ಈ ಚಿತ್ರಮಂದಿರದಲ್ಲಿ ನೋ ಕೂಲ್ ಡ್ರಿಂಕ್ಸ್,​ ಒನ್ಲಿ ಎಳನೀರು!

zahir | news18
Updated:July 24, 2018, 9:47 PM IST
ಈ ಚಿತ್ರಮಂದಿರದಲ್ಲಿ ನೋ ಕೂಲ್ ಡ್ರಿಂಕ್ಸ್,​ ಒನ್ಲಿ ಎಳನೀರು!
zahir | news18
Updated: July 24, 2018, 9:47 PM IST
 -ನ್ಯೂಸ್ 18 ಕನ್ನಡ

ಕೆಲ ಚಿತ್ರಮಂದಿರಗಳು ತಿಂಡಿ, ತಿನಿಸುಗಳಿಗೆ ಗ್ರಾಹಕರಿಂದ ಹಣ ಸುಲಿಗೆ ಮಾಡುವ ಮೂಲಕ ಸುದ್ದಿಯಾಗುವುದು ಕೇಳಿರುತ್ತೀರಿ. ಆದರೆ ತಮಿಳುನಾಡಿನ ಥಿಯೇಟರ್​ವೊಂದು ಸುದ್ದಿಯಾಗಿರುವುದು ತನ್ನ ಅಪ್ಪಟ ದೇಸಿತನದಿಂದ ಎಂಬುದು ವಿಶೇಷ. 'ಕತ್ತಿ' ಚಿತ್ರದ ಬಳಿಕ ಕೋಕ್ ಸೇರಿದಂತೆ ವಿದೇಶಿ ಪಾನೀಯಗಳ ವಿರುದ್ಧ ಸಿಡಿದೆದ್ದಿದ್ದ ತಮಿಳು ಮಕ್ಕಳ್ ತಂಪು ಪಾನೀಯಗಳನ್ನು ಬಹಿಷ್ಕರಿಸುವ ಅಭಿಯಾನ ನಡೆಸಿದ್ದರು. ಇದೀಗ ಥಿಯೇಟರ್ ಒಂದರ​ ಮಾಲೀಕರು ಕೂಡ ಕೃಷಿಕರಿಗೆ ಸಾಥ್ ನೀಡಲು ಮುಂದಾಗಿದ್ದಾರೆ. ತಿರುನೆಲ್ವೇಲಿಯ 'ರಾಮ್ ಮುತ್ತುರಾಮ್' ಚಿತ್ರಮಂದಿರದಲ್ಲಿ ತಂಪು ಪಾನೀಯಗಳ ಬದಲಾಗಿ ಎಳನೀರನ್ನು ಮಾರಲಾಗುತ್ತಿದೆ.

ಸಿನಿಮಾದ ವಿರಾಮದ ವೇಳೆ ಬಾಯಾರಿಕೆ ನೀಗಿಸಲು ಈ ಚಿತ್ರಮಂದಿರದ ಸ್ಟಾಲ್​ಗಳಲ್ಲಿ ಸಿಗುವುದು ಅಪ್ಪಟ ದೇಸಿ ಎಳನೀರು ಮಾತ್ರ. ಈ ಬಗ್ಗೆ ಥಿಯೇಟರ್​ನ ಆಡಳಿತ ಮಂಡಳಿ ಟ್ವಿಟ್ಟರ್​ನಲ್ಲಿ ತಿಳಿಸಿದ್ದು, ಈ ಹೊಸ ಐಡಿಯಾಗೆ ಸಾಮಾಜಿಕ ತಾಣದಲ್ಲಿ ವ್ಯಾಪಕ ಬೆಂಬಲ ಕೂಡ ವ್ಯಕ್ತವಾಗಿದೆ.

ಚಿತ್ರಮಂದಿರದಲ್ಲಿ ಎಳನೀರು ಮಾರುವ ಪದ್ದತಿ ಇದೇ ಮೊದಲಾಗಿದ್ದು, ಸಿನಿಮಾ ರಸಿಕರ ಮನವಿಗೆ ಇಂತಹದೊಂದು ಪ್ರಯೋಗ ಮಾಡಲು ಮುಂದಾಗಿದ್ದೇವೆ ಎಂದು ಥಿಯೇಟರ್ ಮಾಲಿಕರು ತಿಳಿಸಿದ್ದಾರೆ.

ಮೊದಲ ಪ್ರಯತ್ನಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದ್ದು, ಮುಂದಿನ ದಿನಗಳಲ್ಲಿ ಎಲ್ಲಾ ಥಿಯೇಟರ್​ನವರೂ ಕೂಡ ಇತರೆ ಪಾನೀಯಗಳ ಹೊರತಾಗಿ ಎಳನೀರನ್ನು ಮಾರುವ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ  ಥಿಯೇಟರ್ ಮ್ಯಾನೇಜರ್. ರಾಮ್ ಮುತ್ತುರಾಮ್ ಥಿಯೇಟರಿನ ಎಳನೀರು ಸ್ಟಾಲ್ ಫೋಟೋಗಳು ಭಾರೀ ವೈರಲ್ ಆಗುತ್ತಿದ್ದಂತೆ ರೈತರಿಗೆ ಬೆಂಬಲವಾಗಿ ನಿಂತಿರುವ ಚಿತ್ರಮಂದಿರದ ಕ್ರಮಕ್ಕೆ ಪ್ರಶಂಸೆಗಳ ಸುರಿಮಳೆಯಾಗುತ್ತಿದೆ.
First published:July 23, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ