Viral Story: ಹಾರುವ ವಿಮಾನವನ್ನೇ ನೆಲಕ್ಕುರುಳಿಸಿದ ಫುಟ್​ಬಾಲ್​ ಆಟಗಾರ! ಇದು ರೀಲ್​ ಅಲ್ಲ, ರಿಯಲ್​ ಸ್ಟೋರಿ

ಕೆಲವು ಕ್ರೀಡೆಗಳು ಎಷ್ಟು ಶಕ್ತಿಯಿಂದ ತುಂಬಿರುತ್ತವೆ ಎಂದರೆ, ಆಟಗಾರರು ಉತ್ಸಾಹದಿಂದ ಏನು ಬೇಕಾದರೂ ಆಗಬಹುದು. ಅದರಲ್ಲೂ ಕೆಲವು ಕ್ರೀಡೆಗಳಲ್ಲಿ ಶಕ್ತಿಯ ಪ್ರದರ್ಶನಗಳನ್ನು ನೋಡಿರಬಹುದು. ಆದರೆ ಪರಾಗ್ವೆಯ ಫುಟ್‌ಬಾಲ್ ಆಟಗಾರ ರಾಬರ್ಟೊ ಗೇಬ್ರಿಯಲ್ ಟ್ರಿಗೊ ಬಗ್ಗೆ ಕೇಳಿದಾಗ ಮೈ ಜುಂ ಅನಿಸುವುದು ಸಹಜ.

ರಾಬರ್ಟೊ ಗೇಬ್ರಿಯಲ್ ಟ್ರಿಗೊ

ರಾಬರ್ಟೊ ಗೇಬ್ರಿಯಲ್ ಟ್ರಿಗೊ

 • Share this:
  ಕೆಲವು ಕ್ರೀಡಾಪಟುಗಳು ಮರೆಯಲಾರದಂತಹ ಸಾಧನೆಯನ್ನು ಮಾಡಿರುತ್ತಾರೆ. ಕ್ರಿಕೆಟ್ (Cricket)​, ಫುಟ್​ಬಾಲ್ (Football)​, ವಾಲಿಬಾಲ್  ಹೀಗೆ ನಾನಾ ಕ್ರೀಡೆಗಳಲ್ಲಿ ಸಾಧನೆ ಮಾಡಿದವರು ಹಲವರಿದ್ದಾರೆ. ಆದರೆ ಅದರಲ್ಲಿ ಕೆಲವರು ಮರೆಯಲಾಗದ ಸಾಧನೆಯನ್ನು ಮಾಡಿದವರಿದ್ದಾರೆ. ಆದರೆ ನಾವಿಂದು ಫುಟ್​ಬಾಲ್ ಆಟಗಾರನೊಬ್ಬನ ಬಗ್ಗೆ ಮಾತನಾಡುತ್ತಿದ್ದೇವೆ. ಆತ ಚೆಂಡಿಗೆ ನೀಡಿದ ಕಿಕ್​ನಿಂದಾಗಿ ಹಾರುವ ವಿಮಾನವೇ  (Flight) ಕೆಳಗುರುಳಿದೆಯಂತೆ. ಅಷ್ಟಕ್ಕೂ ಆ ಆಟಗಾರ ಯಾರು? ಈ ಘಟನೆ ನಿಜವೇ ತಿಳಿಯೋಣ.

  ಕೆಲವು ಕ್ರೀಡೆಗಳು ಎಷ್ಟು ಶಕ್ತಿಯಿಂದ ತುಂಬಿರುತ್ತವೆ ಎಂದರೆ, ಆಟಗಾರರು ಉತ್ಸಾಹದಿಂದ ಏನು ಬೇಕಾದರೂ ಆಗಬಹುದು. ಅದರಲ್ಲೂ ಕೆಲವು ಕ್ರೀಡೆಗಳಲ್ಲಿ ಶಕ್ತಿಯ ಪ್ರದರ್ಶನಗಳನ್ನು ನೋಡಿರಬಹುದು. ಆದರೆ ಪರಾಗ್ವೆಯ ಫುಟ್‌ಬಾಲ್ ಆಟಗಾರ ರಾಬರ್ಟೊ ಗೇಬ್ರಿಯಲ್ ಟ್ರಿಗೊ ಬಗ್ಗೆ ಕೇಳಿದಾಗ ಮೈ ಜುಂ ಅನಿಸುವುದು ಸಹಜ. ಏಕೆಂದರೆ ಈತನ ಫುಟ್​​ಬಾಲ್​ ಒದೆತಕ್ಕೆ ಹಾರುವ ವಿಮಾನವೇ ಕೆಳಗಪ್ಪಳಿಸಿದೆಯಂತೆ.

  ಅಂದಹಾಗೆಯೇ ರಾಬರ್ಟೊ ಗೇಬ್ರಿಯಲ್ ಟ್ರಿಗೊ ತನ್ನ 17 ನೇ ವಯಸ್ಸಿನಲ್ಲಿದ್ದಾಗ ಈ ಘಟನೆ ಸಂಭವಿಸಿತ್ತು ಎಂದು ಹೇಳಲಾಗುತ್ತಿದೆ.

  ಇತ್ತೀಚೆಗೆ ರಾಬರ್ಟೊ ಗೇಬ್ರಿಯಲ್ ಟ್ರಿಗೊ 80 ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಇವರಿಗೆ ಬಾಲ್ಯದಿಂದಲೇ ಫುಟ್​ಬಾಲ್ ಆಟಗಾರನಾಗಬೇಕೆಂಬ ಆಸಕ್ತಿ. ಸದಾ ಅಭ್ಯಾಸದಲ್ಲಿ ತೊಡಗಿದ್ದ ಅವರು, 17 ವರ್ಷವಿರುವಾಗ ಅಸುನ್ಸಿಯಾನ್‌ನ ಜನರಲ್ ಜೀನ್ಸ್ ಫುಟ್‌ಬಾಲ್ ಕ್ಲಬ್‌ಗಾಗಿ ಆಡಿದರು. ಆದರೆ ರಾಬರ್ಟೊ ಗೇಬ್ರಿಯಲ್ ಟ್ರಿಗೊ ಅವರು  ಅಭ್ಯಾಸ ಪಂದ್ಯವನ್ನು ಆಡುತ್ತಿದ್ದರು ಎಂದು ಕೆಲವರು ಹೇಳುತ್ತಿದ್ದಾರೆ. ಈ ಸಮಯದಲ್ಲಿ ಚಿಕ್ಕ ಗಾತ್ರದ ವಿಮಾನವೊಂದು ಆಕಾಶದಲ್ಲಿ ಹಾರುತ್ತಿರುತ್ತದೆ. ಅತಿ ಕೆಳಮಟ್ಟದಲ್ಲಿ ಈ ವಿಮಾನ ಹಾರುತ್ತಿತ್ತು ಎಂದು ಹೇಳಲಾಗುತ್ತಿದೆ.

  ಪಂದ್ಯ ಆಡುತ್ತಿದ್ದ ರಾಬರ್ಟೊ ಗೇಬ್ರಿಯಲ್ ಟ್ರಿಗೊ ಹತ್ತಿರ ಬಂದ ಚೆಂಡಿಗೆ ಬಲವಾಗಿ ಒದೆಯುತ್ತಾರೆ. ಆದರೆ ಚೆಂಡು ಆಕಾಶದೆತ್ತರಕ್ಕೆ ಹೋಗಿ ಹಾರುತ್ತಿದ್ದ ವಿಮಾನಕ್ಕೆ ಬಡಿಯುತ್ತದೆ. ಫುಟ್​ಬಾಲ್​​ ನೇರವಾಗಿ ವಿಮಾನದ ಇಂಜಿನ್‌ಗೆ ಬಡಿದು, ವಿಮಾನವು ತೆರೆದ ಮೈದಾನಕ್ಕೆ ಅಪ್ಪಳಿಸುತ್ತದೆ. ನೆಲದಿಂದ ಕೇವಲ 200 ಮೀಟರ್ ದೂರದಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ.  ಇದನ್ನೂ ಓದಿ: Fraud Case: ಪ್ರಜ್ಞಾಹೀನವಾಗಿದ್ದ ರೋಗಿಯ ಏಟಿಯಂನಿಂದ ಲಕ್ಷಾಂತರ ರೂಪಾಯಿ ಹಣ ಎಗರಿಸಿದ ನರ್ಸ್​! ಈಗ ಕಂಬಿ ಎಣಿಸುತ್ತಿದ್ದಾಳೆ

  ರಾಬರ್ಟೊಗೆ ಈಗ 80 ವರ್ಷ

  ಸ್ಪ್ಯಾನಿಷ್ ಸುದ್ದಿ ಸಂಸ್ಥೆ ಇಎಫ್‌ಇಯೊಂದಿಗೆ ಮಾತನಾಡಿದ ರಾಬರ್ಟೊ, ಪ್ರತಿದಿನ ನೆಲಕ್ಕೆ ಅತ್ಯಂತ ಸಮೀಪದಲ್ಲಿ ವಿಮಾನವನ್ನು ಹಾರುತ್ತಿತ್ತು, ಮಾತ್ರವಲ್ಲದೆ, ಆ ವಿಮಾನವನ್ನು ಹಾರಿಸುತ್ತಿದ್ದ ವ್ಯಕ್ತಿಯೂ ನನಗೆ ಪರಿಚಯ ಎಂದು ಹೇಳಿದರು. ವಿಮಾನವನ್ನು ಅತಿ ಕೆಳಮಟ್ಟದಲ್ಲಿ ಹಾರಿಸಬೇಡಿ ಎಂದು ಅನೇಕ ಬಾರಿ ಎಚ್ಚರಿಕೆಯನ್ನೂ ನೀಡಲಾಗಿತ್ತು. ಮಾತ್ರವಲ್ಲದೆ, ಒಂದು ದಿನ ಫುಟ್‌ಬಾಲ್ ಹೊಡೆತದಿಂದ ವಿಮಾನವನ್ನು ಕೆಳಗೆ ಉರುಳಬಹುದು ಎಂದು ಹೇಳಲಾಗಿತ್ತು. ಆದರೆ ರಾಬರ್ಟೊ ಬಲವಾಗಿ ಒದ್ದ ಚೆಂಡು ನೇರವಾಗಿ ವಿಮಾನದ ಎಂಜಿನ್​ಗೆ ಬಡಿದು ಕೆಳಗುರುಳಿತು. 1957 ರ ಫೆಬ್ರವರಿ ತಿಂಗಳಿನಲ್ಲಿ ಬೆಳಿಗ್ಗೆ ಈ ಘಟನೆ ನಡೆದಿದೆ.  ಇದನ್ನೂ ಓದಿ: Intelligent: ಇದೇ ಕಾರಣಕ್ಕೆ ಬುದ್ಧಿವಂತರು ಸಂತೋಷವಾಗಿ ಇರುವುದೇ ಇಲ್ಲ!

  ಪೈಲಟ್​ ಬದುಕುಳಿದ

  ರಾಬರ್ಟ್​ ಹೀಗಾಗುತ್ತೆ ಎಂದು ಗ್ರಹಿಸಿರಲಿಲ್ಲ. ಆದರೆ ವಿಮಾನವು ಅತಿ ಕಡಿಮೆ ಎತ್ತರದಲ್ಲಿ ಹಾದುಹೋಗುತ್ತಿದ್ದ ಕಾರಣ ಈ ಘಟನೆ ಸಂಭವಿಸಿದೆ. ವಿಮಾನ ನೇರವಾಗಿ ಮೈದಾನಕ್ಕೆ ಅಪ್ಪಳಿಸಿದೆ. ಅದೃಷ್ಟಕ್ಕೆ ಪೈಲಟ್ ಸುರಕ್ಷಿತವಾಗಿ ಬದುಕುಳಿದಿದ್ದರು. ಈ ವಿಚಾರ ತಿಳಿದ ರಾಬರ್ಟೊ ಗೇಬ್ರಿಯಲ್ ಟ್ರಿಗೊ ನಿಟ್ಟುಸಿರು ಬಿಟ್ಟಿದ್ದರಂತೆ. ಅಂದಹಾಗೆಯೇ, ಜನರಲ್ ಜೀನ್ಸ್ ಕ್ಲಬ್ ಈಗಿಲ್ಲ. ಆದರೆ ಅದರ ಕಥೆಗಳು ಇಂದಿಗೂ ಪ್ರಸಿದ್ಧವಾಗಿವೆ.
  Published by:Harshith AS
  First published: