ನು ನೋಡುವುದನ್ನು ಕಾಣಬಹುದಾಗಿದೆ.  ಆದರೆ ಆನೆಮರಿ ಮಾತ್ರ ನಿಧಾನಕ್ಕೆ ಹೆಜ್ಜೆ ಇಡುತ್ತಿದೆ. ಬಳಿಕ ಹಿಂಡುಗಳ ಜೊತೆ ಸೇರಿಕೊಂಡು ಕಾಡನತ್ತ ತೆರಳಿದೆ.
  Published by:Harshith AS
  First published: