• ಹೋಂ
  • »
  • ನ್ಯೂಸ್
  • »
  • ಟ್ರೆಂಡ್
  • »
  • Forest Man: 40 ವರ್ಷಗಳಿಂದ ದಿನವೂ ಒಂದೊಂದು ಗಿಡ ನೆಟ್ಟು ಬರಡು ಭೂಮಿಯನ್ನೇ ಕಾಡಾಗಿ ಮಾಡಿದ ಪರಿಸರ ಪ್ರೇಮಿ!

Forest Man: 40 ವರ್ಷಗಳಿಂದ ದಿನವೂ ಒಂದೊಂದು ಗಿಡ ನೆಟ್ಟು ಬರಡು ಭೂಮಿಯನ್ನೇ ಕಾಡಾಗಿ ಮಾಡಿದ ಪರಿಸರ ಪ್ರೇಮಿ!

ಅರಣ್ಯವಾಸಿ

ಅರಣ್ಯವಾಸಿ

ಮನುಷ್ಯನಿಗೆ ಆಹಾರ ಮತ್ತು ನೀರು ಎಷ್ಟು ಮುಖ್ಯವೋ ಅಷ್ಟೇ ಪರಿಸರವೂ ಮುಖ್ಯವಾಗಿದೆ. ಈ ವಾತಾವರಣದಿಂದಾಗಿ ಮನುಷ್ಯ ಬದುಕಿದ್ದಾನೆ. ಪರಿಸರಕ್ಕೆ ಏನಾದರೂ ಹಾನಿಯಾದರೆ ಮನುಷ್ಯರೂ ಬದುಕಲಾರರು.

  • Local18
  • 5-MIN READ
  • Last Updated :
  • Assam, India
  • Share this:

ಮನುಷ್ಯನಿಗೆ ಆಹಾರ ಮತ್ತು ಪಾನೀಯದಷ್ಟೇ ಪರಿಸರವೂ (Environment) ಮುಖ್ಯವಾಗಿದೆ. ಈ ವಾತಾವರಣದಿಂದಾಗಿ ಮನುಷ್ಯ ಬದುಕಿದ್ದಾನೆ. ಪರಿಸರಕ್ಕೆ ಏನಾದರೂ ಹಾನಿಯಾದರೆ ಮನುಷ್ಯರೂ ಬದುಕಲಾರರು. ಮಾನವರು ಪರಿಸರಕ್ಕೆ ಹಾನಿ ಮಾಡುವುದರಿಂದ, ಜಾಗತಿಕ ತಾಪಮಾನದಿಂದ ಎಲ್ಲಾ ರೀತಿಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಈಗ ಬೇಸಿಗೆ (Summer) ಆರಂಭವಾಗ್ತಾ ಇದೆ. ಈಗ ಮನುಷ್ಯನಿಗೆ ಕಾಡು ಬೇಕು, ನೆರಳು ಬೇಕು ಎಂಬ ಆಹಾಕಾರ ಆರಂಭವಾಗುತ್ತದೆ. ಜೊತೆಗೆ ನೀರು, ಜ್ಯೂಸ್ (Juice)​ ಈ ರೀತಿಯ ಡಿಮ್ಯಾಂಡ್​ ಪ್ರಾರಂಭವಾಗುತ್ತದೆ. ಕೊರೊನಾದ (Covid-19) ಸಮಯದಲ್ಲಿಯೂ ಆಕ್ಸಿಜನ್​ ರೋಗಿಗಳಿಗೆ ಕಡಿಮೆಯಾಗಿದೆ ಎಂದಾದಾಗ ಪ್ರತಿಯೊಬ್ಬರಿಗೂ ಕೂಡ ಕಾಡು, ಗಾಳಿ ಇದರ ಬಗ್ಗೆ ತುಂಬಾ ಯೋಚನೆಗಳು ಮೂಡಿದ್ದವು. ಸಾಲು ಮರದ ತಿಮ್ಮಕ್ಕ ಯಾರಿಗೆ ಗೊತ್ತಿಲ್ಲ ಹೇಳಿ?


ಸಾವಿರಾರು ಗಿಡಗಳನ್ನು ನೆಡುವುದರ ಜೊತೆಗೆ ಅದನ್ನು ಸಾಕಿದ್ದಾಳೆ, ಅದು ಈಗ ಮರವಾಗಿ ಬೆಳೆದು ಅದೆಷ್ಟೋ ಜನರಿಗೆ ನೆರಳನ್ನು ಒದಗಿಸುತ್ತಿದೆ. ಇದೇ ರೀತಿಯಾಗಿ ಇಲ್ಲೋರ್ವ ವ್ಯಕ್ತಿ ಸಖತ್​ ವೈರಲ್​ ಆಗ್ತಾ ಇದ್ದಾರೆ.


ಕಾಡು ಬೆಳೆಸಿ ನಾಡು ಉಳಿಸಿ ಎಂಬ ಮಾತನ್ನು ಕೇಳಿದ್ದೇವೆ.  ಈ ಮಾತು ನಿಜಕ್ಕೂ ಸತ್ಯ. ಯಾಕಂದ್ರೆ  ಆ ಕಾಲದಲ್ಲಿ ನಮ್ಮ ಹಿರಿಯರು ಗಿಡಗಳನ್ನು ನೆಟ್ಟು ಹಚ್ಚ ಹಸುರಿನ ನಡುವೆ ನಮ್ಮನ್ನು ಬಾಳಿಸುತ್ತಾ ಇದ್ರು. ಬರ್ತಾ ಬರ್ತಾ ಕಾಡುಗಳು ನಾಶವಾಗಿ, ಕಟ್ಟಡಗಳು ಬೆಳೆಯಲು ಆರಂಭವಾದವು.


ಇದನ್ನೂ ಓದಿ: ಹಣ ಕೊಡಲಾಗದೇ ವಿಮಾನ ನಿಲ್ದಾಣದಲ್ಲಿಯೇ ಬಟ್ಟೆ, ಆಹಾರ ಬಿಟ್ಟು ಮಲೇಷ್ಯಾಗೆ ತೆರಳಿದ ವಿದ್ಯಾರ್ಥಿ!


ಯಾರದು?
ಅಸ್ಸಾಂನ ಮಜುಲಿಯಲ್ಲಿ ವಾಸಿಸುವ ಜಾಧವ್ ಪಯೆಂಗ್ ಪ್ರಪಂಚದ ಅತಿದೊಡ್ಡ ನದಿ ದ್ವೀಪ ಎಂದು ಕರೆಯುತ್ತಾರೆ. ಒಮ್ಮೆ ಈ ಸ್ಥಳವು ಹಸಿರಾಗಿತ್ತು ಆದರೆ ನಂತರ ಮಾನವರು ಈ ಸ್ಥಳವನ್ನು ನಾಶಪಡಿಸಿದರು. ಇಲ್ಲಿ ಅಭಿವೃದ್ಧಿ ಹೆಸರಲ್ಲಿ ಮರಗಳನ್ನು ಕಡಿಯಲಾಗಿದೆ. ಇದರಿಂದ ಈ ಪ್ರದೇಶ ನಿರ್ಜನವಾಗಿದೆ.


ಗಿಡಗಳನ್ನು ನೆಟ್ಟ ವ್ಯಕ್ತಿ


1979 ರಲ್ಲಿ ಇಲ್ಲಿ ಭೀಕರ ಪ್ರವಾಹ ಉಂಟಾದ ನಂತರ ಬರಗಾಲವೂ ಉಂಟಾಯಿತು. ತನ್ನ ತಾಯ್ನಾಡನ್ನು ರಕ್ಷಿಸಲು, ಆಗ ಕೇವಲ 16 ವರ್ಷ ವಯಸ್ಸಿನ ಜಾಧವ್, ಅದನ್ನು ಮೊದಲಿನಂತೆಯೇ ಇರಿಸಿಕೊಳ್ಳಲು ಪ್ರತಿಜ್ಞೆ ಮಾಡಿದರು.


ಈ ಬಗ್ಗೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಲು ಜಾಧವ್ ಹಲವು ಬಾರಿ ಪ್ರಯತ್ನಿಸಿದರೂ ಸ್ಪಂದನೆ ಸಿಗಲಿಲ್ಲ. ಪರಿಣಾಮವಾಗಿ ಸ್ಥಳವು ನಿರ್ಜನವಾಯಿತು. ಆ ದಿನದಿಂದ ಇಲ್ಲಿಯವರೆಗೆ ಆ ಜಾಗದಲ್ಲಿ ದಿನವೂ ಒಂದೊಂದು ಮರವನ್ನು ನೆಡಲು ಆರಂಭ ಮಾಡಿದ್ರು.


ಇದನ್ನೂ ಓದಿ: ವೀಕೆಂಡ್​ನಲ್ಲಿ ಮಾತ್ರ ಇವ್ರು ಗಂಡ-ಹೆಂಡತಿ, ಉಳಿದ ದಿನಗಳಲ್ಲಿ ಸಿಂಗಲ್​ ಲೈಫ್​!


ಸುಮಾರು ನಲವತ್ತು ವರ್ಷಗಳಿಂದ ಈ ವಿಧಾನವನ್ನು ಅನುಸರಿಸಿ 1360 ಎಕರೆ ಭೂಮಿ ಹಸಿರೀಕರಣಗೊಂಡಿದೆ. ಈ ಭೂಮಿ ಒಂದು ಕಾಲದಲ್ಲಿ ಬರಡಾಗಿತ್ತು ಎಂದು ನೋಡಿದರೆ ಯಾರೂ ನಂಬಲ್ಲ. ಹುಲ್ಲು ಇಲ್ಲದ ಬರಡು ಪ್ರದೇಶ ಇಂದು ಹಸಿರು ಮರಗಳ ಕಾಡಾಗಿದೆ. ಒಬ್ಬ ವ್ಯಕ್ತಿಯ ಪ್ರಯತ್ನದಿಂದ ಇಡೀ ಅರಣ್ಯವನ್ನು ಸೃಷ್ಠಿಸಲಾಗಿದೆ.




ಪ್ರತಿಯೊಬ್ಬರೂ ಗಿಡ, ಮರ ಬೇಡ ಎಂದು ಊರಿಗೆ ಊರೇ ಕಾಲಿ ಮಾಡಿದಾಗ ಈ ವ್ಯಕ್ತಿ ತನ್ನ ಊರನ್ನು ತಾನು ಉಳಿಸಿಕೊಳ್ಳಬೇಕು ಎಂಬ ಕಾರಣದಿಂದಾಗಿ ನೂರಾರು ಗಿಡಗಳನ್ನು ನೆಟ್ಟು ಬೆಳೆಸಿದ್ದಾರೆ.


ಇವರಿಗೆ 56 ವರ್ಷದಲ್ಲಿ ಪದ್ಮಶ್ರೀ ಅವಾರ್ಡ್​ ಕೂಡ ಲಭಿಸಿದಿ. ಮತ್ತೆ ಹಸಿರಿನಿಂದಾಗಿ ಕಾಡುಪ್ರಾಣಿಗಳು ಇಲ್ಲಿ ವಾಸ ಆರಂಭಿಸಿವೆ. ಜಾಧವ್ ರಹಸ್ಯವಾಗಿ ಮರಗಳನ್ನು ನೆಡಲು ಪ್ರಾರಂಭಿಸಿದರು. 2007 ರಲ್ಲಿ ಛಾಯಾಚಿತ್ರ ಪತ್ರಕರ್ತರು ಇದ್ದಕ್ಕಿದ್ದಂತೆ ಇಲ್ಲಿಗೆ ಬಂದಾಗ ಈ ಅರಣ್ಯವನ್ನು ಕಂಡುಹಿಡಿಯಲಾಯಿತು. ಜಾಧವ್ ಮೇಲೆ ಫಾರೆಸ್ಟ್ ಮ್ಯಾನ್ ಎಂಬ ಸಾಕ್ಷ್ಯಚಿತ್ರವನ್ನು ನಿರ್ಮಿಸಲಾಗಿದೆ.

First published: