HOME » NEWS » Trend » FOREST GUARD CARRIED THE ELEPHANT CALF ON HIS SHOULDERS OLD VIDEO GOES VIRAL SESR

Viral Video: ಮರಿಯಾನೆಯನ್ನು ಹೊತ್ತು ಸಾಗಿದ ಬಾಹುಬಲಿ; ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಕ್ಕೆ ಮೆಚ್ಚುಗೆ

ತಾಯಿಯಿಂದ ಬೇರ್ಪಟ್ಟ ಮರಿಆನೆಯನ್ನು ರಕ್ಷಿಸಿದ ಬಳಿಕ ಅರಣ್ಯ ಇಲಾಖೆ ಸಿಬ್ಬಂದಿಯೊಬ್ಬರು ಹೆಗಲ ಮೇಲೆ ಹೊತ್ತು ಸಾಗಿ ತಾಯಿ ಆನೆ ಬಳಿ ಸೇರಿಸಿದ್ದರು

news18-kannada
Updated:April 7, 2021, 6:32 PM IST
Viral Video: ಮರಿಯಾನೆಯನ್ನು ಹೊತ್ತು ಸಾಗಿದ ಬಾಹುಬಲಿ; ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಕ್ಕೆ ಮೆಚ್ಚುಗೆ
ಮರಿಯಾನೆಯನ್ನು ಹೊತ್ತು ಸಾಗಿದ ಅರಣ್ಯ ಇಲಾಖೆ ಸಿಬ್ಬಂದಿ
  • Share this:
ಸಾಮಾಜಿಕ ಜಾಲತಾಣದಲ್ಲಿ ಕೆಲವು ವಿಡಿಯೋಗಳು ಸಿಕ್ಕಾಪಟ್ಟೆ ವೈರಲ್​ ಆಗುತ್ತವೆ. ಅಂತಹದ್ದೇ ಹಳೆಯ ವಿಡಿಯೋವೊಂದು ಈಗ ಮತ್ತೆ ನೆಟ್ಟಿಗರ ಮನಗೆದ್ದಿದೆ. ಅರಣ್ಯ ಇಲಾಖೆ ಸಿಬ್ಬಂದಿಯೊಬ್ಬರು ಆನೆಮರಿಯನ್ನು ಹೊತ್ತು ಸಾಕಿರುವ ವಿಡಿಯೋಗೆ ಸಿಕ್ಕಾಪಟ್ಟೆ ಮೆಚ್ಚುಗೆ ವ್ಯಕ್ತವಾಗಿದೆ. 2017ರಲ್ಲಿ ತಮಿಳುನಾಡಿನ ಮೆಟ್ಟುಪಾಳಯಂ ಕಾಡಿನ ಕಾಲುವೆಯಲ್ಲಿ ಆನೆಮರಿಯೊಂದಿ ಬಿದ್ದಿತ್ತು. ಈ ಆನೆ ಮರಿಯನ್ನು ಅರಣ್ಯ ಸಿಬ್ಬಂದಿ ಇಲಾಖೆ ರಕ್ಷಣೆ ಮಾಡಿದ್ದರು. ತಾಯಿಯಿಂದ ಬೇರ್ಪಟ್ಟ ಮರಿಆನೆಯನ್ನು ರಕ್ಷಿಸಿದ ಬಳಿಕ ಅರಣ್ಯ ಇಲಾಖೆ ಸಿಬ್ಬಂದಿಯೊಬ್ಬರು ಹೆಗಲ ಮೇಲೆ ಹೊತ್ತು ಸಾಗಿ ತಾಯಿ ಆನೆ ಬಳಿ ಸೇರಿಸಿದ್ದರು. ಪಳನಿಚಮಿ ಶರತ್​ ಕುಮಾರ್​ ಎಂಬುವವರು ಆನೆ ಮರೆ ಹೊತ್ತು ಸಾಗಿದ್ದರು. ಮರಿ ಆನೆ ಆದರೂ ಇವುಗಳು ಕನಿಷ್ಟ 80 ರಿಂದ 100 ಕೆಜಿ ಇರುತ್ತವೆ ಎಂಬುದು ಗಮನಾರ್ಹ.


ಶರತ್​ ಕುಮಾರ್​ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಅನೇಕ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದವು. ಅಲ್ಲದೇ, ಪ್ರಾಣಿ ರಕ್ಷಣೆ ಬಗ್ಗೆ ಈತನಿಗಿರುವ ಬದ್ಧತೆ ನೋಡಿ ಶಹಬ್ಬಾಸ್ ಗಿರಿಯನ್ನು ಹೇಳಿದ್ದರು.











ಈ ಹಳೆ ವಿಡಿಯೋವನ್ನು ಮತ್ತೊಮ್ಮೆ ಐಎಫ್​ಎಸ್​ ಅಧಿಕಾರಿ ಸುಶಾಂತ್​ ನಂದ ಹಂಚಿಕೊಳ್ಳುವ ಮೂಲಕ ಮತ್ತೆ ಗಮನಸೆಳೆದಿದ್ದಾರೆ. ಕಾಲುವೆಗೆ ಬಿದ್ದ ಮರಿಯಾನೆ ಮಣ್ಣಿನಲಲಿ ಸಿಲುಕಿತ್ತು. ಮೆಟ್ಟುಪಾಳಯಂ ಅರಣ್ಯ ಇಲಾಖೆ ಸಿಬ್ಬಂದಿ ಅದರ ರಕ್ಷಣೆ ಮಾಡಿದರು. ಈ ವೇಳೆ ತಕ್ಷಣಕ್ಕೆ ಪಳನಿಚಮಿ ಶರತ್​ ಕುಮಾರ್​ ಅದನ್ನು ತಾಯಿ ಆನೆ ಬಳಿ ಸೇರಿಸಿದ್ದಾರೆ.

ಈ ಹಳೆ ವಿಡಿಯೋ ಮತ್ತೆ ಸಿಕ್ಕಾಪಟ್ಟೆ ಶೇರ್​ ಆಗಿದ್ದು, 8000 ವೀವ್ಸ್​ ಪಡೆದಿದೆ. ಅಧಿಕಾರಿಯ ಬದ್ಧತೆಗೆ ಜನರು ಶ್ಲಾಘಿಸಿದ್ದು, ಅವರಿಗೆ ದೇವರು ಕಾಪಾಡಲಿ ಎಂದು ಹರಿಸಿದ್ದಾರೆ.
Published by: Seema R
First published: April 7, 2021, 6:32 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories